ನಿಮ್ಮ ಮಗುವಿಗೆ ಆಧಾರ್ ಕಾರ್ಡ್ ಮಾಡಿಸಬೇಕಾ? ಈ ಸರಳ ಹಂತಗಳನ್ನು ಅನುಸರಿಸಿ ಸಾಕು!

ನಿಮ್ಮ ಮಗುವಿಗೆ ಆಧಾರ್ ಕಾರ್ಡ್ ಮಾಡಿಸಬೇಕಾ? ಈ ಸರಳ ಹಂತಗಳನ್ನು ಅನುಸರಿಸಿ ಸಾಕು!
HIGHLIGHTS

ಭಾರತ ಸರ್ಕಾರವು ಆಧಾರ್ ಕಾರ್ಡ್‌ ಅನ್ನು ಗುರುತಿನ ಚೀಟಿಯಾಗಿ ತನ್ನ ನಿವಾಸಿಗಳಿಗೆ ನೀಡುತ್ತದೆ.

ಆಧಾರ್ ಕಾರ್ಡ್ ಬ್ಯಾಂಕ್ ಖಾತೆ ತೆರೆಯಲು ಅಥವಾ ಸಬ್ಸಿಡಿಗಳ ಲಾಭವನ್ನು ಪಡೆಯಲು ತುಂಬಾ ಸಹಾಯಕವಾಗಿದೆ.

ನಿಮ್ಮ ಮಗುವಿಗೆ ಇನ್ನು ನೀವು ಆಧಾರ್ ಕಾರ್ಡ್ ಅನ್ನು ಮಾಡದಿದ್ದರೆ ನೀವು ಈ ಹಂತಗಳನ್ನು ಅನುಸರಿಸಿ.

Baal Aadhaar: ನಿಮಗೊತ್ತಾ ಭಾರತ ಸರ್ಕಾರವು 12 ಅಂಕಿಗಳನ್ನು ಹೊಂದಿರುವ ಆಧಾರ್ ಕಾರ್ಡ್‌ ಅನ್ನು ಗುರುತಿನ ಚೀಟಿಯಾಗಿ ತನ್ನ ನಿವಾಸಿಗಳಿಗೆ ನೀಡುತ್ತದೆ. ಇದು ಈಗ ಪ್ರಾಯೋಗಿಕವಾಗಿ ಎಲ್ಲೆಡೆ ಬಳಸಲಾಗುವ ಮಹತ್ವದ ದಾಖಲೆಯಾಗಿದೆ. ಬ್ಯಾಂಕ್ ಖಾತೆ ತೆರೆಯಲು ಅಥವಾ ಸಬ್ಸಿಡಿಗಳ ಲಾಭವನ್ನು ಪಡೆಯಲು ಇದು ತುಂಬಾ ಸಹಾಯಕವಾಗಿದೆ. ಆದ್ದರಿಂದ ನಿಮ್ಮ ಮಗುವಿಗೆ ಇನ್ನು ನೀವು ಆಧಾರ್ ಕಾರ್ಡ್ (Baal Aadhaar) ಅನ್ನು ಮಾಡಿಸದಿದ್ದರೆ ನೀವು ಈ ಸರಳ ಹಂತಗಳನ್ನು ಅನುಸರಿಸಿ ಪಡೆಯಬಹುದು. ಕೆಲವೇ ಸಮಯದಲ್ಲಿ ಬೇರೆಯವರಿಗೆ ಮಹತ್ವದ ಮಾಹಿತಿಯನ್ನು ನಿಮ್ಮ ಅಥವಾ ನಿಮಗೆ ತಿಳಿದಿರುವರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ. 

ಹಂತ 1: ಯಾಬ ಯಾವ ದಾಖಲೆಗಳು ಅಗತ್ಯವಿರುತ್ತವೆ:

• ಮಕ್ಕಳಿಗಾಗಿ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ನೀವು ಮಗುವಿನ ಜನನ ಪ್ರಮಾಣಪತ್ರ ಅಥವಾ ಶಾಲಾ ದಾಖಲೆಯನ್ನು ಹೊಂದಿರಬೇಕು.

• ಪೋಷಕರು ಆಧಾರ್ ಕಾರ್ಡ್‌ಗಳು ಅಥವಾ ಪ್ಯಾನ್ ಕಾರ್ಡ್‌ಗಳು, ಪಾಸ್‌ಪೋರ್ಟ್‌ಗಳು ಅಥವಾ ಡ್ರೈವಿಂಗ್ ಲೈಸೆನ್ಸ್‌ಗಳಂತಹ ಇತರ ಪ್ರಸ್ತುತ ಸರ್ಕಾರಿ ಗುರುತಿನ ದಾಖಲೆಗಳನ್ನು ಹೊಂದಿರಬೇಕು.

• ನೀರಿನ ಬಿಲ್‌, ವಿದ್ಯುತ್ ಬಿಲ್‌, ಅಥವಾ ಫೋನ್ ಬಿಲ್ ನಂತಹ ಪೋಷಕರ ವಿಳಾಸಗಳನ್ನು ಸಾಬೀತುಪಡಿಸುವ ದಾಖಲೆಗಳನ್ನು ಹೊಂದಿರಬೇಕು.

• ಮಗುವಿನ ಒಂದು ಪಾಸ್‌ಪೋರ್ಟ್ ಸೈಜ್ ಫೋಟೋವನ್ನು ಹೊಂದಿರಬೇಕು.

ಹಂತ 2: ನಿಮ್ಮ ಸ್ಥಳೀಯ ಆಧಾರ್ ನೋಂದಣಿ ಕೇಂದ್ರವನ್ನು ಪತ್ತೆ ಮಾಡಿ: ನೀವು ಎಲ್ಲಾ ಅಗತ್ಯ ದಾಖಲೆಗಳನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಹೋಗಬೇಕು. ಅದನ್ನು ಹುಡುಕಲು UIDAI ನ ಅಧಿಕೃತ ವೆಬ್‌ಸೈಟ್ https://uidai.gov.in ಗೆ ಭೇಟಿ ನೀಡಿ.

ಹಂತ 3: ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಿ: ಅಗತ್ಯವಿರುವ ಎಲ್ಲಾ ದಾಖಲೆಗಳೊಂದಿಗೆ ನೀವು ಆಧಾರ್ ನೋಂದಣಿ ಕೇಂದ್ರಕ್ಕೆ ಹೋಗಿ ನೋಂದಣಿ ಫಾರ್ಮ್ ಅನ್ನು ಪೂರ್ಣಗೊಳಿಸಬೇಕು. ಇದರಲ್ಲಿ ಮಗುವಿನ ಹೆಸರು, ಜನ್ಮದಿನಾಂಕ ಮತ್ತು ವಿಳಾಸದಂತಹ ವೈಯಕ್ತಿಕ ವಿವರಗಳು ಒಳಗೊಂಡಿರುತ್ತದೆ.

ಹಂತ 4: ಡೇಟಾ ಸ್ಟೋರೇಜ್ ಮಾಡಲಾಗುವುದು: ದಾಖಲಾತಿ ಫಾರ್ಮ್ ಅನ್ನು ಪೂರ್ಣಗೊಳಿಸಿದ ನಂತರ ಮಗುವಿನ ಫೋಟೋವನ್ನು ತೆಗೆದುಕೊಳ್ಳಲಾಗುತ್ತದೆ. ಐದು ವರ್ಷದೊಳಗಿನ ಮಕ್ಕಳನ್ನು ನೋಂದಾಯಿಸುವಾಗ ಬೆರಳಚ್ಚು ಅಥವಾ ರೆಟಿನಾವನ್ನು ಸ್ಕ್ಯಾನ್ ಮಾಡುವುದಿಲ್ಲ. ಮಗುವಿಗೆ 5 ವರ್ಷ ಆದ ನಂತರ ಅವರ ಬಯೋಮೆಟ್ರಿಕ್ಸ್ ಅನ್ನು ಅಪ್ಡೇಟ್ ಮಾಡಿಸಬೇಕು.

ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನ ಪರವಾಗಿ ಪೋಷಕರು ಅಥವಾ ಕಾನೂನು ಪಾಲಕರು ಪರಿಶೀಲನೆಯನ್ನು ಮಾಡಬಹುದು. UIDAI ಪ್ರಕಾರ ದಾಖಲಾತಿ ಫಾರ್ಮ್‌ಗೆ ಸಹಿ ಮಾಡುವ ಮೂಲಕ ಅಪ್ರಾಪ್ತರ ದಾಖಲಾತಿಗೆ ಒಪ್ಪಿಗೆಯನ್ನು ನೀಡಬೇಕು.

ಹಂತ 5: ಸ್ವೀಕೃತಿ (ಅಕ್ನಾಲೆಜ್‌ಮೆಂಟ್‌) ನೀಡಲಾಗುವುದು: ಬಯೋಮೆಟ್ರಿಕ್ ಡೇಟಾವನ್ನು ಸಂಗ್ರಹಿಸಿದ ನಂತರ ನಿಮಗೆ ಸ್ವೀಕೃತಿ ಪತ್ರವನ್ನು ನೀಡಲಾಗುತ್ತದೆ. ಈ ಸ್ಲಿಪ್‌ನಲ್ಲಿರುವ ದಾಖಲಾತಿ ಐಡಿಯ ಮೂಲಕ ಆಧಾರ್ ಕಾರ್ಡ್ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡಬಹುದು.

ಹಂತ 6: ಆಧಾರ್ ಕಾರ್ಡ್ ನೀಡಲಾಗುವುದು: ನೋಂದಣಿ ಪೂರ್ಣಗೊಂಡ ನಂತರ ಆಧಾರ್ ಕಾರ್ಡ್ ಅನ್ನು ರಚಿಸಲಾಗುತ್ತದೆ. ಸಾಮಾನ್ಯವಾಗಿ ನೋಂದಣಿಯಾದ 90 ದಿನಗಳಲ್ಲಿ ಆಧಾರ್ ಕಾರ್ಡ್ ಅನ್ನು ನೀಡಲಾಗುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo