ಇನ್ಮೇಲೆ FASTag ಬದಲಿಗೆ GNSS Toll ಕಲೆಕ್ಷನ್ ಮಾಡಲಿದೆ, ಏನಿದು GNSS? ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ಇನ್ಮೇಲೆ FASTag ಬದಲಿಗೆ GNSS Toll ಕಲೆಕ್ಷನ್ ಮಾಡಲಿದೆ, ಏನಿದು GNSS? ಇದು ಹೇಗೆ ಕಾರ್ಯನಿರ್ವಹಿಸುತ್ತದೆ?
HIGHLIGHTS

ಆಯ್ದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅತ್ಯಾಧುನಿಕ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (GNSS Toll) ವ್ಯವಸ್ಥೆ ಜಾರಿ

FASTag ಬದಲಿಗೆ ಹೊಸ GPS ಮಾದರಿಯ ಟೋಲ್ ಕಲೆಕ್ಷನ್ ಆರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಹೊಸ (GNSS Toll) ವ್ಯವಸ್ಥೆ FASTag ಜೊತೆಗೆ ಕಾರ್ಯನಿರ್ವಹಿಸಲಿದ್ದು ಪ್ರಸ್ತುತ ಬಳಕೆದಾರರಿಗೆ ತಕ್ಷಣ ಬದಲಾಯಿಸಲು ಹೊತ್ತಾಯಗಳಿಲ್ಲ.

GNSS Toll in India: ಭಾರತದಲ್ಲಿ ರಾಷ್ಟ್ರೀಯ ಹೆದ್ದಾರಿಗಳಿಗಾಗಿ ಸರ್ಕಾರ ಹೊಸ ನಿಯಮವನ್ನು ಜಾರಿಗೊಳಿಸಿ ಎಲ್ಲಾ ವಾಹನಗಳ ಸುಲಭ ಮತ್ತು ಸರಳ ಸಂಚಾರಕ್ಕಾಗಿ FASTag ಅನ್ನು ಪರಿಚಯಿಸಿದೆ. ಇದನ್ನು ಎಲ್ಲಾ ವಾಹನಗಳಿಗೆ ಕಡ್ಡಾಯಗೊಳಿಸಿದ್ದು ದಿನಗಳು ಕಳೆದಂತೆ ಇದರಲ್ಲಿ ಭಾರಿ ಬದಲಾವಣೆಗಳನ್ನು ತರಲು ಕೇಂದ್ರ ಸರ್ಕಾರ ಸತತವಾಗಿ ಕಾರ್ಯನಿರ್ವಹಿಸಲಿದ್ದು ಈಗ ಇದರಲ್ಲಿ ಹೊಸ ತಂತ್ರಜ್ಞಾನವನ್ನು ತರಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರು ಮುಂದಾಗಿದ್ದು GPS ಆಧಾರಿತ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (GNSS Toll) ವ್ಯವಸ್ಥೆ ಪರಿಚಯಿಸಲಿದೆ.

Also Read: Vivo V40 Series ಫೋನ್‌ಗಳು 50MP ZEISS ಕ್ಯಾಮೆರಾಗಳೊಂದಿಗೆ ಭಾರತದಲ್ಲಿ ಬಿಡುಗಡೆ ಸಜ್ಜು!

FASTag ಬದಲಿಗೆ ಹೊಸ GPS ಮಾದರಿಯ ಟೋಲ್ ಕಲೆಕ್ಷನ್ ಆರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೊಸ GNSS ವ್ಯವಸ್ಥೆ FASTag ಜೊತೆಗೆ ಕಾರ್ಯನಿರ್ವಹಿಸಲಿದ್ದು ಪ್ರಸ್ತುತ ಬಳಕೆದಾರರಿಗೆ ತಕ್ಷಣ ಬದಲಾಯಿಸಲು ಹೊತ್ತಾಯಗಳಿಲ್ಲ. GPS ಆಧಾರಿತ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (GNSS Toll) ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಆಯ್ದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅನುಷ್ಠಾನಗೊಳಿಸುವುದಾಗಿ ಘೋಷಿಸಿದರು ಅಸ್ತಿತ್ವದಲ್ಲಿರುವ ಸಾಂಪ್ರದಾಯಿಕ ಟೋಲ್ ಸಂಗ್ರಹ ವಿಧಾನಗಳನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿದೆ.

GNSS Toll will collect toll instead of FASTag in India
GNSS Toll will collect toll instead of FASTag in India

ಈ ಹೊಸ GNSS Toll ಎಂದರೇನು?

ಈ ಹೊಸ GPS ಆಧಾರಿತ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (GNSS Toll) ವ್ಯವಸ್ಥೆಯು ವಾಹನದ ಸ್ಥಳಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಪ್ರಯಾಣಿಸಿದ ದೂರದ ಆಧಾರದ ಮೇಲೆ ಟೋಲ್‌ಗಳನ್ನು ಲೆಕ್ಕಹಾಕಲು ಉಪಗ್ರಹಗಳೊಂದಿಗೆ ಸಂವಹನ ನಡೆಸುವ ವರ್ಚುವಲ್ ಟೋಲ್ ಬೂತ್‌ಗಳನ್ನು ಬಳಸುತ್ತದೆ. ಈ ವಿಧಾನವು ಭೌತಿಕ ಟೋಲ್ ಬೂತ್‌ಗಳ ಅಗತ್ಯವನ್ನು ನಿವಾರಿಸುತ್ತದೆ. ಇದರ ಮುಖ್ಯ ಗುರಿ ಟೋಲ್ ಕಲೆಕ್ಷನ್ ಯಾವುದೇ ನಿಲುಗಡೆಗಳಿಲ್ಲದೆ ತಡೆರಹಿತ ಪ್ರಯಾಣವನ್ನು ಸುಗಮಗೊಳಿಸುತ್ತದೆ. ಇನ್ನು ಸರಳವಾಗಿ ಹೇಳುವುದಾದರೆ ವಾಹನದ ಸ್ಥಳಗಳನ್ನು ನಿಖರವಾಗಿ ನಿರ್ಧರಿಸಲು ಮತ್ತು ಅದಕ್ಕೆ ಅನುಗುಣವಾಗಿ ಟೋಲ್ ಶುಲ್ಕವನ್ನು ಲೆಕ್ಕಾಚಾರ ಮಾಡಲು ಉಪಗ್ರಹ ಸ್ಥಾನೀಕರಣವನ್ನು ಅವಲಂಬಿಸುವ ವರ್ಚುವಲ್ ಟೋಲ್ ಬೂತ್‌ ಆಗಿದೆ.

GNSS Toll will collect toll instead of FASTag in India
GNSS Toll will collect toll instead of FASTag in India

GNSS Toll ಹೇಗೆ ಕಾರ್ಯನಿರ್ವಹಿಸುತ್ತದೆ.

ಈ GNSS ವ್ಯವಸ್ಥೆಯು ವರ್ಚುವಲ್ ಟೋಲ್ ಬೂತ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ವಾಹನಗಳ ಸ್ಥಳಗಳನ್ನು ಪತ್ತೆಹಚ್ಚಲು ಉಪಗ್ರಹಗಳೊಂದಿಗೆ ಸಂವಹನ ನಡೆಸುತ್ತದೆ. ಟ್ರ್ಯಾಕ್ ಮಾಡಿದ ಸ್ಥಳದ ಪ್ರಕಾರ ವಾಹನವು ಪ್ರಯಾಣಿಸಿದ ದೂರವನ್ನು ವಿಶ್ಲೇಷಿಸಲಾಗುತ್ತದೆ ಮತ್ತು ಟೋಲ್ ಅನ್ನು ಲೆಕ್ಕಹಾಕಲಾಗುತ್ತದೆ. ಅಲ್ಲದೆ ಸಂಭಾವ್ಯ ಪರ್ಯಾಯವನ್ನು ನೀಡುತ್ತದೆ ಅಥವಾ FASTag ನಂತಹ ಅಸ್ತಿತ್ವದಲ್ಲಿರುವ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ವಿಧಾನಗಳಿಗೆ ಪೂರಕವಾಗಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo