ವಾಹನ ಸವಾರರಿಗೆ ಇನ್ನಷ್ಟು ನೆಮ್ಮದಿ : ಇಂದಿನಿಂದ ಫಾಸ್ಟ್ ಟ್ಯಾಗ್ ಅಳವಡಿಕೆಯಲ್ಲಿ ವಿಸ್ತರಣೆ

Updated on 31-Dec-2019
HIGHLIGHTS

ಹೊಸ ವಾಹನ ಮಾಲೀಕರು ಫಾಸ್ಟ್ಯಾಗ್ ಬಗ್ಗೆ ಚಿಂತಿಸಬೇಕಾಗಿಲ್ಲ ಕಾರಣ ವಾಹನದ ನೋಂದಣಿ ಸಮಯದಲ್ಲಿ ಇದು ನಿಮಗೆ ಲಭ್ಯವಾಗುತ್ತವೆ.

UPI, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು ಮತ್ತು ಅಡ್ವಾನ್ಸ್ ಪೇಮೆಂಟ್ಗಳಿಂದ ಫಾಸ್ಟ್ಯಾಗ್ ಅನ್ನು ರೀಚಾರ್ಜ್ ಮಾಡುವಿಕೆ ಅವಕಾಶ ನೀಡಲಾಗಿದೆ.

ಟೋಲ್ ಪ್ಲಾಜಾದ ಫಾಸ್ಟ್ಯಾಗ್ ಲೇನ್ ಮೂಲಕ ಯಾವುದೇ ವಾಹನ ಫಾಸ್ಟ್ಯಾಗ್ ಇಲ್ಲದೆ ಹಾದು ಹೋದರೆ ಡಬಲ್ ಟೋಲ್ ತೆರಿಗೆಯನ್ನು ಪಾವತಿಸಿಸುವಂತೆ ಮಾಡಿತು.

ಭಾರತದಲ್ಲಿನ ಈ ಫಾಸ್ಟ್ ಟ್ಯಾಗ್ ಡಿಸೆಂಬರ್ 15 ರಂದು ರಾಷ್ಟ್ರೀಯ ಹೆದ್ದಾರಿ ಟೋಲ್ ಟೋಲ್‌ನಿಂದ ಬರುವ ವಾಹನಗಳಿಗೆ ಕೇಂದ್ರ ಸರ್ಕಾರ ಫಾಸ್ಟ್ಯಾಗ್ ಕಡ್ಡಾಯಗೊಳಿಸಿತ್ತು ಟೋಲ್ ಪ್ಲಾಜಾದ ಫಾಸ್ಟ್ಯಾಗ್ ಲೇನ್ ಮೂಲಕ ಯಾವುದೇ ವಾಹನ ಫಾಸ್ಟ್ಯಾಗ್ ಇಲ್ಲದೆ ಹಾದು ಹೋದರೆ ಡಬಲ್ ಟೋಲ್ ತೆರಿಗೆಯನ್ನು ಪಾವತಿಸಿಸುವಂತೆ ಮಾಡಿತು. ಅಲ್ಲದೆ ಇದನ್ನು ಮುಂದಿನ ತಿಂಗಳವರೆಗೆ ಅಂದ್ರೆ 15ನೇ ಜನವರಿ 2020 ರ ವೇಳೆಗೆ ಪ್ರತಿ ಹೆದ್ದಾರಿಯಲ್ಲಿ ನಾಲ್ಕನೇ ಒಂದು ಭಾಗದಷ್ಟು ಟೋಲ್ ಮತ್ತು ನಗದು ಫಾಸ್ಟ್ಯಾಗ್ ಮೂಲಕ ಪಾವತಿಸುವ ಸೌಲಭ್ಯ ನೀಡಲಿದೆ. ಇಂದು ಈ  ಫಾಸ್ಟ್ಯಾಗ್ ರೀಚಾರ್ಜಿಂಗ್ಗಾಗಿ RBI ತನ್ನ ಹೊಸ ನಿಯಮಗಳನ್ನು ಸುಲಭಗೊಳಿಸಿದೆ. ಈಗ ನೀವು ಇದನ್ನು UPI, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು ಮತ್ತು ಅಡ್ವಾನ್ಸ್ ಪೇಮೆಂಟ್ಗಳಿಂದ ಫಾಸ್ಟ್ಯಾಗ್ ಅನ್ನು ರೀಚಾರ್ಜ್ ಮಾಡುವಿಕೆ ಅವಕಾಶ ನೀಡಲಾಗಿದೆ.

ನೆನ್ನೆ ಅಂದ್ರೆ 30ನೇ ಡಿಸೆಂಬರ್ 2019 ರಲ್ಲಿ RBI ನೀಡಿದ ಹೇಳಿಕೆಯಲ್ಲಿ ಗ್ರಾಹಕರು ತಮ್ಮ ಫಾಸ್ಟ್ಯಾಗ್ ಖಾತೆಗಳನ್ನು ಎಲ್ಲಾ ಅಧಿಕೃತ ಮಾದರಿಗಳು ಮತ್ತು ಪಾವತಿ ಸಾಧನಗಳೊಂದಿಗೆ ಲಿಂಕ್ ಮಾಡಬಹುದು. ಇವುಗಳಲ್ಲಿ UPI ಖಾತೆಗಳು ಮತ್ತು ಮೊಬೈಲ್ ವ್ಯಾಲೆಟ್‌ಗಳು ಸಹ ಒಳಗೊಂಡಿರುತ್ತವೆ. ಈ ಖಾತೆಗಳನ್ನು ರೀಚಾರ್ಜ್ ಮಾಡುವಲ್ಲಿ ಸುಲಭತೆಯನ್ನು ಹೆಚ್ಚಿಸಲು ಮತ್ತು ಭಾವಿಸಿದ ವಹಿವಾಟಿನ ಪ್ರಕರಣಗಳನ್ನು ವೇಗವಾಗಿ ಪರಿಹರಿಸಲು ಈ ಕ್ರಮ ತೆಗೆದುಕೊಳ್ಳಲಾಗುವುದು. ಗ್ರಾಹಕರಿಗೆ ಹೆಚ್ಚಿನ ಪಾವತಿ ಆಯ್ಕೆಗಳನ್ನು ನೀಡುವ ಮೂಲಕ ಈ ವ್ಯವಸ್ಥೆಯ ವ್ಯಾಪ್ತಿಯನ್ನು ಹೆಚ್ಚಿಸುವ ಮತ್ತು ಸಿಸ್ಟಮ್ ಭಾಗವಹಿಸುವವರಲ್ಲಿ ಸ್ಪರ್ಧೆಯನ್ನು ಹೆಚ್ಚಿಸುವ ಉದ್ದೇಶದಿಂದ ಎಲ್ಲಾ ಅಧಿಕೃತ ಪಾವತಿ ವ್ಯವಸ್ಥೆಗಳನ್ನು ಈಗ ಫಾಸ್ಟ್ಯಾಗ್‌ಗಳಿಗೆ ಲಿಂಕ್ ಮಾಡಲು ಅನುಮತಿಸಲಾಗುವುದು ಎಂದು RBI ಹೇಳಿದೆ.

ಕೆಲವು ದಿನಗಳ ಹಿಂದೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಗ್ರಾಹಕರಿಗೆ ಭೀಮಾ ಯುಪಿಐನೊಂದಿಗೆ NETC  ಫಾಸ್ಟ್ಯಾಗ್ ಅನ್ನು ರೀಚಾರ್ಜ್ ಮಾಡುವ ಆಯ್ಕೆಯನ್ನು ಲಭ್ಯಗೊಳಿಸಿತು. ಭೀಮಾ ಯುಪಿಐ ಆಧಾರಿತ ಮೊಬೈಲ್ ಆ್ಯಪ್ ಮೂಲಕ ವಾಹನ ಮಾಲೀಕರು ರಸ್ತೆಯಲ್ಲಿದ್ದಾಗಲೂ ತಮ್ಮ ಫಾಸ್ಟ್ಯಾಗ್ ಅನ್ನು ರೀಚಾರ್ಜ್ ಮಾಡಲು ಸಾಧ್ಯವಾಗುತ್ತಿತ್ತು ಆದ್ದರಿದ ಈಗ ಟೋಲ್ ಪ್ಲಾಜಾದಲ್ಲಿ ಧೀರ್ಘ ಸರತಿ ಸಾಲಿನಲ್ಲಿ ಇರಬೇಕಾಗಿಲ್ಲ ಎಂದು NPCI ತಿಳಿಸಿದೆ.

ಫಾಸ್ಟ್ಯಾಗ್ ಎಂದರೇನು?

ಇದೊಂದು ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಟ್ಯಾಗ್ ಆಗಿದ್ದು ಇದನ್ನು ವಾಹನದ ವಿಂಡ್ ಷೀಲ್ಡ್ನಲ್ಲಿ ಇರಿಸಬೇಕಾಗುತ್ತದೆ. ಇದರಿಂದಾಗಿ ನಿಮ್ಮ ವಾಹನ ಯಾವುದೇ ಟೋಲ್ ಪ್ಲಾಜಾವನ್ನು ಹಾದುಹೋದಾಗ ಅಲ್ಲಿನ ಸೆನ್ಸರ್ ವಾಹನದ ಫಾಸ್ಟ್ಯಾಗ್ ಅನ್ನು ಗುರಿತಿಸಿ ನಿಗದಿಪಡಿಸಿರುವ  ಟೋಲ್ ತೆರಿಗೆಯನ್ನು ಸಂಗ್ರಹಿಸುತ್ತವೆ. ನಂತರ ಅದರ ಸಂಪೂರ್ಣ ಮಾಹಿತಿ SMS ಮೂಲಕ ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್ಗೆ ಬರುತ್ತದೆ.

ಹೊಸ ವಾಹನ ಮಾಲೀಕರು ಫಾಸ್ಟ್ಯಾಗ್ ಬಗ್ಗೆ ಚಿಂತಿಸಬೇಕಾಗಿಲ್ಲ ಕಾರಣ ವಾಹನದ ನೋಂದಣಿ ಸಮಯದಲ್ಲಿ ಇದು ನಿಮಗೆ ಲಭ್ಯವಾಗುತ್ತವೆ. FASTag ಖಾತೆಯನ್ನು ಮಾಲೀಕರು ಸಕ್ರಿಯಗೊಳಿಸಿ ರೀಚಾರ್ಜ್ ಮಾಡಬೇಕಾಗುತ್ತದೆ ಅಷ್ಟೇ. ಆದಾಗ್ಯೂ ನಿಮ್ಮ ಬಳಿ ಹಳೆಯ ಕಾರು ಇದ್ದರೆ ಸರ್ಕಾರದ ನ್ಯಾಷನಲ್ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (NETC) ಅಧಿಕಾರ ಹೊಂದಿರುವ ಬ್ಯಾಂಕ್ಗಳಾದ ಸಿಂಡಿಕೇಟ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಡಿಎಫ್‌ಸಿ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್ ಮತ್ತು ಇಕ್ವಿಟಾಸ್ ಬ್ಯಾಂಕ್ ಸೇರಿವೆ. ಅಲ್ಲದೆ ನೀವು Paytm ನಿಂದ ಸಹ ಈ FASTag ಅನ್ನು ಖರೀದಿಸಬಹುದು.

ಇಮೇಜ್ ಸೋರ್ಸ್

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :