Ration Card: ನಿಮಗೊಂದು ಹೊಸ ರೇಷನ್ ಕಾರ್ಡ್ ಬೇಕಿದ್ದರೆ ಈ ರೀತಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬವುದು

Updated on 08-Mar-2022
HIGHLIGHTS

ಪಡಿತರ ಚೀಟಿಯು (Ration Card) ಆಹಾರ, ಸರಬರಾಜು ಮತ್ತು ಗ್ರಾಹಕ ಸರಬರಾಜು ಇಲಾಖೆಯಿಂದ ಒದಗಿಸಲಾದ ದಾಖಲೆಯಾಗಿದೆ.

ಇದು ದೇಶದ ನಾಗರಿಕರಿಗೆ ಸಬ್ಸಿಡಿ ದರದಲ್ಲಿ ಆಹಾರ ಮತ್ತು ಸರಬರಾಜುಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಪಡಿತರ ಚೀಟಿಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಮತ್ತು ನೀಡಬೇಕಾದ ದಾಖಲೆಗಳ ಬಗ್ಗೆ ಈ ಕೆಳಗೆ ಮಾಹಿತಿ ನೀಡಲಾಗಿದೆ.

ಪಡಿತರ ಚೀಟಿಯು (Ration Card) ಆಹಾರ, ಸರಬರಾಜು ಮತ್ತು ಗ್ರಾಹಕ ಸರಬರಾಜು ಇಲಾಖೆಯಿಂದ ಒದಗಿಸಲಾದ ದಾಖಲೆಯಾಗಿದೆ. ಮತ್ತು ಇದು ದೇಶದ ನಾಗರಿಕರಿಗೆ ಸಬ್ಸಿಡಿ ದರದಲ್ಲಿ ಆಹಾರ ಮತ್ತು ಸರಬರಾಜುಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಅದನ್ನು ವಸತಿ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ (Birth certificate), ಮತದಾರರ ಗುರುತಿನ ಚೀಟಿ (Voter ID) ಸೇರಿದಂತೆ ಅನೇಕ ಪ್ರಮಾಣ ಪತ್ರಗಳನ್ನು ಮಾಡಿಸಲು ಬಳಸಬಹುದು. ನಿಮ್ಮ ಬಳಿ ಪಡಿತರ ಚೀಟಿ ಇಲ್ಲವಾದಲ್ಲಿ ಮತ್ತು ನಿಮಗೆ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಇಚ್ಚೆ ಇದ್ದಲ್ಲಿ ನೀವು ಆನ್‍ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು. ಪಡಿತರ ಚೀಟಿಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಮತ್ತು ನೀಡಬೇಕಾದ ದಾಖಲೆಗಳ ಬಗ್ಗೆ ಈ ಕೆಳಗೆ ಮಾಹಿತಿ ನೀಡಲಾಗಿದೆ.

ಯಾರೆಲ್ಲಾ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬವುದು?

1. ಭಾರತೀಯ ಪ್ರಜೆಯಾದವನು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು.
2. ಒಂದು ರಾಜ್ಯದಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ವ್ಯಕ್ತಿಯು ಬೇರೆ ಯಾವ ರಾಜ್ಯದಲ್ಲೂ ಪಡಿತರ ಚೀಟಿಯನ್ನು ಹೊಂದಿರಬಾರದು.
3. ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ವ್ಯಕ್ತಿ ಕಡ್ಡಾಯವಾಗಿ 18 ವರ್ಷಕ್ಕಿಂತ ಮೇಲಿನ ವಯಸ್ಸಿನವರಾಗಿರಬೇಕು.
4. ಅಪ್ರಾಪ್ತ ವಯಸ್ಕರು ಅಥವಾ 18 ವರ್ಷಕ್ಕಿಂತ ಕೆಳಗಿನವರ ಹೆಸರು ಅವರ ಹೆತ್ತವರ ಪಡಿತರ ಚೀಟಿಯಲ್ಲಿ ಸೇರಿಸಲ್ಪಡುತ್ತದೆ.

ಒಟ್ಟು ಎಷ್ಟು ರೀತಿಯ ಪಡಿತರ ಚೀಟಿಗಳಿವೆ?

ನಮ್ಮ ದೇಶದಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಕೆಲವು ನಿರ್ದಿಷ್ಟ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ. ಆ ಅರ್ಹತೆಗಳಂತೆ ಭಾರತ ಸರಕಾರವು ಎರಡು ರೀತಿಯ ಪಡಿತರ ಚೀಟಿಗಳನ್ನು ವಿತರಿಸುತ್ತದೆ – ಮೊದಲನೆಯದ್ದು ಬಡತನದ ರೇಖೆಗಿಂತ ಕೆಳಗಿರುವವರಿಗೆ (BPL) ನೀಡುವ ಪಡಿತರ ಚೀಟಿ ಮತ್ತು ಎರಡನೆಯದ್ದು ಬಿಪಿಎಲ್ ರಹಿತ ಪಡಿತರ ಚೀಟಿಗಳು ಅಂದರೆ (APL) ಕಾರ್ಡುದಾರರು  ಎಂಬ ಎರಡು ರೀತಿಯ ಪಡಿತರ ಚೀಟಿಗಳಿವೆ.

ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಏನೆಲ್ಲಾ ದಾಖಲೆಗಳು ಬೇಕು?

1. ಯಾವುದೇ ಗುರುತಿನ ಚೀಟಿ ( ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ, ಪಾಸ್‍ಪೋರ್ಟ್, ಸರಕಾರ ನೀಡಿರುವ ಗುರುತಿನ ಚೀಟಿ).
2. ಒಂದು ವಿಳಾಸದ ಗುರುತಿನ ಚೀಟಿ ( ವಿದ್ಯುತ್ ಶಕ್ತಿ, ಫೋನ್ ಬಿಲ್, ಎಲ್‍ಪಿಜಿ ರಸೀದಿ, ಬ್ಯಾಂಕ್ ಪಾಸ್ ಬುಕ್, ಬಾಡಿಗೆ ಕರಾರು ಪತ್ರ).
3. ಕುಟುಂಬ ಸದಸ್ಯರ ಫೋಟೋ ಹೊಂದಿರಬೇಕು 
4. ಅರ್ಜಿದಾರನ ವಾರ್ಷಿಕ ಆದಾಯ ದಾಖಲೆ ಪತ್ರ ಹೊಂದಿರಬೇಕು
5. ಯಾವುದೇ ರದ್ದು ಮಾಡಿದ/ ಹಿಂದಿರುಗಿಸಲ್ಪಟ್ಟ ಪಡಿತರ ಚೀಟಿ ಹೊಂದಿರಬೇಕು.

ಆನ್‍ಲೈನ್‍ನಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ?

1. ಮೊದಲಿಗೆ https://nfsa.gov.in/ ಮೂಲಕ ನಿಮ್ಮ ರಾಜ್ಯದ / ಯುಟಿ ಫುಡ್ ಪೋರ್ಟಲ್‍ಗೆ ಲಾಗಿನ್ ಆಗಬೇಕು.
2. ನಂತರ ಸ್ಕ್ರೀನ್ ಎಡ ಭಾಗದಲ್ಲಿ ಕಾಣುವ ಅಪ್ಲೈ ಫಾರ್ ದ ಸರ್ವಿಸ್ ಮೇಲೆ ಕ್ಲಿಕ್ ಮಾಡಿ.
3. ಹಾಗೆ ಮಾಡಿದ ಮೇಲೆ ಇಶುಯೆನ್ಸ್ ಆಫ್ ನ್ಯೂ ರೇಶನ್ ಕಾರ್ಡ್ ಆಯ್ಕೆ ಕಾಣ ಸಿಗುತ್ತದೆ.
4. ಬಳಿಕ ಅರ್ಜಿ ಸಲ್ಲಿಸುವ ಫಾರಂನಲ್ಲಿ ಕೇಳಲಾಗಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
5. ಸ್ಕ್ಯಾನ್ ಮಾಡಿದ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ ಮತ್ತು ಅರ್ಜಿ ಸಲ್ಲಿಸಿ.
6. ಒಮ್ಮೆ ಅರ್ಜಿ ಸಲ್ಲಿಸಿದ ಬಳಿಕ ಆ ವೆಬ್‍ಸೈಟ್ ನಿಮ್ಮ ಪಡಿತರ ಚೀಟಿ ಅರ್ಜಿಯ ಸ್ಟೇಟಸ್ ಅನ್ನು ತಿಳಿದುಕೊಳ್ಳಬಹುದು.

ಆನ್‍ಲೈನ್‍ನಲ್ಲಿ ಪಡಿತರ ಚೀಟಿ ಅರ್ಜಿಯ ಸ್ಟೇಟಸ್ ಅನ್ನು ಪರೀಕ್ಷಿಸುವುದು ಹೇಗೆ?

1. ರಾಜ್ಯ/ ಯುಟಿ ಫುಡ್ ಪೋರ್ಟಲ್‍ನ ಇ-ಸರ್ವಿಸಸ್ ವಿಭಾಗದ ಮೇಲೆ ಕ್ಲಿಕ್ ಮಾಡಿ.
2. ಬಳಿಕ ನಿಮ್ಮ ಪಡಿತರ ಚೀಟಿ ಅರ್ಜಿಯ ಸ್ಟೇಟಸ್ ತಿಳಿಯಲು ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
3. ನಿಮ್ಮ ಲಾಗಿನ್ ಐಟಿ ಮತ್ತು ಪಾಸ್‍ವರ್ಡ್ ನಮೂದಿಸಿ ಲಾಗಿನ್ ಆಗಿ.
4. ಅದು ಮುಗಿದ ಮೇಲೆ ನಿಮ್ಮ ಪಡಿತರ ಚೀಟಿಯ ಅರ್ಜಿಯ ಸ್ಟೇಟಸ್ ಪರದೆಯ ಮೇಲೆ ಕಾಣಸಿಗುತ್ತದೆ.

ಸೂಚನೆ: ಆಫ್‌ಲೈನ್ ಅಥವಾ ಆನ್‌ಲೈನ್‌ನಲ್ಲಿ ಮಾಡಬಹುದಾದ ಎಲ್ಲಾ ಪೋಷಕ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನು ಸಲ್ಲಿಸಿದ ನಂತರ ದಾಖಲೆಗಳ ಯಶಸ್ವಿ ಪರಿಶೀಲನೆಯ ನಂತರ 15 ದಿನಗಳಲ್ಲಿ ಹೊಸ ಪಡಿತರ ಚೀಟಿಯನ್ನು ನೀಡಲಾಗುತ್ತದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :