ಈ ದೀಪಾವಳಿಗೆ Gpay, PhonePe ಮತ್ತು Paytm ಮೂಲಕ Digital Gold ಖರೀದಿಸುವುದು ಹೇಗೆ?

Updated on 29-Oct-2024
HIGHLIGHTS

ಈ ದೀಪಾವಳಿಯನ್ನು ಮತ್ತಷ್ಟು ವಿಶೇಷವಾಗಿ ಆಚರಿಸಲು ನೀವು ಡಿಜಿಟಲ್ ಚಿನ್ನದ (Digital Gold) ಅಡಿಗೆಯಲ್ಲಿ ಹೊಸ ದಾರಿಯನ್ನು ತೆರೆಯಬಹುದು.

Digital Gold ಸಾಮಾನ್ಯ ಅಂಗಡಿಯಲ್ಲಿ ಖರೀದಿಸುವ ಚಿನ್ನಕ್ಕಿಂತ ಸಿಕ್ಕಾಪಟ್ಟೆ ಸುಲಭ ಮತ್ತು ಸರಳದೊಂದಿಗೆ ಹೆಚ್ಚು ಸುರಕ್ಷಿತವಾಗಿದೆ.

ಸ್ಮಾರ್ಟ್ ಹೂಡಿಕೆಯನ್ನು Gpay, PhonePe ಮತ್ತು Paytm ಮೂಲಕ ಮನೆಯಿಂದಲೇ ಆರಂಭಿಸಬಹುದು.

ಈ ವರ್ಷದ ದೀಪಾವಳಿ ಹಬ್ಬದ ಮಂಗಳಕರ ಸಂದರ್ಭವನ್ನು ನೀವು ಮತ್ತಷ್ಟು ವಿಶೇಷವಾಗಿ ಆಚರಿಸಲು ನೀವು ಡಿಜಿಟಲ್ ಚಿನ್ನದ (Digital Gold) ಅಡಿಗೆಯಲ್ಲಿ ಹೊಸ ದಾರಿಯನ್ನು ತೆರೆಯಬಹುದು. ಯಾಕೆಂದರೆ ಸಾಮಾನ್ಯವಾಗಿ ಇದೊಂದು ನಿಮ್ಮ ಉಳಿಯತ ಖಾತೆಯಂತೆ ಕೆಲಸ ಮಾಡುತ್ತದೆ. ಅಲ್ಲದೆ ಸಾಮಾನ್ಯ ಅಂಗಡಿಯಲ್ಲಿ ಖರೀದಿಸುವ ಚಿನ್ನಕ್ಕಿಂತ ಸಿಕ್ಕಾಪಟ್ಟೆ ಸುಲಭ ಮತ್ತು ಸರಳದೊಂದಿಗೆ ಹೆಚ್ಚು ಸುರಕ್ಷಿತವಾಗಿದೆ. ಈ ಡಿಜಿಟಲ್ ಚಿನ್ನವನ್ನು ಖರೀದಿಸುವುದು ಮತ್ತು ಮಾರುವುದು ಸಹ ತುಂಬ ಸುಲಭವಾಗಿದೆ ಕಾರಣ ಇದರಲ್ಲಿ ಯಾರೊಬ್ಬರ ಅನುಮತಿಯ ಅಗತ್ಯವಿಲ್ಲ. ಈ ಹೂಡಿಕೆಗಳು ಕೇವಲ 1 ರೂಪಾಯಿಯಿಂದ 5,00,000 ರೂಗಳವರೆಗೆ ಖರೀದಿಸಬಹುದು.

ಆನ್‌ಲೈನ್‌ನಲ್ಲಿ ಡಿಜಿಟಲ್ ಚಿನ್ನದ (Digital Gold)

ಇದರಲ್ಲಿ ದೀರ್ಘ ಪ್ರಕ್ರಿಯೆಗಳ ತೊಂದರೆ ಮತ್ತು ವೆಚ್ಚದ ಲೆಕ್ಕಾಚಾರ ಅಥವಾ ಮೌಲ್ಯ ಸವಕಳಿ ಮಾಡುವ ಬಗ್ಗೆ ತಲೆನೋವೇ ಇರೊಲ್ಲ. ಆನ್‌ಲೈನ್‌ನಲ್ಲಿ ಡಿಜಿಟಲ್ ಚಿನ್ನವನ್ನು (Digital Gold) ಖರೀದಿಸುವ ಮೂಲಕ ಸ್ಮಾರ್ಟ್ ಹೂಡಿಕೆಯನ್ನು ಆರಂಭಿಸಬಹುದು. Gpay, PhonePe, Paytm ಮತ್ತು Amazon Pay ಸೇರಿದಂತೆ ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್‌ಗಳು, ತಾನಿಷ್ಕ್, ಜೋಸ್ ಅಲುಕ್ಕಾಸ್ ಮತ್ತು ಇನ್ನೂ ಹೆಚ್ಚಿನವುಗಳಂತಹ ಡಿಜಿಟಲ್ ಚಿನ್ನವನ್ನು ನೀವು ಖರೀದಿಸಬಹುದಾದ ಇತರ ಆಯ್ಕೆಗಳ ಸಮೂಹವೂ ಸಹ ಇದೆ.

ಡಿಜಿಟಲ್ ಚಿನ್ನ (Digital Gold)

ಇದನ್ನು ನೀವು ನಿಮ್ಮ ಸ್ಮಾರ್ಟ್ಫೋನ್‌ನಿಂದಲೇ Gpay, PhonePe, Paytm ಮತ್ತು Amazon Pay ಇತರ ಹಲವು ಅಪ್ಲಿಕೇಶನ್‌ಗಳ ಮೂಲಕ ಸುಲಭವಾಗಿ ಚಿನ್ನವನ್ನು ಖರೀದಿಸಬಹುದು. ಪಾವತಿ ವಿಧಾನವನ್ನು ಆಯ್ಕೆಮಾಡಿ ಮತ್ತು ಪಾವತಿಸಿದ ನಂತರ ಕೆಲವೇ ಸೆಕೆಂಡುಗಳಲ್ಲಿ ಚಿನ್ನದ ಮೇಲೆ ಹೂಡಿಕೆ ಪಡೆಯುತ್ತೀರಿ. ಈ ಆನ್‌ಲೈನ್‌ನಲ್ಲಿ ಚಿನ್ನವನ್ನು ಖರೀದಿಸುವ ಪ್ರಕ್ರಿಯೆಯನ್ನು ನ್ಯಾವಿಗೇಟ್ ಮಾಡಲು ನಿಮಗೆ ಸಹಾಯ ಮಾಡುವ ಸಮಗ್ರ ಮಾರ್ಗದರ್ಶಿಯನ್ನು ಹಂತ ಹಂತವಾಗಿ ನಿಮಗೆ ಈ ಕೆಳಗೆ ತಿಳಿಸಲಾಗಿದೆ.

Also Read: BSNL Diwali Offer: ಅನ್ಲಿಮಿಟೆಡ್ ಕರೆಯೊಂದಿಗೆ 600GB ಡೇಟಾ ನೀಡುವ ಪ್ಲಾನ್ ಬೆಲೆ ಕಡಿತ!

Paytm (ಪೆಟಿಎಂ) ಮೂಲಕ ಡಿಜಿಟಲ್ ಚಿನ್ನ ಖರೀದಿಸುವುದು ಹೇಗೆ?

  1. ಮೊದಲಿಗೆ ನೀವು ಪೆಟಿಎಂ ಮೂಲಕ ಚಿನ್ನ ಖರೀದಿಸಲು ಅಪ್ಲಿಕೇಶನ್ ಅಪ್ಡೇಟ್ ಮಾಡಿಕೊಂಡು ತೆರೆಯಿರಿ.
  2. ಇದರ ನಂತರ ಈಗ ಸರ್ಚ್ ಬಾರ್‌ನಲ್ಲಿ ಪೆಟಿಎಂ ಗೋಲ್ಡ್ (Paytm Gold) ಹುಡುಕಿ ಬರುವ ಆಯ್ಕೆಯ ಮೇಲೆ ಟ್ಯಾಪ್ ಮಾಡಿ.
  3. ಈಗ ಕೆಳಗಿನ ಎಡಭಾಗದಲ್ಲಿ ನೀವು ಒಂದು ಬಾರಿ ಖರೀದಿಸಿ (Buy One Time) ಎಂಬ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿ.
  4. ಈಗ ಮೊತ್ತವನ್ನು ರೂಪಾಯಿಗಳಲ್ಲಿ ಅಥವಾ ಗ್ರಾಂನಲ್ಲಿ ತೂಕವನ್ನು ಭರ್ತಿ ಮಾಡಬೇಕು.
  5. ಇದನ್ನು ಭರ್ತಿ ಮಾಡಿದ ನಂತರ ದೃಢೀಕರಿಸಿ ಮತ್ತು ಮುಂದುವರೆಯಿರಿ (Confirm and Proceed) ಮೇಲೆ ಟ್ಯಾಪ್ ಮಾಡಿ.
  6. ಈಗ ಪಾವತಿ ವಿಧಾನವನ್ನು ಆಯ್ಕೆಮಾಡಿ ಮತ್ತು ಪಾವತಿಸಿದ ನಂತರ ಕೆಲವೇ ಸೆಕೆಂಡುಗಳಲ್ಲಿ ಚಿನ್ನದ ಮೇಲೆ ಹೂಡಿಕೆ ಪಡೆಯುತ್ತೀರಿ.

Google Pay (ಗೂಗಲ್ ಪೇ) ಮೂಲಕ ಡಿಜಿಟಲ್ ಚಿನ್ನ ಖರೀದಿಸುವುದು ಹೇಗೆ?

  1. ಮೊದಲಿಗೆ ನೀವು ಗೂಗಲ್ ಪೇ ಮೂಲಕ ಚಿನ್ನ ಖರೀದಿಸಲು ಅಪ್ಲಿಕೇಶನ್ ಅಪ್ಡೇಟ್ ಮಾಡಿಕೊಂಡು ತೆರೆಯಿರಿ.
  2. ಇದರ ನಂತರ ಈಗ ಸರ್ಚ್ ಬಾರ್‌ನಲ್ಲಿ ಗೋಲ್ಡ್ ಲಾಕರ್ (Gold Locker) ಹುಡುಕಿ ಬರುವ ಆಯ್ಕೆಯ ಮೇಲೆ ಟ್ಯಾಪ್ ಮಾಡಿ.
  3. ಇಲ್ಲಿ ನೀವು ನೇರವಾಗಿ ನಿಮಗಿಷ್ಟ ಬಂದ ಮೊತ್ತವನ್ನು ಹೊಂದಿಸುವ ಮೂಲಕ ಚಿನ್ನವನ್ನು ಖರೀದಿಸಬಹುದು.
  4. ಇಲ್ಲಿ ಮೊತ್ತವನ್ನು ಭರ್ತಿ ಮಾಡಿದ ನಂತರ UPI ಮೂಲಕ ಪಾವತಿಸಿ ಡಿಜಿಟಲ್ ಚಿನ್ನವನ್ನು ಪಡೆಯಬಹುದು.

PhonePe (ಫೋನ್‌ಪೇ) ಮೂಲಕ ಡಿಜಿಟಲ್ ಚಿನ್ನ ಖರೀದಿಸುವುದು ಹೇಗೆ?

  1. ಮೊದಲಿಗೆ ನೀವು ಫೋನ್‌ಪೇ ಮೂಲಕ ಚಿನ್ನ ಖರೀದಿಸಲು ಅಪ್ಲಿಕೇಶನ್ ಅಪ್ಡೇಟ್ ಮಾಡಿಕೊಂಡು ತೆರೆಯಿರಿ.
  2. ಈಗ ನೇರವಾಗಿ ವೆಲ್ತ್ (Wealth) ಆಯ್ಕೆಗೆ ಹೋಗಿ ಮ್ಯೂಚುವಲ್ ಫಂಡ್ ವರ್ಗಗಳಿಗೆ ಕೆಳಗೆ ಸ್ಕ್ರಾಲ್ ಮಾಡಬೇಕು.
  3. ಇದರ ನಂತರ ಗೋಲ್ಡ್ ಮೇಲೆ ಟ್ಯಾಪ್ ಮಾಡಿ ಸ್ಕ್ರೀನ್‌ನಲ್ಲಿ ಗೋಲ್ಡ್ ಫಂಡ್‌ಗಳ ಆಯ್ಕೆಯನ್ನು ಕಾಣಬಹುದು.
  4. ಈಗ ನೀವು ಹೂಡಿಕೆ ಮಾಡಲು ಬಯಸುವ ಯಾವುದೇ ನಿಧಿಯ ಮೇಲೆ ಟ್ಯಾಪ್ ಮಾಡಿ.
  5. ಈಗ ಹೂಡಿಕೆಯ ಪ್ರಕಾರಕ್ಕೆ ಹೋಗಿ ಮತ್ತು ಒಂದು ಬಾರಿ (One Time) ಆಯ್ಕೆಮಾಡಿ ಮೊತ್ತವನ್ನು ನೀಡಿ ಹೂಡಿಕೆ ಮಾಡಿ.
  6. ಮೊತ್ತವನ್ನು ಪಾವತಿಸಿದ ನಂತರ ನಿಮ್ಮ ಚಿನ್ನದ ನಿಧಿಯನ್ನು ಸುರಕ್ಷಿತಗೊಳಿಸಿಕೊಳ್ಳಬಹುದು.
Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :