How to cancel train ticket online: ಪ್ರತಿದಿನ ಲಕ್ಷಾಂತರ ಭಾರತೀಯರು ರೈಲಿನಲ್ಲಿ ಪ್ರಯಾಣಿಸುವುದು ನಿಮಗೆ ತಿಳಿದಿರುವ ವಿಷಯವಾಗಿದೆ ಆದರೆ ಇದರೊಂದಿಗೆ ನಿಮಗೊತ್ತಾ ಹಲವಾರು ಬಾರಿ ಮುಂಗಡ ಬುಕಿಂಗ್ (Booking Tickets) ಮಾಡಿ ರೈಲಿನಲ್ಲಿ ಪ್ರಯಾಣಿಸಲು ಸಲಹೆ ನೀಡಲಾಗುತ್ತದೆ. ಯಾಕೆಂದರೆ ಇದರ ಮುಂಗಡ ಬುಕಿಂಗ್ (Booking Tickets) ಪ್ರಯೋಜನಗಳನ್ನು ನೋಡುವುದಾದರೆ ಯಾವುದೇ ಸಾಲುಗಳಲ್ಲಿ ನಿಲ್ಲುವ ಅಗತ್ಯವಿಲ್ಲ, ನಿಮಗೆ ಬೇಕಾದ ಸೀಟ್ ಅನ್ನು ನೀವು ಕಾಯ್ದಿರಿಸಬಹುದು, ಅಲ್ಲದೆ ಪ್ರಯಾಣಿಸುವ ಮೊದಲ ನಿಮ್ಮ ಸುತ್ತಮುತ್ತ ಯಾರ್ಯಾರು ಪ್ರಯಾಣಿಸುತ್ತಿದ್ದರೆಂದು ತಿಳಿಯುವುದರೊಂದಿಗೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು.
ನೀವು ಕಾಯ್ದಿರಿಸಿರುವ (Reservation) ಅಥವಾ ರೈಲ್ವೆ ನಿಲ್ದಾಣದಲ್ಲಿ ಪಡೆಯದ ಟ್ರೈನ್ ಟೀಕೆಟ್ ರದ್ದುಗೊಳಿಸಲು ಅಚಾನಕ್ ಕಾರಣಗಳು ಎದುರಾಗಬಹುದು. ಇಂತಹ ಸಂದರ್ಭಗಳಲ್ಲಿ ನಿಮ್ಮ ಟಿಕೆಟ್‌ಗಳನ್ನು ರದ್ದುಗೊಳಿಸಬೇಕಾಗುತ್ತದೆ. ಆದರೆ ಇದು ತುಂಬಾ ಸುಲಭದ ಕೆಲಸವೇ ಸರಿ ಆದರೆ ಸರಿಯಾದ ಸಮಯ ಅಥವಾ ನಿಯಮಗಳನ್ನು ಅನುಸರಿಸದೆ ನಿಮ್ಮ ಕಾಯ್ದಿರಿಸುವ (Reservation) ಅಥವಾ ಟ್ರೈನ್ ಟೀಕೆಟ್ ರದ್ದುಗೊಳಿಸಿದರೆ ನಿಮ್ಮ ಹಣಕ್ಕೆ ಪಂಗನಾಮವಾಗೋದು ಪಕ್ಕ!
Also Read: 8GB RAM ಮತ್ತು 108MP ಕ್ಯಾಮೆರಾದ Itel S24 ಕೇವಲ 10,000 ರೂಗಳಿಗೆ ಬಿಡುಗಡೆ! ಇದರ ಫೀಚರ್ಗಳೇನು?
ಮೊದಲಿಗೆ ನೀವು www.irctc.co.in ಗೆ ಭೇಟಿ ನೀಡಿ TRAINS ವಿಭಾಗದಲ್ಲಿ Cancel Ticket ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಟಿಕೇಟ್ ಟೈಪ್ (E-Ticket ಅಥವಾ Counter Ticket) ಅನ್ನು ಆಯ್ಕೆ ಮಾಡಿ ಇದರ ನಂತರ ನಿಮ್ಮ IRCTC ಐಡಿ ಮತ್ತು ಪಾಸ್‌ವರ್ಡ್ ಸಹಾಯದಿಂದ ಖಾತೆಗೆ ಲಾಗ್ ಇನ್ ಆಗಬೇಕು.
ಇದರ ನಂತರ ಈಗ ನೀವು ಬುಕ್ ಮಾಡಿದ ಟಿಕೆಟ್‌ಗಳ ಟ್ಯಾಬ್ ಅನ್ನು ಕ್ಲಿಕ್ ಮಾಡಬೇಕು ಮತ್ತು ರದ್ದುಗೊಳಿಸಬೇಕಾದ ಟಿಕೆಟ್ ಮೇಲೆ ಕ್ಲಿಕ್ ಮಾಡಿ ಟಿಕೆಟ್ ರದ್ದುಗೊಳಿಸಲು ನೀವು ದೃಢೀಕರಣವನ್ನು ಕ್ಲಿಕ್ ಮಾಡಬೇಕು. ಅಷ್ಟೇ ಆದರೆ ಇದರ ನಂತರ ನಿಮಗೆ ಬರುವ ಹಣಕ್ಕಾಗಿ ಒಂದಿಷ್ಟು ನಿಯಮಗಳಿವೆ. ಅವನ್ನು ಈ ಕೆಳಗೆ ಪರಿಶೀಲಿಸಬಹುದು.
ಚಾರ್ಟ್ ಸಿದ್ಧಪಡಿಸಿದ ನಂತರ ಇ-ಟಿಕೆಟ್ ಅನ್ನು ರದ್ದುಗೊಳಿಸಲಾಗುವುದಿಲ್ಲ ಎಂದು ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಿಳಿದಿರಬೇಕು. ಅಂತಹ ಸಂದರ್ಭಗಳಲ್ಲಿ ಆನ್‌ಲೈನ್ TDR ಫೈಲಿಂಗ್ ಆಯ್ಕೆಯು ಸೂಕ್ತವಾಗಿ ಬರುತ್ತದೆ. ಇದರ ನಂತರ ನೀವು IRCTC ವೆಬ್‌ಸೈಟ್‌ನಲ್ಲಿ ಟ್ರ್ಯಾಕಿಂಗ್ ಸೇವೆಯ ಮೂಲಕ ಮರುಪಾವತಿ ಮಾಹಿತಿಯನ್ನು ಟ್ರ್ಯಾಕ್ ಮಾಡಬಹುದು.
ಇದರೊಂದಿಗೆ ನಿಮಗೆ ಹಣವನ್ನು ಹಿಂತಿರುಗಿಸಲಾಗುವುದಿಲ್ಲ IRCTC ಪ್ರಯಾಣ ದರದ ಮರುಪಾವತಿಯ ಪರಿಸ್ಥಿತಿಯನ್ನು ಸ್ಪಷ್ಟಪಡಿಸಿದೆ. ರೈಲು ಹೊರಡುವ ನಾಲ್ಕು ಗಂಟೆಗಳ ಮೊದಲು ಟಿಕೆಟ್ ಅನ್ನು ರದ್ದುಗೊಳಿಸದಿದ್ದರೆ ಅಥವಾ ಆನ್‌ಲೈನ್ TDR ಅನ್ನು ಸಲ್ಲಿಸದಿದ್ದರೆ ದೃಢೀಕೃತ ಕಾಯ್ದಿರಿಸುವಿಕೆ ಟಿಕೆಟ್‌ಗಳ ಮೇಲಿನ ಶುಲ್ಕವನ್ನು ಮರುಪಾವತಿಸಲಾಗುವುದಿಲ್ಲ.
ಭಾರತದಲ್ಲಿ ನೀವು ಅನೇಕ ಕಾರಣಗಳಿಂದಾಗಿ ಅಚಾನಕ್ ಕಾರಣಗಳು ಎದುರಾಗಬಹುದು. ಇಂತಹ ಸಂದರ್ಭಗಳಲ್ಲಿ ನಿಮ್ಮ ಟಿಕೆಟ್‌ಗಳನ್ನು ರದ್ದುಗೊಳಿಸಬೇಕಾಗುತ್ತದೆ. ಆದರೆ ಈ IRCTC ನೀಡುತ್ತಿರುವ ಟ್ರೈನ್ ಟೀಕೆಟ್ ರದ್ದುಗೊಳಿಸುವಿಕೆಯ ಸೇವೆಯಲ್ಲಿ ಒಂದಿಷ್ಟು ನಿರ್ದಿಷ್ಟ ಮತ್ತು ಕಡ್ಡಾಯವಾದ ನಿಯಮಗಳಿವೆ. ಅಂದ್ರೆ ರೈಲು ಹೊರಡುವ ಸಮಯದಿಂದ ಸುಮಾರು 48 ಗಂಟೆಗಳ ಮೊದಲು ನೀವು ದೃಢೀಕೃತ ಟಿಕೆಟ್ ಅನ್ನು ರದ್ದುಗೊಳಿಸಿದರೆ ರದ್ದತಿ ಶುಲ್ಕವನ್ನು (Cancellation Charges) ನಿಮಗೆ ವಿಧಿಸಲಾಗುತ್ತದೆ.
ಇದು ಪ್ರತಿ ಟಿಕೆಟ್ ವರ್ಗಕ್ಕೆ ವಿಭಿನ್ನವಾದ ಶುಲ್ಕಗಳಿವೆ. First AC Class ಟೀಕೆಟ್ ರದ್ದುಗೊಳಿಸಿದರೆ 240 ರೂಗಳ ಕಡಿತವಾಗುತ್ತದೆ ಉಳಿದ ಮೊತ್ತ ನಿಮ್ಮ ಖಾತೆಗೆ ಸೇರುತ್ತದೆ. ಇದರ ಕ್ರಮವಾಗಿ Second AC Class ಟೀಕೆಟ್ ರದ್ದುಗೊಳಿಸಿದರೆ 200 ರೂಗಳ ಕಡಿತ, Third AC Class ಟೀಕೆಟ್ ರದ್ದುಗೊಳಿಸಿದರೆ 180 ರೂಗಳ ಕಡಿತ, Sleeper Class ಟೀಕೆಟ್ ರದ್ದುಗೊಳಿಸಿದರೆ 120 ರೂಗಳ ಕಡಿತ ಮತ್ತು ಕೊನೆಯದಾಗಿ Second (S) Class ಟೀಕೆಟ್ ರದ್ದುಗೊಳಿಸಿದರೆ 60 ರೂಗಳ ಕಡಿತವಾಗುತ್ತದೆ.