ನಿಮ್ಮ ಪಾರ್ಸೆಲ್‌ನಲ್ಲಿ ಡ್ರಗ್ಸ್ (Drugs-in-parce) ಇದೆಯೆಂದು ಹೇಳಿ 11 ಲಕ್ಷ ಉಡೀಸ್ ಮಾಡಿದ ಹ್ಯಾಕರ್ಸ್!
ನಿಮ್ಮ ಹೆಸರಿನಲ್ಲಿ ಇರಾನ್‌ಗೆ ಕಳುಹಿಸಲಾಗುತ್ತಿರುವ ಪಾರ್ಸೆಲ್‌ನಲ್ಲಿ ಡ್ರಗ್ಸ್ (Drugs-in-parce) ತುಂಬಿದೆ.
26 ವರ್ಷದ ಪುಣೆಯ ಬ್ಯಾಂಕ್ ಉದ್ಯೋಗಿಯಾಗಿರುವ ಯುವತಿಯೊಂದಿಗೆ ಈ ಪಾರ್ಸೆಲ್ ವಂಚನೆ ನಡೆದಿದೆ.
ಖಾಸಗಿ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿ ಪುಣೆ ನಿವಾಸಿ ಆನ್‌ಲೈನ್‌ನಲ್ಲಿ ಮಾಡಿದ ಆರ್ಡರ್‌ನ ಪಾರ್ಸೆಲ್‌ನಲ್ಲಿ ಡ್ರಗ್ಸ್ (Drugs in parcel) ಇದೆಯೆಂದು ಹೇಳಿ 11 ಲಕ್ಷ ಉಡೀಸ್ ಮಾಡಿದ ಹ್ಯಾಕರ್ಸ್! ಈ ಕಾರ್ಯಕ್ಕೆ ಪುಣೆಯ 26 ವರ್ಷದ ಯುವತಿ ಪಾರ್ಸೆಲ್ ವಂಚನೆಗೆ ಬಲಿಯಾಗಿದ್ದಾಳೆ. ಈ ಮಹಿಳೆ ಖಾಸಗಿ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ವಂಚಕನು ಕೊರಿಯರ್ ಕಂಪನಿಯ ಅಧಿಕಾರಿಯಂತೆ ನಟಿಸಿ ಅವರಿಗೆ ಕರೆ ಮಾಡಿದ್ದ. ಆಕೆಯ ಹೆಸರಿನಲ್ಲಿ ಇರಾನ್‌ಗೆ ಕಳುಹಿಸಲಾಗುತ್ತಿರುವ ಪಾರ್ಸೆಲ್‌ನಲ್ಲಿ ಡ್ರಗ್ಸ್ ತುಂಬಿದೆ ಎಂದು ಮಹಿಳೆಗೆ ತಿಳಿಸಿದ್ದಾನೆ.
Also Read: Reliance Jio ಹೊಸ ಪ್ಲಾನ್ ಪ್ರತಿದಿನ 2.5GB ಡೇಟಾ ಮತ್ತು ಕರೆಗಳು 30 ದಿನಗಳಿಗೆ ನೀಡುತ್ತದೆ
ಪಾರ್ಸಲ್‌ನಲ್ಲಿ ಡ್ರಗ್ಸ್ (Drugs in parcel) ಹೊಂದಿರುವುದಾಗಿ ವರದಿ!
ನಿಮ್ಮ ಪಾರ್ಸೆಲ್‌ನಲ್ಲಿ ಕೆಲವು ಡೆಬಿಟ್ ಕಾರ್ಡ್‌ಗಳು, ಹಳೆಯ ಪಾಸ್‌ಪೋರ್ಟ್‌ಗಳು ಮತ್ತು 500gm ಡ್ರಗ್ಸ್ ತುಂಬಿದ ಆಟಿಕೆಗಳಿವೆ ಎಂದು ವಂಚಕನು ಹೇಳಿ ಮಹಿಳೆಗೆ ನಂಬಿಸಿದ್ದಾನೆ. ನಂತರ ಮಹಿಳೆಯನ್ನು ‘ಪೊಲೀಸ್ ಅಧಿಕಾರಿ’ ಜತೆ ಮಾತನಾಡುವಂತೆ ಮಾಡಿದರು. ಈ ಸಂಭಾಷಣೆಯು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ನಲ್ಲಿ ವೀಡಿಯೊ ಕರೆ ಮೂಲಕ ನಡೆದಿದೆ. ಆ ಅಧಿಕಾರಿಯ ಪ್ರೊಫೈಲ್ ಚಿತ್ರ ಮತ್ತು ಹೆಸರು ನಕಲಿಕರಿಸಿಕೊಂಡು ಇದಕ್ಕೆ ಕೈ ಹಾಕಿದ್ದಾರೆ.
ಈ ರೀತಿ ಖಾತೆಯಿಂದ ಹಣ ತೆಗೆದುಕೊಳ್ಳಲಾಗಿದೆ
ಇದಾದ ಬಳಿಕ ವಂಚಕರು ಕೆಲವು ಆಪ್‌ಗಳ ಸಹಾಯದಿಂದ ಮಹಿಳೆಯ ಫೋನ್ ಅನ್ನು ರಿಮೋಟ್ ಮೂಲಕ ನಿಯಂತ್ರಿಸಲು ಆರಂಭಿಸಿದ್ದಾರೆ. ಈ ನಿಯಂತ್ರಣದಿಂದಾಗಿ ಮಹಿಳೆಯ ಬ್ಯಾಂಕ್ ಆ್ಯಪ್ ಪ್ರವೇಶಿಸಿ ಆಕೆಯ ಖಾತೆಯಿಂದ ಬರೋಬ್ಬರಿ 11.6 ಲಕ್ಷ ರೂಗಳನ್ನು ನಿಮಿಷಗಳಲ್ಲಿ ಉಡೀಸ್ ಮಾಡಿಯೇ ಬಿಟ್ಟ ಹ್ಯಾಕರ್ಸ್. ಇದನ್ನು ಅರಿತು ತನಗೆ ವಂಚನೆಯಾಗಿದೆ ಎಂದು ತಿಳಿದ ಮಹಿಳೆ ನೇರವಾಗಿ ಪುಣೆಯ ಚತುರ್ಶೃಂಗಿ ಪೊಲೀಸ್ ಠಾಣೆಗೆ ತೆರಳಿ ಎಡ್ರ ವಿರುದ್ದ ಎಫ್‌ಐಆರ್ (FIR) ದಾಖಲಿಸಿದ್ದಾರೆ.
ಪದೇ ಪದೇ ಎಚ್ಚರಿಕೆ ನೀಡುವ ಬ್ಯಾಂಕ್
ಫೋನ್‌ಗಳನ್ನು ರಿಮೋಟ್ ಮೂಲಕ ಸಂಪರ್ಕಿಸುವ ಅಪ್ಲಿಕೇಶನ್‌ಗಳ ಕುರಿತು ಬ್ಯಾಂಕ್‌ಗಳು ಪದೇ ಪದೇ ಜನರಿಗೆ ಎಚ್ಚರಿಕೆ ನೀಡುತ್ತಿವೆ. ವಂಚಕರು ಎನಿಡೆಸ್ಕ್ ಎಂಬ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಜನರನ್ನು ದರೋಡೆ ಮಾಡುತ್ತಿದ್ದಾರೆ. ಇದಕ್ಕಾಗಿ HDFC ಬ್ಯಾಂಕ್, ICICI ಬ್ಯಾಂಕ್, Kotak ಬ್ಯಾಂಕ್ ಮತ್ತು Axis ಬ್ಯಾಂಕ್‌ನಂತಹ ಹಲವು ಪ್ರೈವೇಟ್ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ UPI ಮೂಲಕ ಹಣವನ್ನು ಕದಿಯಲು ವಂಚಕರು AnyDesk ಅಪ್ಲಿಕೇಶನ್ ಅನ್ನು ಬಳಸುತ್ತಿದ್ದಾರೆ ಎಂದು ಎಚ್ಚರಿಸಿದ್ದಾರೆ. TeamViewer, QuickSupport ಹೆಸರಿನ ಮತ್ತೊಂದು ಅಪ್ಲಿಕೇಶನ್ ಕೂಡ ಇದೇ ರೀತಿಯ ವಂಚನೆಗಾಗಿ ಬಳಸಲಾಗುತ್ತಿದೆ.
ಸಮಸ್ಯೆ ಏನೆಂದರೆ ಹೆಚ್ಚಿನ ಜನರಿಗೆ AnyDesk ಬಗ್ಗೆ ತಿಳಿದಿಲ್ಲ ಮತ್ತು ವಂಚಕರು ಜನರನ್ನು ವಂಚಿಸಲು ಮತ್ತು ಅವರ ಹಣವನ್ನು ಕದಿಯಲು ಇದರ ಲಾಭವನ್ನು ಪಡೆದುಕೊಳ್ಳುತ್ತಾರೆ. ಇಂತಹ ಮೋಸದ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವುದು ಅಪಾಯಕಾರಿ. ಈ ಅಪ್ಲಿಕೇಶನ್‌ಗಳು ಸಾಮಾನ್ಯವಾಗಿ 9 ಅಂಕಿಗಳ ರಿಮೋಟ್ ಡೆಸ್ಕ್ ಕೋಡ್ ಅನ್ನು ಕೇಳುತ್ತವೆ. ಈ ಕೋಡ್ ಅನ್ನು ಸ್ವೀಕರಿಸಿದ ನಂತರ ವಂಚಕನು ನಿಮ್ಮ ಫೋನ್ ಪರದೆಯನ್ನು ವೀಕ್ಷಿಸಬಹುದು ಮತ್ತು ರೆಕಾರ್ಡ್ ಮಾಡಬಹುದು. ನಿಮ್ಮ ಫೋನ್ ಅವರ ನಿಯಂತ್ರಣದಲ್ಲಿದ್ದಾಗ ನಿಮ್ಮ ಬ್ಯಾಂಕ್ ಅಥವಾ UPI ಅಪ್ಲಿಕೇಶನ್‌ನಲ್ಲಿ ನಿಮ್ಮ ಪಾಸ್‌ವರ್ಡ್ ಅನ್ನು ನಮೂದಿಸಿದಾಗಲೂ ಸಹ ನೀವು ಮಾಡುವ ಎಲ್ಲವನ್ನೂ ಅವರು ನೋಡಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile