ಆಧಾರ್ ಕಾರ್ಡ್ (Aadhaar Card) ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಆದರೆ ಹೆಚ್ಚಿನ ಜನರಿಗೆ ತಿಳಿಯದ ಮಾಹಿತಿ ಅಂದ್ರೆ ಯಾವ ನಿಮ್ಮ ಮಾಹಿತಿಯನ್ನು ಎಷ್ಟು ಬಾರಿ ಬದಲಾಯಿಸಲಾಗುವುದು ಎನ್ನುವುದು. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ (Aadhaar Card) ಬಹಳ ಮುಖ್ಯವಾದ ದಾಖಲೆಯಾಗಿದೆ. ಆಧಾರ್ ನಮ್ಮ ಗುರುತಿನ ಪುರಾವೆಯಾಗಿದೆ. ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳುವುದರಿಂದ ಹಿಡಿದು ಅನೇಕ ಆರ್ಥಿಕ ಕಾರ್ಯಗಳನ್ನು ಮಾಡುವವರೆಗೆ ನಮಗೆ ಆಧಾರ್ ಕಾರ್ಡ್‌ನ ವಿಶೇಷ ಅವಶ್ಯಕತೆಯಿದೆ.
ಇದಲ್ಲದೇ ಮಕ್ಕಳನ್ನು ಶಾಲೆಗೆ ಸೇರಿಸಲು ಆಧಾರ್ ಕಾರ್ಡ್ ಕೂಡ ನೀಡುವಂತೆ ಒತ್ತಾಯಿಸಿದ್ದಾರೆ. ನಮ್ಮ ಬಯೋಮೆಟ್ರಿಕ್ ಮತ್ತು ಜನಸಂಖ್ಯಾ ವಿವರಗಳನ್ನು ಆಧಾರ್ ಕಾರ್ಡ್‌ನಲ್ಲಿ ದಾಖಲಿಸಲಾಗಿದೆ. ಆಧಾರ್ ಕಾರ್ಡ್‌ನಲ್ಲಿ ತಪ್ಪು ಮಾಹಿತಿ ನಮೂದಿಸಿದ ನಂತರ ಜನರು ಅದನ್ನು ನವೀಕರಿಸಿಕೊಳ್ಳುವುದು ಸಾಮಾನ್ಯವಾಗಿ ಕಂಡುಬರುತ್ತದೆ. ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಸಹ ನವೀಕರಿಸುತ್ತಿದ್ದರೆ.
ನಿಮಗೊತ್ತಾ ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನೀವು ಒಮ್ಮೆ ಮಾತ್ರ ಲಿಂಗವನ್ನು ನವೀಕರಿಸಬಹುದು. ಮತ್ತೊಂದೆಡೆ ನಾವು ಮೊಬೈಲ್ ಸಂಖ್ಯೆಯ ಬಗ್ಗೆ ಮಾತನಾಡಿದರೆ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಎಷ್ಟು ಬಾರಿ ಬದಲಾಯಿಸಬಹುದು. ಈ ಬಗ್ಗೆ ಯಾವುದೇ ಮಿತಿಯನ್ನು ನಿಗದಿಪಡಿಸಲಾಗಿಲ್ಲ. ಏಕೆಂದರೆ ಇದರಲ್ಲೂ ಸಹ ಕೆಲವರು ಹೆಣ್ಣಿನಿಂದ ಗಂಡು ಮತ್ತು ಗಂಡಿನಿಂದ ಹೆಣ್ಣು ಎಂಬ ಲಿಂಗ ಪರಿವರ್ತಕರು ಸಹ ಸೇರಿದ್ದು ಅಂಥವರು ತಮ್ಮ ದಾಖಲೆಯಲ್ಲಿ ಲಿಂಗವನ್ನು ಅಪ್ಡೇಟ್ ಮಾಡಿಕೊಳ್ಳಲು ನಿರ್ದಿಷ್ಟ ದಾಖಲೆಗಳೊಂದಿಗೆ ಆಧಾರ್‌ನ ಪ್ರಾದೇಶಿಕ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ.
ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಹೆಸರನ್ನು ನೀವು ಕೇವಲ 2 ಬಾರಿ ಮಾತ್ರ ಬದಲಾಯಿಸಿಕೊಳ್ಳಬವುದು. ಏಕೆಂದರೆ ಹೆಚ್ಚಾಗಿ ಈ ಅಂಶ ಹೆಣ್ಣುಮಕ್ಕಳು ಮದುವೆಯಾದ ನಂತರ ಗಂಡನ ಉಪನಾಮದೊಂದಿಗೆ ತಮ್ಮ ಹೆಸರನ್ನು ಬದಲಾಯಿಸುವುದು ಭಾರತೀಯ ಸಂಪ್ರದಾಯವಾಗಿದೆ. ಇದಲ್ಲದೆ ನೀವು ನಿಮ್ಮ ಜನ್ಮ ದಿನಾಂಕವನ್ನು ಸಹ ಕೇವಲ 2 ಬಾರಿ ಮಾತ್ರ ಬದಲಾಯಿಸಬಹುದು. ಆಧಾರ್ ಕಾರ್ಡ್‌ನಲ್ಲಿ ಹೆಸರು, ಜನ್ಮ ದಿನಾಂಕ, ಲಿಂಗ ಇತ್ಯಾದಿ ಮಾಹಿತಿಯನ್ನು ನವೀಕರಿಸಲು ಮಿತಿಯನ್ನು ನಿಗದಿಪಡಿಸಲಾಗಿದೆ. ನಿಗದಿತ ಮಿತಿಗಿಂತ ಹೆಚ್ಚು ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಲು ಸಾಧ್ಯವಿಲ್ಲ.
ನಮ್ಮಲ್ಲಿ ಅನೇಕರು ತಮ್ಮ ತಮ್ಮ ವಿಳಾಸವನ್ನು ಅದರಲ್ಲೂ ಹೆಚ್ಚಾಗಿ ಯಾರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದರೋ ಅಂಥವರು ಆಗಾಗ್ಗೆ ತಮ್ಮ ವಿಳಾಸವನ್ನು ಬದಲಾಯಿಸುವುದು ಅನಿವಾರ್ಯವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಮಾಹಿತಿಗಾಗಿ ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ವಿಳಾಸವನ್ನು ಹಲವು ಬಾರಿ ಬದಲಾಯಿಸಬಹುದು. ಈ ಬಗ್ಗೆ ಯಾವುದೇ ಮಿತಿಯನ್ನು ನಿಗದಿಪಡಿಸಲಾಗಿಲ್ಲ. ಮತ್ತೊಂದೆಡೆ ನೀವು ನಿಗದಿತ ಮಿತಿಗಿಂತ ಹೆಚ್ಚು ಬಾರಿ ಆಧಾರ್ ಅನ್ನು ನವೀಕರಿಸಬಹುದು. ಆದರೆ ಇದು ಷರತ್ತುಗಳನ್ನು ಹೊಂದಿದ್ದು ಇದಕ್ಕಾಗಿ ನೀವು ನೇರವಾಗಿ ಆಧಾರ್‌ನ ಪ್ರಾದೇಶಿಕ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ. ಮಾಹಿತಿ ಸಹಾಯಕವಾಗಿದ್ದರೆ ತಿಳಿಯದವರೊಂದಿಗೆ ಹಂಚಿಕೊಳ್ಳಿ.