ನಿಮ್ಮ PAN Card ತಪ್ಪಾಗಿ ಪ್ರಿಂಟ್ ಆಗಿದ್ಯಾ? ಹಾಗಾದ್ರೆ ಆನ್‌ಲೈನ್‌ನಲ್ಲಿ Correction ಮಾಡಿಸೋದು ಹೇಗೆ?

Updated on 08-Jan-2024
HIGHLIGHTS

ಭಾರತೀಯರಿಗೆ ಈ ಪ್ಯಾನ್ ಕಾರ್ಡ್ (PAN Card) ಮಹತ್ವದ ದಾಖಲೆಗಳಲ್ಲಿ ಒಂದಾಗಿದೆ.

ಪ್ಯಾನ್ ಕಾರ್ಡ್‌ನಲ್ಲಿ ಹೆಸರು ಬದಲಾವಣೆಗೆ ಸಾಮಾನ್ಯವಾಗಿ ₹100 ರೂಗಳು ಶುಲ್ಕವನ್ನು ನೀಡಬೇಕಾಗುತ್ತದೆ.

ಪ್ಯಾನ್ ಕಾರ್ಡ್‌ನಲ್ಲಿ ಹೆಸರಿನಲ್ಲಿ ಕಾಗುಣಿತ ಅಥವಾ ಅರ್ಧ ಹೆಸರು ಅಥವಾ ತಪ್ಪಾಗಿ ಮುದ್ರಿತವಾಗಿರುವುದು ನೀವು ನೋಡಿರಬಹುದು.

ಭಾರತೀಯರಿಗೆ ಈ ಪ್ಯಾನ್ ಕಾರ್ಡ್ (PAN Card) ಎಷ್ಟು ಮುಖ್ಯವಾಗಿದೆ ಅಂದ್ರೆ ಆಧಾರ್ ಕಾರ್ಡ್ ನಂತರ ಇದೆ ಮತ್ತೊಂದು ಮಹತ್ವದ ದಾಖಲೆಗಳಲ್ಲಿ ಒಂದಾಗಿದೆ. ಆದರೆ ಕೆಲವು ಕಾರಣಗಳಿಂದ ಪಾನ್ ಕಾರ್ಡ್ ತಯಾರಿಸುವಾಗ ಹೆಸರಿನಲ್ಲಿ ಕಾಗುಣಿತ ಅಥವಾ ಅರ್ಧ ಹೆಸರು ಅಥವಾ ತಪ್ಪಾಗಿ ಮುದ್ರಿತವಾಗಿರುವುದು ನೀವು ನೋಡಿರಬಹುದು. ಇಂತಹ ಪರಿಸ್ಥಿತಿಗಳಿಗೆ ನೀವು ಇನ್ನು ಮುಂದೆ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ವಾಸ್ತವವಾಗಿ ಈ ಪ್ರಕ್ರಿಯೆಯನ್ನು ಈಗ ಮನೆಯಲ್ಲೇ ಕುಳಿತು ಆನ್‌ಲೈನ್‌ ಮೂಲಕ ಮಾಡಬಹುದು. ನಿಮ್ಮ ಪ್ಯಾನ್ ಕಾರ್ಡ್‌ನಲ್ಲಿ ನಿಮ್ಮ ಹೆಸರನ್ನು ನವೀಕರಿಸಲು ನೀವು ಬಯಸಿದರೆ ಹಂತ ಹಂತದ ಮಾರ್ಗದಶಿಯನ್ನು ಅನುಸರಿಸಿ.

Also Read: 64MP ಕ್ಯಾಮೆರಾ ಮತ್ತು HyperOS ಪ್ರೊಸೆಸರ್‌ನೊಂದಿಗೆ POCO X6 Pro 5G ಬಿಡುಗಡೆಗೆ ಡೇಟ್ ಫಿಕ್ಸ್

PAN Card ತಪ್ಪಾದ ಹೆಸರು ಬದಲಾವಣೆಗೆ ದಾಖಲೆಗಳು:

ಪಾನ್ ಕಾರ್ಡ್: ಇದು ನಿಮ್ಮ ಪ್ರಸ್ತುತ ಪ್ಯಾನ್ ಕಾರ್ಡ್ ಆಗಿದ್ದು ಅದರಲ್ಲಿ ತಪ್ಪಾದ ಹೆಸರನ್ನು ಮುದ್ರಿತವಾಗಿದ್ದರೆ ಅದನ್ನು ನೀಡಬೇಕಾಗುತ್ತದೆ.

ಆಧಾರ್ ಕಾರ್ಡ್: ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಬೇಕಿದ್ದರೆ ಅದನ್ನು ಹೆಸರಿನ ಪುರಾವೆಯಾಗಿ ನೀಡಬೇಕಾಗುತ್ತದೆ.

ಮ್ಯಾರೇಜ್ ಸರ್ಟಿಫಿಕೇಟ್: ಮದುವೆಯ ನಂತರ ನೀವು ನಿಮ್ಮ ಹೆಸರನ್ನು ಬದಲಾಯಿಸಿದ್ದರೆ ನಿಮ್ಮ ಮದುವೆ ಪ್ರಮಾಣಪತ್ರವನ್ನು ಲಗತ್ತಿಸಬೇಕು.

ಡಿವೋರ್ಸ್ ಸರ್ಟಿಫಿಕೇಟ್: ನೀವು ಮದುವೆಯ ವಿಚ್ಛೇದನದ ನಂತರ ನಿಮ್ಮ ಹೆಸರನ್ನು ಬದಲಾಯಿಸಿದ್ದರೆ ನಿಮ್ಮ ವಿಚ್ಛೇದನ ಪ್ರಮಾಣಪತ್ರವನ್ನು ನೀವು ಲಗತ್ತಿಸಬೇಕು.

ಕೋರ್ಟ್ ಆರ್ಡರ್: ನೀವು ನಿಮ್ಮ ಹೆಸರನ್ನು ಕಾನೂನುಬದ್ಧವಾಗಿ ಹೆಸರನ್ನು ಬದಲಾಯಿಸಿದ್ದರೆ ನೀವು ಇದಕ್ಕೆ ಸಂಬಂಧಪಟ್ಟ ನ್ಯಾಯಾಲಯದ ಆದೇಶ ಪಾತ್ರವನ್ನು ಲಗತ್ತಿಸಬೇಕಾಗುತ್ತದೆ.

PAN Card ಹೆಸರು ತಿದ್ದುಪಡಿಯ ಆನ್‌ಲೈನ್ ಪ್ರಕ್ರಿಯೆ ಹೇಗೆ ಮಾಡೋದು?

➥ಮೊದಲನೆಯದಾಗಿ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ಗೆ ಹೋಗಿ ಆನ್‌ಲೈನ್ ಸೇವೆಗಳು” ಟ್ಯಾಬ್ ಮೇಲೆ ಕ್ಲಿಕ್ ಮಾಡಿ ನಂತರ “Request for PAN Card Reprint/Correction/Change of Address” ಕ್ಲಿಕ್ ಮಾಡಿ.

➥ಇಲ್ಲಿ “ಆನ್‌ಲೈನ್‌ನಲ್ಲಿ ಅನ್ವಯಿಸು” ಕ್ಲಿಕ್ ಮಾಡಿ ಈಗ ನಿಮ್ಮ ಪ್ಯಾನ್ ಸಂಖ್ಯೆ, ಹುಟ್ಟಿದ ದಿನಾಂಕ ಮತ್ತು ಲಿಂಗವನ್ನು ನಮೂದಿಸಿ ಇಲ್ಲಿ “I am not a Robot” ಎಂಬ ಚೆಕ್ ಬಾಕ್ಸ್ ಕ್ಲಿಕ್ ಮಾಡಿ ಸಲ್ಲಿಸು ಮೇಲೆ ಕ್ಲಿಕ್ ಮಾಡಿ.

➥ಈಗ ನೀವು ಹೊಸ ಪುಟವನ್ನು ನೋಡುತ್ತೀರಿ ಅದರಲ್ಲಿ ನಿಮ್ಮ ಹೆಸರಿನಲ್ಲಿ ತಿದ್ದುಪಡಿಗಾಗಿ ಅಗತ್ಯ ಮಾಹಿತಿಯನ್ನು ನಮೂದಿಸಬೇಕು. ನಿಮ್ಮ ಪ್ಯಾನ್ ಕಾರ್ಡ್‌ನಲ್ಲಿ ನೀವು ಮುದ್ರಿಸಲು ಬಯಸುವ ನಿಮ್ಮ ಸರಿಯಾದ ಹೆಸರನ್ನು ಕಂಡು ಅದನ್ನು ಆಯ್ಕೆ ಮಾಡಿಕೊಂಡು ಮುಂದೆ ಸಾಗಿ.

➥ನೀವು ಸ್ವೀಕೃತಿ ಸಂಖ್ಯೆಯನ್ನು (Acknowledgement Number) ಪಡೆಯುವಿರಿ ಇದು ಭವಿಷ್ಯದ ಉಲ್ಲೇಖಕ್ಕಾಗಿ ನಿಮಗೆ ಅಗತ್ಯವಿರುವುದರಿಂದ ಈ ಸ್ವೀಕೃತಿ ಸಂಖ್ಯೆಯನ್ನು ಎಚ್ಚರಿಕೆಯಿಂದ ಒಂದೆಡೆಯಲ್ಲಿ ಸೇವ್ ಮಾಡಿಟ್ಟುಕೊಳ್ಳಿ.

➥ನಿಮ್ಮ ಹೆಸರು ಬದಲಾವಣೆಯ ವಿನಂತಿಯನ್ನು ಅನುಮೋದಿಸಲು ಇದು 10-15 ದಿನಗಳನ್ನು ತೆಗೆದುಕೊಳ್ಳಬಹುದು. ಒಮ್ಮೆ ನಿಮ್ಮ ಹೆಸರು ಬದಲಾವಣೆಯ ವಿನಂತಿಯನ್ನು ಅನುಮೋದಿಸಿದ ನಂತರ ನಿಮ್ಮ ಸರಿಯಾದ ಹೆಸರನ್ನು ಮುದ್ರಿಸಿದ ಹೊಸ PAN ಕಾರ್ಡ್ ಅನ್ನು ನೀವು ಸ್ವೀಕರಿಸುತ್ತೀರಿ.

➥ನಿಮ್ಮ ಹೆಸರು ಬದಲಾವಣೆ ವಿನಂತಿಯನ್ನು ಅನುಮೋದಿಸದಿದ್ದರೆ ನೀವು ಶೋಕಾಸ್ ಸೂಚನೆಯನ್ನು ಸ್ವೀಕರಿಸುತ್ತೀರಿ. ಈ ಸೂಚನೆಯು ನಿಮ್ಮ ಹೆಸರು ಬದಲಾವಣೆಯ ವಿನಂತಿಯನ್ನು ತಿರಸ್ಕರಿಸಲು ಕಾರಣಗಳನ್ನು ನೀಡುತ್ತದೆ. ಈ ಕಾರಣಗಳನ್ನು ನೀವು ಒಪ್ಪದಿದ್ದರೆ ನೀವು ಅವರಿಗೆ ಮೇಲ್ಮನವಿ ಸಲ್ಲಿಸಬಹುದು.

➥ಕೊನೆಯದಾಗಿ ನಿಮ್ಮ ದಾಖಲೆಗಳು ಮತ್ತು ಮಾಹಿತಿ ಎಲ್ಲವು ಸರಿಯಾಗಿದ್ದರೆ 15-20 ದಿನಗಳೊಳಗೆ ನಿಮ್ಮ ಹೊಸ ಹೆಸರಿನ PAN Card ನಿಮ್ಮ ಆಧಾರ್ ಕಾರ್ಡ್ ವಿಳಾಸಕ್ಕೆ ಪೋಸ್ಟ್ ಮೂಲಕ ಬಂದು ಸೇರುತ್ತದೆ.

ಪ್ಯಾನ್ ಕಾರ್ಡ್ ಹೆಸರು ತಿದ್ದುಪಡಿಗೆ ಶುಲ್ಕ

ನಿಮ್ಮ ಹೆಸರು ಬದಲಾವಣೆಗೆ ಸಾಮಾನ್ಯವಾಗಿ ₹100 ರೂಗಳು ಶುಲ್ಕವನ್ನು ನೀಡಬೇಕಾಗುತ್ತದೆ. ನೀವು ಆನ್‌ಲೈನ್‌ನಲ್ಲಿ ಹೆಸರು ಬದಲಾವಣೆಯ ವಿನಂತಿಯನ್ನು ಮಾಡಿದರೆ ನೀವು ಈ ಶುಲ್ಕವನ್ನು ಆನ್ಲೈನ್ ಮೂಲಕ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು. ನೀವು ಆಫ್‌ಲೈನ್‌ನಲ್ಲಿ ಹೆಸರು ಬದಲಾವಣೆಯ ವಿನಂತಿಯನ್ನು ಮಾಡಿದರೆ ನೀವು ಬೇಡಿಕೆ ಕರಡಿನ (Demand Draft) ಮೂಲಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅಂದ್ರೆ ನಿಮಗೆ ಯಾವುದೇ ಕ್ಯಾಶ್ ನೀಡುವ ಅಗತ್ಯಗಳಿಲ್ಲ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :