Facebook: ಭಾರತದಲ್ಲಿ ಈಗ ಫೇಸ್ಬುಕ್ ಮೆಸೆಂಜರ್ ರೂಮ್ಗಳು ಲಭ್ಯ – 2020

Updated on 25-Apr-2020
HIGHLIGHTS

ಫೇಸ್ಬುಕ್ ಮೆಸೆಂಜರ್ ರೂಮ್ಗಳು ಮುಂಬರುವ ವಾರಗಳಲ್ಲಿ ಜಾಗತಿಕವಾಗಿ ಎಲ್ಲಾ ಬಳಕೆದಾರರನ್ನು ತಲುಪಲಿದೆ.

ಈ ಮೆಸೆಂಜರ್ ರೂಮ್ಗಳು ಲಿಂಕ್ ಅನ್ನು WhatsApp ನಂತಹ ಅಪ್ಲಿಕೇಶನ್‌ಗಳ ಮೂಲಕ ಇತರರೊಂದಿಗೆ ಹಂಚಿಕೊಳ್ಳಬಹುದು

ದೇಶದಲ್ಲಿ ಫೇಸ್ಬುಕ್ ಮೆಸೆಂಜರ್ ರೂಮ್‌ಗಳನ್ನು ಪರಿಚಯಿಸುವ ಮೂಲಕ ಫೇಸ್‌ಬುಕ್ ವೀಡಿಯೊ ಕರೆ ಫೀಚರ್ ಹೆಚ್ಚಾಗಿ ನೀಡುತ್ತಿದೆ. ಇದು ಜೂಮ್ ಮತ್ತು ಹೌಸ್‌ಪಾರ್ಟಿಯಂತಹ ಅಪ್ಲಿಕೇಶನ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ. ಮೆಸೆಂಜರ್ ಅಪ್ಲಿಕೇಶನ್‌ನಲ್ಲಿ ನಿರ್ಮಿಸಲಾದ ಈ ಹೊಸ ವೈಶಿಷ್ಟ್ಯವು ವೀಡಿಯೊ ಕರೆಯಲ್ಲಿ 50 ಜನರನ್ನು ಬೆಂಬಲಿಸುತ್ತದೆ ಮತ್ತು ಫೇಸ್‌ಬುಕ್ ಖಾತೆಯಿಲ್ಲದ ಜನರಿಗೆ ಸೇರಲು ಅನುವು ಮಾಡಿಕೊಡುತ್ತದೆ. ಫೇಸ್‌ಬುಕ್ ಪ್ರಸ್ತುತ ಕೆಲವು ದೇಶಗಳಲ್ಲಿ ಮೆಸೆಂಜರ್ ರೂಮ್ಗಳನ್ನು ಪರೀಕ್ಷಿಸುತ್ತಿದೆ. ಮತ್ತು ಇದು ಮುಂಬರುವ ವಾರಗಳಲ್ಲಿ ಜಾಗತಿಕವಾಗಿ ಎಲ್ಲಾ ಬಳಕೆದಾರರನ್ನು ತಲುಪಲಿದೆ. ಭಾರತದಲ್ಲಿ ಮೆಸೆಂಜರ್ ರೂಮ್‌ಗಳು ಈಗಾಗಲೇ ಲಭ್ಯವಿದೆ. ಮತ್ತು ಅದರ ಆಂಡ್ರಾಯ್ಡ್ ಮತ್ತು iOS  ಅಪ್ಲಿಕೇಶನ್‌ಗಳಲ್ಲಿ ಡೆಸ್ಕ್‌ಟಾಪ್ ಆವೃತ್ತಿ ಸಹ ಲಭ್ಯವಿದೆ.

ಫೇಸ್ಬುಕ್ ಮೆಸೆಂಜರ್ ರೂಮ್ಗಳನ್ನು ಪ್ರಾರಂಭಿಸುವುದೇಗೆ!

ಮೊದಲಿಗೆ ಆಂಡ್ರಾಯ್ಡ್ ಮತ್ತು ಐಒಎಸ್ನಲ್ಲಿ ಮೆಸೆಂಜರ್ ಅನ್ನು ತೆರೆದು ಮತ್ತು ಕೆಳಗಿನ ಪಟ್ಟಿಯಿಂದ ಜನರು (People) ಆಯ್ಕೆಮಾಡಿ. ನಂತರ ಮೇಲೆ ಹೊಸ ರೂಮ್ ರಚಿಸಿ (Create Room) ಆಯ್ಕೆಯನ್ನು ನೋಡಬವುದು ಅದರ ಮೇಲೆ ಟ್ಯಾಪ್ ಮಾಡಿದ ಕೂಡಲೇ ಅದು ವೀಡಿಯೊ ಚಾಟ್ ಬಾಕ್ಸ್‌ಗೆ ತೆರೆದುಕೊಳ್ಳುತ್ತದೆ. ಹೆಚ್ಚು ಸ್ಥಳಾವಕಾಶ ಇರುವುದರಿಂದ ಮೆಸೆಂಜರ್‌ನ ಡೆಸ್ಕ್‌ಟಾಪ್ ಅಪ್ಲಿಕೇಶನ್‌ನಲ್ಲಿ ಇದು ತುಂಬಾ ಸುಲಭವಾಗಿ ಬಳಸಬವುದು. ಸೆಟ್ಟಿಂಗ್‌ಗಳ ಗೇರ್ ಐಕಾನ್‌ನ ಪಕ್ಕದಲ್ಲಿ ರೂಮ್ ರಚಿಸಿ (Create Room) ಐಕಾನ್ ಅನ್ನು ನೋಡುತ್ತೀರಿ. ಇಲ್ಲಿ <ನಿಮ್ಮ ಪ್ರೊಫೈಲ್ ಹೆಸರು> ಆಗಿ ಸೇರಲು ನಿಮ್ಮನ್ನು ಕೇಳಲಾಗುತ್ತದೆ. ಮತ್ತು ನಿಮ್ಮ ಮೆಸೆಂಜರ್ ರೂಮ್ ಅನ್ನು ತೆರೆಯಲು ನೀವು ಅದನ್ನು ಸ್ವೀಕರಿಸಬಹುದು.

ಈಗ ನೀವು ಇಲ್ಲಿಗೆ ಬಂದ ನಂತರ ಆಂಡ್ರಾಯ್ಡ್ ಮತ್ತು iOS ಗಾಗಿ ಕೆಳಗಿನ ಶೇರ್ ಲಿಂಕ್ (Share Link) ಆಯ್ಕೆಯನ್ನು ಆರಿಸುವ ಮೂಲಕ ನಿಮ್ಮ ಮೆಸೆಂಜರ್ ರೂಮ್ ಲಿಂಕ್ ಅನ್ನು ಹಂಚಿಕೊಳ್ಳಬಹುದು. ಡೆಸ್ಕ್‌ಟಾಪ್ ಅಪ್ಲಿಕೇಶನ್‌ನಲ್ಲಿ ಕೆಳಗಿನ ಪಟ್ಟಿಯಲ್ಲಿ ಲಭ್ಯವಿರುವ ಕರೆ ಭಾಗವಹಿಸುವವರ ಐಕಾನ್ ಅನ್ನು ನೀವು ಆರಿಸಬೇಕಾಗುತ್ತದೆ. ನಂತರ ನೀವು ಲಿಂಕ್ ಅನ್ನು ನಕಲಿಸಬಹುದು. ಮತ್ತು ವಾಟ್ಸಾಪ್ ನಂತಹ ಅಪ್ಲಿಕೇಶನ್‌ಗಳ ಮೂಲಕ ಇತರರೊಂದಿಗೆ ಹಂಚಿಕೊಳ್ಳಬಹುದು. ನಂತರ ನೀವು  ರೂಮ್ ಅನ್ನು ಲಾಕ್ ಮಾಡಬಹುದು ಅದು ಇತರರು ಸೇರುವುದನ್ನು ತಡೆಯುತ್ತದೆ.

ಮೆಸೆಂಜರ್ ರೂಮ್ಗಳಲ್ಲಿ ಬಳಕೆದಾರರು 50 ಜನರೊಂದಿಗೆ ವೀಡಿಯೊ ಕರೆಗಳನ್ನು ಮಾಡಬಹುದು. ಪರದೆಗಳನ್ನು ಹಂಚಿಕೊಳ್ಳಲು ಒಂದು ಆಯ್ಕೆಯೂ ಇದೆ ಆದರೆ ಈ ವೈಶಿಷ್ಟ್ಯವನ್ನು ಮೆಸೆಂಜರ್‌ನ ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗೆ ನಿರ್ಬಂಧಿಸಲಾಗಿದೆ. ನೀವು ಭಾಗವಹಿಸುವ ಪ್ರತಿಯೊಬ್ಬರ ಐಕಾನ್ ಅನ್ನು ಟ್ಯಾಪ್ ಮಾಡಬಹುದು ಮತ್ತು ಅವರ ಫೇಸ್‌ಬುಕ್ ಪ್ರೊಫೈಲ್ ವೀಕ್ಷಿಸಬಹುದು ಅಥವಾ ಅವರೊಂದಿಗೆ ಚಾಟ್ ಮಾಡಬಹುದು. ಆದಾಗ್ಯೂ ಮೆಸೆಂಜರ್ ರೂಮ್‌ಗಳಲ್ಲಿನ ಗುಂಪು ವೀಡಿಯೊ ಕರೆಯೊಳಗೆ ಚಾಟ್ ಮಾಡಲು ಯಾವುದೇ ಆಯ್ಕೆಗಳಿಲ್ಲ. ಇದು ಬದಲಿಗೆ ಮೆಸೆಂಜರ್ ಅಪ್ಲಿಕೇಶನ್‌ಗೆ ಚಾಟ್ ಅನ್ನು ತೆರೆಯುತ್ತದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :