ಸರ್ಕಾರಿ ಕೆಲಸ ಮಾಡುವಾಗ ಅಥವಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವಾಗ ಪಿಎಫ್‌ನ ಒಂದು ಭಾಗವನ್ನು ಪ್ರತಿ ಉದ್ಯೋಗಿಯ ಸಂಬಳದಿಂದ ಕಡಿತಗೊಳಿಸಲಾಗುತ್ತದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ-EPFO) ಇತ್ತೀಚೆಗೆ ಯುನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ಮೂಲಕ ಟ್ವಿಟರ್‌ನಲ್ಲಿ ತಮ್ಮ ಕುಟುಂಬಗಳಿಗೆ ಸಾಮಾಜಿಕ ಭದ್ರತೆಯನ್ನು ದೃಢೀಕರಿಸಲು ನಾಮಿನೇಷನ್ಗಳನ್ನು ಸಲ್ಲಿಸಲು ಜನರನ್ನು ಕೇಳಿದೆ. ನೀವು ಇದನ್ನು ಹೇಗೆ ಮಾಡಬಹುದು ಎಂದು ಕೆಳಗೆ ನೋಡಿ.
ಸರ್ಕಾರದ EPFO ನ ಟ್ವೀಟ್ ಪ್ರಕಾರ ಅರ್ಹ ಕುಟುಂಬ ಸದಸ್ಯರಿಗೆ 7 ಲಕ್ಷ ರೂ.ವರೆಗೆ PF, ಪಿಂಚಣಿ ಮತ್ತು ಉದ್ಯೋಗಿ ಠೇವಣಿ-ಸಂಯೋಜಿತ ವಿಮಾ ಯೋಜನೆ (EDLI) ನ ಆನ್‌ಲೈನ್ ಪಾವತಿಗೆ ನಾಮಿನೇಷನ್ ಅಗತ್ಯವಾಗಿದೆ. ಮದುವೆಯ ನಂತರ ಇ-ನಾಮಿನೇಷನ್ ಕಡ್ಡಾಯ ಎಂದು ಇಪಿಎಫ್‌ಒ ಕೂಡ ಸ್ಪಷ್ಟಪಡಿಸಿದೆ.
ನಾಗರಿಕರು ಯಾವಾಗ ಬೇಕಾದರೂ ನಾಮಿನೇಷನ್ ನವೀಕರಿಸಬಹುದು. ಮತ್ತು ಇದಕ್ಕೆ ಯಾವುದೇ ದಾಖಲೆಗಳು ಅಥವಾ ಅಧಿಕಾರಗಳ ಅಗತ್ಯವಿಲ್ಲ ಎಂದು EPFO ಗಮನಿಸಿದೆ. ಸ್ವಯಂ ಘೋಷಣೆ ಅಗತ್ಯ. ನಾಮಿನೇಷನ್ ಕೊನೆಯ ದಿನಾಂಕದ ಕುರಿತು ಮಾತನಾಡುಡುವುದಾದರೆ ನೀವು 31ನೇ ಮಾರ್ಚ್ 2022 ರೊಳಗೆ ಈ ಕೆಲಸವನ್ನು ಮಾಡುವುದು ಕಡ್ಡಾಯವಾಗಿದೆ.
ಹಂತ 1: ಮೊದಲಿಗೆ ನೀವು EPFO ವೆಬ್‌ಸೈಟ್ 'https://epfindia.gov.in/' ಗೆ ಹೋಗಬೇಕು.
ಹಂತ 2: ಸೇವೆಯ ಮೇಲೆ ಕ್ಲಿಕ್ ಮಾಡಿ ಮತ್ತು 'ಉದ್ಯೋಗಕ್ಕಾಗಿ' ಆಯ್ಕೆಮಾಡಿ.
ಹಂತ 3: ಉದ್ಯೋಗಿಗಳಿಗಾಗಿ' ಪುಟದಲ್ಲಿ 'ಸೇವೆಗಳು' ವಿಭಾಗಕ್ಕೆ ಹೋಗಿ ಮತ್ತು 'ಸದಸ್ಯರು UAN/ಆನ್‌ಲೈನ್ ಸೇವೆ (OCS/OTCP)' ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 4: ನಿಮ್ಮ UAN ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಮಾಡಿ.
ಹಂತ 5: ಮ್ಯಾನೇಜ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಮತ್ತು ನಾಮಿನೇಷನ್ ಆಯ್ಕೆಯನ್ನು ಆರಿಸಿ.
ಹಂತ 6: ವಿವರಗಳನ್ನು ಒದಗಿಸುವ ಟ್ಯಾಬ್ ಅಡಿಯಲ್ಲಿ ವಿವರಗಳನ್ನು ನಮೂದಿಸಿ ಮತ್ತು ಉಳಿಸು ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 7: ಕುಟುಂಬ ಘೋಷಣೆಗಾಗಿ ಹೌದು ಕ್ಲಿಕ್ ಮಾಡಿ ಮತ್ತು ನಂತರ 'ಕುಟುಂಬ ವಿವರಗಳನ್ನು ಸೇರಿಸಿ' ಕ್ಲಿಕ್ ಮಾಡಿ.
ಹಂತ 8: ಇದು ನಿಮಗೆ ನಾಮಿನೀ ಆಡ್ ಆಯ್ಕೆಯನ್ನು ನೀಡುತ್ತದೆ.
ಹಂತ 9: ನಾಮಿನೇಷನ್ ವಿವರಗಳು' ಆಯ್ಕೆ ಮಾಡಿ ಮತ್ತು ಸೇವ್ ಇಪಿಎಫ್/ಇಡಿಎಲ್ಐ ನಾಮಿನೇಷನ್ ಮೇಲೆ ಕ್ಲಿಕ್ ಮಾಡಿ.
ಹಂತ 10: ಈಗ ಇ-ಸೈನ್ ಫಾರ್ ಒನ್-ಟೈಮ್ ಪಾಸ್‌ವರ್ಡ್ (OTP) ಕ್ಲಿಕ್ ಮಾಡಿ ಮತ್ತು ಆಧಾರ್‌ನೊಂದಿಗೆ ನೋಂದಾಯಿಸಲಾದ ನಿಮ್ಮ ಮೊಬೈಲ್ ಸಂಖ್ಯೆಗೆ ಸ್ವೀಕರಿಸಿದ OTP ಅನ್ನು ನಮೂದಿಸಿ. ಎಲ್ಲಾ ಮುಗಿದ ನಂತರ ನಿಮ್ಮ ನಾಮಿನೇಷನ್ ಪ್ರಕ್ರಿಯೆಯು ಪೂರ್ಣಗೊಂಡಿದೆ.
ನಾಮಿನೇಷನ್ ಕಾರ್ಯವನ್ನು ನೀವು ಪೂರ್ಣಗೊಳಿಸದಿದ್ದರೆ ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಹಣವು ಸಿಲುಕಿಕೊಳ್ಳಬಹುದು ಮತ್ತು ಪಾಸ್‌ಬುಕ್ ಅನ್ನು ನೋಡಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ಹಣ ಹೇಗೆ ಯಾರಿಗೂ ಸಿಗೋದಿಲ್ಲ ಎಂಬ ಈ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಬರಬೇಕು. ಹಾಗಾದರೆ ಖಾತೆದಾರರು ಒಂದು ವೇಳೆ ಸತ್ತರೆ ನಾಮಪತ್ರವನ್ನು ಭರ್ತಿ ಮಾಡದಿದ್ದಲ್ಲಿ ಹಣ ಯಾರಿಗೂ ಸಿಗೋದಿಲ್ಲ.