ನಿಮ್ಮ ಆಧಾರ್ ಕಾರ್ಡ್ ಬಳಸಿ 2 ಲಕ್ಷದವರೆಗೆ ಸಾಲ ಪಡೆಯಬಹುದು! ಇಲ್ಲಿದೆ ಸಂಪೂರ್ಣ ಮಾಹಿತಿ!

ನಿಮ್ಮ ಆಧಾರ್ ಕಾರ್ಡ್ ಬಳಸಿ 2 ಲಕ್ಷದವರೆಗೆ ಸಾಲ ಪಡೆಯಬಹುದು! ಇಲ್ಲಿದೆ ಸಂಪೂರ್ಣ ಮಾಹಿತಿ!
HIGHLIGHTS

ನಿಮಗೊತ್ತಾ ಆಧಾರ್ ಕಾರ್ಡ್‌ (Aadhaar Card) ಮೂಲಕ ಈಗ ಸಾಲ ಪಡೆಯಬಹುದು.

ನಿಮ್ಮ ಆಧಾರ್ ಕಾರ್ಡ್‌ (Aadhaar Card) ಮೂಲಕ ಸಾಲ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

ಕೇವಲ 10 ನಿಮಿಷಗಳಲ್ಲಿ 2 ಲಕ್ಷದವರೆಗಿನ ಸಾಲವನ್ನು ಆಧಾರ್ ಕಾರ್ಡ್ (Aadhaar Card) ಮೂಲಕ ಪಡೆಯಬಹುದು.

Aadhar Card Loan: ಸಾಮಾನ್ಯವಾಗಿ ನಿಮಗೆ ವೈಯಕ್ತಿಕ ಸಾಲಗಳನ್ನು (Personal Loan) ಪಡೆಯಲು ಹಿಂದೆ ವಿಳಾಸ ಮತ್ತು ಗುರುತಿನ ಪುರಾವೆಗಳನ್ನು ಪರಿಶೀಲನೆ ಮಾಡಲಾಗುತ್ತಿತ್ತು. ಆದರೆ ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ನೀವು ಈಗ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಆಧಾರ್ ಕಾರ್ಡ್ ಅನ್ನು ಬಳಸಿ ಈಗ ಬ್ಯಾಂಕ್‌ಗಳು e-KYC ಮಾಡಬಹುದು. ಆಧಾರ್ ಕಾರ್ಡ್‌ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸುವ ವಿಧಾನ ಸರಳವಾಗಿದ್ದು ಅದರ ಸಂಪೂರ್ಣ ಮಾಹಿತಿ ಇಲ್ಲಿದೆ. ಆದರೆ ಗಮನದಲ್ಲಿರಲಿ ಈ ಸಾಲ ಪಡೆಯಲು ನಿಮ್ಮ ಕ್ರೆಡಿಟ್ ಸ್ಕೋರ್ (CIBIL Score) ಅನ್ನು ಸಹ ನೀವು ಪರಿಶೀಲಿಸಬೇಕು. ಇದಕ್ಕೆ ನೀವು ಅರ್ಹರಾಗಿದ್ದಾರೆ ಮಾತ್ರ ಸಾಲದ ಮುಂದಿನ ಹಂತಕ್ಕೆ ಹೋಗಬಹುದು.

ಆಧಾರ್ ಮೇರೆಗೆ ಪರ್ಸನಲ್ ಲೋನ್‌ಗಾಗಿ ಅರ್ಜಿ ಸಲ್ಲಿಸುವುದು ಹೇಗೆ?

➥ಆಧಾರ್ ಕಾರ್ಡ್ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಲು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. 

➥ಬ್ಯಾಂಕ್‌ನ ಮೊಬೈಲ್ ಅಪ್ಲಿಕೇಶನ್ ಬಳಸಿ ನೀವು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.

➥ನಂತರ ನೀವು OTP ಅನ್ನು ಪಡೆಯುತ್ತೀರಿ ನಂತರ ನೀವು ವೈಯಕ್ತಿಕ ಸಾಲವನ್ನು ಆರಿಸಿಕೊಳ್ಳಬೇಕು.

➥ನೀವು ಸಾಲದ ಮೊತ್ತ ಮತ್ತು ಅಗತ್ಯವಿರುವ ಇತರ ಮಾಹಿತಿಯನ್ನು ನಮೂದಿಸಬೇಕು. 

➥ಇದರ ನಂತರ ನಿಮ್ಮ PAN ಕಾರ್ಡ್ ಮಾಹಿತಿಯನ್ನು ಸಹ ಕೇಳಬಹುದು.

➥ನೀವು ಇದನ್ನು ಸಹ ಭರ್ತಿ ಮಾಡಿ ಬ್ಯಾಂಕ್ ನಂತರ ಎಲ್ಲಾ ಮಾಹಿತಿಯನ್ನು ಪರಿಶೀಲಿಸುತ್ತದೆ. 

➥ಇದನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಸಾಲವನ್ನು ಅನುಮೋದಿಸಿದರೆ ನಿಮ್ಮ ಸಾಲದ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿರುತ್ತದೆ.

ಈ ಬ್ಯಾಂಕುಗಳು ಆಧಾರ್ ಮೇರೆಗೆ ಸಾಲ ನೀಡುತ್ತಿವೆ 

ನಿಮ್ಮ ಆಧಾರ್ ಕಾರ್ಡ್‌ನ ಸಹಾಯದಿಂದ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವುದು ಸುಲಭವಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಸೇರಿದಂತೆ ಹಲವಾರು ಭಾರತೀಯ ಬ್ಯಾಂಕ್‌ಗಳಿಂದ ಗ್ರಾಹಕರು ಆಧಾರ್ ಮೂಲಕ ಸಾಲವನ್ನು ಪಡೆಯಬಹುದು. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಕ್ರೆಡಿಟ್ ಸ್ಕೋರ್ (CIBIL Score) ಅನ್ನು ಸಹ ನೀವು ಪರಿಶೀಲಿಸಬೇಕು. ನಿಮ್ಮ ಕ್ರೆಡಿಟ್ ಸ್ಕೋರ್ ಕನಿಷ್ಠ 750 ಅಥವಾ ಅದಕ್ಕಿಂತ ಹೆಚ್ಚಿನದಾಗಿರಬೇಕು. ಮಾಹಿತಿಯ ಪ್ರಕಾರ ನೀವು ಎರಡು ಲಕ್ಷದವರೆಗಿನ ಸಾಲಕ್ಕೆ ಅರ್ಜಿ ಸಲ್ಲಿಸಲು ನಿಮ್ಮ ಆಧಾರ್ ಕಾರ್ಡ್ ಅನ್ನು ಬಳಸಬಹುದು. ಅನೇಕ ಬಾರಿ ಅಪ್ಲಿಕೇಶನ್ ಗೆ ಅಪ್ರೂವಲ್ 5 ನಿಮಿಷಗಳಲ್ಲಿ ಬರುತ್ತದೆ ಮತ್ತು ಸಾಲವನ್ನು ತಕ್ಷಣವೇ ವಿತರಿಸಲಾಗುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo