ಕಳೆದು ಹೋದಂತಹ ವೋಟರ್ ಐಡಿಯನ್ನು ಕೆಲವೇ ನಿಮಿಷಗಳಲ್ಲಿ ಡೌನ್ಲೋಡ್ ಮಾಡುವ ಹೊಸ ವಿಧಾನ

ಕಳೆದು ಹೋದಂತಹ ವೋಟರ್ ಐಡಿಯನ್ನು ಕೆಲವೇ ನಿಮಿಷಗಳಲ್ಲಿ ಡೌನ್ಲೋಡ್ ಮಾಡುವ ಹೊಸ ವಿಧಾನ
HIGHLIGHTS

ಈ ಐಡಿ ಕಳೆದು ಹೋದರೆ ಏನು ಮಾಡಬೇಕು? ಯಾರನ್ನು ಸಂಪರ್ಕಿಸಬೇಕು? ಎಂಬುದು ಬಹಳ ಜನರಿಗೆ ಗೊತ್ತಿರುವುದಿಲ್ಲ

ಭಾರತದಲ್ಲಿ ಬರುವ 11ನೇ ಏಪ್ರೀಲ್ 2019 ರಿಂದ ಶುರುವಾಗಲಿದೆ ಲೋಕಸಭೆಯ ಚುನಾವಣೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ    ವೋಟರ್ ಐಡಿ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಏಕೆಂದರೆ ವೋಟರ್ ಐಡಿ ಎಷ್ಟು ಮುಖ್ಯ ಅಂದರೆ ತುಂಬಾ ಕಡೆ ಈ ವೋಟರ್ ಐಡಿ ಇಲ್ಲವೆಂದರೆ ಕೆಲಸವೇ ಆಗುವುದಿಲ್ಲ ಅದಕ್ಕಿಂತ ಹೆಚ್ಚಾಗಿ ನೀವು ಭಾರತೀಯ ಪ್ರಜೆ ಆಗಬೇಕಾದರೆ ಈ ವೋಟರ್ ಐಡಿ ಇರಲೇ ಬೇಕು. 

ಚುನಾವಣಾ ಆಯೋಗ ಈಗಾಗಲೇ ಒಂದು ವೇಳೆ ನಿಮ್ಮ ಬಳಿ ವೋಟರ್ ಐಡಿ ಇಲ್ಲವಾದರೆ ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್ ಮುಂತಾದ ಫೋಟೋವಿನೊಂದಿಗಿನ ಡಾಕ್ಯುಮೆಂಟ್ಗಳನ್ನು ಸ್ವೀಕರಿಸಲಿದೆ. ಅಲ್ಲವೇ ಮತ್ತು ನೀವು ಮತ ಚಲಾಯಿಸಬೇಕು ಅಂದರೆ ಇವುಗಳ ಅವಶ್ಯಕತೆ ಬಹಳ ಮುಖ್ಯವಾಗಿದೆ. ಆದರೆ ಈ ಐಡಿ ಕಳೆದು ಹೋದರೆ ಏನು ಮಾಡಬೇಕು ಯಾರನ್ನು ಸಂಪರ್ಕಿಸಬೇಕು ಎಲ್ಲಿ ಸಿಗುತ್ತದೆ ಈ ಐಡಿ ಎಂಬುದು ನಮ್ಮಲ್ಲೇ ಬಹಳ ಜನಗಳಿಗೆ ಗೊತ್ತಿರುವುದಿಲ್ಲ ಅದನ್ನು ತಿಳಿಸುವ ಪ್ರಯತ್ನವೇ ಈ ಲೇಖನದ ಉದ್ದೇಶವಾಗಿದೆ

ಮೊದಲು (www.nvsp.in) ಎನ್ನುವ ವೆಬ್ ಪೇಜ್ ಗೆ ಬೇಟಿ ಕೊಡಿ ತದ ನಂತರ ನೀವು ಹೋಮ್ ಪೇಜಿಗೆ ಎಂಟ್ರಿ ಬರುತ್ತೆ

ಈ ಹೋಮ್ ಪೇಜ್ ನಲ್ಲಿ ಗಮನ ವಹಿಸಿ ಸ್ಕ್ರೀನಿನ ಎಡಗಡೆಯ ಭಾಗದಲ್ಲಿ ಒಂದು Search ಅಂತ ಒಂದು ಆಪ್ಷನ್ ಇರುತ್ತದೆ. 

ಇಲ್ಲಿ ನಿಮಗೆ (Search your name in electoral role) ಅಂತ ಅದನ್ನು ಕ್ಲಿಕ್ ಮಾಡಿ ಮತ್ತೊಂದು ಮೇನು ಓಪನ್ ಆಗುತ್ತದೆ.

ಅಲ್ಲಿ ಕಳೆದು ಕೊಂಡ ವೋಟರ್ ಐಡಿ epic ನಂಬರ್ ಗೊತ್ತಿದ್ದರೆ ನಿಮ್ಮ ವೋಟರ್ ಐಡಿ ಪಡೆದುಕೊಳ್ಳಬಹುದು.

ಇದರ ನಂತರ ಅಲ್ಲಿಂದ ಡೌನ್ಲೋಡ್ ಮಾಡಿಗೊಳ್ಳಬವುದು. 

ಒಂದು ವೇಳೆ ವೋಟರ್ ಐಡಿ epic ನಂಬರ್ ಗೊತ್ತಿಲ್ಲದಿದ್ದರೆ ನಿಮ್ಮ ಹೆಸರನ್ನು ಹಾಕುವ ಮೂಲಕ ಪಡೆದುಕೊಳ್ಳಬಹುದು.

ಆದರೆ ನಿಮ್ಮ ನಿಮ್ಮ ಫೋನ್ ನಂಬರ್ ನಿಮ್ಮ ಬಳಿ ಇದ್ದಾರೆ ಹೆಚ್ಚು ಆರಾಮು.    

ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಅವರಿಗೂ ಸಹಾಯ ವಾಗಬಹುದು. ಈ ವೆಬ್ಸೈಟ್ ನಲ್ಲಿ ನಿಮ್ಮ ಎಲ್ಲಾ ಮಾಹಿತಿಗಳನ್ನು ಫಿಲ್ ಮಾಡಿ. ಎಲ್ಲ ಮಾಹಿತಿಗಳನ್ನು ಫಿಲ್ ಮಾಡಿದ ಕೇವಲ ಒಂದೇ ಒಂದು ನಿಮಿಷದಲ್ಲಿ ನೀವು ಆನ್ಲೈನ್ ನಲ್ಲಿ ನಿಮ್ಮ ವೋಟರ್ ID ಡೌನ್ಲೋಡ್ ಮಾಡಿಕೊಳ್ಳಬಹುದು. ಅದಾದ ನಂತರ ನೀವು ಅದನ್ನು ಪ್ರಿಂಟ್ ಮಾಡಿ ಲ್ಯಾಮಿನೇಟ್ ಮಾಡಿಸಬಹುದು.

Digit Kannada
Digit.in
Logo
Digit.in
Logo