ಹೊಸ ನೋಕಿಯಾ 7 ಇನ್ನು ಕೆಲವೇ ದಿನಗಳ ಹಿಂದೆ ಚೀನಾದಲ್ಲಿ ಪ್ರಾರಂಭಿಸಲಾಯಿತು. ಇದು 5.2 ಇಂಚಿನ ಫುಲ್ HD ಡಿಸ್ಪ್ಲೇಯೊಂದಿಗೆ ಸ್ನಾಪ್ಡ್ರಾಗನ್ 630 ಸೋಕ್ ಮತ್ತು ನೋಕಿಯಾ ಬೋಥೀ ವೈಶಿಷ್ಟ್ಯವನ್ನು ಒಳಗೊಂಡಿದೆ.
ಈಗ HMD ಗ್ಲೋಬಲ್ ಇದೇ ಅಕ್ಟೋಬರ್ 31 ರಂದು ಹರಿಯಾಣದ ಗುರೂಗ್ರಾಮ್ನಲ್ಲಿ ನಡೆಯಲಿರುವ ಒಂದು ಕಾರ್ಯಕ್ರಮಕ್ಕಾಗಿ ಒಂದು ಪತ್ರಿಕಾ ಆಮಂತ್ರಣವನ್ನು ಕಳುಹಿಸಿದೆ. ಈ ಕಾರ್ಯಕ್ರಮದ ಸ್ಪಷ್ಟತೆಗಳು ಇನ್ನೂ ತಿಳಿದಿಲ್ಲ. ಆದರೆ "ನೋಕಿಯಾ ಫೋನ್ಗಳಿಗಾಗಿ ಮುಂದಿನ ಮೈಲಿಗಲ್ಲನ್ನು ಅನಾವರಣಗೊಳಿಸಲಿರುವ" ಬಗ್ಗೆ ಪಾಲ್ಗೊಳ್ಳುವವರಿಗೆ ಇದು ಆಹ್ವಾನ ನೀಡುತ್ತದೆ. ಅಲ್ಲದೆ ಈ ಕಂಪೆನಿಯು ಭಾರತದಲ್ಲಿ ಹೊಸ ನೋಕಿಯಾ 7 ಸ್ಮಾರ್ಟ್ಫೋನನ್ನು ಪ್ರಾರಂಭಿಸಬಹುದು ಎಂಬ ಮಾತು ಬಹಿರಂಗಗೊಂಡಿದೆ.
ಈಗಾಗಲೇ ತಿಳಿದಿರುವಂತೆ ಕೆಲ ದಿನಗಳ ಹಿಂದೆ ಚೀನಾದಲ್ಲಿ HMD ಗ್ಲೋಬಲ್ ನೋಕಿಯಾ 7 ಸ್ಮಾರ್ಟ್ಫೋನನ್ನು ಪ್ರಾರಂಭಿಸಿತು. ಮತ್ತು ಈ ಸಾಧನವು 7000 ಸರಣಿಯ ಅಲ್ಯೂಮಿನಿಯಂ ಚಾಸಿಸ್ ಮತ್ತು ಗಾಜಿನ ಹಿಂಭಾಗದಿಂದ ಕೂಡಿದೆ. ಮತ್ತು ಇದು 5.2 ಇಂಚಿನ ಪೂರ್ಣ HD ips ಡಿಸ್ಪ್ಲೇನೊಂದಿಗೆ ಹೊಂದಿಗೆ ಕ್ವಾಲ್ಕಾಮ್ನ ಸ್ನಾಪ್ಡ್ರಾಗನ್ 630 ಚಿಪ್ಸೆಟ್ನಿಂದ ಚಾಲಿತವಾಗುತ್ತದೆ. ಅಲ್ಲದೆ ಇದು ಎರಡು ರೂಪಾಂತರಗಳಲ್ಲಿ ಲಭ್ಯವಿದೆ.
ಈ ಎರಡೂ ರೂಪಾಂತರಗಳು 64GB ಯಾ ಸ್ಟೋರೇಜನ್ನು ನೀಡುತ್ತವೆ. ಮತ್ತು ಮೈಕ್ರೊ SD ಕಾರ್ಡ್ ಮೂಲಕ ಇದನ್ನು ನೀವು 128GB ಯಾ ವರೆಗೆ ವಿಸ್ತರಿಸಬಹುದು.
ನೋಕಿಯಾ 7 ರ ಕ್ಯಾಮೆರಾದ ಬಗ್ಗೆ ಹೇಳಬೇಕೆಂದರೆ ಇದರ ಬ್ಯಾಕ್ f/1.8 ಅಪೇಚೆರ್ ಲೆನ್ಸ್ನೊಂದಿಗೆ 16MP ಪ್ರೈಮರಿ ಕ್ಯಾಮೆರಾ ಮತ್ತು ಫ್ರಂಟಲ್ಲಿ 5MP ನ ಕ್ಯಾಮೆರಾವಿದೆ. ಇದರೊಂದಿಗೆ ನೋಕಿಯಾ ಕಂಪನಿಯು ಇನ್ನು ಪ್ರಮುಖ ಸ್ಮಾರ್ಟ್ಫೋನ್ಗಳಂತಹ ನೋಕಿಯಾ 8, ನೋಕಿಯಾ 7 ನಲ್ಲಿ ಬೋಥೀ ಮೋಡ್ ಕೂಡಾ ನೀಡಿದೆ. ಇದು ಬಳಕೆದಾರರಿಗೆ ಫ್ರಂಟ್ ಮತ್ತು ಬ್ಯಾಕ್ ಕ್ಯಾಮೆರಾಗಳನ್ನು ಏಕಕಾಲದಲ್ಲಿ ಬಳಸಲು ನಿಮಗೆ ಅನುಮತಿಸುತ್ತದೆ.
ಈ ಹೊಸ ನೋಕಿಯಾ ಆಂಡ್ರಾಯ್ಡ್ ನೌಗಟಿನಿಂದ ಚಲಿಸುತ್ತದೆ. ಮತ್ತು ಇದರಲ್ಲಿದೆ 3000mAh ಧೀರ್ಘಕಾಲ ಬಾಳಿಕೆಯ ಬ್ಯಾಟರಿಯನ್ನು ಹೊಂದಿದೆ.
ಇದೇ ರೀತಿಯಲ್ಲಿ ನೋಕಿಯಾ ಇತ್ತೀಚೆಗೆ ಯೂರೋಪ್ನಲ್ಲಿ ತನ್ನ ಹೊಸ ನೋಕಿಯಾ 8 ರ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿತು. ಇದು 4GB ಯಾ RAM ಮತ್ತು 64GB ಯಾ ಸ್ಟೋರೇಜನ್ನು ಒದಗಿಸುವ ಸ್ಟ್ಯಾಂಡರ್ಡ್ ಆವೃತ್ತಿಯಂತೆ ಕಾಣುತ್ತದೆ. ಇದರ ಈ ಹೊಸ ರೂಪಾಂತರವು 6GB ಯಾ RAM ಮತ್ತು 128GB ಯಾ ಸ್ಟೋರೇಜನ್ನು ನೀಡುತ್ತದೆ. ಈ ಹೊಸ ಫೋನಿನ ಬೆಲೆ ಸದ್ಯಕ್ಕೆ ಜರ್ಮನಿಯಲ್ಲಿ ಸುಮಾರು EUR 669 (ಸುಮಾರು ರೂ 51,000) ನಲ್ಲಿ ಬೆಲೆಯಿದೆ. ಎಂದು ವರದಿಯಾಗಿದೆ.