How to Apply for Voter ID Card Online 2024: ಈ ವರ್ಷದ ಲೋಕಸಭಾ ಚುನಾವಣೆಗಾಗಿ ದೇಶದ ಚುನಾವಣಾ ಆಯೋಗ (Election Commission) ಅದ್ದೂರಿಯಾಗಿ ತಯಾರಿ ನಡೆಸುತ್ತಿದೆ. ಏಕೆಂದರೆ 2024 ಲೋಕಸಭಾ ಚುನಾವಣೆ ಹತ್ತಿರದಲ್ಲಿರುವುದು ನಮಗೆಲ್ಲರಿಗೂ ತಿಳಿದಿದೆ. ಅದರಲ್ಲಿ ಮುಖ್ಯವಾಗಿ ಭಾರತದಲ್ಲಿ 18 ವರ್ಷಗಳನ್ನು ಪೂರೈಸಿದ ದೇಶದ ಪ್ರತಿಯೊಬ್ಬ ಪ್ರಜೆಯೂ ತನ್ನ ಮತದಾನ ಮಾಡುವ ಹಕ್ಕನ್ನು ಪಡೆದಿರುತ್ತಾನೆ. ಈ ವರ್ಷ ನಿಮಗೆ 18 ವರ್ಷವಾಗಿದ್ದರೆ ನೀವು ಮತದಾನ ಮಾಡಬಹುದು. ಅದಕ್ಕಾಗಿ ಮೊದಲು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿಸುವುದು ಬಹು ಮುಖ್ಯವಾಗಿದೆ. ಅದರೊಂದಿಗೆ ನೀವು ಅಧಿಕೃತ ಮತದಾರರ ಗುರುತಿನ ಚೀಟಿಯನ್ನು ಸಹ ಹೊಂದಿರಬೇಕು. ಹಾಗಾದ್ರೆ ಹೊಸ ಮತದಾರರ ಗುರುತಿನ ಚೀಟಿಯನ್ನು (Voter ID Card) ಪಡೆಯುವುದು ಹೇಗೆ ತಿಳಿಯಿರಿ.
Also Read: ಅಗತ್ಯಕ್ಕಿಂತ ಹೆಚ್ಚಾಗಿ Instagram ಬಳಕೆಯಾಗುತ್ತಿದ್ಯಾ? ನೀವೇ ನಿಗದಿತ ಟೈಮರ್ ಸೆಟ್ ಮಾಡಬಹುದು!
ನೀವು ಮತದಾರರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸುವ ಮೊದಲು ನೀವು ಅದಕ್ಕೆ ಅರ್ಹರೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ಇದಕ್ಕಾಗಿ ನೀವು ಈ ಕೆಳಗಿನ ವಿಷಯಗಳನ್ನು ಖಚಿತಪಡಿಸಿಕೊಳ್ಳಬೇಕು. ನಿಮ್ಮ ಮತದಾರರ ಗುರುತಿನ ಚೀಟಿಯಲ್ಲಿ ವಿಳಾಸವನ್ನು ಸುಲಭವಾಗಿ ಬದಲಾಯಿಸುವುದು ಹೇಗೆ ಎಂದು ತಿಳಿಯಿರಿ. ಮತದಾರರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಲು ನೀವು ಭಾರತದ ಪ್ರಜೆಯಾಗಿರಬೇಕು. ಇದರೊಂದಿಗೆ ನಿಮ್ಮ ವಯಸ್ಸು 18 ವರ್ಷ ಪೂರೈಸಿದ್ದರೆ ನೀವು ಮತದಾರರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಬಹುದು. ನೀವು ಕ್ಷೇತ್ರದಲ್ಲಿ ನೆಲೆಸಿರಬೇಕು. ವಾಸ್ತವವಾಗಿ ವಿವಿಧ ರಾಜ್ಯ ಸರ್ಕಾರಗಳು ಇದನ್ನು ವಿಭಿನ್ನವಾಗಿ ವ್ಯಾಖ್ಯಾನಿಸಿವೆ.
ನೀವೊಂದು ಹೊಸ ಮತದಾರರ ಗುರುತಿನ ಚೀಟಿ (Voter ID Card) ಪಡೆಯಲು ಬಯಸಿದರೆ ಇದಕ್ಕೆ ನಿಮ್ಮ ಗುರುತಿನ ಮತ್ತು ವಿಳಾಸದ ಪುರಾವೆಯೊಂದಿಗೆ ನಿಮ್ಮ ಹುಟ್ಟಿನ ದಾಖಲೆಗಳನ್ನು ನೀಡಬೇಕಾಗುತ್ತದೆ. ಇದರಲ್ಲಿ ಮೊದಲಿಗೆ ಗುರುತಿನ ಪುರಾವೆಯಾಗಿ ನಿಮ್ಮ ಫೋಟೋದೊಂದಿಗೆ ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಇತ್ಯಾದಿಗಳನ್ನು ನೀಡಬಹುದು. ವಿಳಾಸ ಪುರಾವೆಯಾಗಿ ಅದೇ ಆಧಾರ್ ಕಾರ್ಡ್, ಪಾಸ್‌ಪೋರ್ಟ್, ವಿದ್ಯುತ್ ಬಿಲ್, ರೇಷನ್ ಕಾರ್ಡ್, ಆಸ್ತಿ ತೆರಿಗೆ ರಶೀದಿ ಇತ್ಯಾದಿಗಳನ್ನು ನೀಡಬಹುದು. ಕೊನೆಯದಾಗಿ ನಿಮ್ಮ ಹುಟ್ಟಿನ ಪುರಾವೆಯಾಗಿ ಇದರಲ್ಲಿ ನಿಮಗೆ ಜನ್ಮ ಪ್ರಮಾಣಪತ್ರ, ಶಾಲಾ ಪ್ರಮಾಣಪತ್ರ, ಪಾಸ್‌ಪೋರ್ಟ್ ಇತ್ಯಾದಿಗಳು ಬೇಕಾಗುತ್ತವೆ. ಇದರೊಂದಿಗೆ ನಿಮದೊಂದು ಲೇಟೆಸ್ಟ್ ಫೋಟೋ ಸಹ ಹೊಂದಿರಬೇಕು.
➥ಮೊದಲಿಗೆ ರಾಷ್ಟ್ರೀಯ ಮತದಾರರ ಸೇವಾ (Election Commission of India) ಪೋರ್ಟಲ್‌ಗೆ ಹೋಗಿ.
➥ಹೊಸ ಬಳಕೆದಾರರನ್ನು ನೋಂದಾಯಿಸಲು Indian Resident Elector ಮೇಲೆ ಕ್ಲಿಕ್ ಮಾಡಿ ಮೊಬೈಲ್ ನಂಬರ್ ಮತ್ತು ಕ್ಯಾಪ್ಚ ನೀಡಿ ಲಾಗಿನ್ ಮಾಡಿ.
➥ಇದರ ನಂತರ ನೀವು ನಿಮ್ಮ ರಾಜ್ಯವನ್ನು ಆಯ್ಕೆ ಮಾಡುವ ಮೂಲಕ ಮುಂದುವರಿಯಬೇಕು ಮತ್ತು ನಂತರ ಹೊಸ ನೋಂದಣಿ (ಫಾರ್ಮ್ 6) ಅನ್ನು ಆಯ್ಕೆ ಮಾಡಿ.
➥ಇಲ್ಲಿ ನೀವು ಈ ಫಾರ್ಮ್ 6 ಅನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು ನಿಮ್ಮ ಸರಿಯಾದ ಹೆಸರು, ವಿಳಾಸ, ಜನ್ಮ ದಿನಾಂಕ ಇತ್ಯಾದಿಗಳನ್ನು ನೀವು ನೀಡಬೇಕು. ಪ್ರಮುಖ ವಿವರಗಳನ್ನು ಸರಿಯಾಗಿ ಭರ್ತಿ ಮಾಡಬೇಕು.
➥ಈಗ ನೀವು ಮೇಲೆ ತಿಳಿಸಿದ ದಾಖಲೆಗಳನ್ನು ಸ್ಕ್ಯಾನ್ ಮಾಡಬೇಕು ಮತ್ತು ಸೂಚನೆಗಳ ಪ್ರಕಾರ ಅವುಗಳನ್ನು ಇಲ್ಲಿ ಅಪ್‌ಲೋಡ್ ಮಾಡಬೇಕು.
➥ಇದರೊಂದಿಗೆ ನಿಮ್ಮ ಪಾಸ್‌ಪೋರ್ಟ್ ಸೈಜ್ ಫೋಟೋವನ್ನು ಅಪ್‌ಲೋಡ್ ಮಾಡಬೇಕು. ನಿಮ್ಮ ಅರ್ಜಿಗಳನ್ನು ನೀವು ಈ ರೀತಿ ಸಲ್ಲಿಸಬಹುದು. ಇದರೊಂದಿಗೆ ನಿಮ್ಮ ಮತದಾರರ ಗುರುತಿನ ಚೀಟಿಯ ಸ್ಟೇಟಸ್ ಸಹ ನೀವು ಪರಿಶೀಲಿಸಬಹುದು.
➥ನೀವು ಮತದಾರರ ಗುರುತಿನ ಚೀಟಿಗಾಗಿ ಆಫ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು ಎಂಬುದನ್ನು ಗಮನಿಸಬೇಕು. ಇದಕ್ಕಾಗಿ ಮೊದಲನೆಯದಾಗಿ ನೀವು ನಿಮ್ಮ ಹತ್ತಿರದ ಚುನಾವಣಾ ನೋಂದಣಿ ಅಧಿಕಾರಿ (ERO) ಕಚೇರಿ ಅಥವಾ ನಿಮ್ಮ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವವರ ಬೂತ್‌ಗೆ ಭೇಟಿ ನೀಡಬಹುದು.