ಸ್ಯಾಮ್‌ಸಂಗ್ ಇಂದು ಭಾರತದಲ್ಲಿ ತನ್ನ ಬಹುನಿರೀಕ್ಷಿತ ಲೇಟೆಸ್ಟ್ Samsung Galaxy Ring ಸ್ಮಾರ್ಟ್ ರಿಂಗ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಇದನ್ನು ಸ್ಯಾಮ್‌ಸಂಗ್ ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಪರಿಚಯಿಸಿದ್ದು ಈಗ ಭಾರತದ ಸ್ಮಾರ್ಟ್ ರಿಂಗ್ ಮಾರುಕಟ್ಟೆಯ ಬಾರಿಯಾಗಿದೆ. ಈ ಮೂಲಕ ಭಾರತೀಯರು ಹೆಚ್ಚಾಗಿ ಎದುರು ನೋಡುತ್ತಿರುವುದೆಂದರೆ ಇದರ ಆಕರ್ಷಕ ಫೀಚರ್ಸ್‌ಗಳೊಂದಿಗೆ ಬಂಡ್ರಿರುವ ಬೆಲೆ ಎಷ್ಟು ಎನ್ನುವುದಾಗಿದೆ. ಈ ಹೊಸ Samsung Galaxy Ring ವಿಶೇಷತೆಗಳ ಬಗ್ಗೆ ಮಾತನಾಡುವುದಾದರೆ ಇದರಲ್ಲಿ AI ಸಪೋರ್ಟ್ ನೀಡಿದ್ದು ನಮ್ಮ ಆರೋಗ್ಯ ಮತ್ತು ಫಿಟ್‌ನೆಸ್ ಮಾನಿಟರಿಂಗ್ ಫೀಚರ್ಸ್‌ಗಳು ಪ್ರಮುಖ ಅಂಶಗಳನ್ನು ಸೇರಿಸಿರುವುದು ಹೆಚ್ಚು ಗಮನಾರ್ಹವಾಗಿದೆ.
Also Read: 50MP ಸೆಲ್ಫಿ ಕ್ಯಾಮೆರಾದ Vivo V30 5G ಬೆಲೆಯಲ್ಲಿ ಭಾರಿ ಕಡಿತ! ಹೊಸ ಬೆಲೆ ಮತ್ತು ಫೀಚರ್ಗಳೇನು?
ಭಾರತದಲ್ಲಿ ಸ್ಯಾಮ್‌ಸಂಗ್ ಪರಿಚಯಿಸಿದ ಈ ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ ರಿಂಗ್ (Samsung Galaxy Ring) ಬೆಲೆ ಮತ್ತು ಇದ್ರ ಲಭ್ಯತೆಯ ಬಗ್ಗೆ ಮಾತಾನಾಡುವುದಾದರೆ ಬರೋಬ್ಬರಿ 38,999 ರೂಗಳಿಂದ ಈ ರಿಂಗ್ ಬೆಲೆ ಆರಂಭವಾಗುತ್ತದೆ. ಈ ಡಿವೈಸ್ ಒಟ್ಟಾರೆಯಾಗಿ 9 ವಿವಿಧ ಸೈಜ್ ಅಳತೆಗಳಲ್ಲಿ ಲಭ್ಯವಿದೆ. ಇದರೊಂದಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ರಿಂಗ್ ಒಟ್ಟು 3 ಬಣ್ಣಗಳ ಟೈಟಾನಿಯಂ ಬ್ಲ್ಯಾಕ್, ಟೈಟಾನಿಯಂ ಸಿಲ್ವರ್ ಮತ್ತು ಟೈಟಾನಿಯಂ ಗೋಲ್ಡ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಸ್ಯಾಮ್‌ಸಂಗ್ ಗ್ಯಾಲಕ್ಸಿ ರಿಂಗ್ (Samsung Galaxy Ring) ಡಿವೈಸ್ ಅನ್ನು ಖರೀದಿದಾರರು ಆನ್‌ಲೈನ್ ಸ್ಟೋರ್, ಅಮೆಜಾನ್ ಇಂಡಿಯಾ, ಫ್ಲಿಪ್‌ಕಾರ್ಟ್ ಮತ್ತು ಸ್ಯಾಮ್‌ಸಂಗ್ ಕಂಪನಿಯ ಅಧಿಕೃತ ರೀಟೇಲ್ ಸ್ಟೋರ್‌ಗಳ ಮೂಲಕ ಖರೀದಿಸಬಹುದು.
ಈ ಸ್ಯಾಮ್‌ಸಂಗ್ ಗ್ಯಾಲಕ್ಸಿ ರಿಂಗ್ ಹೊಸ ಟೈಟಾನಿಯಂ ಫಿನಿಶ್ ಡೆಸೈನಿಂಗ್ ಪಡೆದಿದ್ದು ವರ್ಧಿತ ಬಾಳಿಕೆ ನೀಡಲಿದೆ. ಅಲ್ಲದೇ ಇದು IP68 ಫೀಚರ್ ಜೊತೆಗೆ ಬರಲಿದ್ದು ನೀರು ಮತ್ತು ಧೂಳು ನಿರೋಧಕವಾಗಿದೆ. ಈಗಾಗಲೇ ಮೇಲೆ ತಿಳಿಸಿರುವಂತೆ ಇದು ಈ AI ಚಾಲಿತ ಫೀಚರ್ಸ್‌ಗಳೊಂದಿಗೆ ರಚಿತಗೊಂಡಿದೆ. ಇದು ಸ್ಯಾಮ್‌ಸಂಗ್‌ನ ಹೆಲ್ತ್ AI ಆಯ್ಕೆಯ ಜೊತೆಗೆ ಲಭ್ಯವಿದ್ದು ಇದು ಬಳಕೆದಾರರಿಗೆ ವೈಯಕ್ತಿಕಗೊಳಿಸಿದ ಶಿಫಾರಸುಗಳು ಮತ್ತು ಕ್ಷೇಮ ಸಲಹೆಗಳೊಂದಿಗೆ ರಿಯಲ್ ಟೈಮ್ ಇನ್ಪುಟ್ ನೀಡಲು ಸಹಕರಿಸುತ್ತದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ರಿಂಗ್ ಮುಖ್ಯವಾಗಿ 3 ಸೆನ್ಸಾರ್ ಹೊಂದಿದ್ದು ಬಳಕೆದಾರರ ಹೃದಯ ಬಡಿತವನ್ನು ಮಾನಿಟರ್ ಮಾಡಲು ಆಪ್ಟಿಕಲ್ ಬಯೋ ಸಿಗ್ನಲ್ ಸೆನ್ಸಾರ್, ಅಕ್ಸೆಲೆರೊಮೀಟರ್ ಹಾಗೂ ಸ್ಕಿನ್ ತಾಪಮಾನ ಸೆನ್ಸಾರ್ ಬಳಕೆ ಮಾಡುತ್ತದೆ. ಅಲ್ಲದೆ ಈ ಇನ್ನು ಗ್ಯಾಲಕ್ಸಿ ರಿಂಗ್ (GSamsung Galaxy Ring) ಆರಂಭಿಕ ಗಾತ್ರದ ತೂಕ ಕೇವಲ 2.3 ಗ್ರಾಂ ಆಗಿದೆ. ಈ ಸ್ಮಾರ್ಟ್ ರಿಂಗ್ ಚಾರ್ಜಿಂಗ್ ಸ್ಟೇಟಸ್ ತೋರಿಸಲು LED ಲೈಟಿಂಗ್ ಜೊತೆಗೆ ಕ್ಲಾಮ್‌ಶೆಲ್ ಚಾರ್ಜಿಂಗ್ ಕೇಸ್ ಸಹ ನೀಡಲಾಗಿದೆ. ಈ Samsung Galaxy Ring ಒಮ್ಮೆ ಮಾಡಿದ ಫುಲ್ ಚಾರ್ಜ್‌ನಲ್ಲಿ ಬರೋಬ್ಬರಿ 7 ದಿನಗಳ ವರೆಗೆ ಬ್ಯಾಟರಿ ಬ್ಯಾಕ್‌ಅಪ್ ನೀಡುವುದು ಡಿಸೆಂಟ್ ಆಗಿದೆ.