ಅಕ್ರಮ ಬಿಪಿಎಲ್ ಕಾರ್ಡ್ (BPL Card) ಬಳಕೆದಾರರನ್ನು ಗುರುತಿಸಿ ಭಾರಿ ಕಾರ್ಯಾಚರಣೆಯನ್ನು ನಡೆಸುತ್ತಿದೆ.
72 ಸರ್ಕಾರಿ ನೌಕರರು ಅಕ್ರಮ ಬಿಪಿಎಲ್ ಕಾರ್ಡ್ (BPL Card) ಹೊಂದಿರುವುದು ಅಚ್ಚರಿ ಮೂಡಿಸಿದೆ.
ಈ ಎಲ್ಲ ಸರ್ಕಾರಿ ನೌಕರರು ಮತ್ತು ಅಧಿಕ ಆದಾಯದೊಂದಿಗೆ ತೆರಿಗೆ ಪಾವತಿ ಮಾಡುವವರಿಂದ 4,12,890 ರೂಗಳ ದಂಡ ವಸೂಲಿ.
Ration Card Latest Update: ಕರ್ನಾಟಕದ ಆಹಾರ, ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ಹೊಸ ಹುಡುಕಾಟದಲ್ಲಿ ರಾಜ್ಯಾದ್ಯಂತ ಅಕ್ರಮವಾಗಿ ಬಿಪಿಎಲ್ ಕಾರ್ಡ್‌ಗಳನ್ನು (BPL Ration Card) ಹೊಂದಿದ್ದ ಸರ್ಕಾರಿ ನೌಕರರನ್ನು ಗುರುತಿಸಿ ಭಾರಿ ಕಾರ್ಯಾಚರಣೆಯನ್ನು ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸರ್ಕಾರ.
ಇದರ ಅಡಿಯಲ್ಲಿ ಈ ಎಲ್ಲ ಸರ್ಕಾರಿ ನೌಕರರು ಮತ್ತು ಅಧಿಕ ಆದಾಯದೊಂದಿಗೆ ತೆರಿಗೆ ಪಾವತಿ ಮಾಡುವವರು ಅಕ್ರಮವಾಗಿ ಪಡೆದುಕೊಂಡಿದ್ದ ಬಿಪಿಎಲ್ ಕಾರ್ಡ್‌ಗಳನ್ನು ಸರ್ಕಾರ ಪರಿಶೀಲಿಸಿದಾಗ ಈ ತಪ್ಪಿತಸ್ಥರ ಪಟ್ಟಿಯಲ್ಲಿ ಬರೋಬ್ಬರಿ 72 ಸರ್ಕಾರಿ ನೌಕರರನ್ನು ಗುರುತಿಸಲಾಗಿದ್ದು ಅವರಿಂದ ಸುಮಾರು 4,12,890 ರೂಗಳನ್ನು ದಂಡದ ಮೂಲಕ ವಸೂಲಿ ಮಾಡಲಾಗಿದೆ.
9000 ಬಿಪಿಎಲ್ ರೇಷನ್ ಕಾರ್ಡ್‌ಗಳ ಪರಿಶೀಲನೆ:
ಪ್ರಸ್ತುತ ಕೇವಲ 9000 ಬಿಪಿಎಲ್ ರೇಷನ್ ಕಾರ್ಡ್‌ಗಳನ್ನು ಪರಿಶೀಲಿಸಲಾಗಿದ್ದು ಇದರ ಆರಂಭದಲ್ಲೇ 72 ಸರ್ಕಾರಿ ನೌಕರರನ್ನು ಗುರುತಿಸಿ ಬರೋಬ್ಬರಿ 4,12,890 ರೂಗಳ ದಂಡ ವಸೂಲಿ ಮಾಡಲಾಗಿದೆ. ಇವುಗಳಲ್ಲಿ ಎಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ಗಳು ಸೇರಿದ್ದು ಕಳೆದ 1ನೇ ಏಪ್ರಿಲ್ ರಿಂದ 31ನೇ ಅಕ್ಟೋಬರ್ ವರೆಗೆ ಬರೋಬ್ಬರಿ 53,342 ಕಾರ್ಡ್‌ಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದೆ.
ಇವುಗಳಲ್ಲಿ 72 ಜನ ಸರ್ಕಾರಿ ನೌಕರರು ಪತ್ತೆಯಾಗಿದ್ದು ಸುಮಾರು 2,970 ಜನರು ತೆರಿಗೆ ಪಾವತಿ ಮಾಡುವವರಾಗಿದ್ದಾರೆ. ಸರ್ಕಾರ ಈಗ ಮತ್ತೆ 44 ಸಾವಿರ ಕಾರ್ಡ್‌ಗಳನ್ನು ಪರಿಶೀಲನೆ ಕೈಗೆತ್ತಿಕೊಂಡಿದ್ದು ಒಟ್ಟಾರೆಯಾಗಿ 9940 ಕಾರ್ಡ್‌ಗಳ ಪರಿಶೀಲನೆ ನಡೆಯುತ್ತಿದೆ.
Also Read: ಹೊಸ JioStar ರಿಚಾರ್ಜ್ ಯೋಜನೆಗಳು ಬಿಡುಗಡೆ! ತಿಂಗಳಿಗೆ ಕೇವಲ ₹15 ರೂಗಳಿಂದ ಪ್ಲಾನ್ ಆರಂಭ!
ಸುಮಾರು 70 ಬಿಪಿಎಲ್ Ration Card ಬಳಕೆದಾರರ ಹೆಸರು ರದ್ದು:
ಇದನ್ನು ಮುಂದುವರಿಸಿರುವ ಸರ್ಕಾರ ಒಟ್ಟು 2388 ಬಿಪಿಎಲ್ ಕಾರ್ಡ್‌ಗಳನ್ನು ಜಿಲ್ಲಾಆಹಾರ ಇಲಾಖೆ ವರ್ಗಾವಣೆ ಮಾಡಿದ್ದು ಈಗಾಗಲೇ ಮರಣ ಹೊಂದಿದ್ದವರ ಹೆಸರಲ್ಲಿ ಪ್ರಯೋಜನ ಪಡೆಯುತ್ತಿದ್ದ ಸುಮಾರು 70 ಬಿಪಿಎಲ್ ಕಾರ್ಡ್‌ದಾರರ ಹೆಸರನ್ನು ಪಟ್ಟಿಯಿಂದ ರದ್ದುಗೊಳಿಸಲಾಗಿದೆ. ಬಿಪಿಎಲ್ ಕಾರ್ಡ್‌ಗಳಿಂದ ಸಿಗುವ ಸೌಲಭ್ಯದ ಆಸೆಗಾಗಿ ಅಕ್ರಮವಾಗಿ ಕಾರ್ಡ್ ಮಾಡಿಸಿಕೊಂಡಿದ್ದ 72 ಸರ್ಕಾರಿ ನೌಕರರ ಕಾರ್ಡ್‌ಗಳನ್ನು APL ವಿಭಾಗಕ್ಕೆ ಬದಲಾಯಿಸಲಾಗಿದೆ.
ಅಲ್ಲದೆ ಕಳೆದ 6 ತಿಂಗಳಿಂದ ರೇಷನ್ ಪಡೆಯದ ಬಿಪಿಎಲ್ ಕಾರ್ಡ್‌ಗಳನ್ನು ಪ್ರಸ್ತುತ ಅಮಾನತು ಮಾಡಿದ್ದು ಇದಕ್ಕೆ ತಕ್ಕ ಸೂಕ್ತ ದಾಖಲೆಗಳನ್ನು ನೀಡಿ ಅವನ್ನು ಮತ್ತೆ ಸಕ್ರಿಯಗೊಳಿಸಿಕೊಳ್ಳಬೇಕೆಂದು ಸರ್ಕಾರ ತಿಳಿಸಿದೆ. ದೇಶದ ಯಾವುದೇ ಬ್ಯಾಂಕ್‌ನಿಂದ ಸಾಲ ಪಡೆಯಲು PAN Card ಸಲ್ಲಿಕೆ ಎಷ್ಟು ಮುಖ್ಯವೋ ಅದೇ ರೀತಿಯಲ್ಲಿ ತೆರಿಗೆ ಪಾವತಿಸುವುದು ಸಹ ಅಷ್ಟೇ ಕಡ್ಡಾಯವಾಗಿರುತ್ತದೆ. ಸಾಲ ಪಡೆಯಲು ತೆರಿಗೆ ಪಾವತಿ ಕಡ್ಡಾಯವಲ್ಲಎಂಬ ನಿಯಮ ಜಾರಿಗೆ ಬಂದರೆ ಸಣ್ಣ, ಪುಟ್ಟ ವ್ಯಾಪಾರ ನಡೆಸುವ ಬಿಪಿಎಲ್ ಕಾರ್ಡ್‌ದಾರರಿಗೆ ಅನುಕೂಲವಾಗುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile