ಭಾರತದಲ್ಲಿ ನಾಳೆ ಅಂದ್ರೆ 15ನೇ ಆಗಸ್ಟ್ 2023 ನಮ್ಮ 77ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು Har Ghar Tiranga 2023 ಆಗಿ ಆಚರಿಸಲಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಭಾರಿ ದೇಶದ ಟೆಕ್ನಾಲಾಜಿಯನ್ನು ಮತ್ತಷ್ಟು ತನ್ನೊಳಗೆ ಸೆಳೆದುಕೊಂಡಿದೆ. ಏಕೆಂದರೆ ಇಂದಿನ ದಿನಗಳಲ್ಲಿ ಟೆಕ್ನಾಲಜಿ ಬಳಸದ ಮನುಷ್ಯರನ್ನು ನೋಡೋದು ತುಂಬ ಕಷ್ಟ. ಆದ್ದರಿಂದ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಮ್ಮ ಸೆಲ್ಫಿಗಳನ್ನು ಬದಲಾಯಿಸುವಂತೆ ಪ್ರಧಾನಿ ಮೋದಿ ನಾಗರಿಕರಿಗೆ ಸಲಹೆ ನೀಡಿದ್ದಾರೆ. ದೇಶದ ನಾಗರಿಕರು ತ್ರಿವರ್ಣ ಧ್ವಜದೊಂದಿಗೆ ತೆಗೆದ ತಮ್ಮ ಸೆಲ್ಫಿಯನ್ನು ಭಾರತ ಸರ್ಕಾರದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವ ಅವಕಾಶವನ್ನು ಸರ್ಕಾರ ಈ ಬಾರಿ ನೀಡುತ್ತಿದೆ.
ದೇಶದಲ್ಲಿ ಈಗಾಗಲೇ ಪ್ರತಿಯೊಂದು ಮನೆಯಲ್ಲಿ ತ್ರಿವರ್ಣ ಹರ್ ಘರ್ ತಿರಂಗ (Har Ghar Tiranga) ಪ್ರಚಾರವು ಆಗಸ್ಟ್ 13 ರಿಂದಲೇ ಅಂದರೆ ನೆನ್ನೆಯಿಂದಲೇ ಪ್ರಾರಂಭವಾಗಿದೆ. ನೀವು ನೇರವಾಗಿ https://harghartiranga.com/ ಮೂಲಕ ಆಗಸ್ಟ್ 15 ರವರೆಗೆ ಅಭಿಯಾನದಲ್ಲಿ ಭಾಗವಹಿಸಬಹುದು. ಪ್ರತಿ ಮನೆಯಲ್ಲೂ ಹರ್ ಘರ್ ತಿರಂಗ (Har Ghar Tiranga) ಅಭಿಯಾನ ಆರಂಭವಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಈ ಅಭಿಯಾನಕ್ಕೆ ಸಂಬಂಧಿಸಿದ ವಿಶೇಷ ವಿಷಯಗಳ ಬಗ್ಗೆ ಮಾಹಿತಿ ಇಲ್ಲಿದೆ.
ಪ್ರಧಾನಿ ಮೋದಿಯವರ ಮನವಿಯ ಮೇರೆಗೆ ಪ್ರತಿ ಮನೆಯವರು ತ್ರಿವರ್ಣ ಪ್ರಚಾರದ ಜೊತೆಗೆ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ತ್ರಿವರ್ಣದ ಫೋಟೋವನ್ನು ಹಾಕಬಹುದು. ಹರ್ ಘರ್ ತಿರಂಗಾ ಅಭಿಯಾನದೊಂದಿಗೆ ನೀವು ತ್ರಿವರ್ಣ ಧ್ವಜದೊಂದಿಗೆ ನಿಮ್ಮ ಸೆಲ್ಫಿಯನ್ನು ಅಪ್ಲೋಡ್ ಮಾಡಬಹುದು. ತ್ರಿವರ್ಣ ಸೆಲ್ಫಿಯನ್ನು https://harghartiranga.com/ ನಲ್ಲಿ ಅಪ್‌ಲೋಡ್ ಮಾಡಬೇಕು.
ನೀವು ತೆಗೆದ ಹರ್ ಘರ್ ತಿರಂಗ (Har Ghar Tiranga) ಸೆಲ್ಫಿ ಫೋಟೋವನ್ನು ನೀವು ಸರ್ಕಾರದ https://harghartiranga.com/ ಅಲ್ಲಿ ಬಳಕೆದಾರಹೆಸರಿನೊಂದಿಗೆ ಕಾಣಬಹುದು. ಸೆಲ್ಫಿ ಕಾಣಿಸದಿದ್ದರೆ ಆತಂಕ ಪಡುವ ಅಗತ್ಯವಿಲ್ಲ. ಇದಕ್ಕಾಗಿ ನೀವು ಆಗಸ್ಟ್ 16 ರ ಬೆಳಿಗ್ಗೆ 8:00am ಗಂಟೆಯವರೆಗೆ ನೀವು ನಿಮ್ಮ ಸೆಲ್ಫಿಯನ್ನು ಅಪ್ಲೋಡ್ ಮಾಡಬಹುದು.
ನೀವು ಮೊದಲಿಗೆ https://harghartiranga.com/ ನಲ್ಲಿ ಹರ್ ಘರ್ ತಿರಂಗ ಅಭಿಯಾನದ ಭಾಗವಾಗಲು Google ಖಾತೆಯನ್ನು ಬಳಸಬಹುದು. Google ಖಾತೆಯನ್ನು ಹೊಂದಿರುವ ಬಳಕೆದಾರರು ತಮ್ಮ ಹೆಸರು ಮತ್ತು ಫೋಟೋವನ್ನು ವೆಬ್‌ಸೈಟ್‌ನಲ್ಲಿ ಬಳಸುವುದಕ್ಕೆ ಸಮ್ಮತಿಸಬೇಕು. ಅಲ್ಲದೆ ನೀವು ಸಂಸ್ಕೃತಿ ಸಚಿವಾಲಯ ನಡೆಸುವ ಡಿಜಿಟಲ್ ತ್ರಿವರ್ಣ ಕಲಾಕೃತಿಯ ಭಾಗವಾಗಬಹುದು. ಇದಕ್ಕಾಗಿ ನೀವು ಈ ವೆಬ್‌ಸೈಟ್‌ನಲ್ಲಿ ನಿಮ್ಮ ತ್ರಿವರ್ಣ ಚಿತ್ರವನ್ನು ಅಪ್‌ಲೋಡ್ ಮಾಡಬೇಕು.