ನಿಮ್ಮ ಫಾಸ್ಟ್‌ಟ್ಯಾಗ್ KYC ಅಪೂರ್ಣವಾಗಿದ್ದರೆ ಬ್ಯಾಂಕ್‌ಗಳು ನಿಷ್ಕ್ರಿಯ ಅಥವಾ ಬ್ಲಾಕ್ ಲಿಸ್ಟ್ ಮಾಡುವ ಸಾಧ್ಯತೆಗಳಿವೆ.
ಒಂದು ವೇಳೆ ಅಪೂರ್ಣ KYC ಅಪ್‌ಡೇಟ್‌ಗಳನ್ನು ಹೊಂದಿರುವ ಖಾತೆಗಳನ್ನು ಬ್ಯಾಂಕ್‌ಗಳು ನಿಷ್ಕ್ರಿಯ ಅಥವಾ ಬ್ಲಾಕ್ ಲಿಸ್ಟ್ ಮಾಡುವ ಸಾಧ್ಯತೆಗಳಿವೆ
FASTag KYC Deadline: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ National Highways Authority of India (NHAI) ಹೊಸ ವರ್ಷದಲ್ಲಿ ಎಲ್ಲಾ FASTag ಬಳಕೆದಾರರು ತಮ್ಮ ತಮ್ಮ KYC ವಿವರಗಳನ್ನು ಈ ಇದೆ 31ನೇ ಜನವರಿಯೊಳಗೆ ಕೊನೆಗೊಳ್ಳುವ ಮೊದಲು ಅಪ್ಡೇಟ್ ಮಾಡಿಕೊಳ್ಳಬೇಕೆಂದು ಘೋಷಿಸಿದೆ. ನಿಮ್ಮ ಫಾಸ್ಟ್‌ಟ್ಯಾಗ್ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇದ್ದರೂ ಸಹ ಒಂದು ವೇಳೆ ಅಪೂರ್ಣ KYC ಅಪ್‌ಡೇಟ್‌ಗಳನ್ನು ಹೊಂದಿರುವ ಖಾತೆಗಳನ್ನು ಬ್ಯಾಂಕ್‌ಗಳು ನಿಷ್ಕ್ರಿಯ ಅಥವಾ ಬ್ಲಾಕ್ ಲಿಸ್ಟ್ ಮಾಡುವ ಸಾಧ್ಯತೆಗಳಿವೆ. ಆದ್ದರಿಂದ ಇಂದು ಅಂದ್ರೆ 31ನೇ ಜನವರಿ 2024 ಕೊನೆ ದಿನವಾಗಿದೆ ಆದ್ದರಿಂದ ಎಲ್ಲಾ ಫಾಸ್ಟ್‌ಟ್ಯಾಗ್ ಬಳಕೆದಾರರು ತಮ್ಮ KYC ವಿವರಗಳು ಕಡ್ಡಾಯವಾಗಿ ಪೂರ್ಣಗೊಂಡಿವೆ ಎನ್ನುವುದನ್ನು ಖಚಿತ ಪಡಿಸುವುದು ಬಹು ಮುಖ್ಯವಾಗಿದೆ.
ಫಾಸ್ಟ್‌ಟ್ಯಾಗ್ ಎಂದರೇನು? (What is FASTag)
ಫಾಸ್‌ಟ್ಯಾಗ್ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸುವ ಎಲೆಕ್ಟ್ರಾನಿಕ್ ವ್ಯವಸ್ಥೆಯಾಗಿದ್ದು ಟೋಲ್ ಪ್ಲಾಜಾಗಳಲ್ಲಿ ಟೋಲ್ ಶುಲ್ಕವನ್ನು ಪಾವತಿಸಲು ಸುಲಭವಾಗುತ್ತದೆ. ಟ್ಯಾಗ್ ಅನ್ನು ಕಾರಿನ ವಿಂಡ್‌ಸ್ಕ್ರೀನ್‌ಗೆ ಅನ್ವಯಿಸಲಾಗುತ್ತದೆ ಮತ್ತು ಬ್ಯಾಂಕ್ ಖಾತೆ ಅಥವಾ ಪ್ರಿಪೇಯ್ಡ್ ಕಾರ್ಡ್‌ಗೆ ಸಂಪರ್ಕಿಸಲಾಗಿದೆ. ಫಾಸ್ಟ್‌ಟ್ಯಾಗ್ ಎನ್ನುವುದು ವಾಹನದ ವಿಂಡ್‌ಸ್ಕ್ರೀನ್‌ಗೆ ಅಂಟಿಸಲಾದ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಚಿಪ್ (RFID) ಆಗಿದ್ದು ಅದು ಗೊತ್ತುಪಡಿಸಿದ ಟೋಲ್ ಪ್ಲಾಜಾಗಳ ಮೂಲಕ ವಾಹನ ಹಾದುಹೋದಾಗ ಅದರೊಂದಿಗೆ ಲಿಂಕ್ ಮಾಡಲಾದ ಪ್ರಿಪೇಯ್ಡ್ ಅಥವಾ ಸೇವಿಂಗ್ ಖಾತೆಯ ಮೂಲಕ ಸ್ವಯಂಚಾಲಿತವಾಗಿ ಹಣವನ್ನು ಕಡಿತಗೊಳ್ಳುವ ಮತ್ತು ಟ್ರಾಫಿಕ್ ಸುಗಮಗೊಳಿಸುವ ಮತ್ತು ವಾಹನಗಳ ದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ ಈ ಸೇವೆಯನ್ನು ತರಲಾಗಿದೆ.
FASTag KYC ಪೂರ್ಣಗೊಳಿಸಲು Deadline ಆನ್‌ಲೈನ್
ಬ್ಯಾಂಕ್-ಸಂಯೋಜಿತ FASTag ವೆಬ್‌ಸೈಟ್‌ಗಳು: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು OTP ಬಳಸಿಕೊಂಡು ನಿಮ್ಮ ಬ್ಯಾಂಕಿನ FASTag ಪೋರ್ಟಲ್‌ಗೆ ಲಾಗ್ ಇನ್ ಮಾಡಿ. “KYC” ವಿಭಾಗವನ್ನು ಹುಡುಕಿ, ನಿಮ್ಮ ದಾಖಲೆಗಳನ್ನು ಸಲ್ಲಿಸಿ ಮತ್ತು “ಸಲ್ಲಿಸು” ಕ್ಲಿಕ್ ಮಾಡಿ. IHMCL FASTag ಪೋರ್ಟಲ್: https://fastag.ihmcl.com ಗೆ ಭೇಟಿ ನೀಡಿ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಪಾಸ್‌ವರ್ಡ್ ಬಳಸಿ ಲಾಗ್ ಇನ್ ಮಾಡಿ. ನಿಮ್ಮ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಲು “ನನ್ನ ಪ್ರೊಫೈಲ್” ಮತ್ತು ನಂತರ “KYC” ಗೆ ನ್ಯಾವಿಗೇಟ್ ಮಾಡಿ.
FASTag KYC Deadline ಆಫ್‌ಲೈನ್
ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಮತ್ತು ನಿಮ್ಮ FASTag ಟ್ಯಾಗ್ ಅಥವಾ ವಾಹನ ನೋಂದಣಿ ಸಂಖ್ಯೆಯೊಂದಿಗೆ KYC ದಾಖಲೆಗಳನ್ನು ಸಲ್ಲಿಸಿ. ಟೋಲ್ ಪ್ಲಾಜಾಗಳು: ಕೆಲವು ಟೋಲ್ ಪ್ಲಾಜಾಗಳು KYC ಸಹಾಯವನ್ನು ನೀಡುತ್ತವೆ. ನಿಮ್ಮ ದಾಖಲೆಗಳನ್ನು ಒಯ್ಯಿರಿ ಮತ್ತು ಪ್ರಕ್ರಿಯೆಯ ಬಗ್ಗೆ ವಿಚಾರಿಸಿ. ಈ ಫಾಸ್‌ಟ್ಯಾಗ್ KYC ಅನ್ನು ಪೂರ್ಣಗೊಳಿಸಲು ಯಾವ ಡಾಕ್ಯುಮೆಂಟ್‌ಗಳು ಅಗತ್ಯವಿದೆ?
FASTag KYC Deadline ಪೂರ್ಣಗೊಳಿಸಲು ಈ ದಾಖಲೆಗಳು ಮುಖ್ಯವಾಗಿವೆ
➥ಗುರುತಿನ ಪುರಾವೆ: ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ
➥ವಿಳಾಸ ಪುರಾವೆ: ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಯುಟಿಲಿಟಿ ಬಿಲ್ (ವಿದ್ಯುತ್ ಬಿಲ್ , ನೀರಿನ ಬಿಲ್, ಇತ್ಯಾದಿ)
➥ವಾಹನ ನೋಂದಣಿ ಪ್ರಮಾಣಪತ್ರದೊಂದಿಗೆ ಒಂದು ಪಾಸ್ಪೋರ್ಟ್ ಸೈಜ್ ಫೋಟೋ ನೀಡಬೇಕಾಗುತ್ತದೆ.
ನಿಮ್ಮ ಫಾಸ್ಟ್‌ಟ್ಯಾಗ್ ಸ್ಟೇಟಸ್ ಪರಿಶೀಲಿಸುವುದು ಹೇಗೆ?
➥ಮೊದಲಿಗೆ ನೀವು fastag.ihmcl.com ಹೋಗಿ
➥ಈಗ ಪುಟದ ಮೇಲಿನ ಬಲಭಾಗದಲ್ಲಿರುವ ಲಾಗಿನ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
➥ಇದರ ನಂತರ OTP ಬಳಸಿ ಲಾಗಿನ್ ಮಾಡಿ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಒದಗಿಸಿ.
➥ಡ್ಯಾಶ್‌ಬೋರ್ಡ್‌ನಲ್ಲಿ ಮೈ ಪ್ರೊಫೈಲ್ ವಿಭಾಗವನ್ನು ಆಯ್ಕೆಮಾಡಿ ಅದು ನಿಮ್ಮ ಫಾಸ್ಟ್‌ಟ್ಯಾಗ್‌ನ KYC ಸ್ಟೇಟಸ್ ತೋರಿಸುತ್ತದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile