ಇಂದಿನ ದಿನಗಳಲ್ಲಿ ಪ್ರತಿ ಮನೆ ಮತ್ತು ಮಕ್ಕಳ ಕೈಯಲ್ಲೂ ಸ್ಮಾರ್ಟ್ಫೋನ್ ಕಾಣಲು ಸಾಧ್ಯವಿದೆ. ಯಾಕೆಂದರೆ ಇಂದಿನ ದಿನಗಳಲ್ಲಿ ಈ ಇಂಟರ್ನೆಟ್ ಒಂದು ರೀತಿಯ ವ್ಯಸನವಾಗಿ ಬಿಟ್ಟಿದೆ. ಅಲ್ಲದೆ ಗಂಟೆಗಟ್ಟಲೆ ಇಂಟರ್ನೆಟ್ ಬಳಸುವುದು ನಮ್ಮ ದೇಹಕ್ಕೆ ಒಳ್ಳೆಯದಲ್ಲ ಎನ್ನುವುದು ನಮಗೆ ತಿಳಿದಿದೆ ಆದರೂ ಸಹ ಕ್ಯಾರೆ ಎನ್ನದೆ ಬೆಳಿಗ್ಗೆ ಎದ್ದಾಗಲಿಂದ ರಾತ್ರಿ ಕಣ್ಣುಗಳು ತಾವಾಗಿಯೇ ಮುಚ್ಚುವವರಿಗೆ ಸ್ಮಾರ್ಟ್ಫೋನ್ ನಮ್ಮಿಂದ ದೂರ ಮಾಡಿಕೊಳ್ಳಲು ಯಾವೊಬ್ಬರು ಸಿದ್ದರಿಲ್ಲ. ಇಂತಹ ಪರಿಸ್ಥತಿಯಲ್ಲಿ ನಮ್ಮ ಕಣ್ಣುಗಳ, ಮೆದುಳಿ ಮತ್ತು ಪೂರ್ತಿ ನಮ್ಮ ಬದುಕಿನ ಮೇಲೆ ಬೀರುವ (IAD – Internet Addiction Disorder) ಭವಿಷ್ಯದ ಅಪಾಯಕಾರಿ ತೊಂದರೆಗಳ ಬಗ್ಗೆ ಅಷ್ಟಾಗಿ ಯಾರು ಯೋಚಿಸುವುದಿಲ್ಲ. ಆದರೆ ಸಮಯ ಇದ್ದಾಗಲೆ ನಮ್ಮನ್ನು ನಾವೇ ತಿದ್ದಿಕೊಳ್ಳುವುದು ಅತಿದೊಡ್ಡ ಅವಕಾಶವಾಗಿದೆ.
Also Read: ನಥಿಂಗ್‌ನಿಂದ CMF Phone 1 ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಜ್ಜು! ನಿರೀಕ್ಷಿತ ಫೀಚರ್ ಮತ್ತು ಬೆಲೆ ಎಷ್ಟು?
ಪ್ರಸ್ತುತ ಅಧ್ಯಯನದಿಂದ ಬಂದ ವರದಿಗಳ ಪ್ರಕಾರ ಇಂಟರ್ನೆಟ್ ಚಟವು ಜನ ಸಾಮಾನ್ಯರ ಮೆದುಳಿನ ಮೇಲೆ ಇನ್ನೂ ಆಳವಾದ ಪರಿಣಾಮವನ್ನು ಬೀರುತ್ತದೆ ಎಂದು ತೋರಿಸಿದೆ ಅದು ನೇರವಾಗಿ ನಮ್ಮ ಮೆದುಳಿನ ಜೀವಕೋಶಗಳನ್ನು ಬದಲಾಯಿಸುತ್ತದೆ. ಇಷ್ಟೇ ಅಲ್ಲ ನಮ್ಮ ನಿದ್ರೆ, ಆಹಾರ ಮತ್ತು ಅದರ ಪದ್ಧತಿಯನ್ನು ಬದಲಾವಣೆಗಳಿಗೆ ತೊಂದರೆಯಾಗಿಸುತ್ತದೆ. ನಮ್ಮ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಂತಹ ಪ್ರಮುಖ ಕಾರ್ಯಗಳಲ್ಲಿ ಸಹಾಯ ಮಾಡುವ ಮೆದುಳಿನ ಭಾಗಗಳು ಇಂಟರ್ನೆಟ್ ಚಟದಿಂದ ಬೇಗ ಹಾನಿಯಾಗಬಹುದು. ಈ ಎಲ್ಲಾ ಬದಲಾವಣೆಗಳು ವಿಶೇಷವಾಗಿ ಮಕ್ಕಳು ಮತ್ತು ಹದಿಹರೆಯದವರ ಮೆದುಳಿನಲ್ಲಿ ಈ IAD – Internet Addiction Disorder ಹೆಚ್ಚು ವೇಗವಾಗಿ ಸಂಭವಿಸುತ್ತದೆಂದು ಹೇಳಲಾಗಿದೆ.
ಇದಕ್ಕೆ ಮೂಲ ಕಾರಣ ಆನ್‌ಲೈನ್ ಕ್ಲಾಸ್ ಮತ್ತು ಸೋಷಿಯಲ್ ಮೀಡಿಯಾ ಇದಕ್ಕೆ ಪ್ರಮುಖ ಕಾರಣವಾಗಿದೆ. ಸಂಶೋಧನೆಯು 2013 ಮತ್ತು 2023 ನಡುವೆ ನಡೆಸಿದ 12 ಹಿಂದಿನ ಅಧ್ಯಯನಗಳಿಂದ ಡೇಟಾವನ್ನು ಸಂಶ್ಲೇಷಿಸುತ್ತದೆ. ಅಲ್ಲದೆ ಇದರಲ್ಲಿ 10 ರಿಂದ 19 ವರ್ಷ ವಯಸ್ಸಿನ 237 ಹದಿಹರೆಯದವರು ಇಂಟರ್ನೆಟ್ ಚಟದಿಂದ ಔಪಚಾರಿಕವಾಗಿ ರೋಗನಿರ್ಣಯ ಮಾಡಿದರು. ಅಲ್ಲದೆ ಫನ್ಕ್ಷನಲ್ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (FMRI – Functional Magnetic Resonance Imaging) ಅನ್ನು ಬಳಸಿಕೊಂಡು ಸಂಶೋಧಕರು ಇಂಟರ್ನೆಟ್ ವ್ಯಸನ ಹೊಂದಿರುವ ವ್ಯಕ್ತಿಗಳಲ್ಲಿ ವಿವಿಧ ಮೆದುಳಿನ ಪ್ರದೇಶಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಪರಿಶೀಲಿಸಿದರು.
ಸಾಮಾನ್ಯವಾಗಿ ಮೊದಲಿಗೆ ನಿಮ್ಮ ಕಣ್ಣುಗಳ ಮೇಲೆ ಹೆಚ್ಚು ಪರಿಣಾಮ ಬೀರುವುದರೊಂದಿಗೆ ಅತಿ ಗಂಭೀರವಾದ ಈ ಬದಲಾವಣೆಗಳು ಮೆದುಳಿನ ಆರೋಗ್ಯ, ಬೆಳವಣಿಗೆ, ಕಲಿಕೆಯ ಸಾಮರ್ಥ್ಯ ಮತ್ತು ದೇಹದ ಸಮತೋಲನದ ಮೇಲೆ ಪರಿಣಾಮ ಬೀರಬಹುದು. ಮೆದುಳಿನಲ್ಲಿರುವ ಕ್ಯಾಮಿಲಸ್ ಪದಾರ್ಥ ಜನರೊಂದಿಗೆ ಬೆರೆಯಲು ಮತ್ತು ತಿನ್ನುವುದು, ಕುಡಿಯುವುದು ಮತ್ತು ಮಲಗುವುದು ಮುಂತಾದ ದೈನಂದಿನ ಚಟುವಟಿಕೆಗಳಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಸಂಶೋಧಕರು ಹೇಳುತ್ತಾರೆ. ಆದ್ದರಿಂದ ಮಕ್ಕಳಿಗೆ ಗರಿಷ್ಠ 24 ಗಂಟೆಗಳಲ್ಲಿ 2 ಗಂಟೆಗಳು ಸಹ ಜಾಸ್ತಿಯಾಗಿದ್ದು ಹದಿಹರೆಯದವರು ಗರಿಷ್ಠ 4 ಗಂಟೆಗಿಂತ ಅಧಿಕ ಬಳಸಬಾರದೆಂದು ವರದಿ ಸಲಹೆ ನೀಡುತ್ತದೆ.