ಮನೆಗೆ ಹೊಸ ಮಗುವಿನ ‘Baal Aadhaar’ ಬೇಕಾ? ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಫುಲ್ ಡೀಟೇಲ್ಸ್ ಇಲ್ಲಿದೆ!

ಮನೆಗೆ ಹೊಸ ಮಗುವಿನ ‘Baal Aadhaar’ ಬೇಕಾ? ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಫುಲ್ ಡೀಟೇಲ್ಸ್ ಇಲ್ಲಿದೆ!
HIGHLIGHTS

ಮಗುವಿನ ಸಂತಸದಲ್ಲಿ ಆಧಾರ್ ಕಾರ್ಡ್ (Aadhaar Card) ಬಗ್ಗೆ ಗಮನಹರಿಸಲು ಸಮಯವೇ ಇರೋದಿಲ್ಲ.

ನಿಮ್ಮ ಮಗುವಿಗೊಂದು ಹೊಸ ಬಾಲ್ ಆಧಾರ್ ಕಾರ್ಡ್ (Baal Aadhaar Card) ಪಡೆಯುವುದು ಮುಖ್ಯವಾಗಿದೆ.

ಮನೆಯಲ್ಲೇ ಕುಳಿತು ಆನ್‌ಲೈನ್‌ ಮೂಲಕ ಹೊಸ ಬಾಲ್ ಆಧಾರ್ ಕಾರ್ಡ್ (Baal Aadhaar Card) ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?

Baal Aadhaar Card: ನಿಮ್ಮ ಮನೆಗೆ ಅಥವಾ ನಿಮಗೆ ತಿಳಿದವರ ಮನೆಗೆ ಹೊಸ ಮಗುವೊಂದು ಬಂದ್ರೆ ಅದರ ಸಂತೋಷದಲ್ಲಿ ಕೆಲವರಿಗೆ ಮಗುವಿನ ಆಧಾರ್ ಕಾರ್ಡ್ (Aadhaar Card) ಬಗ್ಗೆ ಗಮನಹರಿಸಲು ಸಮಯವೇ ಇರೋದಿಲ್ಲ. ಆದರೆ ಇದು ತುಂಬ ಮುಖ್ಯಾವಾದ ಅಂಶವಾಗಿದ್ದು ಪೋಷಕರು ಇದರ ಬಗ್ಗೆ ಕೊಂಚ ಸಮಯ ಕಳೆದಂತೆ ಗಮನಹರಿಸಲೇಬೇಕು. ಅಂದ್ರೆ ಆದಷ್ಟು ಬೇಗ ನಿಮ್ಮ ಮಗುವಿಗೊಂದು ಹೊಸ ಬಾಲ್ ಆಧಾರ್ ಕಾರ್ಡ್ (Baal Aadhaar Card) ಅನ್ನು ಪಡೆಯುವುದು ಬಹು ಮುಖ್ಯವಾದ ಕಾರ್ಯವಾಗಿದೆ. ಆದ್ದರಿಂದ ನೀವು ಮನೆಯಲ್ಲೇ ಕುಳಿತು ಆನ್‌ಲೈನ್‌ ಮೂಲಕ ಹೊಸ ಬಾಲ್ ಆಧಾರ್ ಕಾರ್ಡ್ (Baal Aadhaar Card) ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಫುಲ್ ಡೀಟೇಲ್ಸ್ ಈ ಕೆಳಗೆ ಪಟ್ಟಿ ಮಾಡಲಾಗಿದೆ. ಈ ಮಾಹಿತಿ ಇಷ್ಟವಾದರೆ ತಿಳಿಯದವರರೊಂದಿಗೆ ಹಂಚಿಕೊಳ್ಳಿ.

Also Read: 32MP ಸೆಲ್ಫಿ ಕ್ಯಾಮೆರಾದ HMD Skyline Nokia Lumia 920 ಡಿಸೈನ್ ಮತ್ತೇ ಬಿಡುಗಡೆಯಾಗುವ ನಿರೀಕ್ಷೆ!

ಬಾಲ್ ಆಧಾರ್ ಕಾರ್ಡ್‌ಗಾಗಿ (Baal Aadhaar Card) ಬೇಕಾಗುವ ದಾಖಲೆಗಳೇನು?

ಈ ಬಾಲ್ ಆಧಾರ್ ಕಾರ್ಡ್ ಅನ್ನು ನೀವು ಆನ್‌ಲೈನ್‌ ಮತ್ತು ಆಫ್ಲೈನ್‌ ಎರಡು ವಿಧಾನದಲ್ಲಿ ಪಡೆಯಬಹುದು. ನಿಮ್ಮ ಮಗುವಿನ ಹೊಸ ಬಾಲ್ ಆಧಾರ್ ಕಾರ್ಡ್ ಪಡೆಯಲು ಒಂದಿಷ್ಟು ಕಡ್ಡಾಯವಾದ ದಾಖಲೆಗನ್ನು ನೀಡಬೇಕಾಗುತ್ತದೆ. ಸಾಮಾನ್ಯವಾಗಿ ಇದರಲ್ಲಿ ಮೊದಲಿಗೆ ಆ ಮಗುವಿನ ಪಾಸ್ಪೋರ್ಟ್ ಸೈಜ್ ಫೋಟೋದೊಂದಿಗೆ ಜನನ ಪ್ರಮಾಣಪತ್ರ (Birth Certificate), ಆಸ್ಪತ್ರೆಯ ವಿಸರ್ಜನ ರಶೀದಿ (Hospital Discharge Slip), ಮಗುವಿನ ಸ್ಕೂಲ್ ಐಡಿ (School ID of Child) ಇವುಗಳಲ್ಲಿ ಒಂದನ್ನು ನೀಡಲೇಬೇಕು.

ಅಲ್ಲದೆ ಇದರ ಜೊತೆಗೆ ತಂದೆ ಅಥವಾ ತಾಯಿಯ ಆಧಾರ ಕಾರ್ಡ್ (Aadhaar Card) ಕಡ್ಡಾಯವಾಗಿ ನೀಡಲೇಬೇಕು. ಇದರೊಂದಿಗೆ ಪೋಷಕರು ತಮ್ಮ ದಾಖಲೆಗಾಗಿ Voter ID Card, Aadhaar Card, Driving Licence, Passport, ST, SC or OBC Certificate ಸೇರಿ ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯವಾದ ಫೋಟೋ ಹೊಂದಿರುವ ದಾಖಲೆಗಳಲ್ಲಿ ಒಂದನ್ನು ಸಹ ನೀಡಬಹುದು. ಈ ಬಾಲ್ ಆಧಾರ್ ಅನ್ನು ನೀವು 1 ತಿಂಗಳ ಮಗುವಿನಿಂದ 5 ವರ್ಷದೊಳಗಿನ ಮಗುವಿಗಾಗಿ ಪಡೆಯಬಹುದು ಎನ್ನುವುದನ್ನು ಗಮನದಲ್ಲಿಡಿ. ಅಲ್ಲದೆ ಈ ಸೌಲಭ್ಯ ನೋಂದಣಿಯು ಉಚಿತವಾಗಿರುತ್ತದೆ ಯಾವುದೇ ಹಣ ನೀಡುವ ಅಗತ್ಯವಿಲ್ಲ.

ಆನ್‌ಲೈನ್‌ನಲ್ಲಿ ಬಾಲ್ ಆಧಾರ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವುದು ಹೇಗೆ?

ಹಂತ 1: ಮೊದಲಿಗೆ ಗೂಗಲ್ ಕ್ರೋಮ್ ಬ್ರೌಸರ್ ತೆರೆದು UIDAI ಅನ್ನು ಟೈಪ್ ಮಾಡಿ ಅಧಿಕೃತ ವೆಬ್‌ಸೈಟ್ಗೆ ಭೇಟಿ ನೀಡಬೇಕು.

ಹಂತ 2: ಇದರ ನಂತರ ಭಾಷೆಯನ್ನು ಆಯ್ಕೆ ಮಾಡಿ ‘My Aadhaar’ ಎಂಬ ಮೊದಲ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ‘Book an Appointment’ ಮೇಲೆ ಕ್ಲಿಕ್ ಮಾಡಿಕೊಳ್ಳಿ.

ಹಂತ 3: ಈಗ ಇದರಲ್ಲಿ ನಿಮಗೆ Book an Appointment at UIDAI run Aadhaar Seva Kendra ಕೆಳಗೆ ನಿಮ್ಮ ಹತ್ತಿರದ ಆಧಾರ ಸೇವಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡು Proceed to Book Appointment ಮೇಲೆ ಕ್ಲಿಕ್ ಮಾಡಿ.

ಹಂತ 4: ಇದರ ನಂತರ ನಿಮಗೆ 5 ಆಯ್ಕೆಗಳು ನಿಮ್ಮ ಸ್ಕ್ರೀನ್ ಮೇಲೆ ಕಾಣುತ್ತದೆ ಅವುಗಳಲ್ಲಿ ‘New Aadhaar’ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಂಬರ್ ಮತ್ತು ಅದರ ಕೆಳಗಿರುವ ಕಪಟಚ್ ಕೋಡ್ ತುಂಬಿ Generate OTP ಮೇಲೆ ಕ್ಲಿಕ್ ಮಾಡಿ.

How to apply for Baal Aadhaar card online for your newborn baby
How to apply for Baal Aadhaar card online for your newborn baby

ಹಂತ 5: ನಂತರದ ಮಾಹಿತಿಗಳನ್ನು ನೀಡಿ ಪೂರ್ತಿಯಾದ ಅಪ್ಲಿಕೇಷನ್ ಫಾರಂ ಅನ್ನು ಪ್ರಿಂಟ್ ಮಾಡಿ ನಿಮ್ಮ ಅಸಲಿ ಆಧಾರ್ನೊಂದಿಗೆ ನಿಮ್ಮ ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಹೋಗಿ.

ಹಂತ 6: ನೀವು ಭರ್ತಿ ಮಾಡುವ ಅರ್ಜಿ ನಮೂನೆಯೊಂದಿಗೆ ಎಲ್ಲಾ ಸಂಬಂಧಿತ ದಾಖಲೆಗಳನ್ನು ಸಲ್ಲಿಸಿ. ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಪೋಷಕರಿಗೆ ಹಿಂತಿರುಗಿಸಲಾಗುತ್ತದೆ.

ಹಂತ 7: ಆಧಾರ್ ಕಾರ್ಡ್ ಅನ್ನು ಬಾಲ್ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಿರುವ ಪೋಷಕರು ತಮ್ಮ ಬಯೋಮೆಟ್ರಿಕ್ಸ್ ಮತ್ತು ಅವರ ಆಧಾರ್ ಕಾರ್ಡ್ ವಿವರಗಳನ್ನು ಸಲ್ಲಿಸಬೇಕು. ಮಗು ತನ್ನ ಬಯೋಮೆಟ್ರಿಕ್ಸ್ ಅನ್ನು ಒದಗಿಸಬೇಕಾಗಿಲ್ಲ.

ಹಂತ 8: ಇದರ ನಂತರ ಬಾಲ್ ಆಧಾರ್ ಕಾರ್ಡ್ ನೋಂದಣಿ ಮಾಡಿದ ನಂತರ 60-90 ದಿನಗಳಲ್ಲಿ UIDAI ನಿಮ್ಮ ಅಂಚೆ ವಿಳಾಸಕ್ಕೆ ಬಾಲ್ ಆಧಾರ್ ಕಾರ್ಡ್ ಅನ್ನು ರವಾನಿಸುತ್ತದೆ. ಇದರ ನಂತರ ನೀವು ಅದನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಲು ಸಹ ಸಾಧ್ಯವಾಗುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo