ಭಾರತದಲ್ಲಿ ಬೈಕ್, ಸ್ಕೂಟರ್, ಕಾರು ಮುಂತಾದ ಯಾವುದೇ ವಾಹನವನ್ನು ರಸ್ತೆಯಲ್ಲಿ ಓಡಿಸಲು ಡ್ರೈವಿಂಗ್ ಲೈಸೆನ್ಸ್ (License) ಅಗತ್ಯವಿದೆ. ಚಾಲನಾ ಪರವಾನಗಿ ಇಲ್ಲದೆ ವಾಹನ ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧ. ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದನ್ನು ನಿಷೇಧಿಸಲಾಗಿದೆ.
ಹಿಂದೆ ಡ್ರೈವಿಂಗ್ ಲೈಸೆನ್ಸ್ (Driving Licence) ಪಡೆಯುವುದು ಸ್ವಲ್ಪ ಕಷ್ಟವಾಗಿತ್ತು. ಮೋಟಾರು ವಾಹನ ಕಾಯ್ದೆಯ ಪ್ರಕಾರ ಸಾರ್ವಜನಿಕ ಈಗ ಮನೆಯೆಲ್ಲೆ ಕುಳಿತು ಸ್ಥಳದಲ್ಲೆ ಹೊಸ ಪರವಾನಗಿ ಪಡೆಯಬಹುದು. ಆರ್‌ಟಿಒ ಕಚೇರಿಗಳ ಮುಂದೆ ಅಲೆದಾಡುವುದನ್ನು ತಪ್ಪಿಸಿದೆ. ಏಕೆಂದರೆ ಕೇಂದ್ರ ಸರ್ಕಾರದಿಂದ ಹೊಸ ತಂತ್ರಜ್ಞಾನದ ಸಹಾಯದಿಂದ ಈಗ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಸುಲಭವಾಗಿದೆ.
ಚಾಲನಾ ಪರವಾನಗಿಗಾಗಿ ಆನ್‌ಲೈನ್‌ನಲ್ಲಿ ಕಚೇರಿಗಳನ್ನು ಸುತ್ತುವ ಅಗತ್ಯವಿಲ್ಲ. ಇದರಿಂದ ಸಾಕಷ್ಟು ಸಮಯ ಉಳಿತಾಯವಾಗುತ್ತದೆ. ಅಲ್ಲದೆ ಹೆಚ್ಚು ತಿರುಗಾಡುವ ಅಗತ್ಯವಿಲ್ಲ. ಡ್ರೈವಿಂಗ್ ಲೈಸೆನ್ಸ್ (Driving Licence) ಬೇಕು ಎಂದಾದಲ್ಲಿ ಮೊದಲು ಕಲಿಕಾ ಪರವಾನಗಿ ಪಡೆಯಬೇಕು. ಕಲಿಕಾ ಪರವಾನಗಿ ನೀಡಿದ ಒಂದು ತಿಂಗಳ ನಂತರ, ನೀವು ಡ್ರೈವಿಂಗ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಆರ್‌ಟಿಒ ಅಧಿಕಾರಿಗಳು ಈ ಚಾಲನಾ ಪರೀಕ್ಷೆ ನಡೆಸಲಿದ್ದಾರೆ. ಈ ಪರೀಕ್ಷೆಯನ್ನು ಪೂರ್ಣಗೊಳಿಸಿದ ನಂತರ ನಿಮಗೆ ಪರವಾನಗಿ ನೀಡಲಾಗುತ್ತದೆ.
ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಪರವಾನಗಿ ಸಿಗುವುದಿಲ್ಲ. ಕಲಿಕಾ ಪರವಾನಗಿ ಪಡೆದವರು 6 ತಿಂಗಳೊಳಗೆ ಡ್ರೈವಿಂಗ್ ಲೈಸೆನ್ಸ್ (Driving Licence) ಅರ್ಜಿ ಸಲ್ಲಿಸಬೇಕು. ಈ ಪೋರ್ಟಲ್ ಆನ್‌ಲೈನ್‌ನಲ್ಲಿ ಕಲಿಯುವವರ ಪರವಾನಗಿಗಾಗಿ ಮನೆಯಲ್ಲಿಯೇ ಕುಳಿತು ಅರ್ಜಿ ಸಲ್ಲಿಸಲು ಸರಳವಾದ ಮಾರ್ಗವನ್ನು ಒದಗಿಸುತ್ತದೆ. ಅದು ಕೇಂದ್ರ ಸರ್ಕಾರದ ಪರಿವಾಹನ ಸೇವೆಯ ಅಂಗವಾಗಿದೆ. ಮಾಹಿತಿ ಅನುಕೂಲಕರವಾಗಿದೆ ತಿಳಿಯದವರೊಂದಿಗೆ ಹಂಚಿಕೊಳ್ಳಿ.