Starlink: ಎಲಾನ್‌ ಮಸ್ಕ್‌ 52 ಸ್ಟಾರ್‌ಲಿಂಕ್ ಸ್ಯಾಟ್‌ಲೈಟ್ಗಳನ್ನು ಕ್ಯಾಲಿಫೋರ್ನಿಯಾದಿಂದ ಉಡಾವಣೆ!

Updated on 22-Dec-2021
HIGHLIGHTS

ಇಂಟರ್ನೆಟ್ ಸೇವೆ ಇಲ್ಲದ ಜಗತ್ತಿನ ಎಲ್ಲ ಕಡೆಗೂ ಇಂಟರ್ನೆಟ್ ಸೇವೆ ಒದಗಿಸುವ ಗುರಿ

ಎಲಾನ್ ಮಸ್ಕ್ ನೇತೃತ್ವದ ಸ್ಟಾರ್‌ಲಿಂಕ್ ಉಪಗ್ರಹ ಆಧರಿತ ಇಂಟರ್ನೆಟ್ ನೀಡಲಿದೆ

ಅಮೆರಿಕದ ಕ್ಯಾಲಿಫೋರ್ನಿಯಾದ ಬೇಸ್‌ನಿಂದ ಫಾಲ್ಕಾನ್ 9 ರಾಕೆಟ್‌ಗಳ ಮೂಲಕ ಲಾಂಚ್

ಸ್ಯಾಟ್‌ಲೈಟ್‌ಗಳ ಮೂಲಕ ಜಗತ್ತಿನ ಎಲ್ಲ ಕಡೆಯೂ ಇಂಟರ್ನೆಟ್‌ (Internet) ಸೇವೆಯನ್ನು ಒದಗಿಸುವ ಗುರಿಯನ್ನು ಹಾಕಿಕೊಂಡಿರುವ ಎಲಾನ್ ಮಸ್ಕ್ (Elon Musk) ಒಡೆತನದ ಸ್ಪೇಸ್ ಎಕ್ಸ್ (SpaceX) ಈಗ ಮತ್ತೊಂದು  ಕಾರ್ಯವನ್ನು ಮಾಡಿದೆ. ಸ್ಯಾಟ್‌ಲೈಟ್ ಇಂಟರ್ನೆಟ್ ಒದಗಿಸುವುದಕ್ಕಾಗಿ ಸ್ಪೇಸ್ ಎಕ್ಸ್ (SpaceX) ಕ್ಯಾಲಿಫೋರ್ನಿಯಾ ಹತ್ತಿರದ ಉಡಾವಣೆ ಕೇಂದ್ರದಿಂದ 52 ಸ್ಟಾರ್‌ಲಿಂಕ್ (Starlink) ಸ್ಯಾಟ್‌ಲೈಟ್‌ಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. 

ಈ ಎಲ್ಲ ಸ್ಯಾಟ್‌ಲೈಟ್‌ಗಳನ್ನು ಸುರಕ್ಷಿತವಾಗಿ ಅವುಗಳ ಕಕ್ಷೆಯಲ್ಲಿ ಇರಿಸಲು ಸ್ಪೇಸ್‌ಎಕ್ಸ್ (SpaceX) ಯಶಸ್ವಿಯಾಗಿದೆ. ಸ್ಪೇಸ್ಎಕ್ಸ್ ಕಂಪನಿಯ ಭಾಗವಾಗಿರುವ ಸ್ಟಾರ್‌ಲಿಂಕ್ ಭಾರತದಲ್ಲೂ ತನ್ನ ಕಾರ್ಯಾಚರಣೆ ಆರಂಭಿಸಲಿದೆ ಎಂಬುದು ಈಗಾಗಲೇ ಗೊತ್ತಿರುವ ಸಂಗತಿ. ಸ್ಯಾಟ್‌ಲೈಟ್ ಇಂಟರ್ನೆಟ್ ಸೇವೆಯನ್ನು ಒದಗಿಸಲು ಭಾರತದ ಸರಕಾರದ ಅನುಮತಿಗಾಗಿ ಅರ್ಜಿ ಸಲ್ಲಿಸಲಿದೆ ಎಂದು ಇತ್ತೀಚೆಗಷ್ಟೇ ಸುದ್ದಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಕ್ಯಾಲಿಫೋರ್ನಿಯಾದ ವಂಡೇನ್‌ಬರ್ಗ್ ಸ್ಪೇಸ್ ಫೋರ್ಸ್ ಬೇಸ್ (Vandeberg Space Force Base) ಶನಿವಾರ ಸ್ಟಾರ್‌ಲಿಂಕ್ ಸ್ಯಾಟ್‌ಲೈಟ್‌ಗಳನ್ನು ಹೊತ್ತ ಎರಡು ಹಂತದ ಫಾಲ್ಕನ್ 9 (Falcon 9) ರಾಕೆಟ್‌ಗಳು ಉಡಾವಣೆಯಾದವು. ಆ ನಂತರ ಮೊದಲ ಹಂತದ ರಾಕೆಟ್ ಹಿಂದುರಿಗಿ ಸಮುದ್ರದಲ್ಲಿನ ಸ್ಪೇಸ್‌ಎಕ್ಸ್ (SpaceX) ಡ್ರೋನ್‌ಶಿಪ್‌ನಲ್ಲಿ ಇಳಿಯಿತು. ಇದು 11ನೇಯ ಉಡಾವಣೆಯಾಗಿದೆ. ರಾಕೆಟ್‌ನ ಎರಡನೇ ಹಂತವು ಕಕ್ಷೆಗೆ ನೆಗೆದಿದ್ದು, ಸ್ಯಾಟ್ಲೈಟ್‌ಗಳನ್ನು ಅವುಗಳ ಸ್ಥಾನದಲ್ಲಿ ಇರಿಸಲು ಯಶಸ್ವಿಯಾಗಿದೆ ಎಂದು ಹೇಳಲಾಗಿದೆ. 

ಈ ಮೊದಲೇ ಹೇಳಿದಂತೆ ಸ್ಟಾರ್‌ಲಿಂಕ್ ಸ್ಯಾಟ್‌ಲೈಟ್ ಆಧರಿತ ಜಾಗತಿ ಇಂಟರ್ನೆಟ್ ಸಿಸ್ಟಮ್ ಆಗಿದೆ. ಹಲವು ವರ್ಷಗಳಿಂದ ಈ ದಿಶೆಯಲ್ಲಿ ಕೆಲಸ ಮಾಡುತ್ತಿರುವ ಸ್ಪೇಸ್ ಎಕ್ಸ್ ಜಗತ್ತಿನ ಇಂಟರ್ನೆಟ್ ರಹಿತ ಪ್ರದೇಶಗಳಿಗೂ ಇಂಟರ್ನೆಟ್ ಸೌಲಭ್ಯ ಕಲ್ಪಿಸಲು ಮುಂದಾಗುತ್ತಿದೆ. ಶನಿವಾರದ ಮಿಷನ್, ಸ್ಟಾರ್‌ಲಿಂಕ್ನ 34ನೇ ಉಡಾವಣೆಯಾಗಿದೆ. ಭೂಮಿಯ ಕೆಳ ಹಂತದ ಕಕ್ಷೆಗೆ ಒಟ್ಟು 2000 ಸ್ಯಾಟ್‌ಲೈಟ್‌ಗಳನ್ನು ಸೇರಿಸುವ ಗುರಿಯನ್ನು  ಸ್ಟಾರ್‌ಲಿಂಕ್ ಹಾಕಿಗೊಂಡಿದೆ. 

ಭಾರತದಲ್ಲೂ ಸ್ಟಾರ್‌ಲಿಂಕ್ ಸ್ಯಾಟ್‌ಲೈಟ್ ಇಂಟರ್ನೆಟ್

ಬೃಹತ್ ಉದ್ದಿಮೆದಾರ ಎಲಾನ್ ಮಸ್ಕ್ (Elon Musk) ಅವರು ಸ್ಪೇಸ್‌ಎಕ್ಸ್ (SpaceX) ಕಮರ್ಷಿಯಲ್ ರಾಕೆಟ್‌ ಕಂಪನಿ ಮೂಲಕ ಹೊಸ ಸಂಚಲನ ಹುಟ್ಟು ಹಾಕಿದ್ದಾರೆ. ಬಾನಂಚಿನ ಪ್ರವಾಸವನ್ನು ಆಯೋಜಿಸುವ ಮೂಲಕ ಹೊಸ ಅಧ್ಯಾಯವನ್ನೇ  ಬರೆದಿದ್ದಾರೆ. ಅದೇ ಎಲಾನ್ ಮಸ್ಕ್ ನೇತೃತ್ವದ ಸ್ಟಾರ್ ಲಿಂಕ್ (Starlink) ಮತ್ತೊಂದು ಸಾಹಸವನ್ನು ಮಾಡಿದೆ. ಈಗಾಗಲೇ ಈ ಸ್ಟಾರ್‌ಲಿಂಕ್ ಸ್ಯಾಟಲೈಟ್ ಇಂಟರ್ನೆಟ್ ಸೇವೆಯನ್ನು ಒದಗಿಸುತ್ತಿದೆ. ಅಂಥದ್ದೇ ಸೇವೆಯನ್ನು ಸ್ಟಾರ್ ಲಿಂಕ್ (Starlink) ಭಾರತ (India) ದಲ್ಲೂ ನೀಡಲಿದೆ ಎಂದು ಹೇಳಲಾಗಿತ್ತು. ಅದೀಗ ನಿಜವಾಗುವ ಸಂದರ್ಭ ಎದುರಾಗಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :