Get cashback discount on Gas Cylinder booking online: ನೀವು ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ ನಾವು ನಿಮಗೆ ಕೆಲವು ಟ್ರಿಕ್ಸ್ ಅನ್ನು ಹೇಳಲಿದ್ದೇವೆ ಅದರ ಸಹಾಯದಿಂದ ನೀವು ಸಿಲಿಂಡರ್ ಅನ್ನು ಕಡಿಮೆ ಬೆಲೆಗೆ ಪಡೆಯಬಹುದು. ನಿಮಗೆ ಗ್ಯಾಸ್ ಸಿಲಿಂಡರ್ (Gas Cylinder) ಅತಿ ಕಡಿಮೆ ಬೆಲೆಗೆ ಸಿಗುವುದು ಹೇಗೆ ಎಂದು ಈಗ ನೀವು ಆಶ್ಚರ್ಯ ಪಡುತ್ತಿರಬೇಕು. ಇದಕ್ಕಾಗಿ ನೀವು ಕೆಲವೊಂದು ಜನಪ್ರಿಯ ಮತ್ತು ನಿಮ್ಮ ಹಣ ಉಳಿಸಲು ಸಹಾಯ ಮಾಡುವ ಕೆಲವೊಂದು ಜನಪ್ರಿಯ ಮತ್ತು ಭರವಸೆಯ ಆ್ಯಪ್‌ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇನ್ಮೇಲೆ ನೀವು ಈ ಆ್ಯಪ್‌ಗಳಲ್ಲಿ ಗ್ಯಾಸ್ ಸಿಲಿಂಡರ್ (Gas Cylinder) ಬುಕ್ ಮಾಡಿ ಕ್ಯಾಶ್‌ಬ್ಯಾಕ್‌ಗಳನ್ನು ಪಡೆಯಬಹುದು ಇದನ್ನು ನಂತರ ಬಿಲ್ ಪಾವತಿಗೆ ಪರಿವರ್ತಿಸಿ ಬಳಸಬಹುದು.
ಈ ಮೂಲಕ ನೀವು ಅದರ ಸಹಾಯದಿಂದ ನೀವು ಗ್ಯಾಸ್ ಸಿಲಿಂಡರ್ (Gas Cylinder) ಅನ್ನು ಹೆಚ್ಚು ಅತಿ ಕಡಿಮೆ ಬೆಲೆಗೆ ಪಡೆಯಬಹುದು. ವಾಸ್ತವವಾಗಿ ಈ ಆ್ಯಪ್‌ಗಳು ಕ್ಯಾಶ್‌ಬ್ಯಾಕ್ ನೀಡುತ್ತಿದ್ದು ಇದನ್ನು ನೀವು ನಂತರ ಬಿಲ್ ಪಾವತಿಗೆ ಪರಿವರ್ತಿಸಿ ಬಳಸಬಹುದು. ಈ ನಿಮ್ಮ ಕ್ಯಾಶ್‌ಬ್ಯಾಕ್ ಒಂದು ರೀತಿಯ ಕ್ರೆಡಿಟ್ ಕಾರ್ಡ್‌ನ ಆಫರ್ ಆಗಿದ್ದು ನಿಮ್ಮ ದೈನಂದಿನ ವೆಚ್ಚಗಳಿಗೆ ನೀವು ಇದನ್ನು ಬಳಸಬಹುದು. ಇದನ್ನು ಬಳಸಿ ನೀವು ಯಾವುದೇ ವಸ್ತುವನ್ನು ಖರೀದಿಸಿದಾಗ ಕ್ಯಾಶ್‌ಬ್ಯಾಕ್ ಹೊಂದಿರುವ ಕಾರಣ ನೀವು ಸ್ವಲ್ಪ ಹಣವನ್ನು ಮರಳಿ ಪಡೆಯುತ್ತೀರಿ. ಈ ಹಣವನ್ನು ಕಂಪನಿ ಅಥವಾ ಸ್ಟೋರ್, ಅಂಗಡಿಯವರು ಕ್ಯಾಶ್‌ಬ್ಯಾಕ್ ರೂಪದಲ್ಲಿ ಹಿಂತಿರುಸುತ್ತಾರೆ.
ಗ್ಯಾಸ್ ಸಿಲಿಂಡರ್ ಬುಕಿಂಗ್‌ಗೆ ಪೇಟಿಎಂ ಅವಕಾಶವನ್ನು ನೀಡುತ್ತಿದೆ. ನೀವು ಹೊಸ ಗ್ಯಾಸ್ ಸಿಲಿಂಡರ್ (Gas Cylinder) ಅನ್ನು ಬುಕ್ ಮಾಡಲು ಬಯಸಿದರೆ ನೀವು ಇದನ್ನು ಅನುಸರಿಸಬಹುದು. Paytm ಸೈಟ್‌ಗೆ ಭೇಟಿ ನೀಡಿದ ನಂತರ ಪ್ರತಿ ತಿಂಗಳ ಮೊದಲ ಮೂರು ರೀಚಾರ್ಜ್‌ಗಳಲ್ಲಿ ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ನೀಡಲಾಗುತ್ತದೆ ಎಂದು ಕಂಡುಬಂದಿದೆ. ಆದರೆ ಎಲ್ಲರಿಗೂ ಇದು ಸಿಗುವುದಿಲ್ಲ. ನೀವು ಸಂಪೂರ್ಣ ಪ್ರಕ್ರಿಯೆಯನ್ನು ಸಹ ಅನುಸರಿಸಬೇಕಾಗುತ್ತದೆ.
Paytm ಪ್ರಕಾರ ಈ ಕೊಡುಗೆಯು ಮೊಬೈಲ್ / DTH ರೀಚಾರ್ಜ್, ವಿದ್ಯುತ್ / ಮೊಬೈಲ್ / ಗ್ಯಾಸ್ ಬಿಲ್ ಪಾವತಿ ಮತ್ತು ಗ್ಯಾಸ್ ಸಿಲಿಂಡರ್ (Gas Cylinder) ಬುಕಿಂಗ್ ಮೇಲೆ ಅನ್ವಯಿಸುತ್ತದೆ. ಇದರ ಅಡಿಯಲ್ಲಿ ನೀವು ಬಿಲ್ ಪಾವತಿಸಿದ ಮೇಲೆ ಸುಮಾರು ರೂ 10 ರಿಂದ ರೂ 100 ರವರೆಗಿನ ಕ್ಯಾಶ್‌ಬ್ಯಾಕ್ ಪಡೆಯಬಹುದು. ಅಂದರೆ ಪ್ರತಿಯೊಬ್ಬ ಬಳಕೆದಾರರಿಗೆ ವಿಭಿನ್ನ ಕೊಡುಗೆಯನ್ನು ನೀಡಲಾಗುತ್ತದೆ. ಇದಕ್ಕಾಗಿಯೇ ಕ್ಯಾಶ್‌ಬ್ಯಾಕ್ ಮೊತ್ತವೂ ಭಿನ್ನವಾಗಿರಬಹುದು. ಈ ಆಫರ್‌ನ ಅಡಿಯಲ್ಲಿ ಅರ್ಜಿ ಸಲ್ಲಿಸಲು ನಿಮ್ಮ ಪಾವತಿಯ ಮೊತ್ತವು ರೂ 48 ಅಥವಾ ಹೆಚ್ಚಿನದಾಗಿರಬೇಕು.
ನೀವು Amazon Pay ಸಹಾಯದಿಂದ ಪಾವತಿ ಮಾಡಬಹುದು. ಇದರಿಂದ ನಿಮಗೆ ದೊಡ್ಡ ಆಫರ್ ಕೂಡ ಸಿಗುತ್ತಿದೆ. ಅಮೆಜಾನ್‌ನಿಂದ ಗ್ಯಾಸ್ ಸಿಲಿಂಡರ್ (Gas Cylinder) ಬುಕಿಂಗ್ ಮಾಡಿದರೆ 50 ರೂಗಳವರೆಗೆ ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದೆ. ವಿಶೇಷವೆಂದರೆ ನೀವು ಕರೆ ಮಾಡುವಲ್ಲಿಯೂ ಸಮಯ ವ್ಯರ್ಥ ಮಾಡಬೇಕಾಗಿಲ್ಲ. ಅನೇಕ ಜನರು ಇದನ್ನು ಸಹ ಬಳಸುತ್ತಿದ್ದಾರೆ. ಅಮೆಜಾನ್ ಪೇ ಮೂಲಕ ನೀವು ಎಲ್ಲಿ ಬೇಕಾದರೂ ಕ್ಯಾಶ್‌ಬ್ಯಾಕ್ ಅನ್ನು ಬಳಸಲು ಮತ್ತು ಬಿಲ್ ಪಾವತಿ ಮತ್ತು ರೀಚಾರ್ಜ್ ಮಾಡಲು ಸಹ ಇದನ್ನು ಬಳಸಬಹುದು.