ಕೇವಲ 10,000 ರೂಗಳಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಈ 3 ಲೇಟೆಸ್ಟ್ 5G Smartphones ಖರೀದಿಸುವ ಸುವರ್ಣವಕಾಶ!

Updated on 13-Nov-2024
HIGHLIGHTS

ನಿಮಗೆ ತಿಳಿದವರಿಗೊಂದು ಲೇಟೆಸ್ಟ್ 5G ಸ್ಮಾರ್ಟ್ ಫೋನ್‌ಗಾಗಿ ಬೇಕಿದ್ದರೆ ಈ ಡೀಲ್ ನಿಮಗಾಗಲಿದೆ.

ಸುಮಾರು 10,000 ರೂಗಳಿಗೆ ನೀವೊಂದು ಲೇಟೆಸ್ಟ್ 5G ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಬೆಸ್ಟ್ ಡೀಲ್ ಇಲ್ಲಿದೆ.

ಫ್ಲಿಪ್ಕಾರ್ಟ್ ಪ್ರಸ್ತುತ Redmi, itel ಮತ್ತು Infinix ಕಂಪನಿಗಳ ಈ ಅತ್ಯುತ್ತಮ ಸ್ಮಾರ್ಟ್ ಫೋನ್‌ಗಳನ್ನು ಉತ್ತಮ ಬೆಲೆಯಲ್ಲಿ ಖರೀದಿಸಬಹುದು.

Best 5G Smartphones under 10000: ಪ್ರಸ್ತುತ ನಿಮ್ಮ ಬಜೆಟ್ ಸುಮಾರು 10,000 ರೂಗಳಾಗಿದ್ದು ನಿಮಗೆ ಅಥವಾ ನಿಮಗೆ ತಿಳಿದವರಿಗೊಂದು ಲೇಟೆಸ್ಟ್ 5G ಸ್ಮಾರ್ಟ್ ಫೋನ್‌ಗಾಗಿ ಬೇಕಿದ್ದರೆ ಈ ಡೀಲ್ ನಿಮಗಾಗಲಿದೆ. ಯಾಕೆಂದರೆ ಈ ಬಾರಿ ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಕೆಲವು ಅತ್ಯುತ್ತಮ ಬಜೆಟ್ 5G ಸ್ಮಾರ್ಟ್‌ಫೋನ್‌ಗಳ ಮೇಲೆ ಜಬರದಸ್ತ್ ರಿಯಾಯಿತಿಗಳನ್ನು ನೀಡಲಾಗುತ್ತಿದ್ದು ಇದರ ಹಿನ್ನಲೆಯಲ್ಲಿ ನಾವು ಸುಮಾರು 10,000 ರೂಗಿಂತ ಕಡಿಮೆ ಬೆಲೆಗೆ ಲೇಟೆಸ್ಟ್ ಫೀಚರ್ ಹೊಂದಿರುವ ಫೋನ್ ಬಗ್ಗೆ ಮತನದಳಿದ್ದೇವೆ.

ಈ ಫೋನ್ಗಳ ವಿಶೇಷವೆಂದರೆ ಬೇರೆ ಯಾವ ಫೋನಲ್ಲೂ ಕಾಣಲು ಸಿಗದ ಬೆಸ್ಟ್ ಫೀಚರ್ ಹೊಂದಿರುವ 3 ಜನಪ್ರಿಯ ಮತ್ತು ಹೆಚ್ಚಾಗಿ ಯಾರಿಗೂ ತಿಳಿಯದ ಜಬರದಸ್ತ್ 5G ಫೋನ್ಗಳ ಬಗ್ಗೆ ಈ ಕೆಳಗೆ ಮಾಹಿತಿ ನೀಡಿದ್ದು ನೀವು ಖರೀದಿಸುವುದು ಮತತಸ್ತು ಸುಲಭವಾಗಿದೆ. ಹೆಚ್ಚಿನ ವೇಗದ ಇಂಟರ್ನೆಟ್ ಮತ್ತು ಇತ್ತೀಚಿನ ವೈಶಿಷ್ಟ್ಯಗಳೊಂದಿಗೆ ಈ ಅತಿ ಕಡಿಮೆ ಬೆಲೆಗೆ ಫ್ಲಿಪ್‌ಕಾರ್ಟ್‌ ಮೂಲಕ ಈ 5G ಸ್ಮಾರ್ಟ್‌ಫೋನ್‌ಗಳನ್ನು ಇಂದೇ ನಿಮ್ಮ ಮನೆಗೆ ಕೊಂಡಯ್ಯಬಹುದು.

Also Read: Snapdragon 8 Elite ಪ್ರೊಸೆಸರ್‌ನೊಂದಿಗೆ iQOO 13 ಬಿಡುಗಡೆಗೆ ಡೇಟ್ ಕಂಫಾರ್ಮ್!

REDMI 13c 5G (6GB RAM – 128GB ROM)

ಈ Redmi ಫೋನ್ ಪ್ರಸ್ತುತ ಫ್ಲಿಪ್‌ಕಾರ್ಟ್‌ನ ಮಾರಾಟದಲ್ಲಿ 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿದೆ. ಕಂಪನಿಯು ಈ ಫೋನ್ ಅನ್ನು ರೂ 13,999 ಕ್ಕೆ ಬಿಡುಗಡೆ ಮಾಡಿದೆ ಆದರೆ ನೀವು ಈಗ ಕೇವಲ 9,808 ರೂಗಳಲ್ಲಿ ಇದನ್ನು ನಿಮ್ಮದಾಗಿಸಿಕೊಳ್ಳಬಹುದು. ಸ್ಮಾರ್ಟ್‌ಫೋನ್ ನೇರವಾಗಿ 29% ವರೆಗೆ ರಿಯಾಯಿತಿ ಲಭ್ಯವಿದೆ.

ನೀವು BOB CARD ಕಾರ್ಡ್ ಮೂಲಕ ನೀವು ಸ್ಮಾರ್ಟ್‌ಫೋನ್ಗಳಲ್ಲಿ ರೂ 1,000 ವರೆಗೆ ಉಳಿಸಬಹುದು. ಈ ಫೋನ್‌ನಲ್ಲಿ ನೀವು 6GB RAM ಮತ್ತು 128GB ಸ್ಟೋರೇಜ್ ಪಡೆಯುತ್ತೀರಿ. ಸ್ಮಾರ್ಟ್‌ಫೋನ್ 6.74 ಇಂಚಿನ ಡಿಸ್ಪ್ಲೇ ಮತ್ತು 50MP ಹಿಂಬದಿಯ ಕ್ಯಾಮೆರಾವನ್ನು ಹೊಂದಿದ್ದು ಮುಂಭಾಗದಲ್ಲಿ ಸೇಲ್ಫಿ ಮತ್ತು ವಿಡಿಯೋ ಕರೆಗಾಗಿ 5MP ಕ್ಯಾಮೆರಾದೊಂದಿಗೆ ಬರುತ್ತದೆ. ಕೊನೆಯದಾಗಿ ಫೋನ್ 5000mAh ದೊಡ್ಡ ಬ್ಯಾಟರಿಯನ್ನು ಸಹ ಹೊಂದಿದೆ.

Infinix Hot 50 5G (8GB RAM – 128GB ROM)

Infinix Hot 50 5G ಕೂಡ ಪ್ರಸ್ತುತ ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿದೆ. ರೂ 12,999 ಬೆಲೆಯಲ್ಲಿ ಬಿಡುಗಡೆಯಾದ ಆದರೆ ಈ ಸ್ಮಾರ್ಟ್‌ಫೋನ್ ಪ್ರಸ್ತುತ ರೂ 9,999 ಲಭ್ಯವಿದೆ. IDFC FIRST ಬ್ಯಾಂಕ್ ಕ್ರೆಡಿಟ್ EMI ಮೂಲಕ ನೀವು ಫೋನ್‌ನಲ್ಲಿ ರೂ 1000 ರಿಯಾಯಿತಿಯನ್ನು ಪಡೆಯಬಹುದು.

ಈ ಫೋನ್‌ನಲ್ಲಿ ನೀವು 4GB RAM ಮತ್ತು 128GB ಸ್ಟೋರೇಜ್ ಜೊತೆಗೆ 6.7 ಇಂಚಿನ HD+ ಡಿಸ್ಪ್ಲೇಯನ್ನು ಪಡೆಯುತ್ತಿರುವಿರಿ. ಸ್ಮಾರ್ಟ್‌ಫೋನ್ 48MP + ಡೆಪ್ತ್ ಸೆನ್ಸರ್ ಅನ್ನು ಹೊಂದಿದ್ದು ಇದರ ಮುಂಭಾಗದಲ್ಲಿ ಸೇಲ್ಫಿ ಮತ್ತು ವಿಡಿಯೋ ಕರೆಗಾಗಿ 8MP ಮುಂಭಾಗದ ಕ್ಯಾಮೆರಾ ಇದೆ. ಸ್ಮಾರ್ಟ್‌ಫೋನ್ 500mAh ಲಿಥಿಯಂ-ಐಯಾನ್ ಪಾಲಿಮರ್ ಬ್ಯಾಟರಿ ಮತ್ತು ಡೈಮೆನ್ಸಿಟಿ 6300 ಪ್ರೊಸೆಸರ್ ಅನ್ನು ಹೊಂದಿದೆ.

itel P 55 5G (6GB RAM – 128GB ROM)

ಫ್ಲಿಪ್‌ಕಾರ್ಟ್‌ನ ಮಾರಾಟದಲ್ಲಿ ಐಟೆಲ್‌ನ ಈ ಫೋನ್ ಕಡಿಮೆ ಬೆಲೆಗೆ ಲಭ್ಯವಿದೆ. ನೀವು ಈಗ ಕೇವಲ 8,968 ರೂಗಳಲ್ಲಿ ಈ ಸ್ಮಾರ್ಟ್‌ಫೋನ್ ನಿಮ್ಮದಾಗಿಸಿಕೊಳ್ಳಬಹುದು. ಆದರೆ ಸಾಮಾನ್ಯವಾಗಿ ಇದರ ಬೆಲೆ 13,499 ರೂಗಳಿಗೆ ನೀಡಲಾಗಿದ್ದರೂ ಫೋನ್‌ನಲ್ಲಿ 33% ವರೆಗೆ ರಿಯಾಯಿತಿಯನ್ನು ಕಾಣಬಹುದು.

ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ನೀವು ಸ್ಮಾರ್ಟ್‌ಫೋನ್ 5% ವರೆಗೆ ಅನಿಯಮಿತ ಕ್ಯಾಶ್‌ಬ್ಯಾಕ್ ಪಡೆಯಬಹುದು. ಸ್ಮಾರ್ಟ್‌ಫೋನ್ 6GB RAM, 50MP + 5MP ಕ್ಯಾಮೆರಾ ಸೆಟಪ್ ಹೊಂದಿದೆ. ಇದರ ಕ್ರಮವಾಗಿ ಮುಂಭಾಗದಲ್ಲಿ ಸೇಲ್ಫಿ ಮತ್ತು ವಿಡಿಯೋ ಕರೆಗಾಗಿ 8MP ಕ್ಯಾಮೆರಾದೊಂದಿಗೆ ದಿನವಿಡೀ ಬಳಕೆಗಾಗಿ 5000mAh ಬ್ಯಾಟರಿಯನ್ನು ಹೊಂದಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :