ಭಾರತದಲ್ಲಿ ಕೊನೆಗೂ ಅತಿ ನಿರೀಕ್ಷಿತವಾದ ಈ ಗೂಗಲ್ ವಾಲೆಟ್ (Google Wallet) ಸೇವೆಯನ್ನು ಅನ್ನು ಪ್ರಾರಂಭಿಸಲಾಗಿದೆ.
ಗೂಗಲ್ ವಾಲೆಟ್ (Google Wallet) ಫೀಚರ್ ಯಾರ್ಯಾರಿಗೆ ಲಭ್ಯ ಮತ್ತು ಇದು ಹೇಗೆ ಕೆಲಸ ಮಾಡುತ್ತದೆ ತಿಳಿಯಿರಿ.
ಈ ಗೂಗಲ್ ವಾಲೆಟ್ (Google Wallet) ಮೂಲಕ ಪ್ರಸ್ತುತ ಯಾವುದೇ ಹಣಕಾಸು ವಹಿವಾಟು ನಡೆಯಲು ಸಾಧ್ಯವಿಲ್ಲ.
Google Wallet launched in India 2024: ಭಾರತದಲ್ಲಿ ಕೊನೆಗೂ ಅತಿ ನಿರೀಕ್ಷಿತವಾದ ಈ ಗೂಗಲ್ ವಾಲೆಟ್ (Google Wallet) ಸೇವೆಯನ್ನು ಅನ್ನು ಪ್ರಾರಂಭಿಸಲಾಗಿದೆ. ಗೂಗಲ್ ಈ ಡಿಜಿಟಲ್ ವ್ಯಾಲೆಟ್ ಅಪ್ಲಿಕೇಶನ್ ಅನ್ನು ಮೊದಲ ಬಾರಿಗೆ ಅಮೆರಿಕಾದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿತು. ಈಗ ಭಾರತಕ್ಕೆ ಕಾಲಿಟ್ಟಿದೆ. ಭಾರತದ ಆಸಕ್ತರು Google Play Store ಮೂಲಕ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಗೂಗಲ್ ವಾಲೆಟ್ (Google Wallet) ಸುರಕ್ಷಿತ ಮತ್ತು ಪ್ರೈವೇಟ್ ಡಿಜಿಟಲ್ ವ್ಯಾಲೆಟ್ ಆಗಿದ್ದು ಬಳಕೆದಾರರು ತಮ್ಮ ಎಲ್ಲ ಅಗತ್ಯಗಳನ್ನು ಒಂದೇ ಸ್ಥಳದಲ್ಲಿ ಸುಲಭವಾಗಿ ಪಡೆಯಲು ಅನುಮತಿಸುತ್ತದೆ. ಈ ಗೂಗಲ್ ವಾಲೆಟ್ (Google Wallet) ಫೀಚರ್ ಯಾರ್ಯಾರಿಗೆ ಲಭ್ಯ ಮತ್ತು ಇದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಯಿರಿ.
ಹೊಸ Google Wallet ಮತ್ತು Google Pay ನಡುವಿನ ವ್ಯತ್ಯಾಸವೇನು?
ಈಗ ಸಾಮಾನ್ಯವಾಗಿ Google Pay ಉಳಿದವುಗಳಿಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ತಿಳಿಯುವುದು ಬಹು ಮುಖ್ಯವಾಗಿದೆ. ಇದರಲ್ಲಿ ನೀವು ನಿಮ್ಮ ಬೋರ್ಡಿಂಗ್ ಪಾಸ್, ಟಿಕೆಟ್ ಮತ್ತು ಹೆಚ್ಚಿನದನ್ನು ಇರಿಸಬಹುದು ಅಷ್ಟೇ ಅಂದ್ರೆ ಈಗಾಗಲೇ ಭಾರತೀಯರು ವಾಲೆಟ್ (Wallet) ಅಂದ್ರೆ ಹಣಕಾಸು ವಹಿವಾಟು ಮಾಡುವ ಮತ್ತೊಂದು ಪ್ಲಾಟ್ಫಾರ್ಮ್ ಎಂದುಕೊಳ್ಳುವುದು ತಪ್ಪಾದರೂ ಈವರೆಗೆ ಸಾಮಾನ್ಯವಾಗಿ ನಾವೆಲ್ಲ ಇದನ್ನೇ ಕೇಳಿರುವುದು. ಹೆಚ್ಚು ಜನಪ್ರಿಯವಾದ Paytm Wallet ಬಳಕೆಯ ಕಾರಣ ಇಂದಿಗೂ ನಮ್ಮ ನೆನಪಿಗೆ ವಾಲೆಟ್ ಅಂದ್ರೆ ಅದೇ ಸನ್ನಿವೇಶ ಭಾಷಾವಾಗುತ್ತದೆ.
ಆದರೆ ಈ ಗೂಗಲ್ ವಾಲೆಟ್ (Google Wallet) ಮೂಲಕ ಪ್ರಸ್ತುತ ಯಾವುದೇ ಹಣಕಾಸು ವಹಿವಾಟು ನಡೆಯಲು ಸಾಧ್ಯವಿಲ್ಲ. ಅದಕ್ಕಾಗಿ ನೀವು ಪ್ರಸ್ತುತ ಲಭ್ಯವಿರುವ Google Pay ಅಪ್ಲಿಕೇಶನ್ ಅನ್ನು ಬಳಸಬಹುದು. ಗೂಗಲ್ ವಾಲೆಟ್ (Google Wallet) ಸುರಕ್ಷಿತ ಮತ್ತು ಪ್ರೈವೇಟ್ ಡಿಜಿಟಲ್ ವ್ಯಾಲೆಟ್ ಆಗಿದ್ದು ನಿಮ್ಮ ಪ್ರಮುಖ ಕಾರ್ಡ್‌ಗಳು, ಟಿಕೆಟ್‌ಗಳು, ಪಾಸ್‌ಗಳು ಮತ್ತು ID ಕಾರ್ಡ್ಗಳನ್ನು ಅಂದ್ರೆ ನಿಮ್ಮ ಪ್ರಮುಖ ವಿಷಯಗಳನ್ನು ಜೋಪಾನವಾಗಿಡಲು ನಿಮ್ಮ ಪಾಕೆಟ್‌ನಂತೆ ಕಾರ್ಯನಿರ್ವಹಿಸುತ್ತದೆ ಅಷ್ಟೇ.
Google Wallet ಅಪ್ಲಿಕೇಶನ್ ಮೂಲಕ ನೀವು ಏನೇನು ಮಾಡಬಹುದು?
ನೀವು ಪ್ರಯಾಣಿಸುವಾಗ ನಿಮ್ಮ ಮೊಬೈಲ್ ಬೋರ್ಡಿಂಗ್ ಪಾಸ್ ಅನ್ನು ಸುಲಭವಾಗಿ ತೋರಿಸಲು ಸ್ಕ್ರೀನ್‌ಶಾಟ್ ತೆಗೆದುಕೊಳ್ಳುವ ಮೂಲಕ ಮತ್ತು “Add to Google Wallet” ಅನ್ನು ಒತ್ತುವ ಮೂಲಕ ನಿಮ್ಮ ನಿಮ್ಮ ಪಿಕ್ಸೆಲ್ ಫೋನ್‌ನಲ್ಲಿಯೇ ನಿಮ್ಮ ಬೋರ್ಡಿಂಗ್ ಪಾಸ್ ಅನ್ನು ಇರಿಸಿಕೊಳ್ಳಬಹುದು. ಅಲ್ಲದೆ ನೀವು ಫ್ಲಿಪ್‌ಕಾರ್ಟ್, ಅಮೆಜಾನ್, ಡೊಮಿನೋಸ್ ಮತ್ತು ಶಾಪರ್ಸ್ ಸ್ಟಾಪ್‌ನಂತಹ ಬ್ರ್ಯಾಂಡ್‌ಗಳ ಕಾರ್ಡ್‌ಗಳು ಈಗ ನಿಮ್ಮ ಫೋನ್‌ನಲ್ಲಿ ಉಳಿಯಬಹುದು. ಇದರೊಂದಿಗೆ ಇನ್ಮೇಲೆ ಕಚೇರಿಗೆ ಹೋಗಲು ಪ್ರತ್ಯೇಕ ಗುರುತಿನ ಚೀಟಿಯನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ.
ನೀವು Google Wallet ನಲ್ಲಿ ಸಂಗ್ರಹಿಸಬಹುದಾದ ಪಾಸ್ ಅನ್ನು ರಚಿಸಲು ಯಾವುದೇ ಏರ್‌ಲೈನ್ ಬೋರ್ಡಿಂಗ್ ಪಾಸ್, ಲಗೇಜ್ ಟ್ಯಾಗ್ ಅಥವಾ ಪಾರ್ಕಿಂಗ್ ರಶೀದಿಯ ಫೋಟೋ ತೆಗೆದುಕೊಳ್ಳಬಹುದು. ಅಲ್ಲದೆ ನೀವು Gmail ಮೂಲಕ Smart Personalization ಫೀಚರ್ ಆನ್ ಮಾಡಿ ಚಲನಚಿತ್ರ ಮತ್ತು ರೈಲು ಟಿಕೆಟ್ ದೃಢೀಕರಣಗಳು ನಿಮ್ಮ ಗೂಗಲ್ ವಾಲೆಟ್ (Google Wallet) ನೇರವಾಗಿ ಕಾಣಬಹುದು.
ಗೂಗಲ್ ವಾಲೆಟ್ ಅಪ್ಲಿಕೇಶನ್ ಬಳಸುವ ಬಳಕೆದಾರರು ಹೇಳುವುದೇನು?
ಪ್ರಸ್ತುತ ಈ ಮಾಹಿತಿಯನ್ನು ನೀವು ಗೂಗಲ್ ಪ್ಲೇ ಸ್ಟೋರ್ ಭೇಟಿ ನೀಡುವ ಮೂಲಕ ಗೂಗಲ್ ವಾಲೆಟ್ (Google Wallet) ಕೆಳಗೆ ಈಗಾಗಲೇ ಈ ಅಪ್ಲಿಕೇಶನ್ ಬಳಸುವ ಬಳಕೆದಾರರು ಹೇಳುವುದೇನು ಎನ್ನುವುದನ್ನು ರಿವ್ಯೂ ವಿಭಾಗದಲ್ಲಿ ಓದಬಹುದು. ಈ ಮೂಲಕ ಈ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಮೊದಲು ಒಂದು ನಿಮಿಷ ಯೋಚಿಸಲು ನಿಮ್ಮನ್ನು ನಿಲ್ಲಿಸುತ್ತದೆ. ಯಾಕೆಂದರೆ ಈ ಗೂಗಲ್ ವಾಲೆಟ್ (Google Wallet) ಅಪ್ಲಿಕೇಶನ್ ಮೂಲಕ ನಿಮ್ಮೆಲ್ಲ ದಾಖಲೆ ಮತ್ತು ಕಾರ್ಡ್ ಮಾಹಿತಿಯನ್ನು ಇಲ್ಲಿ ಇಡುವುದರೊಂದಿಗೆ ಗೂಗಲ್ ನಿಮ್ಮನ್ನು ಪೂರ್ತಿಯಾಗಿ ಟ್ರ್ಯಾಕ್ ಮಾಡಬಹುದು.
ನಿಮಗೆ ಹೆಚ್ಚು ಭಯಪಡಿಸುವ ಮತ್ತೊಂದು ವಿಷಯವೆಂದರೆ ಒಂದು ವೇಳೆ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಕಳ್ಳತನವಾದರೆ ಕೇವಲ ಫೋನ್ ಲಾಕ್ ಅನ್ನು ಅನ್ಲಾಕ್ ಮಾಡಿದರೆ ಸಾಕು ನೇರವಾಗಿ ನಿಮ್ಮ ಖಾತೆಗಳಿಗೆ ಕೈ ಹಾಕಬಹುದು. ಯಾಕೆಂದರೆ ಗೂಗಲ್ ವಾಲೆಟ್ (Google Wallet) ಪ್ರಸ್ತುತ ಯಾವುದೇ ಪಿನ್ ಲಾಕ್ ಅಥವಾ ಬಯೊಮೀಟ್ರಿಕ್ ಫೀಚರ್ಗಳನ್ನು ಹೊಂದಿಲ್ಲವೆಂದು ಬಳಕೆದಾರರು ಹೇಳಿಕೊಂಡಿದ್ದಾರೆ. ಆದ್ದರಿಂದ ಗೂಗಲ್ ತಂದಿರುವ ಈ ಹೊಸ ಗೂಗಲ್ ವಾಲೆಟ್ (Google Wallet) ಸೇವೆಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳೇನು ಕಾಮೆಂಟ್ ಮಾಡಿ ತಿಳಿಸಿಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile