Gmail Tips: ಡಾರ್ಕ್ ಮೋಡ್ ಅನ್ನು ಬಳಸುವುದು ಹೇಗೆ? ಇಮೇಲ್ ಅನ್ನು ಷೆಡ್ಯೂಲ್ ಮಾಡುವುದೇಗೆ?

Gmail Tips: ಡಾರ್ಕ್ ಮೋಡ್ ಅನ್ನು ಬಳಸುವುದು ಹೇಗೆ? ಇಮೇಲ್ ಅನ್ನು ಷೆಡ್ಯೂಲ್ ಮಾಡುವುದೇಗೆ?
HIGHLIGHTS

ಈ Gmail ವಿಶ್ವದ ಅತ್ಯಂತ ಜನಪ್ರಿಯ ಮತ್ತು ಹೆಚ್ಚು ಜನರು ಬಳಸುತ್ತಿರುವ ಇ-ಮೇಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ.

ನಿಮ್ಮ ಫೋನಲ್ಲಿ ಆಂಡ್ರಾಯ್ಡ್ ಪೈ ಅನ್ನು ಬಳಸುತ್ತಿದ್ದರೆ ಈ ಡಾರ್ಕ್ ಮೋಡ್ ಅನ್ನು ಅಧಿಕೃತವಾಗಿ ಬಳಸಲು ಸಾಧ್ಯವಾಗುವುದಿಲ್ಲ

ಜಿಮೇಲ್ ಸೇವೆಯು ಗೂಗಲ್ ಡಾಕ್ಸ್, ಡ್ರೈವ್‌ಗೆ ಪ್ರವೇಶದಂತಹ ಹಲವು ಪ್ರಮುಖ ಹೊಸ ವೈಶಿಷ್ಟ್ಯಗಳನ್ನು ನೀಡುತ್ತಿದೆ.

ಜಿಮೇಲ್ ವಿಶ್ವದ ಅತ್ಯಂತ ಜನಪ್ರಿಯ ಇ-ಮೇಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ ಮತ್ತು ಇದು ಕೆಲಸ ಮಾಡುವ ಪ್ರತಿಯೊಬ್ಬ ವೃತ್ತಿಪರರ ಜೀವನದ ಒಂದು ಭಾಗವಾಗಿದೆ. ಜಿಮೇಲ್ 1.5 ಬಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ ಎಂದು ಗೂಗಲ್ 2018 ರಲ್ಲಿ ಘೋಷಿಸಿತು. ಮತ್ತು ಅಂದಿನಿಂದ ಈ ಸೇವೆಯು ಅನೇಕ ಪಟ್ಟುಗಳಿಂದ ವಿಕಸನಗೊಂಡಿದೆ. ಇಮೇಲ್ ಸೇವೆಯು ಗೂಗಲ್ ಡಾಕ್ಸ್, ಡ್ರೈವ್‌ಗೆ ಪ್ರವೇಶದಂತಹ ಹಲವು ಪ್ರಮುಖ ವೈಶಿಷ್ಟ್ಯಗಳೊಂದಿಗೆ ಸೇರಿಕೊಳ್ಳುತ್ತದೆ. ಈ ಪ್ಲ್ಯಾಟ್‌ಫಾರ್ಮ್ ಅನ್ನು ಪೂರ್ಣವಾಗಿ ಬಳಸಲು Gmail ಬಳಕೆದಾರರು ತಿಳಿದಿರಬೇಕಾದ ಕೆಲವು ಸಲಹೆಗಳು ಇಲ್ಲಿವೆ. ನೀವು ಇಂಟರ್ನೆಟ್ ಅಥವಾ ಯಾಹೂ ಮೇಲ್ ನಂತಹ ಬೇರೆ ಇ-ಮೇಲ್ ಸೈಟ್ ಬಳಸಿ ಸಾಕಾಗಿದ್ದು ನೀವು ಹೊಸದಾಗಿ ಜಿಮೈಲ್ ಖಾತೆಯನ್ನು ಬಳಸಲು ಬಯಸಿದರೆ ಮುಂದೆ ಓದಿ.

Gmail

>ಮೊದಲಿಗೆ ಗೂಗಲ್ ಸರ್ಚ್ ಹೋಗಿ Gmail.com ಟೈಪ್ ಮಾಡಿ ಕ್ಲಿಕ್ ಮಾಡಿ

>ನಂತರ Create an account ಮೇಲೆ ಕ್ಲಿಕ್ ಮಾಡಿ.

>ನಂತರ ಇದರಲ್ಲಿ ವೈಯಕ್ತಿಕ ಬಳಕೆ ಅಥವಾ ವ್ಯವಹಾರವನ್ನು ನಿರ್ವಹಿಸಲು ನಿಮ್ಮ ಪೂರ್ಣ ಹೆಸರು, ಬಯಸಿದ ಇಮೇಲ್ ವಿಳಾಸ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.

>ಈಗ ನಿಮ್ಮ ಫೋನ್ ಸಂಖ್ಯೆ ಮತ್ತು ಪರ್ಯಾಯ ಇಮೇಲ್ ಐಡಿಯನ್ನು ನಮೂದಿಸಿ.

>ಅದು ನಂತರ ನಿಮ್ಮ Gmail ಖಾತೆಯನ್ನು ಯಶಸ್ವಿಯಾಗಿ ರಚಿಸಲು ಬೇರೆ ಯಾವುದಾದ್ರೊಂದು ಮೇಲ್ ಐಡಿ ಮತ್ತು ನಿಮ್ಮ ಫೋನ್ ಸಂಖ್ಯೆಯನ್ನು ಪರಿಶೀಲಿಸುತ್ತದೆ.

ಕೆಲವು ಕಾರಣಗಳಿಗಾಗಿ ನಿಮ್ಮ ತೆರೆದ Gmail ಖಾತೆ ಬೇಡವಾದರೆ ಕೆಲವು ಸರಳ ಹಂತಗಳನ್ನು ಅನುಸರಿಸುವ ಮೂಲಕ ನೀವು ಅದನ್ನು ಡಿಲೀಟ್ ಮಾಡಬವುದು. Myaccount.google.com ಗೆ ಹೋಗಿ ಮತ್ತು ಎಡಭಾಗದಲ್ಲಿರುವ ನ್ಯಾವಿಗೇಷನ್ ಬಾರ್‌ನಿಂದ Data and Personalization ವಿಭಾಗಕ್ಕೆ ನ್ಯಾವಿಗೇಟ್ ಮಾಡಿ. ಈಗ “Download, delete, or make a plan for your data” ಆಯ್ಕೆಗೆ ಸ್ಕ್ರಾಲ್ ಮಾಡಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ. ಈಗ ತೋರಿಸುವ ‘Delete a service or your account’ ಆಯ್ಕೆಯನ್ನು ಕ್ಲಿಕ್ ಮಾಡಿ. ಅಂತಿಮವಾಗಿ ಅದನ್ನು ಸಂಪೂರ್ಣವಾಗಿ ಅಳಿಸಲು ನಿಮ್ಮ ಖಾತೆಯನ್ನು ಡಿಲೀಟ್ ಆಯ್ಕೆಯನ್ನು ಕ್ಲಿಕ್ ಮಾಡಿ.

ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲಿನ ಡಾರ್ಕ್ ಮೋಡ್ ಜನರು ಲೈಟ್ ಮೋಡ್‌ಗಿಂತ ಹೆಚ್ಚಾಗಿ ಬಳಸಲು ಆದ್ಯತೆ ನೀಡುವುದರೊಂದಿಗೆ ಪ್ರಾರಂಭಿಸಿದ್ದಾರೆ. ಏಕೆಂದರೆ ಕಣ್ಣಿನ ಒತ್ತಡದ ಪ್ರಯೋಜನಗಳ ಹೊರತಾಗಿ ಇದು AMOLED ಡಿಸ್ಪ್ಲೇಯೊಂದಿಗೆ ಬರುವ ಬಹಳಷ್ಟು ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಿಗೆ ಬೆಂಬಲಿಸುತ್ತದೆ. ಡೆಸ್ಕ್‌ಟಾಪ್‌ನಲ್ಲಿ ಡಾರ್ಕ್ ಮೋಡ್ ಅನ್ನು ಸಕ್ರಿಯಗೊಳಿಸಲು ಜಿಮೇಲ್ ತೆರೆದು ಸೆಟ್ಟಿಂಗ್‌ಗಳ ಐಕಾನ್ ಕ್ಲಿಕ್ ಮಾಡಿ ಮತ್ತು ಥೀಮ್‌ಗಳ ಮೇಲೆ ಟ್ಯಾಪ್ ಮಾಡಿ. ಅಲ್ಲಿ ಡಾರ್ಕ್ ಥೀಮ್ಗಾಗಿ ಹುಡುಕಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಅನ್ವಯಿಸು ಟ್ಯಾಪ್ ಮಾಡಿ. 

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಅದನ್ನು ಸಕ್ರಿಯಗೊಳಿಸಲು ಮೆನು ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು ಸೆಟ್ಟಿಂಗ್‌ಗಳ ಆಯ್ಕೆಯನ್ನು ತೆರೆಯಿರಿ. ಅಲ್ಲಿ ‘ಸಾಮಾನ್ಯ ಸೆಟ್ಟಿಂಗ್‌ಗಳು’ ಟ್ಯಾಪ್ ಮಾಡಿ ಮತ್ತು ಥೀಮ್ ಆಯ್ಕೆಯನ್ನು ಆರಿಸಿ ಮತ್ತು ಡಾರ್ಕ್ ಮೂಡ್  ಆರಿಸಿ ಅನ್ವಯಿಸಿ. ನಿಮ್ಮ ಫೋನಲ್ಲಿ ಆಂಡ್ರಾಯ್ಡ್ ಪೈ ಅನ್ನು ಬಳಸುತ್ತಿದ್ದರೆ ಈ ಡಾರ್ಕ್ ಮೋಡ್ ಅನ್ನು ಅಧಿಕೃತವಾಗಿ ಬಳಸಲು ಸಾಧ್ಯವಾಗುವುದಿಲ್ಲ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo