Calls Threatening ಬಗ್ಗೆ ದೂರಸಂಪರ್ಕ ಇಲಾಖೆ (DoT) ಮೊಬೈಲ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.
ಟೆಲಿಕಾಂ ಇಲಾಖೆಯ ಹೆಸರಿನಲ್ಲಿ ಸೈಬರ್ ವಂಚಕರು ಮುಗ್ದ ಬಳಕೆದಾರರಿಗೆ ಕರೆಗಳನ್ನು ಮಾಡಲಾಗುತ್ತಿದೆ.
ಬೆದರಿಕೆ ಹಾಕುವ ಅಥವಾ ದುರುದ್ದೇಶಪೂರಿತ ಕರೆಗಳ ಶ್ರೇಣಿಯಲ್ಲಿ ನಿಮ್ಮ ನಂಬರ್ ಬಂದ್ರೆ 2 ಗಂಟೆಯಲ್ಲಿ ಬಂದ್!
Calls Threatening ಬಗ್ಗೆ ದೂರಸಂಪರ್ಕ ಇಲಾಖೆ (DoT) ಮೊಬೈಲ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಸಲಹೆಯ ಪ್ರಕಾರ ಟೆಲಿಕಾಂ ಇಲಾಖೆಯ ಹೆಸರಿನಲ್ಲಿ ಸೈಬರ್ ವಂಚಕರು ಮುಗ್ದ ಬಳಕೆದಾರರಿಗೆ ಕರೆಗಳನ್ನು ಮಾಡಲಾಗುತ್ತಿದ್ದು ಅದರಲ್ಲಿ ನಿಮ್ಮ ನಂಬರ್‌ಗಳನ್ನು ಆನ್ಲೈನ್ ವಂಚನಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ಸರ್ಕಾರ Advisory ತನಿಖೆಯಲ್ಲಿ ಕಂಡುಕೊಂಡಿದೆ. ಸಾಮಾನ್ಯ ಭಾಷೆಯಲ್ಲಿ ಬೆದರಿಕೆ ಹಾಕುವ ಅಥವಾ ದುರುದ್ದೇಶಪೂರಿತ ಕರೆಗಳ (Calls Threatening) ಶ್ರೇಣಿಯಲ್ಲಿ ನಿಮ್ಮ ನಂಬರ್ ಬಂದ್ರೆ ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯ ಸೇವೆಗಳನ್ನು ಕೇವಲ 2 ಗಂಟೆಗಳಲ್ಲಿ ಕಡಿತಗೊಳಿಸಲಾಗುತ್ತದೆಂದು DoT ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.
ನಿಮ್ಮ Number ಮತ್ತು Aadhaar ಎಲ್ಲೆಲ್ಲಿ ನೀಡಲಾಗಿದೆ ಕಂಡುಕೊಳ್ಳಿ!
ನಿಮ್ಮ ಪ್ರಸ್ತುತ ಸಿಮ್ ಕಾರ್ಡ್ ಅಥವಾ ಮೊಬೈಲ್ ನಂಬರ್ ಅನ್ನು ನೀವು ಎಲ್ಲೆಲ್ಲಿ ನೀಡಿದ್ದಿರ ಎಂಬುವುದರ ಬಗ್ಗೆ ನಿಮಗೆ ಮಾಹಿತಿ ಇರಲಿ. ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಇದೆ ಎಂಬುದನ್ನು ತಿಳಿಯಲು https://tafcop.dgtelecom.gov.in/ ಲಿಂಕ್ ಅನ್ನು ಅನುಸರಿಸಿ ತಿಳಿಯಬಹುದು. ಮತ್ತು ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಸಲಾಗುತ್ತಿದೆ ಎಂಬುದನ್ನು ತಿಳಿಯಲು https://uidai.gov.in/ ಲಿಂಕ್ ಕ್ಲಿಕ್ ಮಾಡಿ My Aadhaar ಆಯ್ಕೆ ಮಾಡಿ Aadhaar Update History ಆಯ್ಕೆ ಮಾಡಿ ಅನುಸರಿಸಬಹುದು.
ಇದರೊಂದಿಗೆ ನಿಮ್ಮ ಯಾವುದಾದರು ಫೋನ್ ಕಳುವಾಗಿದ್ದರೆ ಅಥವಾ ಸಿಮ್ ಕಾರ್ಡ್ ಡ್ಯಾಮೇಜ್ ಎಂದು ನಿರ್ಲಕ್ಷಿಸಿ ನಿಮ್ಮ ಟೆಲಿಕಾಂ ಪೂರೈಕೆದಾರರಿಂದ ಬಂದ್ ಮಾಡದೇ ಬಿಟ್ಟಿದರೆ ಇಂದೇ ಬಂದ್ ಮಾಡಿಸಿ. ಇಂತಹ ಪರಿಸ್ಥಿಯಲ್ಲಿ ನಿಮ್ಮ ನಂಬರ್ ಅನ್ನು ನಿಮಗೆ ಅರಿವಿಲ್ಲದೆ ಸೈಬರ್ ವಂಚನೆಗೆ ಬಳಸಬಹುದು. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯ ಸಂಪರ್ಕ (Calls Threatening) ಅಡಿಯಲ್ಲಿ ಕಡಿತಗೊಳಿಸುವ ಅವಕಾಶಗಳಿವೆ. ಇದರಿಂದ ನೀವು ಪೊಲೀಸ್ ಸ್ಟೇಷನ್ ಮತ್ತು ಕೋರ್ಟ್ ಮೆಟ್ಟಿಲನ್ನು ಏರಬೇಕಾಗಬಹುದು. ಇದರಿಂದ ನಿಮ್ಮ ಶಾಂತಿ ಮತ್ತು ನೆಮ್ಮದಿಯ ಜೀವನದಲ್ಲಿ ಹೇಳದೆ ಕೇಳದೆ ಬಿರುಗಾಳಿ ಏಳಬಹುದು.
ಈ Calls Threatening ಸಂಖ್ಯೆಗಳೊಂದಿಗೆ ಜಾಗರೂಕರಾಗಿರಿ
ದೂರಸಂಪರ್ಕ ಇಲಾಖೆ (DoT) Advisory ವರದಿಯನ್ನು ನಂಬುವುದಾದರೆ ವಿದೇಶಿ ಮೊಬೈಲ್ ಸಂಖ್ಯೆಗಳನ್ನು ಈ ಕೆಲಸಕ್ಕಾಗಿ ಹೆಚ್ಚಾಗಿ ಬಳಸಲಾಗುತ್ತಿದೆ. ಜೊತೆಗೆ ಈಗ WhatsApp ಕರೆಗಳು ಈ ಸಂಖ್ಯೆಗಳಿಂದ ಮಾಡಲಾಗುತ್ತಿದೆ. ಸರ್ಕಾರದ ಸಲಹೆಯ ಪ್ರಕಾರ ವಂಚಕರು ನಂಬರ್‌ಗಳನ್ನು ಬ್ಲಾಕ್ ಮಾಡುವುದಾಗಿ ಬೆದರಿಕೆ ಹಾಕಿ ಜನರ ವೈಯಕ್ತಿಕ ಮಾಹಿತಿಯನ್ನು ಕದಿಯುವ ಮೂಲಕ ಬ್ಯಾಂಕಿಂಗ್ ವಂಚನೆ ಮಾಡುತ್ತಿರುವುದನ್ನು ನೀವು ಪ್ರತಿದಿನ ಪೇಪರ್ ಮತ್ತು ಟಿವಿಯಲ್ಲಿ ಕೇಳುತ್ತಿರಬಹುದು ಇದರ ಬಗ್ಗೆ ಕೊಂಚ ಹೆಚ್ಚು ಗಮನವಿರಲಿ.
ಇಂತಹ ಸಂದೇಶಗಳು ಮತ್ತು ಕರೆಗಳ ಬಗ್ಗೆ ಜಾಗರೂಕರಾಗಿರಿ.
ನೀವು ಅಂತಹ ಕರೆಗಳು ಅಥವಾ ಸಂದೇಶಗಳನ್ನು ಸ್ವೀಕರಿಸಿದರೆ ನೀವು ಅದನ್ನು ಸಂಚಾರ ಸಥಿ ಪೋರ್ಟಲ್‌ನ (www.sancharsathi.gov.in) ‘ಐ-ರಿಪೋರ್ಟ್ ಶಂಕಿತ ವಂಚನೆ ಸಂವಹನ’ ವೈಶಿಷ್ಟ್ಯದಲ್ಲಿ ವರದಿ ಮಾಡಬೇಕು.
ಸಂಚಾರ್ ಸಾಥ್‌ನ ನಿಮ್ಮ ಮೊಬೈಲ್ ಸಂಪರ್ಕಗಳನ್ನು ತಿಳಿಯಿರಿ ಸೇವೆಯ ಸಹಾಯದಿಂದ ನೋಂದಾಯಿತ ಮೊಬೈಲ್ ಸಂಪರ್ಕಗಳನ್ನು ಪರಿಶೀಲಿಸಬಹುದು ಮತ್ತು ಅಂತಹ ಸಂಖ್ಯೆಗಳನ್ನು ನಿರ್ಬಂಧಿಸಬಹುದು.
ಬ್ಯಾಂಕಿಂಗ್ ವಂಚನೆಯ ಸಂದರ್ಭದಲ್ಲಿ ಸೈಬರ್-ಕ್ರೈಮ್ ಸಹಾಯವಾಣಿ ಸಂಖ್ಯೆ 1920 ಗೆ ಕರೆ ಮಾಡಿ ಮತ್ತು ಸಂದೇಶ ಕಳುಹಿಸುವ ಮೂಲಕ ದೂರು ಸಲ್ಲಿಸಬಹುದು. ಅಥವಾ ನೀವು www.cybercrime.gov.in ನಿಂದ ವರದಿ ಮಾಡಬಹುದು.
ಇದಲ್ಲದೆ ನೀವು ಬಯಸಿದರೆ ನೀವು ಫೋನ್‌ನಿಂದ ನೇರವಾಗಿ ಅಂತಹ ಕರೆಗಳು ಮತ್ತು ಸಂದೇಶಗಳನ್ನು ನಿರ್ಬಂಧಿಸಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile