ಹೊಸ Voter ID Card ಬೇಕಿದ್ದರೆ ಮನೆಯಿಂದಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ನಿಮಗೊತ್ತಾ?

ಹೊಸ Voter ID Card ಬೇಕಿದ್ದರೆ ಮನೆಯಿಂದಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ನಿಮಗೊತ್ತಾ?
HIGHLIGHTS

ಮನೆಯಿಂದಲೇ ನಿಮಗೊಂದು ಹೊಸ ವೋಟರ್ ಐಡಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ನೀವು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ವೋಟರ್ ಕಾರ್ಡ್ (Voter ID Card) ಪಡೆದು ಮತದಾನ ಮಾಡಲು ಅರ್ಹರಾಗಿರುತ್ತೀರ

ಭಾರತದಲ್ಲಿ ನಿಮ್ಮ ವಯಸ್ಸಿನ ಮತ್ತು ನಿಮ್ಮ ವಿಳಾಸದ ದೃಢೀಕರಣಕ್ಕೆ ಅತ್ಯಂತ ಪ್ರಮುಖ ದಾಖಲೆ ಈ ವೋಟರ್ ಕಾರ್ಡ್ (Voter ID Card)

ನೀವೊಬ್ಬ ಭಾರತೀಯರಾಗಿದ್ದರೆ ವೋಟರ್ ಕಾರ್ಡ್ (Voter ID Card) ಬಗ್ಗೆ ಮಾಹಿತಿ ಇದ್ದೆ ಇರುತ್ತದೆ. ಅಂದ್ರೆ ದೇಶದಲ್ಲಿ ನಡೆಯುವ ಯಾವುದೇ ಚುನಾವಣೆಗಳಿಗಾಗಿ ನೀವು ನಿಮ್ಮ ಮತವನ್ನು ಚಲಾಯಿಸಬೇಕೆಂದು ಬಯಸಿದರೆ ನಿಮ್ಮ ಬಳಿ ವೋಟರ್ ಐಡಿ ಕಾರ್ಡ್ ಹೊಂದುವುದು ಅನಿವಾರ್ಯವಾಗಿದ್ದು ಜೊತೆಗೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿಸುವುದು ಸಹ ಅತ್ಯಾವಶ್ಯಕವಾಗಿದೆ. ವೋಟರ್ ಕಾರ್ಡ್ (Voter ID Card) ಕೇವಲ ಮತ ಚಲಾಯಿಸಲು ಮಾತ್ರವಲ್ಲದೆ ಭಾರತದಲ್ಲಿ ನಿಮ್ಮ ವಯಸ್ಸಿನ ಮತ್ತು ನಿಮ್ಮ ವಿಳಾಸದ ದೃಢೀಕರಣಕ್ಕೆ ಅತ್ಯಂತ ಪ್ರಮುಖ ದಾಖಲೆ. ಆದ್ದರಿಂದ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸುವುದು ಹೇಗೆ? ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ಸಂಪೂರ್ಣ ಮಾಹಿತಿ ಈ ಲೇಖಾನದಲ್ಲಿದೆ.

ವೋಟರ್ ಐಡಿ ಕಾರ್ಡ್‌ಗೆ ಅರ್ಜಿ ಹಾಕೋದು ಹೇಗೆ?

ನೀವು ಭಾರತೀಯರಾಗಿದ್ದರೆ ಹೊಸ ವೋಟರ್ ಐಡಿ ಕಾರ್ಡ್‌ ಪಡೆಯುವುದು ಸುಲಭದ ಕೆಲಸವಾಗಿದೆ. ಏಕೆಂದರೆ ನೀವು ಮನೆಯಿಂದಲೇ  ಆನ್‌ಲೈನ್‌ನಲ್ಲೂ ರಿಜಿಸ್ಟ್ರೇಷನ್ ಮಾಡಬಹುದು ಅಥವಾ ನೇರವಾಗಿ ಭಾರತದ ಚುನಾವಣಾ ಆಯೋಗದ ಕಚೇರಿಗೆ ಅಥವಾ ಏಜನ್ಸಿಗಳಿಗೆ  ಹೋಗಿ ಅಲ್ಲೂ ಸಹ ನೀವು ಅರ್ಜಿ ಸಲ್ಲಿಸಬಹುದು. ಈ ಎರಡೂ ವಿಧಾನದಲ್ಲಿ ನೀವು ಮತದಾರರ ಗುರುತಿನ ಚೀಟಿ ಪಡೆಯಬಹುದು ಆದರೆ ಇದಕ್ಕಾಗಿ ನೀವು ನೀಡುವ ದಾಖಲೆಗಳು ಸರಿಯಾಗಿರಬೇಕು ಎನ್ನುವುದನ್ನು ಗಮನದಲ್ಲಿರಲಿ.

ಹೊಸ ವೋಟರ್ ಐಡಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಮೊದಲಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು https://voterportal.eci.gov.in/ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. 

ಅಲ್ಲಿ ನೀವು ರಿಜಿಸ್ಟ್ರೇಷನ್ ಆಫ್ ನ್ಯೂ ವೋಟರ್ ಎಂಬ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಹೆಸರು, ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಹಾಕಿ ಸೈನ್ ಅಪ್ ಮಾಡಿಕೊಳ್ಳಿ. 

ಇದರ ನಂತರ ನಿಮಗೆ ಯೂಸರ್ ಐಡಿ ಹಾಗೂ ಪಾಸ್‌ವರ್ಡ್‌ ಸಿಗುತ್ತೆ ನಂತರ ನೀವು ಮತ್ತೆ ಇದೆ ವೆಬ್‌ಸೈಟ್‌ಗೆ ಲಾಗ್ ಇನ್ ಆಗಬೇಕು.

ಒಂದು ವೇಳೆ ನೀವು ಭಾರತದ ಹೊರಗೆ NRI (Non-Resident Indian) ವಾಸಿಸುತ್ತಿದ್ದು ಹೊಸ ವೋಟರ್ ಕಾರ್ಡ್ ಬೇಕಿದ್ದರೆ ಇಲ್ಲಿ ಫಾರಂ 6A ಅನ್ನೋ ಅರ್ಜಿಯನ್ನ ಸಹ ಡೌನ್ ಲೋಡ್ ಮಾಡ್ಕೋಬೇಕು. 

ಈ ಅರ್ಜಿಯಲ್ಲಿ ನೀವು ನಿಮ್ಮ ಹೆಸರು, ವಯಸ್ಸು, ಅಡ್ರೆಸ್ ಇತ್ಯಾದಿ ವಿವರಗಳನ್ನ ಭರ್ತಿ ಮಾಡಬೇಕು. ನಿಮ್ಮ ಬಳಿ ಇರುವ ಅಡ್ರೆಸ್ ಪ್ರೂಫ್ ಹಾಗೂ ಏಜ್ ಪ್ರೂಫ್‌ನಲ್ಲಿ ಇರೋ ವಿವರಗಳನ್ನೇ ಈ ಅರ್ಜಿಯಲ್ಲೂ ಬರೆಯಬೇಕು. 

ಅರ್ಜಿ ಭರ್ತಿ ಮಾಡಿದ ಮೇಲೆ ಅದನ್ನು ಫೋಟೋ ತೆಗೆದು ನಿಮ್ಮ ವಯಸ್ಸಿನ ಮತ್ತು ವಿಳಾಸದ ಪುರಾವೆಯೊಂದಿಗೆ ಪಾಸ್‌ಪೋರ್ಟ್‌ ಸೈಜಿನ ಫೋಟೋ ಎಲ್ಲವನ್ನೂ ಅಪ್‌ಲೋಡ್ ಮಾಡಬೇಕು.

ಅರ್ಜಿ ಸಲ್ಲಿಕೆ ಮಾಡಿದ ನಂತರ ನಿಮ್ಮ ವಿವರಗಳನ್ನ ಅಧಿಕಾರಿಗಳು ಪರಿಶೀಲನೆ ಮಾಡ್ತಾರೆ. ನೀವು ಕೊಟ್ಟಿರುವ ಅಡ್ರೆಸ್‌ ಬಳಿ ಬಂದು ಚೆಕ್ ಮಾಡ್ತಾರೆ. 

ಪರಿಶೀಲನೆ ಎಲ್ಲವೂ ಉತ್ತಮವಾಗಿದ್ದರೆ ನಂತರ ನಿಮ್ಮ ವೋಟರ್ ಐಡಿ ಕಾರ್ಡ್ ಸಿದ್ದವಾಗಿ ನಿಮ್ಮ ಮನೆ ಅಡ್ರೆಸ್‌ಗೆ ವೋಟರ್ ಐಡಿ ಕಾರ್ಡ್‌ ಬಂದು ಸೇರುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo