ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿಯನ್ನು ಹೊಂದಿರುವ ಬಳಕೆದಾದರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿಯನ್ನು ನೀಡಿದೆ. ಪಡಿತರ ಚೀಟಿ ಹೊಂದಿರುವವರೆಲ್ಲರೂ ಪಡಿತರ ಚೀಟಿಯನ್ನು ಆಧಾರ್ ಕಾರ್ಡ್‌ನೊಂದಿಗೆ ಜೋಡಿಸಲು ಕೇಂದ್ರ ಸರಕಾರದಿಂದ ಈಗಾಗಲೇ ನಿಗದಿತ ದಿನಾಂಕವನ್ನು ಘೋಷಿಸಲಾಗಿತ್ತು. ಅಂದ್ರೆ ಈ ಹಿಂದೆ ಪಡಿತರ ಚೀಟಿ ಹೊಂದಿರುವ ಪ್ರತಿಯೊಬ್ಬರೂ ತಮ್ಮ ಪಡಿತರ ಚೀಟಿಯನ್ನು ತಮ್ಮ ಆಧಾರ್ ಕಾರ್ಡ್‌ನೊಂದಿಗೆ ಮಾರ್ಚ್ 31 ರೊಳಗೆ ಲಿಂಕ್ ಮಾಡಿಕೊಳ್ಳಬೇಕು ಎಂದು ಕೇಂದ್ರ ಹೇಳಿತ್ತು ಆದರೆ ಈಗ ಈ ವಿಷಯದಲ್ಲಿ ಕೇಂದ್ರ ಸರ್ಕಾರ ಮತ್ತಷ್ಟು ಸಮಯವನ್ನು ನೀಡುತ್ತಿದೆ. ಅಂದರೆ ಈಗ ನಿಮ್ಮ ರೇಷನ್ ಕಾರ್ಡ್ ಅನ್ನು ನಿಮ್ಮ ಆಧಾರ್ ಜೊತೆಗೆ ಲಿಂಕ್ ಮಾಡಲು ಜೂನ್ 30 ರವರೆಗೆ ವಿಸ್ತರಿಸಿ ಮತ್ತಷ್ಟು ಸಮಯವನ್ನು ಕಲ್ಪಿಸಿದೆ.
ಪಡಿತರ ಚೀಟಿಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು Ration Card ಹೊಂದಿರುವ ಜನರು ಮಾಡಲೇಬೇಕಾದ ಅನಿವಾರ್ಯವಾಗಿದೆ. ಏಕೆಂದರೆ ಸರಕಾರದಿಂದ ಬರುವ ಸೌಲಭ್ಯವನ್ನು ಯಾರಿಗೆ ಸೇರಬೇಕೋ ಅವರಿಗೆ ಸೇರಲು ಇದೊಂದು ಸರಿಯಾದ ಮಾರ್ಗವಾಗಿದೆ ಎಂದು ಕೇಂದ್ರವು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಸರ್ಕಾರದಿಂದ ಪೂರೈಸುವ ಅಗತ್ಯ ವಸ್ತುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪುತ್ತದೆ ಎಂದು ಖಚಿತಪಡಿಸಿಕೊಳ್ಳಲು. ಇದರಿಂದ ನಕಲಿ ಪಡಿತರ ಚೀಟಿಗಳನ್ನು ಸಂಪೂರ್ಣವಾಗಿ ತಡೆಯಬಹುದು. ಹೀಗಾಗಿ, ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡುವುದರಿಂದ ತಪ್ಪನ್ನು ಸರಿಪಡಿಸಲಾಗಿದೆ. ಆದರೆ, ಜನರಿಗೆ ತೊಂದರೆಯಾಗದಂತೆ ಗಡುವನ್ನು ವಿಸ್ತರಿಸಿದೆ.
ವಾಸ್ತವವಾಗಿ ನೀವು ಆನ್‌ಲೈನ್‌ನಲ್ಲಿ ನಿಮ್ಮ ಪಡಿತರ ಚೀಟಿಯೊಂದಿಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಸುಲಭವಾಗಿ ಲಿಂಕ್ ಮಾಡಬಹುದು. PDS ಪೋರ್ಟಲ್ (ಸಾರ್ವಜನಿಕ ವಿತರಣಾ ವ್ಯವಸ್ಥೆ) ಪೋರ್ಟ್ ತೆರೆಯಿರಿ ಮತ್ತು ನಿಮ್ಮ ಪಡಿತರ ಕಾರ್ಡ್ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ ಮತ್ತು ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ. ಅದರ ನಂತರ ನೀವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ಮೇಲೆ ಸ್ವೀಕರಿಸಿದ OTP ಸಂಖ್ಯೆಯನ್ನು ನಮೂದಿಸಿ ಮತ್ತು ಸಲ್ಲಿಸುವ ಮೂಲಕ ನಿಮ್ಮ ಪಡಿತರ ಚೀಟಿಯೊಂದಿಗೆ ನಿಮ್ಮ ಆಧಾರ್ ಅನ್ನು ಲಿಂಕ್ ಮಾಡಬಹುದು.