ನಿಮ್ಮ Aadhaar ಕಾರ್ಡ್‌ನಲ್ಲಿ ಯಾವ ಯಾವ ಮಾಹಿತಿಗಳನ್ನು ಎಷ್ಟು ಬಾರಿ ಬದಲಾಯಿಸಬಹುದು ನಿಮಗೊತ್ತಾ?

Updated on 14-Apr-2023
HIGHLIGHTS

ಆಧಾರ್ ಕಾರ್ಡ್ (Aadhaar Card) ಗುರುತಿನ ಮತ್ತು ನಿವಾಸದ ದೃಢೀಕರಣವಾಗಿ ಕಾರ್ಯನಿರ್ವಹಿಸುತ್ತದೆ.

ಆಧಾರ್ ಕಾರ್ಡ್‌ನಲ್ಲಿನ (Aadhaar Card) ನಿಮ್ಮ ವಿಳಾಸವನ್ನು ಎಷ್ಟು ಬಾರಿ ಬದಲಾಯಿಸಬಹುದು?

ನಿಮ್ಮ ಆಧಾರ್ ಕಾರ್ಡ್ (Aadhaar Card) ಅಲ್ಲಿ ಕೇವಲ ಎರಡು ಭಾರಿ ಮಾತ್ರ ನಿಮ್ಮ ಹೆಸರನ್ನು ಬದಲಾಯಿಸಬಹುದು.

ನೀವೊಬ್ಬ ಭಾರತದ ನಿವಾಸಿಯಾಗಿದ್ದಾರೆ ಆಧಾರ್ ಕಾರ್ಡ್ (Aadhaar Card) ನವೀಕರಣದ ಬಗ್ಗೆ ನಿಮಗೆ ತಿಳಿದಿರಬೇಕು. ಆದರೆ ಅದರಲ್ಲಿನ ಬಯೋಮೆಟ್ರಿಕ್  ಮತ್ತು ಬೇರೆ ಮಾಹಿತಿಗಳನ್ನು ನಿಮ್ಮ ಮೂಲ ಮಾಹಿತಿಯನ್ನು ಸರ್ಕಾರಕ್ಕೆ 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯಾದ ಆಧಾರ್ ಕಾರ್ಡ್‌ ಮೂಲಕ ನೀಡುತ್ತದೆ. ಯಾವುದೇ ಬ್ಯಾಂಕ್ ಖಾತೆಯನ್ನು ತೆರೆಯುವುದು, ಪಾಸ್‌ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್‌ಗಾಗಿ ಅರ್ಜಿ ಸಲ್ಲಿಸುವುದು, ಮೊಬೈಲ್ ಕನೆಕ್ಷನ್ ಪಡೆಯುವುದು, ಸರ್ಕಾರದ ಸಬ್ಸಿಡಿಗಳು ಮತ್ತು ಸಾಮಾಜಿಕ ಪ್ರಯೋಜನಗಳನ್ನು ಪಡೆಯುವುದು ಹೀಗೆ ಹತ್ತಾರು ಬಗೆಯ ವಿಷಯಗಳಿಗಾಗಿ ಆಧಾರ್ ಕಾರ್ಡ್ (Aadhaar Card) ಗುರುತಿನ ಮತ್ತು ನಿವಾಸದ ದೃಢೀಕರಣವಾಗಿ ಕಾರ್ಯನಿರ್ವಹಿಸುತ್ತದೆ.

ಆಧಾರ್‌ನಲ್ಲಿ ಜನ್ಮ ದಿನಾಂಕವನ್ನು (DoB) ಅಪ್ಡೇಟ್ ಮಾಡಬಹುದೇ?

ಆಧಾರ್‌ನಲ್ಲಿರುವ ನಿಮ್ಮ ಜನ್ಮ ದಿನಾಂಕವನ್ನು (DOB) ಒಮ್ಮೆ ಮಾತ್ರ ಬದಲಾಯಿಸಬಹುದು. ಮಿತಿಯನ್ನು ಮೀರಿ ಇದನ್ನು ಅಸಾಧಾರಣ ಪ್ರಕರಣವೆಂದು ಪರಿಗಣಿಸಲಾಗುತ್ತದೆ. ಈ ಮಿತಿಯನ್ನು ಮೀರಿದ ಪ್ರಕರಣಗಳನ್ನು ವಿನಾಯಿತಿಯಾಗಿ ಪರಿಗಣಿಸಲಾಗುತ್ತದೆ. ಈ ಸಂದರ್ಭಗಳಲ್ಲಿ ನಿವಾಸಿಗಳು ಆಧಾರ್ ಕೇಂದ್ರದಲ್ಲಿ ಅಪ್ಡೇಟ್ ವಿನಂತಿಯನ್ನು ಸಲ್ಲಿಸಬಹುದು ಮತ್ತು ನಂತರ ವಿನಾಯಿತಿಯ ಅಡಿಯಲ್ಲಿ ಅಪ್ಡೇಟ್ನ ಅನುಮೋದನೆಗಾಗಿ ಸಂಬಂಧಿತ UIDAI ಪ್ರಾದೇಶಿಕ ಕಚೇರಿಗೆ ಭೇಟಿ ನೀಡಬಹುದು. ಅಧಿಕೃತ ಅಧಿಕಾರಿಗಳ ಸರಿಯಾದ ಪರಿಗಣನೆಯ ನಂತರ ಇದರ ಪ್ರಸ್ತಾವನೆಯನ್ನು ಅಧಿಕೃತ ಅಥವಾ ತಿರಸ್ಕರಿಸಲಾಗುತ್ತದೆ. ನಿಮ್ಮ ಹೆಸರನ್ನು ಒಳಗೊಂಡಿರುವ ಕಾನೂನುಬದ್ಧ ಜನ್ಮ ದಿನಾಂಕ (DoB) ಪುರಾವೆಯೊಂದಿಗೆ ನಿಮ್ಮ ಆಧಾರ್‌ನಲ್ಲಿ ನೀವು ನಿಮ್ಮ ಜನ್ಮ ದಿನಾಂಕವನ್ನು DoB ಅನ್ನು ಬದಲಾಯಿಸಬಹುದು.

ಆಧಾರ್‌ನಲ್ಲಿ ವಿಳಾಸವನ್ನು ಅಪ್ಡೇಟ್ ಮಾಡುವುದು ಹೇಗೆ?

ಆಧಾರ್‌ನಲ್ಲಿ ನಿಮ್ಮ ವಿಳಾಸವನ್ನು ಅಪ್ಡೇಟ್ ಮಾಡಲು ನೀವು UIDAI ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ಆಧಾರ್ ಸೇವಾ ಕೇಂದ್ರ (ASK) ಅಥವಾ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬಹುದು. ಆಧಾರ್‌ನಲ್ಲಿ ನಿಮ್ಮ ವಿಳಾಸವನ್ನು ಅಪ್ಡೇಟ್ ಮಾಡಲು ನೀವು ವಿಳಾಸದ ದಾಖಲೆಯ ಕಾನೂನುಬದ್ಧ ಪುರಾವೆಯನ್ನು ಸಲ್ಲಿಸಬೇಕಾಗುತ್ತದೆ. ನಂತರ ನಿಮ್ಮ ಆಧಾರ್ ಮಾಹಿತಿ ಅಪ್ಡೇಟ್ ಆಗಲು ಕೆಲವು ದಿನಗಳನ್ನು ತೆಗೆದುಕೊಳ್ಳುತ್ತದೆ. ಆಧಾರ್ ಕಾರ್ಡ್‌ ಅನ್ನು ವಿವಿಧ ಉದ್ದೇಶಗಳಿಗಾಗಿ ಗುರುತು ಮತ್ತು ವಿಳಾಸದ ಪುರಾವೆಯಾಗಿ ಬಳಸಲಾಗುವುದರಿಂದ ನಿಮ್ಮ ಆಧಾರ್ ವಿವರಗಳನ್ನು ವಿಶೇಷವಾಗಿ ವಿಳಾಸವನ್ನು ಅಪ್ಡೇಟ್ ಮಾಡುವುದು ಬಹಳ ಮುಖ್ಯವಾಗಿದೆ.

ಆಧಾರ್‌ನಲ್ಲಿ ಹೆಸರನ್ನು ಅಪ್ಡೇಟ್ ಮಾಡುವುದು ಹೇಗೆ?

ಭಾರತದಲ್ಲಿ ನಿಮ್ಮ ಆಧಾರ್ ಕಾರ್ಡ್ ಅಲ್ಲಿ ಕೇವಲ ಎರಡು ಬಾರಿ ಮಾತ್ರ ನಿಮ್ಮ ಹೆಸರನ್ನು ಬದಲಾಯಿಸಲು ಸರ್ಕಾರ ಅವಕಾಶ ನೀಡುತ್ತದೆ. ನಿಮಗೆ ಈಗಾಗಲೇ ತಿಳಿದಿರುವಂತೆ ಭಾರತೀಯ ಸಂಸ್ಕೃತಿಯಲ್ಲಿ ಮದುವೆಯ ನಂತರ ಮಹಿಳೆಯರ ಹೆಸರನ್ನು ಬದಲಾಯಿಸುವುದು ಸಾಮಾನ್ಯ. ಇದು ಸಾಮಾನ್ಯವಾಗಿ ಸರ್ಕಾರ ಮದುವೆಯನ್ನು ಹೆಚ್ಚಾಗಿ ಪರಿಗಣಿಸಿ ಹೆಣ್ಣು ಮಕ್ಕಳ ಹೆಸರನ್ನು ಬದಲಾಯಿಸಲು ಅವಕಾಶ ಕಲ್ಪಿಸಿದೆ. ಅಲ್ಲದೆ ಇದಕ್ಕಾಗಿ ಅವಶ್ಯ ದಾಖಲೆಗಳನ್ನು ಸಹ ನೀಡಬೇಕಾಗುತ್ತದೆ. ಮಹಿಳೆಯರು ತಮ್ಮ ತಮ್ಮ ಸಂಪ್ರದಾಯದ ಅಂಗವಾಗಿ ಮದುವೆಯಾದ ನಂತರ ತಮ್ಮ ಮೊದಲ ಹೆಸರು ಅಥವಾ ಉಪನಾಮವನ್ನು ಬದಲಾಯಿಸುವುದು ರೂಢಿಯಲ್ಲಿದೆ. ಮದುವೆಯ ನಂತರ ಹೆಸರನ್ನು ಬದಲಾಯಿಸುವುದು ಕಡ್ಡಾಯ ಕಾನೂನು ಅಗತ್ಯವಲ್ಲವಾದರೂ ಸಹ ಈ ಸಂಪ್ರದಾಯವನ್ನು ಕಾಣುವುದು ಸಾಮಾನ್ಯ ಸಂಗತಿಯಾಗಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :