ಕಳ್ಳತನವಾದ ಫೋನನ್ನು Block ಮತ್ತು Track ಮಾಡಲು ಸರ್ಕಾರ ಈ ವಿಶೇಷ ವೆಬ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ

Updated on 31-Dec-2019
HIGHLIGHTS

ಈಗಾಗಲೇ ಇದಕ್ಕಾಗಿಯೇ ಹಲವಾರು ಅಪ್ಲಿಕೇಶನ್ಗಳು ಆನ್ಲೈನ್ ಅಥವಾ ಪ್ಲೇ ಸ್ಟೋರ್ಗಳಲ್ಲಿ ಲಭ್ಯವಿದೆ.

ಈ ಮೂಲಕ ನಿಮ್ಮ ಮೊಬೈಲ್ ಯಾರದ್ದೇ ಕೈಗೆ ಸಿಕ್ಕಿದರೂ ಕೂಡ ಅದನ್ನು ಬಳಸಲು ಅಸಾಧ್ಯವಾಗುವಂತೆ ಮಾಡಲಾಗುತ್ತದೆ.

ಹೊಸದಾಗಿ C-DOT ಅಂದ್ರೆ (Centre for Development of Telematics) ಜನಸಾಮಾನ್ಯರಿಗಾಗಿ ಸಿಹಿಸುದ್ದಿಯನ್ನು ನೀಡಿದೆ. ಜನರು ತಮ್ಮ ಫೋನ್ಗಳನ್ನು ಕಳೆದುಕೊಂಡಿದ್ದಲ್ಲಿ ಅಥವಾ ಫೋನ್ ಕಳ್ಳತನವಾಗಿದ್ದಲ್ಲಿ ಅದನ್ನು ಟ್ರ್ಯಾಕ್ ಮಾಡಲು ಕೇಂದ್ರ ಸರ್ಕಾರ ಸೆಂಟ್ರಲ್ ಎಕ್ಯೂಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ (CEIR) ಹೆಸರಿನ ವೆಬ್ ಪೋರ್ಟಲ್'ನ್ ಅನ್ನು ಪ್ರಾರಂಭಿಸಿದೆ. ಇದನ್ನು ಕಮ್ಯುನಿಕೇಷನ್ ಮಿನಿಸ್ಟರ್ ಆಗಿರುವ ರವಿ ಶಂಕರ ಪ್ರಸಾದ್ ಇದೇ ತಿಂಗಳ ಅಂದ್ರೆ 6ನೇ ಡಿಸೆಂಬರ್ 2019 ರಲ್ಲಿ ಅಧಿಕೃತವಾಗಿ ಘೋಷಿಸಿದ್ದರು. ಈಗಾಗಲೇ ಇದಕ್ಕಾಗಿಯೇ ಹಲವಾರು ಅಪ್ಲಿಕೇಶನ್ಗಳು ಆನ್ಲೈನ್ ಅಥವಾ ಪ್ಲೇ ಸ್ಟೋರ್ಗಳಲ್ಲಿ ಲಭ್ಯವಿದೆ. ಆದರೆ CEIR ಕೇಂದ್ರ ಸರ್ಕಾರದ ಪ್ಲಾಟ್ಫಾರಂ ಆಗಿದ್ದು ಹೆಚ್ಚು ಸುರಕ್ಷಿತ ಮತ್ತು ಕಾನೂನು ಬದ್ಧವಾಗಲಿದೆ.

ಒಂದು ವೇಳೆ ನೀವು ನಿಮ್ಮ ಡಿವೈಸ್ ಕಳೆದುಕೊಂಡರೆ ಮೊದಲಿಗೆ ಡಿಪಾರ್ಟ್ಮೆಂಟ್ ಆಫ್ ಟೆಲಿಕಮ್ಯುನಿಕೇಷನ್ ಅಲ್ಲಿ FIR ಕಂಪ್ಲೇಂಟ್ ದಾಖಲಿಸಬೇಕಾಗುತ್ತದೆ. ಇದಕ್ಕಾಗಿ ನೀವು 14422 ಸಹಾಯವಾಣಿ ನಂಬರ್ಗೆ ಕರೆ ಮಾಡಬವುದು. ಇಲ್ಲಿ ಒಮ್ಮೆ FIR ದೂರು ದಾಖಲಾದ ನಂತರ  ಡಿಪಾರ್ಟ್ಮೆಂಟ್ ಆಫ್ ಟೆಲಿಕಮ್ಯುನಿಕೇಷನ್ ನಿಮ್ಮ IMEI ಸಂಖ್ಯೆಯನ್ನು ಗುರುತಿಸಿ ಬ್ಲ್ಯಾಕ್ ಲಿಸ್ಟ್ ಮಾಡುತ್ತದೆ. ಇದು ನಿಮ್ಮ ಮೊಬೈಲ್ ಯಾರದ್ದೇ ಕೈಗೆ ಸಿಕ್ಕಿದರೂ ಕೂಡ ಅದನ್ನು ಬಳಸಲು ಅಸಾಧ್ಯವಾಗುವಂತೆ ಮಾಡಲಾಗುತ್ತದೆ. ಅಂದರೆ ಅವರು ಮೊಬೈಲ್ ಮೂಲಕ ಯಾವುದೇ ಮೊಬೈಲ್ ನೆಟ್ ವರ್ಕ್ ಬಳಸಲು ಅಸಾಧ್ಯವಾಗುವಂತೆ ಮಾಡುತ್ತದೆ.

 

ಈ ಹೊಸ ಪ್ರಕಟಣೆಯ ಮೂಲಕ ನಿಮ್ಮ ಕಳೆದು ಹೋದ ಅಥವಾ ಕಳ್ಳತನವಾದ ಫೋನ್ ಪಕ್ಕ ಸಿಕ್ಕೇ ಸಿಗುತ್ತೇ ಅನ್ನೋ ಭರವಸೆ ನೀಡದಿದ್ದರೂ   ಸಿಕ್ಕಿದವರು ಬೇರೆಯವರಿಗೆ ಮಾರುವುದಾಗಲಿ ಅಥವಾ ಸ್ವತಃ ಅವರೇ ಬಳಸುವುದಕ್ಕೆ ಅಸಾಧ್ಯ. ಈ ಮೂಲಕ ನಿಮ್ಮ ಪರ್ಸನಲ್ ಡೇಟಾ ಸುರಕ್ಷಿತವಾಗಿರುವಂತೆ ಮಾಡುತ್ತದೆ. ಇದರೊಂದಿಗೆ ನಿಮ್ಮ ಸಿಮ್ ಕಾರ್ಡ್ ಆಪರೇಟರ್ ಕೂಡ ಇದೇ IMEI ಸಂಖ್ಯೆಯನ್ನು ಬಳಸಿ ನಿಮ್ಮ ಫೋನನ್ನು ಬ್ಲ್ಯಾಕ್ ಲಿಸ್ಟ್ ಮಾಡುತ್ತದೆ. ಕಳೆದು ಹೋದ ನಿಮ್ಮ ಫೋನನ್ನು ದೇಶದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಟ್ರ್ಯಾಕ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. 

ಒಂದು ವೇಳೆ ನಿಮ್ಮ ಕದಿಯಲ್ಪಟ್ಟ ಡಿವೈಸ್ ನ್ನು ಆಕ್ಟಿವೇಟ್ ಮಾಡುವುದಕ್ಕೆ ಯಾರೇ ಪ್ರಯತ್ನಿಸಿದರೂ ಕೂಡ ಟೆಲಿಕಾಂ ಆಪರೇಟರ್ಗಳು ಅದನ್ನು ಗುರುತಿಸಿ ಪೋಲೀಸರಿಗೆ ಅಲರ್ಟ್ ನೀಡುತ್ತಾರೆ. ಕಳೆದು ಹೋದ ಡಿವೈಸನ್ನು ಟ್ರೇಸ್ ಮಾಡುವುದಕ್ಕೆ ಬಹಳ ಪ್ರಯೋಜನಕಾರಿಯಾಗಿದ್ದು ಇದರೊಂದಿಗೆ ಭಾರತೀಯ ಟೆಲೆಕಾಂಗಳು ಸಹ ಕಳೆದು ಹೋದ ಡಿವೈಸ್ಗಳನ್ನು ಪುನಃ ಹುಡುಕುವ ನಿಟ್ಟಿನಲ್ಲಿ ಡಿಪಾರ್ಟ್ಮೆಂಟ್ ಆಫ್ ಟೆಲಿಕಮ್ಯುನಿಕೇಷನ್ಗೆ ಸಹಾಯ ಮಾಡಲಿವೆ. ಒಟ್ಟಿನಲ್ಲಿ ಸರ್ಕಾರದ ಈ ಯೋಜನೆಯಿಂದಾಗಿ ನಮ್ಮ ನಿಮ್ಮೇಲ್ಲರ ಡಿವೈಸ್ಗಳಿಗೆ ಹೆಚ್ಚು ಸೆಕ್ಯೂರಿಟಿ ದೊರೆಯಲಿದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :