UIDAI ಭಾರತೀಯರಿಗೆ ತಮ್ಮ ಹಳೆಯ ಫೋಟೋವನ್ನು ಬದಲಾಯಿಸಲು ಸರಳ ಮತ್ತು ಸುಲಭ ಮಾರ್ಗವನ್ನು ನೀಡಿದೆ.
ಆಧಾರ್ ಕಾರ್ಡ್ (Aadhaar Card) ಪಡೆದು ಹಲವಾರು ವರ್ಷಗಳಾಗಿದ್ದರೆ ಒಮ್ಮೆ ಅಪ್ಡೇಟ್ ಮಾಡಿಕೊಳ್ಳುವುದು ಉತ್ತಮ.
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ UIDAI ಭಾರತೀಯರಿಗೆ ತಮ್ಮ ಹಳೆಯ ಫೋಟೋವನ್ನು ಬದಲಾಯಿಸಲು ಸರಳ ಮತ್ತು ಸುಲಭ ಮಾರ್ಗವನ್ನು ನೀಡಿದೆ. ಸಾಮಾನ್ಯವಾಗಿ ಮೊದಲ ಬಾರಿಗೆ ಆಧಾರ್ ಕಾರ್ಡ್‌ನ ಅರ್ಜಿ ಸಲ್ಲಿಸುವಾಗ ಆಧಾರ್ ಕೇಂದ್ರದಲ್ಲಿ ತೆಗೆಯುವ ಮೊದಲ ಫೋಟೋ ಅಷ್ಟಾಗಿ ಉತ್ತಮವಾಗಿರುವುದಿಲ್ಲ. ನಿಮ್ಮ ಆಧಾರ್ ಕಾರ್ಡ್ (Aadhaar Card) ಪಡೆದು ಹಲವಾರು ವರ್ಷಗಳಾಗಿದ್ದರೆ ಒಮ್ಮೆ ಅಪ್ಡೇಟ್ ಮಾಡಿಕೊಳ್ಳುವುದು ಉತ್ತಮವಾಗಿರುತ್ತದೆ. ಏಕೆಂದರೆ 10 ವರ್ಷಗಳಿಗೊಮ್ಮೆ ಬದಲಾಯಿಸಿಕೊಳ್ಳಲೇಬೇಕೆಂದು ಸರ್ಕಾರವೇ ಸಲಹೆ ನೀಡುತ್ತಿದೆ.
Also Read: 200MP ಕ್ಯಾಮೆರಾ ಮತ್ತು Powerful ಪ್ರೊಸೆಸರ್‌ನೊಂದಿಗೆ Realme 12 Pro Series 5G ಬಿಡುಗಡೆಗೆ ಸಜ್ಜು!
Aadhaar ಕಾರ್ಡ್‌ನ Photo ಬದಲಾಯಿಸುವುದು ಯಾಕೆ ಮುಖ್ಯ?
ಭಾರತದಲ್ಲಿ ಹಲವಾರು ದಾಖಲೆಗಳಲ್ಲಿ ಈ ಆಧಾರ್ ಕಾರ್ಡ್ ಬಹು ಮುಖ್ಯವಾದ ದಾಖಲೆಯಾಗಿದೆ. ಏಕೆಂದರೆ ಇದರಲ್ಲಿ ಬಳಕೆದಾರರ ಬಯೋಮೆಟ್ರಿಕ್, ಐರಿಸ್, ಫೋಟೋ, ವಿಳಾಸ, ಇಮೇಲ್ ಐಡಿ, ಫೋನ್ ಸಂಖ್ಯೆಗಳ ಮಾಹಿತಿಯೊಂದಿಗೆ ಹೆಚ್ಚಿನ ವಿವರಗಳನ್ನು ಹೊಂದಿರುತ್ತದೆ. ಇದು ವ್ಯಕ್ತಿಯನ್ನು ಗುರುತಿಸಬಹುದಾದ ನೈಜ ಮಾಹಿತಿಯನ್ನು ನಿರ್ವಹಿಸಲು UIDAI ಅನುಮತಿಸುತ್ತದೆ. ಸರ್ಕಾರಿ ಯೋಜನೆಗಳು ಅಥವಾ ಕಾಲೇಜು ಅರ್ಜಿಗಳಿಗೆ ನೋಂದಣಿ ಸೇರಿದಂತೆ ವಿವಿಧ ಸೇವೆಗಳನ್ನು ಪ್ರವೇಶಿಸಲು ಈ ವಿವರಗಳನ್ನು ಬಳಸಬಹುದು. ಇದರೊಂದಿಗೆ ಸಮಯ ಕಳೆಯುತ್ತಿದ್ದಂತೆ ವಯಸ್ಸಿನ ಆಧಾರದ ಮೇರೆಗೆ ದೇಹದಲ್ಲಿ ಆಗುವ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಈ ಸಲಹೆಯನ್ನು ನೀಡಲಾಗಿದೆ.
Aadhaar ಕಾರ್ಡ್ ಫೋಟೋ ಬದಲಾವಣೆಗೆ ಅರ್ಜಿ ಸಲ್ಲಿಸುವ ಮೊದಲು
ನಿಮ್ಮ ಹಳೆಯ ಫೋಟೋದಿಂದ ನಿಮಗೆ ಬೇಸರವಾಗಿದ್ದಲ್ಲಿ ನಿಮ್ಮ ಹೊಸ ಫೋಟೋವನ್ನು ಅಪ್ಡೇಟ್ ಮಾಡಲು ಬಯಸುವವರಾಗಿದ್ದರೆ ಇದಕ್ಕಾಗಿ ನೀವು ಅರ್ಜಿ ಸಲ್ಲಿಸುವ ಮೊದಲು UIDAI ಆಧಾರ್ ಹೊಂದಿರುವವರು ತಮ್ಮ ಬಯೋಮೆಟ್ರಿಕ್ ವಿವರಗಳನ್ನು ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡಲು ಅನುಮತಿಸುತ್ತದೆ. ಉದಾಹರಣೆಗೆ ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ ಮತ್ತು ಇಮೇಲ್. ಆದಾಗ್ಯೂ, ಫಿಂಗರ್‌ಪ್ರಿಂಟ್‌ಗಳು, ಐರಿಸ್ ಮತ್ತು ಛಾಯಾಚಿತ್ರದಂತಹ ಬಯೋಮೆಟ್ರಿಕ್ ವಿವರಗಳನ್ನು ಆನ್‌ಲೈನ್‌ನಲ್ಲಿ ನವೀಕರಿಸಲು, ಬಯೋಮೆಟ್ರಿಕ್ ಪರಿಶೀಲನೆಗಾಗಿ ಒಬ್ಬರು ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕು ಮತ್ತು ಕನಿಷ್ಠ ಸೇವಾ ಶುಲ್ಕವನ್ನು ಪಾವತಿಸಬೇಕು.
ಆಧಾರ್ ಕಾರ್ಡ್‌ನಲ್ಲಿ ಹೊಸ Photo ಬದಲಾವಣೆಗೆ ಅರ್ಜಿ ಸಲ್ಲಿಸುವುದು ಹೇಗೆ?
➥ಅಧಿಕೃತ UIDAI ವೆಬ್‌ಸೈಟ್‌ಗೆ ಭೇಟಿ ನೀಡಿ ಆಧಾರ್ ದಾಖಲಾತಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ (ಇದನ್ನು ಹತ್ತಿರದ ಆಧಾರ್ ಸೇವಾ ಕೇಂದ್ರ ಅಥವಾ ಆಧಾರ್ ನೋಂದಣಿ ಕೇಂದ್ರದಿಂದ ಕೂಡ ಸಂಗ್ರಹಿಸಬಹುದು.
➥ನಂತರ ದಾಖಲಾತಿ ಫಾರ್ಮ್‌ನಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ. ಹತ್ತಿರದ ಆಧಾರ್ ಸೇವಾ ಕೇಂದ್ರ ಅಥವಾ ಆಧಾರ್ ನೋಂದಣಿ ಕೇಂದ್ರಕ್ಕೆ ಸಲ್ಲಿಸಿ.
➥ಕೇಂದ್ರದಲ್ಲಿರುವ ಆಧಾರ್ ಕಾರ್ಯನಿರ್ವಾಹಕರು ಬಯೋಮೆಟ್ರಿಕ್ ಪರಿಶೀಲನೆಯ ಮೂಲಕ ಎಲ್ಲಾ ವಿವರಗಳನ್ನು ಖಚಿತಪಡಿಸುತ್ತಾರೆ.
➥ಕಾರ್ಯನಿರ್ವಾಹಕರು ನಂತರ ಆಧಾರ್ ಕಾರ್ಡ್‌ನಲ್ಲಿ ನವೀಕರಿಸಲು ಹೊಸ ಚಿತ್ರವನ್ನು ಕ್ಲಿಕ್ ಮಾಡುತ್ತಾರೆ.
➥ಕೊನೆಯದಾಗಿ ಇದರ ನಂತರ ಈ ಸೇವೆಗೆ ಜಿಎಸ್‌ಟಿಯೊಂದಿಗೆ 100 ರೂಗಳ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕಾಗುತ್ತದೆ ಅಷ್ಟೇ.
➥ಇದರ ನಂತರ ನಿಮಗೆ UIDAI ವೆಬ್‌ಸೈಟ್‌ನಲ್ಲಿ ಅಪ್ಡೇಟ್ ಸ್ಟೇಟಸ್ ಟ್ರ್ಯಾಕ್ ಮಾಡಲು ಬಳಸಬಹುದಾದ ನವೀಕರಣ ವಿನಂತಿ ಸಂಖ್ಯೆ (URN) ಜೊತೆಗೆ ನಿಮಗೆ ಸ್ವೀಕೃತಿ ಚೀಟಿಯನ್ನು (Acknowledgment Slip) ನೀಡಲಾಗುತ್ತದೆ. ಅದನ್ನು ಜೋಪಾನವಾಗಿ ಇಟ್ಟುಕೊಳ್ಳಿ.
ಗಮನಾರ್ಹವಾಗಿ ಆಧಾರ್ ಕಾರ್ಡ್‌ನಲ್ಲಿನ ಮಾಹಿತಿಯನ್ನು ನವೀಕರಿಸಲು 90 ದಿನಗಳವರೆಗೆ ತೆಗೆದುಕೊಳ್ಳಬಹುದು. ಆನ್‌ಲೈನ್‌ನಲ್ಲಿ ಆಧಾರ್ ಅಪ್ಡೇಟ್ ಸ್ಟೇಟಸ್ ಪರಿಶೀಲಿಸಲು ನೀವು URN ಸಂಖ್ಯೆಯನ್ನು ಬಳಸಬಹುದು. ಒಮ್ಮೆ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಿದ ನಂತರ ನಿಮ್ಮ ಹತ್ತಿರದ ಆಧಾರ್ ನೋಂದಣಿ ಕೇಂದ್ರದಲ್ಲಿ ನೀವು ಪ್ರತಿಯನ್ನು ಮುದ್ರಿಸಬಹುದು ಅಥವಾ UIDAI ಅಧಿಕೃತ ವೆಬ್‌ಸೈಟ್‌ನಿಂದ ಇ-ಆಧಾರ್ ಅನ್ನು ಡೌನ್‌ಲೋಡ್ ಮಾಡಬಹುದು.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile