ಇನ್ಮೇಲೆ ನೀವು ಉಚಿತವಾಗಿ ವಾಯ್ಸ್ – ವಿಡಿಯೋ ಕಾಲಿಂಗ್ ಹೀಗೆ ಮಾಡ್ಬವುದು!!!

ಇನ್ಮೇಲೆ ನೀವು ಉಚಿತವಾಗಿ ವಾಯ್ಸ್ – ವಿಡಿಯೋ ಕಾಲಿಂಗ್ ಹೀಗೆ ಮಾಡ್ಬವುದು!!!
HIGHLIGHTS

ಈ ಉಚಿತ ಸೇವೆಗಾಗಿ ಕಂಪನಿಯು ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುತ್ತಿಲ್ಲದಿರುವುದು ವಿಶೇಷ.

ಈ ಸುಲಭ ಹಂತಗಳನ್ನು ಅನುಸರಿಸಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಸೇವೆಯನ್ನು ಪಡೆಯಬವುದು

ಟೆಲಿಕಾಂ ಮತ್ತು ಬ್ರಾಡ್‌ಬ್ಯಾಂಡ್ ಕ್ಷೇತ್ರದ ನಂತರ ಕಂಪೆನಿಗಳ ಹೊಸ ಗುರಿ VoWiFi ಕರೆಯಲ್ಲಿ ತಮ್ಮ ಹಿಡಿತವನ್ನು ಬಲಪಡಿಸುವುದು. ಈ ದಿಕ್ಕಿನಲ್ಲಿ ಚಲಿಸುತ್ತಿರುವ ರಿಲಯನ್ಸ್ ಜಿಯೋ ದೇಶಾದ್ಯಂತ ತನ್ನ ಬಳಕೆದಾರರಿಗಾಗಿ ವಿಡಿಯೋ ಮತ್ತು ವಾಯ್ಸ್ ವೈ-ಫೈ ಕರೆ ಸೇವೆಯನ್ನು ಪ್ರಾರಂಭಿಸಿದೆ. ಈ ಸೇವೆಯ ಸಹಾಯದಿಂದ ಕಂಪನಿಯು ಬಳಕೆದಾರರಿಗೆ ಒಳಾಂಗಣ (Indoor) ಕರೆಯ ಉತ್ತಮ ಅನುಭವವನ್ನು ನೀಡುತ್ತದೆ. ಜಿಯೋನ ಯಾವುದೇ ಸಕ್ರಿಯ ಯೋಜನೆಯೊಂದಿಗೆ ಬಳಕೆದಾರರು ಈ ಸೇವೆಯನ್ನು ಬಳಸಬಹುದು. ಇದಕ್ಕಾಗಿ ಕಂಪನಿಯು ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುತ್ತಿಲ್ಲ. 

ಜಿಯೋ ನಿರ್ದೇಶಕರಾದ ಆಕಾಶ್ ಅಂಬಾನಿ ಸರಾಸರಿ ಜಿಯೋ ಬಳಕೆದಾರರು ಈ ಸಮಯದಲ್ಲಿ ಪ್ರತಿ ತಿಂಗಳು 900 ನಿಮಿಷಗಳ ಧ್ವನಿ ಕರೆ ಮಾಡುತ್ತಾರೆ. ಅಲ್ಲದೆ ಬೆಳೆಯುತ್ತಿರುವ ಬಳಕೆದಾರರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಜಿಯೋ ವೈಫೈ ಕರೆ ಪ್ರಾರಂಭಿಸುವುದರಿಂದ ಅವರು ಅತ್ಯುತ್ತಮ ಧ್ವನಿ ಕರೆ ಅನುಭವವನ್ನು ಪಡೆಯುತ್ತಾರೆ ಎಂದು ಖಚಿತಪಡಿಸಿದ್ದರೆ. ಇಲ್ಲಿ ಉಲ್ಲೇಖಿಸಲಾದ ಸುಲಭ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಸೇವೆಯನ್ನು ನೀವು ಸಕ್ರಿಯಗೊಳಿಸಬಹುದು.

ಆಂಡ್ರಾಯ್ಡ್ ಬಳಕೆದಾರರು 

– ಫೋನ್‌ನ ಸೆಟ್ಟಿಂಗ್‌ ಹೋಗಿ.
– ಇಲ್ಲಿ ನೀಡಿರುವ Network & Internet ಮೇಲೆ ಟ್ಯಾಪ್ ಮಾಡಿ.
– ಇದರ ನಂತರ ನೀವು Wi-Fi ಕೆಳಗೆ ವೈಫೈ ಕಾಲಿಂಗ್ ಆಯ್ಕೆ ಪಡೆಯುತ್ತೀರಿ.
– ಆಯ್ಕೆಯ ಬಲಭಾಗದಲ್ಲಿ ನೀಡಲಾದ ಟಾಗಲ್ ಅನ್ನು ಆನ್ ಮಾಡಿ ಅಷ್ಟೇ.

ಆಪಲ್ ಫೋನ್ ಬಳಕೆದಾರರು 

– ಫೋನ್‌ನ ಸೆಟ್ಟಿಂಗ್‌ ಆಯ್ಕೆಗೆ ಹೋಗಿ.
– Wi-Fi ಕೆಳಗೆ ವೈಫೈ ಕಾಲಿಂಗ್ ಆಯ್ಕೆ ಮೇಲೆ ಟ್ಯಾಪ್ ಮಾಡಿ.
– ಈಗ ಈ ಐಫೋನ್‌ನಲ್ಲಿ ವೈ-ಫೈ ಕಾಲಿಂಗ್ ನೊಂದಿಗೆ ಟಾಗಲ್ ಆನ್ ಮಾಡಿ ಅಷ್ಟೇ.

ಜಿಯೋ ಆಂಡ್ರಾಯ್ಡ್ ಅಥವಾ iOS ಫೋನ್ಗಳ ಈ ಹೊಸ ಸೇವೆಯನ್ನು ಬಳಸಲು ಇತ್ತೀಚಿನ ಸಾಫ್ಟ್‌ವೇರ್‌ನೊಂದಿಗೆ ಅಪ್ಡೇಟ್ ಆಗಿರಬೇಕಾಗುತ್ತದೆ.  ಇದರೊಂದಿಗೆ ಉತ್ತಮ ಕರೆ ಅನುಭವಕ್ಕಾಗಿ ಹೆಚ್ಚಿನ ವೇಗದ ಇಂಟರ್ನೆಟ್ ಮತ್ತು ಸ್ಟೇಬಲ್ ವೈ-ಫೈ ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವುದು ಸಹ ಅಗತ್ಯವಾಗಿದೆ. ಜಿಯೋನ ಈ ಸೇವೆಯು ಜಿಯೋ ಬಳಕೆದಾರರಿಗೆ ಸುಮಾರು 150 ಫೋನ್ಗಳಲ್ಲಿ ಉಚಿತ ಧ್ವನಿ ಮತ್ತು ವಿಡಿಯೋ ಕರೆ ನೀಡುತ್ತದೆ. ಈ ಪಟ್ಟಿಯನ್ನು ಪರೀಕ್ಷಿಸಲು https://www.jio.com/en-in/jio-wifi-calling ಮೇಲೆ ಕ್ಲಿಕ್ ಮಾಡಿ 'Compatible Handsets' ವಿಭಾಗದಲ್ಲಿ ಫೋನಿನ ಬ್ರಾಂಡ್ ಹೆಸರು ಆಯ್ಕೆ ಮಾಡಿ ಯಾವ ಯಾವ ಫೋನ್‌ಗಳಿಗೆ ಜಿಯೋವಿನ ಈ ವೈಫೈ ಬೆಂಬಲವಿದೆ ಎಂಬ ಮಾಹಿತಿಯನ್ನು ನೀವು ಪಡೆಯಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo