ಫ್ಲಿಪ್ಕಾರ್ಟ್ ಹೊಸ ವರ್ಷದಲ್ಲಿ ಮೊದಲ ದೊಡ್ಡ ಮಾರಾಟವನ್ನು ಆರಂಭಿಸಲು ಡೇಟ್ ಕಂಫಾರ್ಮ್ ಮಾಡಿದೆ.
Flipkart Republic Sale 2025 ಮಾರಾಟದಲ್ಲಿ ಲೇಟೆಸ್ಟ್ ಸ್ಮಾರ್ಟ್ಫೋನ್ ಮತ್ತು ಸ್ಮಾರ್ಟ್ ಡಿವೈಸ್ಗಳ ಮೇಲೆ ಭಾರಿ ಆಫರ್ಗಳು
ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಸೇಲ್ ಜನವರಿ 14 ರಿಂದ ಆರಂಭವಾಗಲಿದ್ದು ಪ್ಲಸ್ ಮತ್ತು ವಿಐಪಿ ಗ್ರಾಹಕರಿಗೆ 12 ಗಂಟೆಗಳ ಮುಂಚೆ ಎಂಟ್ರಿ!
Flipkart Republic Sale 2025: ಭಾರತದಲ್ಲಿ ಈಗಾಗಲೇ ಅತಿದೊಡ್ಡ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಾಗಿರುವ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಈ ಹೊಸ 2025 ವರ್ಷದ ಅತಿದೊಡ್ಡ ಮಾರಾಟದ ಡೇಟ್ ಅನ್ನು ಕಂಫಾರ್ಮ್ ಮಾಡಿದೆ. ಪ್ರಸ್ತುತ Flipkart Monumental Sale 2025 ಮಾರಾಟದಲ್ಲಿ ಲೇಟೆಸ್ಟ್ ಸ್ಮಾರ್ಟ್ಫೋನ್ ಮತ್ತು ಸ್ಮಾರ್ಟ್ ಡಿವೈಸ್ಗಳ ಮೇಲೆ ಭಾರಿ ಆಫರ್ಗಳನ್ನು ವಿಶೇಷವಾಗಿ ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಸೇಲ್ 14ನೇ ಜನವರಿ 2025 ರಿಂದ ಆರಂಭವಾಗಲಿದೆ ಆದರೆ ಫ್ಲಿಪ್ಕಾರ್ಟ್ ಪ್ಲಸ್ ಮತ್ತು ವಿಐಪಿ (Flipkart Plus / VIP) ಗ್ರಾಹಕರಿಗೆ ಮಾರಾಟಕ್ಕೂ ಮುಂಚೆ 12 ಗಂಟೆಗಳ ಮೊದಲ ಎಂಟ್ರಿಯನ್ನು ಪಡೆಯುವ ಅವಕಾಶವನ್ನು ನೀಡುತ್ತಿದೆ.
Flipkart Monumental Sale 2025 ಮಾರಾಟ ಕಂಫಾರ್ಮ್!
ಅಲ್ಲದೆ ಈ ಫ್ಲಿಪ್‌ಕಾರ್ಟ್ ಮಾನುಮೆಂಟಲ್ ಸೇಲ್ 2025 ಅನ್ನು ಅಧಿಕೃತವಾಗಿ ಕಂಪನಿ ಘೋಷಿಸಿದ್ದು ಸೇಲ್‌ನಲ್ಲಿ ಅದ್ಭುತ ಕೊಡುಗೆಗಳು ಲಭ್ಯವಿರುತ್ತವೆ. ಈ ಫ್ಲಿಪ್ಕಾರ್ಟ್ ಮಾರಾಟಗಳಲ್ಲಿ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿಗಳು ಮತ್ತು ಪರಿಕರಗಳ ಜೊತೆಗೆ ಆಹಾರ ವಸ್ತುಗಳು, ಪೀಠೋಪಕರಣಗಳು ಮತ್ತು ಬಟ್ಟೆಗಳ ಮೇಲೆ ಭಾರಿ ರಿಯಾಯಿತಿಗಳು ಲಭ್ಯವಿದ್ದು ಕಡಿಮೆ ಬೆಲೆಗೆ ಖರೀದಿಸಬಹುದು. ಅಮೆಜಾನ್ ಜೊತೆಗೆ ಫ್ಲಿಪ್‌ಕಾರ್ಟ್ ತನ್ನ ಮುಂಬರುವ ಮಾರಾಟದ ದಿನಾಂಕದೊಂದಿಗೆ ಮಾರಾಟಕ್ಕಾಗಿ ಮೈಕ್ರೋ ವೆಬ್‌ಸೈಟ್ ಅನ್ನು ಸಹ ಲೈವ್ ಮಾಡಿವೆ.
ಫ್ಲಿಪ್ಕಾರ್ಟ್ ಮಾರಾಟದಲ್ಲಿ ಭರ್ಜರಿ ಆಫರ್ಗಳ ನಿರೀಕ್ಷೆ!
ಈ ಮಾರಾಟದಲ್ಲಿ ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಪಾವತಿಯ ಮೇಲೆ ನೀವು ರಿಯಾಯಿತಿಯನ್ನು ಪಡೆಯುತ್ತೀರಿ. ಆದಾಗ್ಯೂ ಯಾವ ಬ್ಯಾಂಕ್‌ನ ಕಾರ್ಡ್‌ನಲ್ಲಿ ಎಷ್ಟು ರಿಯಾಯಿತಿ ಲಭ್ಯವಿರುತ್ತದೆ ಎಂಬುದು ಫ್ಲಿಪ್‌ಕಾರ್ಟ್ ಪುಟದಿಂದ ಇನ್ನೂ ಸ್ಪಷ್ಟವಾಗಿಲ್ಲ. ಮಾರಾಟದ ಸಮಯದಲ್ಲಿ ನೀವು ಪ್ರತಿದಿನ 12AM – 12PM ನಡುವಿನ ರಶ್ ಅವರ್‌ಗಳಲ್ಲಿ ಅದ್ಭುತ ಕೊಡುಗೆಗಳನ್ನು ಪಡೆಯುತ್ತೀರಿ. ನೀವು ಪ್ರತಿದಿನ ಸಂಜೆ 6:00pm ಗಂಟೆಗೆ ಕೇವಲ 76 ರೂಪಾಯಿಗಳ ಡೀಲ್ ಅನ್ನು ಪಡೆಯಲು ಸಾಧ್ಯವಾಗುತ್ತದೆ. ಅಲ್ಲಫ್ ಫ್ಲಿಪ್ಕಾರ್ಟ್ ನಿಮಗೆ ಹೊಸ Tik Tok ಡೀಲ್‌ಗಳು ಪ್ರತಿ ಗಂಟೆಗೆ ಬಹಿರಂಗಗೊಳ್ಳುತ್ತವೆ.
Also Read: Amazon Republic Sale 2025: ಜನವರಿ 13 ರಿಂದ ಅಮೆಜಾನ್ ರಿಪಬ್ಲಿಕ್ ಸೇಲ್ ಶುರು! ಪ್ರತ್ಯೇಕ ಆಫರ್ಗಳ ಪಟ್ಟಿ ಇಲ್ಲಿದೆ!
ಸ್ಮಾರ್ಟ್‌ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳ ಮೇಲೆ ಭಾರಿ ರಿಯಾಯಿತಿ ಇರಲಿದೆ. ನೀವು ಕನಿಷ್ಟ 50 ಪ್ರತಿಶತ ರಿಯಾಯಿತಿಯೊಂದಿಗೆ ಪವರ್ ಬ್ಯಾಂಕ್‌ಗಳನ್ನು ಮತ್ತು 70 ಪ್ರತಿಶತದಷ್ಟು ರಿಯಾಯಿತಿಯೊಂದಿಗೆ ಚಾರ್ಜರ್‌ಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಅಡುಗೆ ಮನೆ ಮತ್ತು ಗೃಹೋಪಯೋಗಿ ವಸ್ತುಗಳ ಮೇಲೂ ಬಂಪರ್ ಡಿಸ್ಕೌಂಟ್ ನೀಡಲಾಗುವುದು. ಯಾವ ಕಂಪನಿಯ ಸ್ಮಾರ್ಟ್ ಫೋನ್ ಗಳ ಮೇಲೆ ಎಷ್ಟು ಡಿಸ್ಕೌಂಟ್ ಸಿಗಲಿದೆ ಎಂಬುದನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ. ಮುಂಬರುವ ಸಮಯದಲ್ಲಿ ಫ್ಲಿಪ್‌ಕಾರ್ಟ್ ಕ್ರಮೇಣ ಉಳಿದ ಡೀಲ್‌ಗಳನ್ನು ಅನಾವರಣಗೊಳಿಸಲಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile