Gold Price Today: ಇಂದು ಚಿನ್ನದ ಬೆಲೆ ಕಡಿಮೆ! ಬೆಳ್ಳಿಯ ಬೆಲೆ ಏರಿಕೆ, ಹೊಸ ದರಗಳನ್ನು ಪರಿಶೀಲಿಸಿ

Gold Price Today: ಇಂದು ಚಿನ್ನದ ಬೆಲೆ ಕಡಿಮೆ! ಬೆಳ್ಳಿಯ ಬೆಲೆ ಏರಿಕೆ, ಹೊಸ ದರಗಳನ್ನು ಪರಿಶೀಲಿಸಿ
HIGHLIGHTS

Gold Price Today: ಇನ್ನು ಮೂರ್ನಾಲ್ಕು ತಿಂಗಳ ಅಂತ್ಯದವರೆಗೂ ಇನ್ನು ಶುಭ ಸಮಾರಂಭಗಳದ್ದೇ ಕಾರುಬಾರು.

ಭಾರತದಲ್ಲಿ ಬೆಳ್ಳಿಯ ಬೆಲೆ ಕೂಡ (Silver Price) ನಿನ್ನೆಗಿಂತಲೂ ಇಂದು 1,800 ರೂಗಳಿಗೆ ಇಳಿಕೆ ಕಂಡಿದೆ.

ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಚಿನ್ನದ ಬೆಲೆಯ ಹೆಚ್ಚಳ

Gold Price Today: ಇನ್ನು ಮೂರ್ನಾಲ್ಕು ತಿಂಗಳ ಅಂತ್ಯದವರೆಗೂ ಇನ್ನು ಶುಭ ಸಮಾರಂಭಗಳದ್ದೇ ಕಾರುಬಾರು. ಹೀಗಾಗಿ ನೀವೇನಾದರೂ ಚಿನ್ನ ಖರೀದಿಸಲು ಯೋಚಿಸಿದ್ದರೆ ಅದಕ್ಕೆ ಇದು ಸಕಾಲ. ಯಾಕೆಂದರೆ ಒಂದೇ ದಿನದಲ್ಲಿ 10 ಗ್ರಾಂ ಚಿನ್ನಕ್ಕೆ 1,750 ರೂ. ಕುಸಿತವಾಗಿದೆ. ಭಾರತದಲ್ಲಿ ಬೆಳ್ಳಿಯ ಬೆಲೆ ಕೂಡ (Silver Price) ನಿನ್ನೆಗಿಂತಲೂ ಇಂದು 1,800 ರೂಗಳಿಗೆ ಇಳಿಕೆ ಕಂಡಿದೆ. ಹೀಗಾಗಿ ಬಂಗಾರ ಖರೀದಿಸಲು ಬಯಸುವವರಿಗೆ ಇದು ಸರಿಯಾದ ಸಮಯ. ಹೈದರಾಬಾದ್, ಕೊಲ್ಕತ್ತಾ, ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ ಸೇರಿ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ. ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಆಮದು ಕಡಿಮೆಯಾಗುವ ಭೀತಿಯೂ ಚಿನ್ನದ ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ.

ಚಿನ್ನ ಮತ್ತು ಬೆಳ್ಳಿಯ ದರಗಳು – 24 ಮಾರ್ಚ್ 2022

ಇಂದು ಚಿನ್ನದ ದರಗಳು, 24 ಮಾರ್ಚ್ 2022 ರಂದು ರಾಜಧಾನಿ ದೆಹಲಿ, ಬೆಂಗಳೂರು, ಚೆನ್ನೈ, ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಚಿನ್ನದ ದರಗಳು ಇಳಿಕೆಯಾಗಿದೆ. ಇದರ ಕ್ರಮವಾಗಿ ಬೆಳ್ಳಿಯ ಇಂದಿನ ದರಗಳನ್ನು ನೋಡುವುದಾದರೆ ದೆಹಲಿ, ಬೆಂಗಳೂರು, ಕೋಲ್ಕತ್ತಾ ಮತ್ತು ಮುಂಬೈನಲ್ಲಿ 68,500 ಮತ್ತು ಚೆನ್ನೈನಲ್ಲಿ ಬೆಳ್ಳಿ ದರ ರೂ. 72,400 ರೂಗಳಿಗೆ ಏರಿದೆ.

ಬೆಂಗಳೂರು- 22 ಕ್ಯಾರೆಟ್‌ನ 10 ಗ್ರಾಂ ಚಿನ್ನ ರೂ. 47,340 ರೂಗಳು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನ ರೂ. 51,660 ರೂಗಳು 

ದೆಹಲಿ- 22 ಕ್ಯಾರೆಟ್‌ನ 10 ಗ್ರಾಂ ಚಿನ್ನ ರೂ. 47,340 ರೂಗಳು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನ ರೂ. 51,660 ರೂಗಳು

ಚೆನ್ನೈ- 22 ಕ್ಯಾರೆಟ್‌ನ 10 ಗ್ರಾಂ ಚಿನ್ನ ರೂ. 47,800 ರೂಗಳು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನ ರೂ. 52,150 ರೂಗಳು

ಕೋಲ್ಕತ್ತಾ- 22 ಕ್ಯಾರೆಟ್‌ನ 10 ಗ್ರಾಂ ಚಿನ್ನ ರೂ. 47,340 ರೂಗಳು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನ ರೂ. 51,660 ರೂಗಳು

ಮುಂಬೈ- 22 ಕ್ಯಾರೆಟ್‌ನ 10 ಗ್ರಾಂ ಚಿನ್ನ ರೂ. 47,340 ರೂಗಳು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನ ರೂ. 51,660 ರೂಗಳು

ಇಲ್ಲಿ ಉಲ್ಲೇಖಿಸಲಾದ ಚಿನ್ನ ಮತ್ತು ಬೆಳ್ಳಿ ದರಗಳು ಬೆಳಿಗ್ಗೆ 9:30 ಗಂಟೆಯ ವರದಿ ಪ್ರಕಾರವಾಗಿದೆ. ಮತ್ತು ಏಕೆಂದರೆ ಇದು ಪ್ರತಿದಿನ ಏರಿಳಿತಗೊಳ್ಳುತ್ತಲೇ ಇರುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಕರೆನ್ಸಿ ಬೆಲೆಗಳಲ್ಲಿನ ಬದಲಾವಣೆ, ಹಣದುಬ್ಬರ, ಕೇಂದ್ರ ಬ್ಯಾಂಕ್‌ಗಳಲ್ಲಿನ ಚಿನ್ನದ ನಿಕ್ಷೇಪಗಳು, ಅವುಗಳ ಬಡ್ಡಿ ದರಗಳು, ಆಭರಣ ಮಾರುಕಟ್ಟೆ, ಭೌಗೋಳಿಕ ಉದ್ವಿಗ್ನತೆ, ವ್ಯಾಪಾರ ಯುದ್ಧಗಳು ಮತ್ತು ಇತರ ಹಲವು ಕಾರಣಗಳು ಚಿನ್ನದ ದರದಲ್ಲಿ ಏರಿಳಿತಗೊಳ್ಳಲು ಹಲವು ಕಾರಣಗಳಿವೆ ಎಂದು ಬುಲಿಯನ್ ಮಾರುಕಟ್ಟೆ ತಜ್ಞರು ಹೇಳುತ್ತಾರೆ. ಅಂಶಗಳು ಚಿನ್ನದ ದರದ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಲಾಗುತ್ತದೆ. ಫೆಡರಲ್ ರಿಸರ್ವ್ ಬಡ್ಡಿದರಗಳ ಏರಿಕೆಯ ಬಗ್ಗೆ ಸುಳಿವು ನೀಡಿದ್ದರಿಂದ ಚಿನ್ನದ ದರಗಳು ಕಡಿಮೆಯಾಗುತ್ತಿವೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo