ಎಲ್ಜಿ ತನ್ನ ಪ್ರಮುಖ ಸ್ಮಾರ್ಟ್ಫೋನ್ LG V40 ThinQ ಅನ್ನು ಭಾರತಕ್ಕೆ ತರಲು ಯೋಜಿಸಿದೆ. ಇದೀಗ ಇದರ ಬ್ಯಾನರ್ ಅಮೆಜಾನ್ ಇಂಡಿಯಾ ಮುಖಪುಟದಲ್ಲಿ ಹರಡುತ್ತಿದೆ. ಈ ಫೋನ್ನ ಮಾರಾಟ ಜನವರಿ 20 ರಿಂದ ನಡೆಯಲಿರುವ ಅಮೆಜಾನ್ ಇಂಡಿಯಾ ಸೇಲ್ ಅಲ್ಲಿ ಪ್ರಾರಂಭವಾಗಲಿದೆ. ಈ ಸಮಯದಲ್ಲಿ ಅಮೆಜಾನ್ ಅಥವಾ ಎಲ್ಜಿ ಅದರ ಬೆಲೆಯನ್ನು ಬಹಿರಂಗಗೊಂಡಿಲ್ಲ. ಈ ಫೋನ್ ಔಟ್ ಬಾಕ್ಸ್ ಆಂಡ್ರಾಯ್ಡ್ 8.1 ಓರಿಯೊದಲ್ಲಿ ಕಾರ್ಯನಿರ್ವಹಿಸಲಿದೆ.
ಇದು 6.4 ಇಂಚಿನ ಕ್ವಾಡ್ HD + (1440×3120 ಪಿಕ್ಸೆಲ್ಗಳು) ಒಲೆಡಿ ಫುಲ್ ವಿಷನ್ ಪ್ಯಾನಲವನ್ನು ಹೊಂದಿದ್ದು ಅದರ ಆಕಾರ ಅನುಪಾತವು 19.5: 9 ಮತ್ತು ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರ ರಕ್ಷಣೆಯೊಂದಿಗೆ ಬರುತ್ತದೆ. ಈ ಫೋನ್ 6 GB RAM ಅನ್ನು ಹೊಂದಿದೆ. ಇದರ ಪ್ರಮುಖ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 845 ಪ್ರೊಸೆಸರ್ ಹೊಂದಿದೆ. ಇದರ ಇಂಟರ್ನಲ್ ಸ್ಟೋರೇಜ್ 128GB ಮತ್ತು ಹೆಚ್ಚಿನ ಸ್ಟೋರೇಜ್ ಅಗತ್ಯವಿದ್ದರೆ ಮೈಕ್ರೊ SD ಕಾರ್ಡ್ ಮೂಲಕ 2TB ವರೆಗೆ ವಿಸ್ತರಿಸಿಕೊಳ್ಳಬವುದು.
ಇದರ ವಿಶಿಷ್ಟ ಅಂದ್ರೆ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರುವುದು. ಇದರ ಪ್ರೈಮರಿ ಸೆನ್ಸರ್ 12MP ಮೆಗಾಪಿಕ್ಸೆಲ್ಗಳೊಂದಿಗೆ f/ 1.5 ಅಪೆರ್ಚರೊಂದಿಗೆ 1.4 ಮೈಕ್ರಾನ್ಸ್ ಪಿಕ್ಸೆಲ್ ಸೈಜ್ ಮತ್ತು ಇದರ ಮತ್ತೊಂದು 78 ಡಿಗ್ರಿ ಕೋನಗಳನ್ನು ಹೊಂದಿದ್ದು 16MP ಮೆಗಾಪಿಕ್ಸೆಲ್ಗಳನ್ನು ನೀಡುತ್ತದೆ. ಮೂರನೇ 12MP ಮೆಗಾಪಿಕ್ಸೆಲ್ ಸೆನ್ಸರ್ ಟೆಲಿಫೋಟೋ ಲೆನ್ಸ್ ಆಗಿದೆ.
ನೀವೊಬ್ಬ ಸೆಲ್ಫಿ ಪ್ರೇಮಿಯಾಗಿದ್ದರೆ ಇದರಲ್ಲಿನ ಡ್ಯುಯಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಪ್ರಾಥಮಿಕ ಸಂವೇದಕ 8 ಮೆಗಾಪಿಕ್ಸೆಲ್ಗಳ (ಎಫ್ / 1.9 ಅಪರ್ಚರ್ 1.4 ಮೈಕ್ರಾನ್ಸ್ ಪಿಕ್ಸೆಲ್ಗಳ ಸೈಜ್ ಜುಗಲ್ಬಂಡಿಗೆ 5MP ಮೆಗಾಪಿಕ್ಸೆಲ್ ವಿಶಾಲ ಕೋನ ಸೆನ್ಸರನ್ನು ನೀಡುತ್ತದೆ. ಈ ಫೋನ್ 3300mAh ಬ್ಯಾಟರಿಯನ್ನು ಹೊಂದಿದೆ.