ಹಲವಾರು ವರ್ಷಗಳಿಂದ ಭಾರತೀಯ ನಾಗರಿಕರಿಗೆ ಒಂದು ರೇಷನ್ ಕಾರ್ಡ್ ಪ್ರಮುಖ ದಾಖಲೆಯಾಗಿದ್ದು ಕರ್ನಾಟಕದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಆನ್ಲೈನ್ ಅರ್ಜಿ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಅಲ್ಲದೆ ಇದು ಡೊಮಿನೈಲ್ ಸರ್ಟಿಫಿಕೇಟ್, ಎಲೆಕ್ಟ್ರಾರಲ್ ರೋಲ್ಸ್ನ ಹೆಸರಿನ ನಮೂದು ಮುಂತಾದ ಇತರೆ ದಾಖಲೆಗಳನ್ನು ಅನೇಕ ವೇಳೆ ಗುರುತಿಸುವ ಪುರಾವೆಯಾಗಿ ಬಳಸಲಾಗುತ್ತದೆ.
ಅಲ್ಲದೆ ಮೊದಲ ಬಾರಿಗೆ 15ನೇ ಜನವರಿ 2013 ರಿಂದ ಈ ಆನ್ಲೈನಲ್ಲಿ ಒಂದು ಹೊಸ ರೇಷನ್ ಕಾರ್ಡ್ ಪಡೆಯಲು ಭಾರತ ಸರ್ಕಾರ ಪ್ರತಿ ರಾಜ್ಯಕ್ಕೆ ಅನುಗುಣವಾಗಿ ವೆಬ್ಸೈಟ್ ಮತ್ತು ಅದಕ್ಕೆ ಸಂಬಂಧಪಟ್ಟ ಕಾರ್ಯಕರ್ತರನ್ನು ನೇಮಕ ಮಾಡಿತ್ತು. ಇಂದು ನಾವು ಮನೆಯಲ್ಲೇ ಕುಂತ್ತು ಕೇವಲ 10 ನಿಮಿಷಗಳಲ್ಲಿ ಆನ್ಲೈನ್ ಮೂಲಕ ಹೊಸ ರೇಷನ್ ಕಾರ್ಡ್ ಪಡೆಯುವುದೇಗೆಂದು ತಿಳಿಯೋಣ. ರೇಷನ್ ಕಾರ್ಡ್ ತಯಾರಿಸಲು ಸಾಮಾನ್ಯವಾಗಿ 15 ದಿನಗಳಾಗುತ್ತದೆ. ಆದರೂ ಕೆಲ ಒಮ್ಮೆ ಈ ಸಮಯ ರಾಜ್ಯದಿಂದ ರಾಜ್ಯಕ್ಕೆ ಬದಲಾಗಬಹುದು. ಇದರ Website:
1. ಮೊದಲಿಗೆ ನಿಮ್ಮ ಮೊಬೈಲ್ ಫೋನ್ನಿಂದ '9212357123' ನಂಬರ್ಗೆ ಅರ್ಜಿದಾರರ ಹೆಸರನ್ನು SMS ಮಾಡಿ.
2. ಕೆಲವೇ ನಿಮಿಷಗಳಲ್ಲಿ ಫೋನ್ನಲ್ಲಿ ನೀವೊಂದು ಟೋಕನ್ ಸಂಖ್ಯೆ ಮತ್ತು ಸೆಕ್ಯೂರಿಟಿ ಕೋಡನ್ನು ಪಡೆಯುವಿರಿ.
3. ಬಯೋಮೆಟ್ರಿಕ್ ಫಿಂಗರ್ಪ್ರಿಂಟ್ ಸ್ಕ್ಯಾನ್ ಮತ್ತು ಛಾಯಾಚಿತ್ರಗಳಿಗಾಗಿ ನಿಮ್ಮ ಕುಟುಂಬದ ಸದಸ್ಯರ ಅಗತ್ಯವಿದೆ.
4. ಆನ್ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವಂತೆ ನಿಮ್ಮ ಕುಟುಂಬದ ಸದಸ್ಯರ ವಿವರಗಳನ್ನು ಒದಗಿಸಿರಿ
5. ನಿಮ್ಮ ಕುಟುಂಬ ಸದಸ್ಯರು ಮತ್ತು ನಿಮ್ಮ ಛಾಯಾಚಿತ್ರಗಳು ಮತ್ತು ಬಯೋಮೆಟ್ರಿಕ್ಸ್ ಅನ್ನು ಅಪ್ಲೋಡ್ ಮಾಡಿರಿ.
6. ಇತ್ತೀಚಿನ ಲೈಟ್ ಬಿಲ್, ಫೋಟೋ ID ಮತ್ತು ವಿಳಾಸವನ್ನು ಸ್ಕ್ಯಾನ್ ಮಾಡಿ ಮತ್ತು ಫೋಟೋ ಬಯೋಮೆಟ್ರಿಕ್ ಕೇಂದ್ರದಲ್ಲಿ ಅಪ್ಲೋಡ್ ಮಾಡಿ
7. ಇದರ ನಂತರ ಸೆಲ್ಫ್ ಡಿಕ್ಲೆರೇಷನ್ (Self Declaration) ಡೌನ್ಲೋಡ್ ಮಾಡಿ ಮತ್ತು ಅದರ ಮೇಲೆ ಸಹಿ ಮಾಡಿಕೊಳ್ಳಿರಿ.
8. ಡಿಕ್ಲೆರೇಷನನ್ನು ಸ್ಕ್ಯಾನ್ ಮಾಡಿ ಮತ್ತು ಆನ್ಲೈನ್ನಲ್ಲಿ ನಿಮ್ಮ ಎಲ್ಲ ಡಾಕ್ಯುಮೆಂಟನ್ನು ಅದರೊಂದಿಗೆ ಅಪ್ಲೋಡ್ ಮಾಡಿ.
9. ನಂತರ ಫೋಟೋ ಮತ್ತು ಬಯೋಮೆಟ್ರಿಕ್ ಸೇವಾ ಕೇಂದ್ರದಿಂದ ನಿಮ್ಮ ಅಪ್ಲಿಕೇಶನಿನ ರೇಷನ್ ಕಾರ್ಡ್ ನಂಬರೊಂದಿಗೆ ಪ್ರಿಂಟೆಡ್ ರಶೀದಿಯನ್ನು ಪಡೆದುಕೊಳ್ಳುವಿರಿ.
ಕೊನೆಯದಾಗಿ 3-4 ದಿನಗಳ ನಂತ್ರ ನಿಮ್ಮ ರೇಷನ್ ಕಾರ್ಡ್ ಅರ್ಜಿಯ ಸ್ಟೇಟಸನ್ನು http://ahara.kar.nic.in ನಲ್ಲಿ ಟ್ರ್ಯಾಕ್ ಮಾಡಬಹುದು. ಅಥವಾ ಈ 1-800-425-9339 ನಂಬರ್ಗೆ ಕರೆ ಮಾಡಿ ನಿಮ್ಮ ರೇಷನ್ ಕಾರ್ಡ್ ಅರ್ಜಿಯ ಮಾಹಿತಿಗಳನ್ನು ತೋರಿ ಮಾಹಿತಿ ಪಡೆಯಬವುದು.
ಕರ್ನಾಟಕದಲ್ಲಿ ಒಂದು ಹೊಸ ರೇಷನ್ ಕಾರ್ಡ್ ಯಾರೆಲ್ಲಾ ಪಡೆಯಬವುದು..?
– ರೇಷನ್ ಕಾರ್ಡುಗಳಿಲ್ಲದ ಕುಟುಂಬಗಳು
– ವಿಭಜಿತ ಕುಟುಂಬಗಳಿಗೆ ಸೇರಿದ ಸದಸ್ಯರು
– ಹೊಸದಾಗಿ ಮದುವೆಯಾದ ದಂಪತಿಗಳು
– ಹಳೆಯ ರೇಷನ್ ಕಾರ್ಡ್ಗಳ ಅವಧಿ ಮುಗಿದವರು ಮತ್ತು ಸರ್ಕಾರದಿಂದ ತಾತ್ಕಾಲಿಕ ರೇಷನ್ ಕಾರ್ಡ್ ಹೊಂದಿರುವವರು
ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ. ಇಮೇಜ್ ಸೋರ್ಸ್: