ನೀವು ಕಳೆದುಕೊಂಡಿರುವ ಅಥವಾ ನಿಮ್ಮಿಂದ ಕಳ್ಳತನವಾದ ಫೋನ್ ಹುಡುಕುವುದು ಒಂದು ರೀತಿಯಲ್ಲಿ ನಿಮ್ಮ ಲಕ್ ಎನ್ನಬವುದು. ಯಾಕೆಂದರೆ ನಾನು ಇಲ್ಲಿ ನಿಮಗೆ ಸಾಮಾನ್ಯ ಜನರು ಮಾಡಬವುದುದಾದ ಆಕ್ಟಿವಿಟಿಯ ಮಾಹಿತಿ ಕೊಡ್ತಾ ಇದ್ದೀನಿ ಅಷ್ಟ್ಟೇ. ಯಾಕಂದ್ರೆ FIR ದರ್ಜಿಸಿದ ಮೇಲೆ ಪೊಲೀಸರು ತಮ್ಮದೇಯಾದ ಸರ್ಕಾರದ ಬೇರೆ ರೀತಿಯ ತುಂಬ ಅಕ್ಯುರೇಟ್ ಮತ್ತು ಅತ್ಯುತ್ತಮವಾದ ಸಾಫ್ಟ್ವೇರ್ಗಳ ಮೂಲಕ ಕಂಡುಹಿಡಿಯುತ್ತಾರೆ. ಆದದ್ದರಿಂದ ನಿಮ್ಮ ಅದೃಷ್ಟ ನೋಡಲು ಈ ಕೆಲ ಅಂಶಗಳನ್ನು ಗಮನದಲ್ಲಿಡಬೇಕಾಗುತ್ತದೆ.
–ನಿಮಗೆ ನಿಮ್ಮ ಫೋನಲ್ಲಿರುವ ಮೇಲ್ ಐಡಿ ಮತ್ತು ಅದರ ಪಾಸ್ವರ್ಡ್ ನೆನಪಿರಾಬೇಕಾಗುತ್ತದೆ.
–ಕಳೆದುಕೊಂಡಿರುವ ಅಥವಾ ನಿಮ್ಮಿಂದ ಕಳ್ಳತನವಾದ ಫೋನಲ್ಲಿ GPS ಲೊಕೇಶನ್ ಆನ್ ಆಗಿರಬೇಕಾಗುತ್ತದೆ.
–ಕಳೆದುಕೊಂಡಿರುವ ಅಥವಾ ನಿಮ್ಮಿಂದ ಕಳ್ಳತನವಾದ ಫೋನ್ ನೀವು ಟ್ರ್ಯಾಕ್ ಮಾಡುವಾಗ ಆನ್ ಆಗಿರಬೇಕಾಗುತ್ತದೆ.
ಈ ಮೇಲಿನ ಮೂರು ಹಂತಗಳು ನಿಮ್ಮ ಬಳಿ ಇದ್ರೆ ಅವಾಗ್ಲು ಸಹ ನೀವು ಕರೆ ಮಾಡಿ ಫೋನ್ ಯಾರತ್ರ ಇದೆಯೋ ಅವರನ್ನು ವಿನಂತಿಸಿಕೊಳ್ಳುವ ಮೂಲಕ ಅಥವಾ ಈ ಮೂರೂ ಮಾಹಿತಿಯೊಂದಿಗೆ FIR ದರ್ಜಿಸಿ ಪೊಲೀಸರ ಮುಖಾಂತರ ಕಡಿಮೆ ಸಮಯದಲ್ಲಿ ಟ್ರ್ಯಾಕ್ ಮಾಡಿ ಪಡೆಯಬವುದು. ಈಗ ಮೇಲಿನ ಮೂರೂ ಅಂಶಗಳು ನಿಮ್ಮ ಬಳಿ ಇದ್ದ ಮೇಲೆ ಮುಂದೇನು ಮಾಡಬೇಕು ನೋಡಿ.
– ಮೊದಲಿಗೆ ಮೊಬೈಲ್, ಲ್ಯಾಪ್ಟಾಪ್ ಅಥವಾ PC ಯಲ್ಲಿ ಗೂಗಲ್ ಬ್ರೌಸರ್ ತೆರೆಯಿರಿ.
– ಈಗ ನಿಮ್ಮ ಬಲಭಾಗದ ಮೇಲೆ Sing in ಮೇಲೆ ಕ್ಲಿಕ್ ಮಾಡಿ ನಿಮ್ಮ Email ಐಡಿ ಮತ್ತು ಪಾಸ್ವರ್ಡ್ ಹಾಕಿ.
– ಇದರ ನಂತರ ಸರ್ಚ್ ಮಾಡುವಲ್ಲಿ ಗೂಗಲ್ ಮ್ಯಾಪ್ ಟೈಪ್ ಮಾಡಿ ತೆರೆಯಿರಿ.
– ಈಗ ನಿಮ್ಮ ಎಡಭಾಗದ ತುದಿಯಲ್ಲಿ ಮೂರು ಲೈನ್ಗಳ ಮೆನು ಮೇಲೆ ಕ್ಲಿಕ್ ಮಾಡಿ.
– ಇಲ್ಲಿ ಕೆಳಗೆ Your Timeline ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
– ನಿಮ್ಮ ಎಡಭಾಗದ ತುದಿಯಲ್ಲಿ ವರ್ಷ, ತಿಂಗಳು ಮತ್ತು ದಿನದ ಆಯ್ಕೆಗಳು ಬರುತ್ತವೆ.
– ಇಲ್ಲಿ ನೀವು ಕಳೆದುಕೊಂಡಿರುವ ಅಥವಾ ಕಳ್ಳತನವಾದ ದಿನದ ಮಾಹಿತಿ ತುಂಬಿ.
– ಇದಾದ ನಂತರ ನಿಮಗೆ ತಕ್ಷಣ ನಿಮ್ಮ ಫೋನಿನ ಲೊಕೇಶನ್ ತೋರಿಸುತ್ತದೆ.
ಈಗಾಗಲೇ ಮೇಲೆ ಹೇಳಿರುವ ಹಾಗೆ ಮೇಲಿನ ಮೂರೂ ಅಂಶಗಳು ಇದ್ದರೆ ಮಾತ್ರ ಈ ರೀತಿಯಲ್ಲಿ ಕಂಡು ಹಿಡಿಯಬವುದು. ಅಲ್ಲದೆ ಒಂದು ವೇಳೆ ಟ್ರ್ಯಾಕ್ ಮಾಡುವಾಗ ಮೇಲಿನ ಎಲ್ಲ ಅಂಶಗಳಿದ್ದು ಅರ್ಧದಲ್ಲಿ ಫೋನ್ ಆಫ್ ಆದರೆ ನೀವು ಅದು ಆಫ್ ಆದ ಲೊಕೇಶನ್ ವರೆಗೆ ಮಾತ್ರವೇ ಟ್ರ್ಯಾಕ್ ಮಾಡಬವುದು. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ನ್ಯೂಸ್ಗಳಿಗಾಗಿ ಡಿಜಿಟ್ ಕನ್ನಡ ಫೇಸ್ಬುಕ್ ಪೇಜ್ ಲೈಕ್ ಹಾಗು ಫಾಲೋ ಮಾಡಿ.