Aadhaar Update: ಆಧಾರ್‌ನಲ್ಲಿ ಎಷ್ಟು ಬಾರಿ ಹೆಸರು, ಹುಟ್ಟಿದ ದಿನಾಂಕ ಮತ್ತು ನಂಬರ್ ಚೇಂಜ್ ಮಾಡ್ಬಹುದು?

Aadhaar Update: ಆಧಾರ್‌ನಲ್ಲಿ ಎಷ್ಟು ಬಾರಿ ಹೆಸರು, ಹುಟ್ಟಿದ ದಿನಾಂಕ ಮತ್ತು ನಂಬರ್ ಚೇಂಜ್ ಮಾಡ್ಬಹುದು?
HIGHLIGHTS

Aadhaar ಭಾರತ ಸರ್ಕಾರದಿಂದ ನೀಡಿದ 12 ಅಂಕಿಯ ವಿಶಿಷ್ಟ ಆಧಾರ್ ಸಂಖ್ಯೆ ಗುರುತಿನ ಪುರಾವೆಯಾಗಿ

ಭಾರತದ ವಿಶಿಷ್ಟ ಗುರುತು (UIDAI) ಆಧಾರ್ ಕಾರ್ಡ್‌ನಲ್ಲಿ ಎಷ್ಟು ಬಾರಿ ಮಾಹಿತಿ ಚೇಂಜ್ ಮಾಡ್ಬಹುದು?

ಆಧಾರ್ ಬಳಕೆದಾರರು ತಮ್ಮ ಹೆಸರನ್ನು ಕೇವಲ ಎರಡು ಬಾರಿ ಮಾತ್ರ ಬದಲಾವಣೆ ಮಾಡಿಸಿಕೊಳ್ಳಲು ಅನುಮತಿಸಲಾಗಿದೆ.

Aadhaar Update: ಭಾರತ ಸರ್ಕಾರದಿಂದ ನೀಡಿದ 12 ಅಂಕಿಯ ವಿಶಿಷ್ಟ ಆಧಾರ್ ಸಂಖ್ಯೆ ಗುರುತಿನ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಮತ್ತು ಬ್ಯಾಂಕ್ ಖಾತೆಯನ್ನು ತೆರೆಯುವುದು, ಪಾಸ್‌ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್‌ಗಾಗಿ ಅರ್ಜಿ ಸಲ್ಲಿಸುವಂತಹ ವಿವಿಧ ಉದ್ದೇಶಗಳಲ್ಲಿ ಬಳಕೆದಾರರಿಗೆ ಸಹಾಯ ಮಾಡುತ್ತದೆ. ಹೆಸರು, ಹುಟ್ಟಿದ ದಿನಾಂಕ ಮತ್ತು ಮೊಬೈಲ್ ಸಂಖ್ಯೆಯಂತಹ ಮಾಹಿತಿಗಳನ್ನು ಭಾರತದ ವಿಶಿಷ್ಟ ಗುರುತು (UIDAI) ಆಧಾರ್ ಕಾರ್ಡ್‌ನಲ್ಲಿ ಎಷ್ಟು ಬಾರಿ ಮಾಹಿತಿ ಚೇಂಜ್ ಮಾಡ್ಬಹುದು? ಎನ್ನುವುದರ ಬಗ್ಗೆ ನಿಮಗೆ ತಿಳಿದಿಲ್ಲದಿದ್ದರೆ ಮುಂದೆ ತಿಳಿಯಿರಿ.

Also Read: WhatsApp Verification Feature: ಮೊಬೈಲ್ ನಂಬರ್‌ಗಳಿಲ್ಲದೆ ವಾಟ್ಸಪ್ ಬಳಸುವ ಈ ಹೊಸ ಫೀಚರ್!

ಆಧಾರ್‌ನಲ್ಲಿ ಎಷ್ಟು ಬಾರಿ ಹೆಸರು ಚೇಂಜ್ ಮಾಡಬಹುದು?

ಆಧಾರ್ ಬಳಕೆದಾರರು ತಮ್ಮ ಹೆಸರನ್ನು ಕೇವಲ ಎರಡು ಬಾರಿ ಮಾತ್ರ ಬದಲಾವಣೆ ಮಾಡಿಸಿಕೊಳ್ಳಲು ಅನುಮತಿಸಲಾಗಿದೆ. ಮೂರನೇ ಬದಲಾವಣೆಯ ಸಂದರ್ಭದಲ್ಲಿ ವಿಶೇಷ ವಿನಂತಿಯ ಮೇರೆಗೆ UIDAI ಪ್ರಾದೇಶಿಕ ಶಾಖೆಯಿಂದ ಅಸಾಧಾರಣ ಪ್ರಕರಣಗಳನ್ನು ಮಾತ್ರ ವಿಶೇಷ ಅನುಮತಿಸಲಾಗುತ್ತದೆ. ಬದಲಾವಣೆಯು ಚಿಕ್ಕದಾಗಿದ್ದರೆ ಮತ್ತು ಕಾಗುಣಿತ ತಿದ್ದುಪಡಿಯನ್ನು ಒಳಗೊಂಡಿದ್ದರೆ ಬಳಕೆದಾರರು ಹೆಸರನ್ನು ನವೀಕರಿಸಬಹುದು. ಅಲ್ಲದೆ ವಿಶೇಷವಾಗಿ ಮದುವೆಯ ನಂತರ ಹೆಣ್ಮಕ್ಕಳ ಹೆಸರು ಬದಲಾವಣೆಗೆ ಅವಕಾಶವಿದೆ. ಇದಕ್ಕೆ ರೂ 50 ಶುಲ್ಕ ಅನ್ವಯಿಸುತ್ತದೆ.

Aadhaar Update

Aadhaar ಅಲ್ಲಿ ನಿಮ್ಮ ಹುಟ್ಟಿದ ದಿನಾಂಕ (DoB)

ಈ ಮಾಹಿತಿಯನ್ನು ಬಳಕೆದಾರರು ಒಮ್ಮೆ ಮಾತ್ರ ಆಧಾರ್‌ನಲ್ಲಿ ಜನ್ಮ ದಿನಾಂಕವನ್ನು (DoB) ನವೀಕರಿಸಬಹುದು. ಮತ್ತೆ ಜನ್ಮ ದಿನಾಂಕವನ್ನು ನವೀಕರಿಸುವ ನಿಜವಾದ ಅಗತ್ಯವನ್ನು ಹೊಂದಿದ್ದರೆ UIDAI ಪಟ್ಟಿಯ ಪ್ರಕಾರ ಮಾನ್ಯವಾದ ಪುರಾವೆಯೊಂದಿಗೆ ಯಾವುದೇ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅವರು ವಿನಾಯಿತಿ ಪ್ರಕ್ರಿಯೆಯನ್ನು ಅನುಸರಿಸಬಹುದು. ಈ ವಿನಂತಿಯನ್ನು ತಿರಸ್ಕರಿಸಿದರೆ ಬಳಕೆದಾರರು 1947 ಕಸ್ಟಮರ್ ಕೇರ್ ಕರೆ ಮಾಡಬಹುದು ಅಥವಾ help@uidai.gov.in ಪತ್ರ ಬರೆಯಬಹುದು. ಇತ್ತೀಚಿನ ಅಪ್‌ಡೇಟ್ ವಿನಂತಿ ಸಂಖ್ಯೆ ಮತ್ತು ಸಂಪರ್ಕ ವಿವರಗಳನ್ನು ಹಂಚಿಕೊಳ್ಳುವ ಮೂಲಕ ಅಪ್‌ಡೇಟ್’ಗಾಗಿ ವಿನಂತಿಸಬಹುದು.

Aadhaar ಅಲ್ಲಿ ಫೋಟೋ ಮತ್ತು ಮೊಬೈಲ್ ಸಂಖ್ಯೆ ಅಪ್ಡೇಟ್

ಭಾರತದಲ್ಲಿ ಬಳಕೆದಾರರು ಎಷ್ಟು ಬಾರಿ ಬೇಕಾದರೂ ಫೋಟೋ ಮತ್ತು ಅವರ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬಹುದು. ಅದಕ್ಕೆ ಯಾವುದೇ ಮಿತಿಯಿಲ್ಲ. ಆದರೆ ನಿಯಮದ ಪ್ರಕಾರ ಬಳಕೆದಾರರು ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದಾಗ ಫೋಟೋ ಕಡ್ಡಾಯವಾಗಿದೆ. ಅದನ್ನು ಬದಲಾಯಿಸಲು ಬಳಕೆದಾರರು ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬಹುದು. ಫೋಟೋ ಮತ್ತು ಫಿಂಗರ್‌ಪ್ರಿಂಟ್‌ಗಳಂತಹ ಬಯೋಮೆಟ್ರಿಕ್ ಅಪ್‌ಡೇಟ್‌ಗಳನ್ನು ಆನ್‌ಲೈನ್‌ನಲ್ಲಿ ಬದಲಾಯಿಸಲಾಗುವುದಿಲ್ಲ ಎಂಬುದನ್ನು ಗಮನಿಸುವುದು ಅತ್ಯಗತ್ಯವಾಗಿದೆ.

https://whatsapp.com/channel/0029Va9c0YaKGGGCVmM5eB3t
Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo