ಎಲೋನ್ ಮಸ್ಕ್ Twitter ಅನ್ನು ಖರೀದಿಸಿದ್ದಾರೆ! ನೀವು ತಿಳಿದುಕೊಳ್ಳಬೇಕಾದ 5 ವಿಷಯಗಳು ಇಲ್ಲಿವೆ

Updated on 27-Apr-2022
HIGHLIGHTS

ವಿಶ್ವದ ನಂಬರ್‌ 1 ಶ್ರೀಮಂತ ಜನಪ್ರಿಯ ಎಲಾನ್ ಮಸ್ಕ್

ಟೆಸ್ಲಾ ಕಂಪೆನಿ ಸಿಇಒ ಎಲಾನ್ ಮಸ್ಕ್ ಅವರು ವಿಶ್ವದ ಅತ್ಯಂತ ಜನಪ್ರಿಯ ಮೈಕ್ರೋಬ್ಲಾಗಿಂಗ್ ಜಾಲತಾಣ ಟ್ಟಿಟ್ಟರ್

ಇಲ್ಲಿಯವರೆಗೂ ಷೇರುದಾರರ ಹಿಡಿತದಲ್ಲಿದ್ದ ಟ್ವಿಟ್ಟರ್ ಕಂಪೆನಿಯು ಇದೀಗ ಖಾಸಾಗಿ ಕಂಪೆನಿಯಾಗಿ ಬದಲಾಗಿದೆ.

ವಿಶ್ವದ ನಂಬರ್‌ 1 ಶ್ರೀಮಂತ ಜನಪ್ರಿಯ ಟೆಸ್ಲಾ ಕಂಪೆನಿ ಸಿಇಒ ಎಲಾನ್ ಮಸ್ಕ್ ಅವರು ವಿಶ್ವದ ಅತ್ಯಂತ ಜನಪ್ರಿಯ ಮೈಕ್ರೋಬ್ಲಾಗಿಂಗ್ ಜಾಲತಾಣ ಟ್ಟಿಟ್ಟರ್ ಕಂಪೆನಿಯನ್ನು ಖರೀದಿಸಿರುವ ವಿಷಯ ಈಗಾಗಲೇ ನಿಮಗೆ ತಿಳಿದಿರಬಹುದು. ಒಂದು ಕಾಲದಲ್ಲಿ ಟ್ವಿಟ್ಟರ್ ಕಾರ್ಯ ತಂತ್ರಗಳನ್ನು ಟೀಕಿಸುತ್ತಲೇ ಇದ್ದ ವ್ಯಕ್ತಿ ಇಂದು ಅದೇ ಸಂಸ್ಥೆಯನ್ನು ಇದುವರೆಗಿನ ಉದ್ಯಮ ಜಗತ್ತಿನಲ್ಲಿ ನಡೆದ ಬೃಹತ್‌ ವ್ಯಾಪಾರದಲ್ಲಿ ತನ್ನ ಕೈವಶ ಮಾಡಿಕೊಂಡಿದ್ದಾನೆ. ಇದೀಗ ಟ್ಟಿಟ್ಟರ್ ಜಾಲತಾಣವು 44 ಶತಕೋಟಿ ಡಾಲರ್ ಮೊತ್ತಕ್ಕೆ ಅಥವಾ 3.37 ಲಕ್ಷ ಕೋಟಿ ರೂ.ಗೆ ಎಲಾನ್ ಮಸ್ಕ್ ಅವರ ಪಾಲಾಗಿದ್ದು ಇಲ್ಲಿಯವರೆಗೂ ಷೇರುದಾರರ ಹಿಡಿತದಲ್ಲಿದ್ದ ಟ್ವಿಟ್ಟರ್ ಕಂಪೆನಿಯು ಇದೀಗ ಖಾಸಾಗಿ ಕಂಪೆನಿಯಾಗಿ ಬದಲಾಗಿದೆ.

ಟ್ವಿಟ್ಟರ್ ಇದೀಗ ಪೂರ್ತಿ ಎಲಾನ್ ಮಸ್ಕ್ ಪಾಲು!

ಎಲಾನ್‌ ಮಸ್ಕ್‌ ಮೈಕ್ರೋಬ್ಲಾಗಿಂಗ್‌ ತಾಣ ಟ್ಟಿಟ್ಟರ್‌ನ್ನು ಖರೀದಿಸಿದ್ದು 44 ಬಿಲಿಯನ್‌ ಡಾಲರ್‌ ನಡೆಯಲಿದ್ದು ಈವರೆಗೆ ಉದ್ಯಮ ಜಗತ್ತಿನಲ್ಲಿ ನಡೆದ ಬೃಹತ್‌ ಡೀಲ್‌ ಇದಾಗಲಿದೆ. ಟ್ವಿಟರ್ ಖರೀದಿ ಪ್ರಸ್ತಾಪಕ್ಕೆ ಮಂಡಳಿ ಸಮ್ಮತಿ ಸೂಚಿಸುವುದರೊಂದಿಗೆ ಕಂಪನಿ ಪೂರ್ತಿಯಾಗಿ ಇದೀಗ ಎಲಾನ್ ಮಸ್ಕ್ ಪಾಲಾಗಿದೆ.2013 ರ ನಂತರ ಟ್ವಿಟರ್ ಸಾರ್ವಜನಿಕ ಷೇರು ಮೂಲಕ ಹೂಡಿಕೆ ಕಂಪನಿಯಾಗಿ ಬದಲಾಗಿತ್ತು. ಆದರೆ ಈಗ ಪೂರ್ತಿ ಷೇರು ಮಾರಾಟವಾಗಿ ಎಲಾನ್ ಮಸ್ಕ್ ತೆಕ್ಕೆಗೆ ಬಂದಿರುವುದರಿಂದ ಮುಂದೆ ಖಾಸಗಿ ಕಂಪನಿಯಾಗಿ ಮುಂದುವರಿಯಲಿದೆ.

ಟ್ವಿಟ್ಟರ್ ಖರೀದಿಸಿದ ನಂತರ ಎಲಾನ್ ಮಸ್ಕ್ ಅವರು ಹೇಳಿದ್ದೇನು?

ವಾಕ್ ಸ್ವಾತಂತ್ರ್ಯವು ಕಾರ್ಯರೂಪದಲ್ಲಿರುವ ಯಾವುದೇ ಪ್ರಜಾಪ್ರಭುತ್ವದ ತಳಹದಿಯಾಗಿದೆ. ಟ್ವಿಟರ್ ಎನ್ನುವ ಡಿಜಿಟಲ್ ಜಗಲಿಯಲ್ಲಿ ಮನುಷ್ಯತ್ವದ ಭವಿಷ್ಯದ ಬಗ್ಗೆ ಚರ್ಚೆಯಾಗುತ್ತದೆ. ಟ್ವಿಟರ್ನ ಆಲ್ಗೊರಿದಂಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವುದಷ್ಟೇ ಅಲ್ಲದೆ ಎಲ್ಲರನ್ನೂ ತಲುಪುವಂತೆ ಮಾಡಬೇಕಿದೆ. ಟ್ವಿಟ್ಟರ್ಗೆ ಅಗಾಧವಾಗಿ ಬೆಳೆಯುವ ಸಾಮರ್ಥ್ಯವಿದೆ. ಅದನ್ನು ಸಾಧ್ಯವಾಗಿಸಲು ಕಂಪನಿಯೊಂದಿಗೆ ಬಳಕೆದಾರರೊಂದಿಗೆ ಕೆಲಸ ಮಾಡಲು ನಾನು ಬಯಸುತ್ತೇನೆಂದು ಹೇಳಿದ್ದಾರೆ. ಅಲ್ಲದೆ ನನ್ನನ್ನು ಕೆಟ್ಟದಾಗಿ ಟೀಕಿಸುವವರು ಕೂಡ ಟ್ವಿಟರ್ನಲ್ಲಿಯೇ ಉಳಿಯಬೇಕೆಂದು ಬಯಸುತ್ತೇನೆ. ವಾಕ್ ಸ್ವಾತಂತ್ರ್ಯ ಎಂದರೆ ಅದೇ ತಾನೆ’ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಚಿತ್ರ ವಿಚಿತ್ರ ಪ್ರಸ್ತಾಪಗಳನ್ನು ಹಂಚಿಕೊಂಡ ಮಸ್ಕ್!

8.3 ಕೋಟಿಗೂ ಹೆಚ್ಚು ಟ್ವಿಟ್ಟರ್‌ ಅನುಯಾಯಿಗಳನ್ನು ಹೊಂದಿರುವ ಎಲಾನ್‌ ಮಸ್ಕ್‌ ಟ್ವಿಟ್ಟರ್‌ನ ಶೇ. 9ರಷ್ಟು ಷೇರನ್ನು ಖರೀದಿಸಿರುವುದಾಗಿ ಕೆಲ ದಿನಗಳ ಹಿಂದೆ ಘೋಷಿಸಿದ್ದರು. ನಂತರ ನಂತರ ಟ್ವಿಟ್ಟರ್‌ ಆಡಳಿತ ಮಂಡಳಿ ಸೇರುವ ಪ್ರಸ್ತಾಪ ತಿರಸ್ಕರಿಸಿದ್ದ ಅವರು ನೇರವಾಗಿ ಖರೀದಿ ಪ್ರಸ್ತಾಪವನ್ನೇ ಮುಂದಿಟ್ಟಿದ್ದ. ಕಂಪನಿಯ ಅಲ್ಗಾರಿದಮ್‌ಗಳು ಪಕ್ಷಪಾತದಿಂದ ಕೂಡಿದ್ದು ಸ್ವಯಂಚಾಲಿತ ಜಂಕ್ ಪೋಸ್ಟ್‌ಗಳೊಂದಿಗೆ ಫೀಡ್‌ಗಳು ಅಸ್ತವ್ಯಸ್ತಗೊಂಡಿವೆ ಎಂದು ಆರೋಪಿಸಿದ್ದ ಮಸ್ಕ್‌.

ಎಲಾನ್ ಮಸ್ಕ್ ಅವರಿಗೆ ಹೆದರಿದ ಷೇರುದಾರರು?

ಎಲಾನ್‌ ಮಸ್ಕ್‌ ಟ್ವಿಟ್ಟರ್‌ನ ಖರೀದಿಗಾಗಿ ಪ್ರತಿ ಷೇರಿಗೆ 54.20 ಡಾಲರ್‌ ನೀಡುವ ಆಫರ್ ಮುಂದಿಟ್ಟಿದ್ದರು. ಆದರೆ ಟ್ವಿಟ್ಟಟರ್‌ನಲ್ಲಿ ಶೇ. 5.2ರಷ್ಟು ಪಾಲನ್ನು ಹೊಂದಿದ್ದ ಸೌದಿ ರಾಜಕುಮಾರ ಅಲ್ವಾಲೀದ್ ಬಿನ್ ತಲಾಲ್ ಈ ಆಫರ್ ಅನ್ನು ತಿರಸ್ಕರಿಸಿದ್ದರು. ಇದಾದ ನಂತರ ಎಲ್ಆನ್ ಮಸ್ಕ್ ಅವರು ಈ 'ಅತ್ಯುತ್ತಮ ಮತ್ತು ಅಂತಿಮ ಪ್ರಸ್ತಾಪವನ್ನು' ತಿರಸ್ಕರಿಸಿದರೆ ಷೇರುದಾರನಾಗಿ ತಮ್ಮ ಸ್ಥಾನವನ್ನು ಮುಂದುವರಿಸುವ ಬಗ್ಗೆ ಮರುಪರಿಶೀಲಿಸಬೇಕಾಗುತ್ತದೆ ಎಂದು ಖಾರವಾಗಿ ಹೇಳಿದ್ದರು. ಇದರಿಂದ ಹೆದರಿದ ಉಳಿದ ಷೇರುದಾರರು ಟ್ವಿಟ್ಟರ್ ಅನ್ನು ಮಾರಲು ಇಚ್ಚಿಸಿರಬಹುದು ಎನ್ನಲಾಗುತ್ತಿದೆ. ಒಂದು ವೇಳೆ ಎಲಾನ್ ಮಸ್ಕ್ ಅವರು ಟ್ಟಟ್ಟರ್ ಬಿಟ್ಟು ಹೊರನಡೆದರೆ ಲಕ್ಷಾಂತರ ಕೋಟಿಯಷ್ಟು ನಷ್ಟವನ್ನು ಅನುಭವಿಸುವ ಸಂಭವ ಎದುರಾಗುತ್ತಿತ್ತು.

ಭಾರತೀಯ ಸಿಇಒ ಪರಾಗ್ ಅಗರ್‌ವಾಲ್ ಕಥೆ ಏನು?

ಈ ಮಾರಾಟ ಪ್ರಕ್ರಿಯೆ ಬಳಿಕ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿರುವ ಟ್ವಿಟ್ಟರ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಭಾರತ ಮೂಲದ ಪರಾಗ್ ಅಗರವಾಲ್ ಸಾಮಾಜಿಕ ಮಾಧ್ಯಮ ಸಂಸ್ಥೆಯ ಭವಿಷ್ಯ ಅನಿಶ್ಚಿತವಾಗಿದೆ ಎಂದು ಹೇಳಿದ್ದಾರೆ. "ಖರೀದಿ ಒಪ್ಪಂದ ಮುಗಿದ ಬಳಿಕ ಸಂಸ್ಥೆ ಯಾವ ದಿಕ್ಕಿನಲ್ಲಿ ಹೋಗಲಿದೆ ಎನ್ನುವುದು ನಮಗೆ ತಿಳಿದಿಲ್ಲ. ಎಲಾನ್ ಅವರ ಜತೆ ಮಾತನಾಡಲು ಅವಕಾಶ ಸಿಕ್ಕಾಗ ಅವರಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಅವರಿಗೇ ಕೇಳಬೇಕೆಂದು ನಾನು ನಂಬಿದ್ದೇನೆ" ಎಂದು ಅಗರವಾಲ್ ಹೇಳಿದ್ದಾರೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :