Samsung Galaxy Ring ಕೊನೆಗೂ ಬಿಡುಗಡೆಗೋಯ್ತು! ಆಕರ್ಷಕ ಫೀಚರ್ಸ್‌ಗಳೊಂದಿಗೆ ಬೆಲೆ ಎಷ್ಟು ತಿಳಿಯಿರಿ

Samsung Galaxy Ring ಕೊನೆಗೂ ಬಿಡುಗಡೆಗೋಯ್ತು! ಆಕರ್ಷಕ ಫೀಚರ್ಸ್‌ಗಳೊಂದಿಗೆ ಬೆಲೆ ಎಷ್ಟು ತಿಳಿಯಿರಿ
HIGHLIGHTS

ಲೇಟೆಸ್ಟ್ Samsung Galaxy Ring ಸ್ಮಾರ್ಟ್ ರಿಂಗ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ.

ಭಾರತೀಯರು ಹೆಚ್ಚಾಗಿ ಎದುರು ನೋಡುತ್ತಿರುವುದೆಂದರೆ ಇದರ ಆಕರ್ಷಕ ಫೀಚರ್ಸ್‌ಗಳೊಂದಿಗೆ ಬಂಡ್ರಿರುವ ಬೆಲೆ ಎಷ್ಟು ಎನ್ನುವುದಾಗಿದೆ.

ಇದರಲ್ಲಿ AI ಸಪೋರ್ಟ್‌ ನೀಡಿದ್ದು ಆರೋಗ್ಯ ಮತ್ತು ಫಿಟ್‌ನೆಸ್ ಮಾನಿಟರಿಂಗ್ ಫೀಚರ್ಸ್‌ಗಳನ್ನು ಸೇರಿಸಿರುವುದು ಹೆಚ್ಚು ಗಮನಾರ್ಹವಾಗಿದೆ.

ಸ್ಯಾಮ್‌ಸಂಗ್‌ ಇಂದು ಭಾರತದಲ್ಲಿ ತನ್ನ ಬಹುನಿರೀಕ್ಷಿತ ಲೇಟೆಸ್ಟ್ Samsung Galaxy Ring ಸ್ಮಾರ್ಟ್ ರಿಂಗ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಇದನ್ನು ಸ್ಯಾಮ್‌ಸಂಗ್‌ ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಪರಿಚಯಿಸಿದ್ದು ಈಗ ಭಾರತದ ಸ್ಮಾರ್ಟ್ ರಿಂಗ್ ಮಾರುಕಟ್ಟೆಯ ಬಾರಿಯಾಗಿದೆ. ಈ ಮೂಲಕ ಭಾರತೀಯರು ಹೆಚ್ಚಾಗಿ ಎದುರು ನೋಡುತ್ತಿರುವುದೆಂದರೆ ಇದರ ಆಕರ್ಷಕ ಫೀಚರ್ಸ್‌ಗಳೊಂದಿಗೆ ಬಂಡ್ರಿರುವ ಬೆಲೆ ಎಷ್ಟು ಎನ್ನುವುದಾಗಿದೆ. ಈ ಹೊಸ Samsung Galaxy Ring ವಿಶೇಷತೆಗಳ ಬಗ್ಗೆ ಮಾತನಾಡುವುದಾದರೆ ಇದರಲ್ಲಿ AI ಸಪೋರ್ಟ್‌ ನೀಡಿದ್ದು ನಮ್ಮ ಆರೋಗ್ಯ ಮತ್ತು ಫಿಟ್‌ನೆಸ್ ಮಾನಿಟರಿಂಗ್ ಫೀಚರ್ಸ್‌ಗಳು ಪ್ರಮುಖ ಅಂಶಗಳನ್ನು ಸೇರಿಸಿರುವುದು ಹೆಚ್ಚು ಗಮನಾರ್ಹವಾಗಿದೆ.

Also Read: 50MP ಸೆಲ್ಫಿ ಕ್ಯಾಮೆರಾದ Vivo V30 5G ಬೆಲೆಯಲ್ಲಿ ಭಾರಿ ಕಡಿತ! ಹೊಸ ಬೆಲೆ ಮತ್ತು ಫೀಚರ್ಗಳೇನು?

ಭಾರತದಲ್ಲಿ Samsung Galaxy Ring ಬೆಲೆ ಎಷ್ಟು?

ಭಾರತದಲ್ಲಿ ಸ್ಯಾಮ್‌ಸಂಗ್‌ ಪರಿಚಯಿಸಿದ ಈ ಹೊಸ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ರಿಂಗ್‌ (Samsung Galaxy Ring) ಬೆಲೆ ಮತ್ತು ಇದ್ರ ಲಭ್ಯತೆಯ ಬಗ್ಗೆ ಮಾತಾನಾಡುವುದಾದರೆ ಬರೋಬ್ಬರಿ 38,999 ರೂಗಳಿಂದ ಈ ರಿಂಗ್ ಬೆಲೆ ಆರಂಭವಾಗುತ್ತದೆ. ಈ ಡಿವೈಸ್‌ ಒಟ್ಟಾರೆಯಾಗಿ 9 ವಿವಿಧ ಸೈಜ್ ಅಳತೆಗಳಲ್ಲಿ ಲಭ್ಯವಿದೆ. ಇದರೊಂದಿಗೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ರಿಂಗ್‌ ಒಟ್ಟು 3 ಬಣ್ಣಗಳ ಟೈಟಾನಿಯಂ ಬ್ಲ್ಯಾಕ್‌, ಟೈಟಾನಿಯಂ ಸಿಲ್ವರ್ ಮತ್ತು ಟೈಟಾನಿಯಂ ಗೋಲ್ಡ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ರಿಂಗ್‌ (Samsung Galaxy Ring) ಡಿವೈಸ್‌ ಅನ್ನು ಖರೀದಿದಾರರು ಆನ್‌ಲೈನ್ ಸ್ಟೋರ್, ಅಮೆಜಾನ್ ಇಂಡಿಯಾ, ಫ್ಲಿಪ್‌ಕಾರ್ಟ್ ಮತ್ತು ಸ್ಯಾಮ್‌ಸಂಗ್‌ ಕಂಪನಿಯ ಅಧಿಕೃತ ರೀಟೇಲ್‌ ಸ್ಟೋರ್‌ಗಳ ಮೂಲಕ ಖರೀದಿಸಬಹುದು.

Samsung Galaxy Ring in India 2024

ಭಾರತದಲ್ಲಿ Samsung Galaxy Ring ಫೀಚರ್ಸ್‌ ಹೇಗಿದೆ?

ಈ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ರಿಂಗ್‌ ಹೊಸ ಟೈಟಾನಿಯಂ ಫಿನಿಶ್‌ ಡೆಸೈನಿಂಗ್ ಪಡೆದಿದ್ದು ವರ್ಧಿತ ಬಾಳಿಕೆ ನೀಡಲಿದೆ. ಅಲ್ಲದೇ ಇದು IP68 ಫೀಚರ್ ಜೊತೆಗೆ ಬರಲಿದ್ದು ನೀರು ಮತ್ತು ಧೂಳು ನಿರೋಧಕವಾಗಿದೆ. ಈಗಾಗಲೇ ಮೇಲೆ ತಿಳಿಸಿರುವಂತೆ ಇದು ಈ AI ಚಾಲಿತ ಫೀಚರ್ಸ್‌ಗಳೊಂದಿಗೆ ರಚಿತಗೊಂಡಿದೆ. ಇದು ಸ್ಯಾಮ್‌ಸಂಗ್‌ನ ಹೆಲ್ತ್‌ AI ಆಯ್ಕೆಯ ಜೊತೆಗೆ ಲಭ್ಯವಿದ್ದು ಇದು ಬಳಕೆದಾರರಿಗೆ ವೈಯಕ್ತಿಕಗೊಳಿಸಿದ ಶಿಫಾರಸುಗಳು ಮತ್ತು ಕ್ಷೇಮ ಸಲಹೆಗಳೊಂದಿಗೆ ರಿಯಲ್ ಟೈಮ್ ಇನ್ಪುಟ್ ನೀಡಲು ಸಹಕರಿಸುತ್ತದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ರಿಂಗ್‌ ಮುಖ್ಯವಾಗಿ 3 ಸೆನ್ಸಾರ್‌ ಹೊಂದಿದ್ದು ಬಳಕೆದಾರರ ಹೃದಯ ಬಡಿತವನ್ನು ಮಾನಿಟರ್ ಮಾಡಲು ಆಪ್ಟಿಕಲ್ ಬಯೋ ಸಿಗ್ನಲ್ ಸೆನ್ಸಾರ್‌, ಅಕ್ಸೆಲೆರೊಮೀಟರ್ ಹಾಗೂ ಸ್ಕಿನ್ ತಾಪಮಾನ ಸೆನ್ಸಾರ್‌ ಬಳಕೆ ಮಾಡುತ್ತದೆ. ಅಲ್ಲದೆ ಈ ಇನ್ನು ಗ್ಯಾಲಕ್ಸಿ ರಿಂಗ್‌ (GSamsung Galaxy Ring) ಆರಂಭಿಕ ಗಾತ್ರದ ತೂಕ ಕೇವಲ 2.3 ಗ್ರಾಂ ಆಗಿದೆ. ಈ ಸ್ಮಾರ್ಟ್‌ ರಿಂಗ್ ಚಾರ್ಜಿಂಗ್ ಸ್ಟೇಟಸ್‌ ತೋರಿಸಲು LED ಲೈಟಿಂಗ್‌ ಜೊತೆಗೆ ಕ್ಲಾಮ್‌ಶೆಲ್ ಚಾರ್ಜಿಂಗ್ ಕೇಸ್‌ ಸಹ ನೀಡಲಾಗಿದೆ. ಈ Samsung Galaxy Ring ಒಮ್ಮೆ ಮಾಡಿದ ಫುಲ್ ಚಾರ್ಜ್‌ನಲ್ಲಿ ಬರೋಬ್ಬರಿ 7 ದಿನಗಳ ವರೆಗೆ ಬ್ಯಾಟರಿ ಬ್ಯಾಕ್‌ಅಪ್‌ ನೀಡುವುದು ಡಿಸೆಂಟ್ ಆಗಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo