Flipkart & Amazon Republic Day Sale 2024: ಲೇಟೆಸ್ಟ್ 5G ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ಡೀಲ್‌ಗಳು

Flipkart & Amazon Republic Day Sale 2024: ಲೇಟೆಸ್ಟ್ 5G ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ಡೀಲ್‌ಗಳು
HIGHLIGHTS

ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್ ಈ ವರ್ಷದ ಮೊದಲ ದೊಡ್ಡ ಸೇಲ್ ಗಣರಾಜ್ಯೋತ್ಸವದ ದಿನದಂದು ಶುರು.

Flipkart Republic Day Sale 2024 ಮಾರಾಟವನ್ನು ಜನವರಿ 14 ರಿಂದ ಜನವರಿ 19 ವರೆಗೆ ನಡೆಸುವುದಾಗಿ ಕಂಫಾರ್ಮ್.

ಆದರೆ ಅಮೆಜಾನ್ ತನ್ನ Amazon Republic Day Sale 2024 ಮಾರಾಟದ ದಿನಾಂಕನವನ್ನು ಇನ್ನೂ ನೀಡಿಲ್ಲ.

ಭಾರತದಲ್ಲಿ ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್ ಈ ವರ್ಷದ ಮೊದಲ ದೊಡ್ಡ ಸೇಲ್ ಅನ್ನು ಗಣರಾಜ್ಯೋತ್ಸವದ ದಿನದಂದು ಶುರು ಮಾಡಲು ಸಜ್ಜಾಗಿದೆ. ಪ್ರಸ್ತುತ ಕೇವಲ ಫ್ಲಿಪ್ಕಾರ್ಟ್ ಮಾತ್ರ ತನ್ನ ಈ Flipkart Republic Day Sale 2024 ಮಾರಾಟದ ದಿನವನ್ನು ಜನವರಿ 14 ರಿಂದ ಜನವರಿ 19 ವರೆಗೆ ನಡೆಸುವುದಾಗಿ ಕಂಫಾರ್ಮ್ ಮಾಡಿದೆ. ಆದರೆ ಅಮೆಜಾನ್ ತನ್ನ Amazon Republic Day Sale 2024 ಮಾರಾಟದ ದಿನಾಂಕನವನ್ನು ಇನ್ನೂ ನೀಡಿಲ್ಲ. ಆದರೆ ಕಂಪನಿಗಳು ತಮ್ಮ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ಗಳಲ್ಲಿ ಮಾರಾಟದ ಫಸ್ಟ್ ಲುಕ್ ನೀಡಿವೆ. ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಲೇಟೆಸ್ಟ್ ಫೋನ್‌ಗಳನ್ನು ಸಹ ಉಲ್ಲೇಖಿಸಿದೆ. ಪ್ರತಿ ಬಾರಿಯಂತೆ ಫ್ಲಿಪ್‌ಕಾರ್ಟ್ ಪ್ಲಸ್ ಮತ್ತು ಅಮೆಜಾನ್ ಪ್ರೈಮ್ ಸದಸ್ಯರಿಗೆ ಮಾರಾಟದ ಒಂದು ದಿನ ಮುಂಚಿತವಾಗಿ ಪ್ರವೇಶ ನೀಡಲಾಗುವುದನ್ನು ಗಮನಿಸಬೇಕಿದೆ.

Also Read: 50MP ಕ್ಯಾಮೆರಾದ Moto G34 5G ಲಾಂಚ್! ಖರೀದಿಗೂ ಮುಂಚೆ ಈ ಟಾಪ್ 5 ಫೀಚರ್ಗಳನೊಮ್ಮೆ ನೋಡಿ

Republic Day Sale 2024 ಮಾರಾಟದಲ್ಲಿ ಈ ಫೋನ್‌ಗಳ ಬಂಪರ್ ಡಿಸ್ಕೌಂಟ್

ಫ್ಲಿಪ್‌ಕಾರ್ಟ್ ಇನ್ನೂ ಎಲ್ಲಾ ಫೋನ್‌ಗಳ ಬೆಲೆಯನ್ನು ಬಹಿರಂಗಪಡಿಸಿಲ್ಲವಾದರೂ ಪ್ರಸ್ತುತ ಯಾವ ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ಗಳೊಂದಿಗೆ ಭಾರಿ ಡಿಸ್ಕೌಂಟ್ ಲಭ್ಯವಿರುತ್ತವೆ ಎಂಬುದನ್ನು ಈಗಾಗಲೇ ಕೊಂಚ ಪಟ್ಟಿಯನ್ನು ನೀಡಲಾಗಿದೆ. ಈ ಫ್ಲಿಪ್ಕಾರ್ಟ್ ಸೇಲ್‌ನಲ್ಲಿ iPhone 15, iPhone 14, iPhone 13 ಮತ್ತು iPhone 12 ಮೇಲೆ ಪ್ರಮುಖ ಡಿಸ್ಕೌಂಟ್ ರಿಯಾಯಿತಿಗಳನ್ನೂ ಪಟ್ಟಿ ಮಾಡಲಾಗಿದೆ. ಅಲ್ಲದೆ ಆಂಡ್ರಾಯ್ಡ್ ವಲಯದಲ್ಲಿ Google Pixel 7a, Samsung Galaxy S21 FE 5G, Motorola Edge 40 Neo, Samsung Galaxy S22, Pixel 8, Vivo T2 Pro, Oppo Reno 10 Pro, Vivo T2x, Poco X5, Realme 11, Redmi 12, Samsung Galaxy F34 ಮತ್ತು Many4 ಕಡಿಮೆ ಬೆಲೆಯಲ್ಲಿ ಬರುವ ಲೇಟೆಸ್ಟ್ ಸ್ಮಾರ್ಟ್ಫೋ ಎಂದು ಕಂಪನಿ ಪಟ್ಟಿ ಮಾಡಿದೆ.

Republic Day Sale 202

iPhone 15 ಸ್ಮಾಟ್ಫೋನ್ ಭಾರಿ ಬೇಡಿಕೆ

ಮಾರಾಟ ಪ್ರಾರಂಭವಾಗಲು ಇನ್ನೂ ಕೆಲವು ದಿನಗಳು ಮಾತ್ರ ಉಳಿದಿವೆ ಮತ್ತು ಫ್ಲಿಪ್‌ಕಾರ್ಟ್ 14ನೇ ಜನವರಿ 2024 ಮೊದಲು ಬೆಲೆಗಳನ್ನು ಬಹಿರಂಗಪಡಿಸುವ ಸಾಧ್ಯತೆಯಿದೆ. ಆದರೆ ಗಮನಿಸಬೇಕಾದ ವಿಷಯವೆಂದರೆ ಐಫೋನ್ 15 ನಂತಹ ಫೋನ್‌ಗಳು ಈಗಾಗಲೇ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಮಾರಾಟ ಪ್ರಾರಂಭವಾಗುವ ಮೊದಲೇ ಮೂಲ 128GB ಸ್ಟೋರೇಜ್ ಮಾದರಿಯು ಫ್ಲಿಪ್‌ಕಾರ್ಟ್‌ನಲ್ಲಿ ರೂ 72,999 ಕ್ಕೆ ಲಭ್ಯವಿದೆ. ನೆನಪಿಡಿ iPhone 15 ಅನ್ನು ಆರಂಭದಲ್ಲಿ ಭಾರತದಲ್ಲಿ 79,900 ರೂಗಳಿಗೆ ಬಿಡುಗಡೆ ಮಾಡಲಾಯಿತು ಮತ್ತು ಗ್ರಾಹಕರು ಈಗ 6,901 ರೂಗಳ ರಿಯಾಯಿತಿಯನ್ನು ಪಡೆಯಬಹುದು.

Amazon Republic Day Sale 2024 ಮಾರಾಟ

ಪ್ರತಿ ವರ್ಷದಂತೆ ಈ ಬಾರಿಯೂ ಫ್ಲಿಪ್‌ಕಾರ್ಟ್‌ನ ಪಾಲುದಾರ ಅಮೆಜಾನ್ ತನ್ನ ಗಣರಾಜ್ಯೋತ್ಸವದ ಮಾರಾಟದೊಂದಿಗೆ ಬರುತ್ತಿದೆ. ಅವರು ಇನ್ನೂ ಮಾರಾಟದ ದಿನಾಂಕವನ್ನು ಬಹಿರಂಗಪಡಿಸದಿದ್ದರೂ ಭಾರಿ ರಿಯಾಯಿತಿಗಳನ್ನು ನೀಡಲು ಲೇಟೆಸ್ಟ್ ಫೋನ್‌ಗಳ ಪಟ್ಟಿಯನ್ನು ಬಹಿರಂಗಪಡಿಸಿದೆ. ಪ್ರಸ್ತುತ ಬಳಕೆದಾರರು iPhone 13 ಮತ್ತು iPhone 15 ಅನ್ನು ಖರೀದಿಸಲು ಹೆಚ್ಚಾಗಿ ಇಷ್ಟಪಡುತ್ತಿದ್ದರೆಂದು ಅಮೆಜಾನ್ ಭಾವಿಸುತ್ತದೆ. ಆದ್ದರಿಂದ ಖಂಡಿತವಾಗಿಯೂ ಅದರ ಮೇಲೆ ಭಾರಿ ರಿಯಾಯಿತಿ ಇರುತ್ತದೆ. ಇದಲ್ಲದೆ OnePlus Nord CE 3 Lite, Redmi 12, Galaxy S23, OnePlus 11R ನಂತಹ ಫೋನ್‌ಗಳು ಸಹ ಕಡಿಮೆ ಬೆಲೆಗೆ ಲಭ್ಯವಾಗುವ ನಿರೀಕ್ಷೆಗಳಿವೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo