ಪ್ರಸ್ತುತ SBI Bank ನೆಟ್‌ಬ್ಯಾಂಕಿಂಗ್ ಬಳಸುವವರಿಗೆ ಖಡಕ್ ವಾರ್ನಿಂಗ್ ಜೊತೆಗೆ ಎಚ್ಚೆತ್ತುಕೊಳ್ಳಲು ಸಲಹೆ
ಯಾವುದೇ ಅನಗತ್ಯ ಮೆಸೇಜ್, ಫೈಲ್, ವಿಡಿಯೋ ಅಥವಾ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದೆಂದು ಹೇಳಿದೆ.
ಸರ್ಕಾರಿ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಎಚ್ಚರಿಕೆ ನೀಡಿದೆ. ಇದನ್ನು ಅನುಸರಿಸಿ SBI ಸಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಸರ್ಕಾರಿ ಸೌಮ್ಯದ ಜನಪ್ರಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI Bank) ತಮ್ಮ ಕೋಟಿಗಟ್ಟಲೆ ಗ್ರಾಹಕರಿಗೆ ಪ್ರತಿ ಭಾರಿ ನೆಟ್‌ಬ್ಯಾಂಕಿಂಗ್ ವಂಚಕರಿಂದ ರಕ್ಷಿಸುವ ಗುರಿಯನ್ನು ಹೊಂದಿರುವ ಹಿನ್ನೆಲೆಯಲ್ಲಿ ಪ್ರಸ್ತುತ ದಿನಗಳಲ್ಲಿ ಹೆಚ್ಚುತ್ತಿರುವ ಹೊಸ ಮಾದರಿಯ ವಂಚನೆಯ ಬಗ್ಗೆ ಸರ್ಕಾರಿ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಎಚ್ಚರಿಕೆ ನೀಡಿದೆ. ಇದನ್ನು ಅನುಸರಿಸಿ SBI ಸಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಇದರ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮ ಚಾನೆಲ್‌ನಲ್ಲಿ ಸಂದೇಶವನ್ನು ಹಂಚಿಕೊಂಡಿದೆ. ಒಟ್ಟಾರೆಯಾಗಿ ಪ್ರಸ್ತುತ SBI Bank ನೆಟ್‌ಬ್ಯಾಂಕಿಂಗ್ ಬಳಸುವವರಿಗೆ ಖಡಕ್ ವಾರ್ನಿಂಗ್ ಜೊತೆಗೆ ಎಚ್ಚೆತ್ತುಕೊಳ್ಳಲು ಸಲಹೆ ನೀಡುವುದರೊಂದಿಗೆ ಯಾವುದೇ ಅನಗತ್ಯ ಮೆಸೇಜ್, ಫೈಲ್, ವಿಡಿಯೋ ಅಥವಾ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದೆಂದು ಹೇಳಿದೆ.
Also Read: ಫೋನ್‌ನಲ್ಲಿ ಡೇಟಾ ಖಾಲಿಯಾಗಿದ್ರು Google Maps ಬಳಸಲು ಈ 5 ಸಿಂಪಲ್ ಟಿಪ್ಸ್ ಅನುಸರಿಸಿ!
ಯಾವುದೇ ಬ್ಯಾಂಕ್ ಇಂತಹ ಸಂದೇಶಗಳನ್ನು ಕಳುಹಿಸುವುದಿಲ್ಲ!
ಭಾರತ ಸರ್ಕಾರದ ನೋಡಲ್ ಏಜೆನ್ಸಿ ಪ್ರಕಾರ ಈ ಹೊಸ ವಂಚನೆ ಏನಪ್ಪಾ ಅಂದರೆ ಬಳಕೆದಾರರಿಗೆ ನಕಲಿ ಮೆಸೇಜ್ ಮತ್ತು ಕರೆಗಳಲ್ಲಿ ನಿಮಗೆ SBI ರಿವಾರ್ಡ್‌ಗಳನ್ನು ಪಡೆದುಕೊಳ್ಳಲು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಬಳಕೆದಾರರಿಗೆ ನಕಲಿ ಲಿಂಕ್ ಜೊತೆಗಿನ ಮೆಸೇಜ್ಗಳನ್ನು ಕಳುಹಿಸುತ್ತಿದ್ದಾರೆ. ಪ್ರಸ್ತುತ SBI ಬಳಕೆದಾರರಿಗೆ ಎಚ್ಚರಿಕೆ ವಹಿಸಲು ಯಾವುದೇ ಅನಗತ್ಯ ಮೆಸೇಜ್, ಫೈಲ್, ವಿಡಿಯೋ, ಅಥವಾ ಲಿಂಕ್‌ಗಳನ್ನು ಕೋಟ್ಯಾಂತರ SBI ಬಳಕೆದಾರರಿಗೆ ಸರ್ಕಾರದಿಂದ ಖಡಕ್ ವಾರ್ನಿಂಗ್! ಅಪ್ಪಿತಪ್ಪಿಯೂ ಈ ಕ್ಲಿಕ್ ಮಾಡುವ ತಪ್ಪುಗಳನ್ನು ಮಾಡಲೇಬೇಡಿ. ಯಾಕೆಂದರೆ ಇದರ ನಂತರದ ದೂರು ನೀಡಿ ಅಲ್ಲಿ ಇಲ್ಲಿ ಅಲೆಯುವ ಬದಲು ತಪ್ಪು ಮಾಡದೆ ಎಚ್ಚರವಹಿಸುವುದು ಅತ್ಯಾವಶ್ಯವಾಗಿದೆ ಎನ್ನುತ್ತಾರೆ.
ರಿವಾರ್ಡ್‌ಗಳನ್ನು ರಿಡೀಮ್ ಮಾಡಲು ಎಸ್‌ಬಿಐ SMS ಅಥವಾ WhatsApp ಮೂಲಕ ಲಿಂಕ್‌ಗಳು ಅಥವಾ APK ಫೈಲ್‌ಗಳನ್ನು ಕಳುಹಿಸುವುದಿಲ್ಲ ಎಂದು PIB ಹೇಳುತ್ತದೆ. ಆದ್ದರಿಂದ ಇಂತಹ ವಂಚನೆಗಳಿಗೆ ಬೀಳುವುದನ್ನು ತಪ್ಪಿಸಲು ಅಪರಿಚಿತ ಸಂಖ್ಯೆಗಳಿಂದ ಬರುವ ಸಂದೇಶಗಳನ್ನು ತಪ್ಪಿಸುವಂತೆ ಸರ್ಕಾರಿ ಸಂಸ್ಥೆ ಜನರನ್ನು ಒತ್ತಾಯಿಸಿದೆ. ಈ ಸಂದೇಶಗಳು ನಿಜವಾಗಿ ಕಾಣಿಸಬಹುದು ಆದರೆ ವಾಸ್ತವದಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ಕದಿಯಲು ಈ ಸಂದೇಶಗಳನ್ನು ಕಳುಹಿಸಲಾಗುತ್ತಿದೆ.
ಏನಿದು SBI Bank ರಿವಾರ್ಡ್ ಹಗರಣ?
PIB ಹಂಚಿಕೊಂಡಿರುವ ಇಂತಹ ವಂಚನೆಯ ಸಂದೇಶದ ಸ್ಕ್ರೀನ್‌ಶಾಟ್‌ನ ಪ್ರಕಾರ ಈ ಹೊಸ ಹಗರಣದಲ್ಲಿ ಗ್ರಾಹಕರು 18,000 ರೂ.ವರೆಗಿನ SBI ನೆಟ್‌ಬ್ಯಾಂಕಿಂಗ್ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿಲ್ಲ ಎಂದು ಹೇಳುವ ಮೂಲಕ WhatsApp ನಂತಹ ಚಾನಲ್‌ಗಳ ಮೂಲಕ ಸಂದೇಶವನ್ನು ಕಳುಹಿಸಲಾಗುತ್ತದೆ. ಈ ಅಂಕಗಳು ಶೀಘ್ರದಲ್ಲೇ ಮುಕ್ತಾಯಗೊಳ್ಳುತ್ತವೆ ಎಂಬ ಎಚ್ಚರಿಕೆ ಸಂದೇಶದಲ್ಲಿದೆ ಇದರಿಂದಾಗಿ ಬಳಕೆದಾರರು ತಕ್ಷಣವೇ ಅವುಗಳನ್ನು ರಿಡೀಮ್ ಮಾಡಲು ಪ್ರಾರಂಭಿಸುತ್ತಾರೆ. ಈ ಅಂಕಗಳನ್ನು ರಿಡೀಮ್ ಮಾಡಲು SBI ರಿವಾರ್ಡ್ಸ್ ಹೆಸರಿನ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಇದು ಬಳಕೆದಾರರನ್ನು ಕೇಳುತ್ತದೆ. ಅಲ್ಲದೆ ಈ ಮೊತ್ತವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳಲಾಗಿದೆ.
ಈ ಹಗರಣ ಎಷ್ಟು ಅಪಾಯಕಾರಿ?
ನೆಟ್‌ಬ್ಯಾಂಕಿಂಗ್ ಬಳಸುವ ಬಳಕೆದಾರರು ಇದನ್ನು ಮಾಡಿದರೆ ಅವರು ತಿಳಿಯದೆ ಅಪಾಯಕಾರಿ ಸಾಫ್ಟ್‌ವೇರ್ ಅಥವಾ APK ಫೈಲ್‌ಗಳನ್ನು ಡೌನ್‌ಲೋಡ್ ಮಾಡಬಹುದು, ಅದು ಪಾಸ್‌ವರ್ಡ್‌ಗಳು, ಬ್ಯಾಂಕ್ ವಿವರಗಳು ಮತ್ತು ಇತರ ಡೇಟಾ ಸೇರಿದಂತೆ ವೈಯಕ್ತಿಕ ಮಾಹಿತಿಯನ್ನು ಕದಿಯಬಹುದು. ಅಂತಹ APK ಫೈಲ್‌ಗಳು ಸಾಧನದಿಂದ ಎಲ್ಲಾ ಡೇಟಾವನ್ನು ಸುಲಭವಾಗಿ ಕದಿಯಬಹುದು ಎಂದು ಸೈಬರ್ ಭದ್ರತಾ ತಜ್ಞರು ಎಚ್ಚರಿಸಿದ್ದಾರೆ ಇದು ಹ್ಯಾಕರ್‌ಗಳಿಗೆ ಫೋನ್‌ಗೆ ರಿಮೋಟ್ ಪ್ರವೇಶವನ್ನು ನೀಡುತ್ತದೆ. ಆದ್ದರಿಂದ ತಪ್ಪಾಗಿಯೂ ಈ ತಪ್ಪನ್ನು ಮಾಡಬೇಡಿ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile