ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಸ್ಕ್ಯಾಮ್ ಮಾಡಲು ಸಿಮ್ ಕಾರ್ಡ್‌ಗಳಿಗೆ (SIM Card) ಸಂಬಂಧಿಸಿದ ವಂಚನೆಗಳು ಸಾಕಷ್ಟು ಸಾಮಾನ್ಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಹೆಸರಿನಲ್ಲಿ ಯಾವುದೇ ನಕಲಿ ಸಿಮ್ ಚಾಲನೆಯಲ್ಲಿಲ್ಲ ಎಂಬುದನ್ನು ನೀವು ಪರಿಶೀಲಿಸುವುದು ಮುಖ್ಯವಾಗಿದೆ. ಇದನ್ನು ಪರಿಶೀಲಿಸುವ ಪ್ರಕ್ರಿಯೆಯನ್ನು ಸರ್ಕಾರ ಈಗ ಸುಲಭಗೊಳಿಸಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಸಂಚಾರ ಸಾಥಿ (SANCHARSAATHI) ಪೋರ್ಟಲ್ ಆರಂಭಿಸಿದೆ. ಇದರ ಮೂಲಕ ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್‌ಗಳು ಚಾಲನೆಯಲ್ಲಿವೆ ಎಂಬುದನ್ನು ನೀವು ಸುಲಭವಾಗಿ ಪರಿಶೀಲಿಸಬಹುದು. ಪರಿಶೀಲಿಸಲು ಈ ಹಂತಗಳನ್ನು ಅನುಸರಿಸಬಹುದು.
Also Read: TATA Pay: ಮೊಬೈಲ್ ವ್ಯಾಲೆಟ್ ವಲಯಕ್ಕೂ ಕಾಲಿಟ್ಟ ಟಾಟಾ ಗ್ರೂಪ್
ಭಾರತದಲ್ಲಿ ನೀವು ಎಷ್ಟು ಸಿಮ್ ಕಾರ್ಡ್‌ಗಳನ್ನು (SIM Card) ಹೊಂದಿದ್ದೀರಿ ಎಂಬುದನ್ನು ಕಂಡುಹಿಡಿಯಲು ಪ್ರತಿಯೊಬ್ಬರೂ ಕಾಯುವುದು ಅನಿವಾರ್ಯ. ಏಕೆಂದರೆ ನಮಗೆ ತಿಳಿಯದೆ ನಮ್ಮ ದಾಖಲೆಗಳನ್ನು ಬಳಸಿಕೊಂಡು ಯಾರೋ ಸಿಮ್ ಕಾರ್ಡ್ ಖರೀದಿಸಿ ದುರುಪಯೋಗಗೊಳಿಸಿದರೆ ಅದಕ್ಕೆ ನಾವು ಹೊಣೆಯಾಗಬೇಕಾಗುತ್ತದೆ. ಆದ್ದರಿಂದ ಈ ಮಾಹಿತಿ ಬಹು ಮುಖ್ಯವಾಗಿದ್ದು ಈಗಾಗಲೇ ನಿಮ್ಮ ಆಯ್ಕೆಯ ಇಂಟರ್ನೆಟ್ ಬ್ರೌಸರ್ ಅನ್ನು ತೆರೆಯಿರಿ ಮತ್ತು TAFCOP ಟೈಪ್ ಮಾಡಿ ತೆರೆದು ನಂತರ ಮೊದಲ ಆಯ್ಕೆ SANCHARSAATHI ಪೋರ್ಟಲ್ ಮೇಲೆ ಕ್ಲಿಕ್ ಮಾಡಿ. ಈ ನಿಮ್ಮ ಮಾಹಿತಿಯನ್ನು ಪಡೆಯಬಹುದು.
➥ನೀವು ಮೊದಲು https://sancharsaathi.gov.in/ ಎಂಬ ಸರ್ಕಾರಿ ವೆಬ್‌ಸೈಟ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
➥ಇಲ್ಲಿ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
➥ಈಗ ಕ್ಯಾಪ್ಚಾ ಕೋಡ್ ಅನ್ನು ಟೈಪ್ ಮಾಡಿ ಮತ್ತು ಲಾಗಿನ್ ಕ್ಲಿಕ್ ಮಾಡಿ.
➥ಇದರ ನಂತರ ನೀವು OTP ಸ್ವೀಕರಿಸುತ್ತೀರಿ ಈಗ ಅದನ್ನು ನಮೂದಿಸಿ ಮುಂದೆ ಹೋಗಿ.
➥ನಂತರ ನಿಮ್ಮ ಐಡಿಯಲ್ಲಿ ಪ್ರಸ್ತುತ ಎಷ್ಟು ಸಿಮ್ ಕಾರ್ಡ್‌ಗಳು ಲಿಂಕ್ ಆಗಿದೆ ಎಂಬ ಎಲ್ಲಾ ಮಾಹಿತಿಯು ನಿಮ್ಮ ಮುಂದೆ ಕಾಣಿಸುತ್ತದೆ.
➥ಇಲ್ಲಿಂದ ನೀವು ವರದಿ ಮಾಡಬಹುದು ಅಂದರೆ ನಿಮ್ಮ ಹೆಸರಿನಲ್ಲಿರುವ ಬೇರೆ ಸಂಖ್ಯೆಗಳನ್ನು ನೀವು ಬಳಸುತ್ತಿಲ್ಲವಾದರೆ ತಕ್ಷಣ ನಿಲ್ಲಿಸಬಹುದು.
ನಿಮ್ಮ ಬಳಿ ಸಂಖ್ಯೆಯ ಬಗ್ಗೆ ಮಾಹಿತಿ ಇಲ್ಲದಿದ್ದರೆ ನೀವು ಅದನ್ನು ಅಳಿಸಬಹುದು. ಈ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಹೆಸರಿನಲ್ಲಿ ನಡೆಯುತ್ತಿರುವ ಆನ್‌ಲೈನ್ ವಂಚನೆಯನ್ನು ನೀವು ನಿಲ್ಲಿಸಬಹುದು. ಈ ಸಂಖ್ಯೆಗಳು ನಿಮ್ಮ ಹೆಸರಿನಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದರೆ ಕೆಲವು ಕಾನೂನುಬಾಹಿರ ಚಟುವಟಿಕೆಗಾಗಿ ಭಾರಿ ಮೊತ್ತದ ದಂಡದೊಂದಿಗೆ ನಿಮ್ಮನ್ನು ಜೈಲಿಗೆ ಕಳುಹಿಸುವ ಸನ್ನಿವೇಶಗಳು ಸಹ ಬರಬಹುದು.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ