ಕರ್ನಾಟಕವು ಭಾರತದ ಮುಂಬರುವ ರಾಜ್ಯಗಳಲ್ಲಿ ಒಂದಾಗಿದೆ. ಮತ್ತು ಪ್ರತಿ ವರ್ಷ ಹೆಚ್ಚಿನ ಜನರು ಇದನ್ನು ಮನೆಗೆ ಕರೆಯುತ್ತಿದ್ದಾರೆ. ರಾಜ್ಯದಲ್ಲಿ ಲಭ್ಯವಿರುವ ವೃತ್ತಿ ಅವಕಾಶಗಳು ಹೇರಳವಾಗಿದ್ದು, ಜನರು ಎಂದಿಗಿಂತಲೂ ಇಂದು ಉತ್ತಮ ಜೀವನಶೈಲಿಯನ್ನು ನಡೆಸುತ್ತಿದ್ದಾರೆ. ಯುವ ಪೀಳಿಗೆಯು ಲಭ್ಯವಿರುವ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸುವುದಕ್ಕಿಂತ ಹೆಚ್ಚಾಗಿ ಸ್ವಂತ ವಾಹನಗಳನ್ನು ಓಡಿಸಲು ತೆಗೆದುಕೊಳ್ಳುತ್ತಿದೆ. ಇದರ ಹಿಂದಿನ ದೊಡ್ಡ ಕಾರಣವೆಂದರೆ ಕರ್ನಾಟಕದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಅತ್ಯಂತ ಸುಲಭ.
ನೀವೂ ಸಹ ಕರ್ನಾಟಕದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಬಯಸಿದರೆ ನೀವು ತಿಳಿದುಕೊಳ್ಳಬೇಕಾದ ಎಲ್ಲದಕ್ಕೂ ಸಂಪೂರ್ಣ ಮಾರ್ಗದರ್ಶಿ ಇಲ್ಲಿದೆ. ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್ ಬಳಸಿ ಬಹುತೇಕ ಎಲ್ಲಾ ಸರ್ಕಾರಿ ಸೇವೆಗಳನ್ನು ಆನ್‌ಲೈನ್‌ನಲ್ಲಿ ಪಡೆಯಬಹುದಾದ ಈ ಸಮಯದಲ್ಲಿ 'ಡ್ರೈವಿಂಗ್ ಲೈಸೆನ್ಸ್' ಒಂದನ್ನು ಪಡೆಯಲು ಮಾತ್ರ ಜನರು ಕಷ್ಟಪಡುತ್ತಾರೆ. ಇದಕ್ಕೆ ಕಾರಣವೂ ಇದ್ದು, ಸಾರಿಗೆ ಇಲಾಖೆಯ ಸರಿಯಾದ ಮಾರ್ಗದರ್ಶನ ಇಲ್ಲದಿರುವುದು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ತೋರುವುದರಿಂದ ಆನ್‌ಲೈನಿನಲ್ಲಿ 'ಡ್ರೈವಿಂಗ್ ಲೈಸೆನ್ಸ್' ಪಡೆಯುವುದು ಕಷ್ಟಸಾಧ್ಯವೆನಿಸಿದೆ.
ಇನ್ನು ಅಧಿಕಾರಿಗಳ ಕೈ ಬೆಚ್ಚಗೆ ಮಾಡದಿದ್ದರೆ 'ಡ್ರೈವಿಂಗ್ ಲೈಸೆನ್ಸ್' ಪಡೆಯಲು ಸಾಧ್ಯವಿಲ್ಲ ಎನ್ನುವುದನ್ನು ತೊಡೆದುಹಾಕಲು ಇದೀಗ, ದೇಶ ಹಾಗೂ ಕರ್ನಾಟಕ ರಾಜ್ಯದಲ್ಲಿ ಆನ್‌ಲೈನ್ ಮೂಲಕ ಡ್ರೈವಿಂಗ್ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಅತ್ಯಂತ ಸುಲಭಗೊಳಿಸಲಾಗಿದೆ.
ಕರ್ನಾಟಕದಲ್ಲಿ ಡ್ರೈವಿಂಗ್ ಲೈಸೆನ್ಸ್ ಅರ್ಜಿಗಾಗಿ ಆನ್‌ಲೈನ್ ಪ್ರಕ್ರಿಯೆ ಸುಲಭಗೊಂಡಿದ್ದು, ಇನ್ಮುಂದೆ ಡ್ರೈವಿಂಗ್ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳಿಸಬಹುದು.
1. https://parivahan.gov.in ವೆಬ್ಸೈಟ್ ಗೆ ಭೇಟಿ ನೀಡಿ, “Online Services” ಆಯ್ಕೆ ಮಾಡಿ. ಅದರಲ್ಲಿ “Driving License Related Services” ಅನ್ನು ಆಯ್ಕೆ ಮಾಡಿ,
2. ನಂತರ ಮುಂದಿನ ಪುಟದಲ್ಲಿ “Karnataka” ರಾಜ್ಯವನ್ನು ಆಯ್ಕೆ ಮಾಡಿ.
3. ನಂತರ “Apply Online” ಅನ್ನು ಆಯ್ಕೆ ಮಾಡಿ, ಅದರಲ್ಲಿ ''online Learner's Licence'' ಆಯ್ಕೆ ಮಾಡಿ.
4.LL ಅರ್ಜಿಯ ವಿವರಗಳನ್ನು ಭರ್ತಿ ಮಾಡಿ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ
6. ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ (ಆಧಾರ್ ಮೂಲಕ eKYC ಸಂದರ್ಭದಲ್ಲಿ, ಸಹಿಯನ್ನು ಮಾತ್ರ ಅಪ್‌ಲೋಡ್ ಮಾಡಬೇಕಾಗುತ್ತದೆ)
7. 50 ರೂ. ಶುಲ್ಕ ಪಾವತಿ. ಪಾವತಿ ಸ್ಥಿತಿಯನ್ನು ಪರಿಶೀಲಿಸಿ ರಶೀದಿ ಅನ್ನು ಮುದ್ರಿಸಿಕೊಳ್ಳಿ.
8. ಈಗ ನೀವು ನಿಮ್ಮ LL ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಆನ್‌ಲೈನ್ ಮೂಲಕ ಕಲಿಯುವವರ ಪರವಾನಗಿ ಪರೀಕ್ಷೆಗೆ ಮುಂದುವರಿಯುವ ಮೊದಲು ದಯವಿಟ್ಟು ರಸ್ತೆ ಸುರಕ್ಷತೆ ಟ್ಯುಟೋರಿಯಲ್ ನೋಡಿ ಎಂದು ವೆಬ್‌ಸೈಟ್ ಸೂಚಿಸಿದೆ. ನಿಮ್ಮ ಮನೆಯಲ್ಲಿಯೇ ಶೇ. 90 ರಷ್ಟು ಪ್ರಕ್ರಿಯೆಯನ್ನು ನಡೆಸಬಹುದು. ಇದಕ್ಕಾಗಿ ಸಾರಥಿ-4 ಸಾಫ್ಟ್ವೇರ್ ಈಗ ಸೇವೆ ನೀಡುತ್ತಿದ್ದು, Driving License ಪಡೆಯುವ ಮೊದಲು ಲರ್ನರ್ ಲೈಸೆನ್ಸ್ ಪಡೆಯಲು 50 ರೂ.ಗಳ ಶುಲ್ಕವನ್ನು ವಿಧಿಸಲಾಗುತ್ತದೆ. ಹಾಗೂ ಕೇವಲ 200 ರೂ.ಗಳಲ್ಲಿ ಆನಲೈನ್ ಮೂಲಕ ನೂತನ ಚಾಲನಾ ಅನುಜ್ಞಾ ಪತ್ರಕ್ಕೆ (Driving License) ಪಡೆಯಬಹುದಾಗಿದೆ.