Aadhaar Download: ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಲು ಈ ಸರಳ ಹಂತಗಳನ್ನು ಅನುಸರಿಸಿ

Aadhaar Download: ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಲು ಈ ಸರಳ ಹಂತಗಳನ್ನು ಅನುಸರಿಸಿ
HIGHLIGHTS

ಆಧಾರ್ ಕಾರ್ಡ್ (Aadhaar Card) ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಲು ಈ ಸರಳ ಹಂತಗಳನ್ನು ಅನುಸರಿಸಿ ಪಡೆಯಬಹುದು.

ಡೌನ್‌ಲೋಡ್ ಮಾಡಿದ ಆಧಾರ್ ಕಾರ್ಡ್ (Aadhaar Card) ತೆರೆಯಲು ಫೈಲ್‌ನ ಪಾಸ್‌ವರ್ಡ್ ಎಂಟು ಆಂಗ್ಲ ದೊಡ್ಡ ಅಕ್ಷರಗಳನ್ನು ಹೊಂದಿರುತ್ತದೆ

ಆಧಾರ್ ಕಾರ್ಡ್ (Aadhaar Card) ನಿಮ್ಮ ಹೆಸರು, ಹುಟ್ಟಿದ ದಿನಾಂಕ, ಆಧಾರ್ ಸಂಖ್ಯೆ, ಛಾಯಾಚಿತ್ರ ಮತ್ತು ಬಯೋಮೆಟ್ರಿಕ್ ಡೇಟಾದ ಮಾಹಿತಿಯನ್ನು ಒಳಗೊಂಡಿರುತ್ತದೆ.

Aadhaar Download: ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಲು ಈ ಸರಳ ಹಂತಗಳನ್ನು ಅನುಸರಿಸಿ ಪಡೆಯಬಹುದು. ಆಧಾರ್ ಕಾರ್ಡ್ ಭಾರತ ಸರ್ಕಾರವು ಎಲ್ಲಾ ನಾಗರಿಕರಿಗೆ ನೀಡಿದ ಗುರುತಿನ ಚೀಟಿಯಾಗಿದೆ. ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ-UIDAI) ನೀಡಿದ ಕಾರ್ಡ್‌ನಲ್ಲಿ 12 ಅಂಕಿಗಳ ವಿಶಿಷ್ಟ ಸಂಖ್ಯೆಯನ್ನು ಮುದ್ರಿಸಲಾಗಿದೆ. ಇಂಡಿಯಾ ಪೋಸ್ಟ್ ಸ್ವೀಕರಿಸಿದ ಮತ್ತು ಯುಐಡಿಎಐ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿದ ಇ-ಆಧಾರ್ ಎರಡೂ ಸಮಾನವಾಗಿ ಮಾನ್ಯವಾಗಿವೆ. ಇ-ಆಧಾರ್ ಕಾರ್ಡ್ ನಿಮ್ಮ ಸಾಮಾನ್ಯ ಆಧಾರ್ ಕಾರ್ಡ್‌ನ ಎಲೆಕ್ಟ್ರಾನಿಕ್ ಅಥವಾ ವರ್ಚುವಲ್ ರೂಪವಾಗಿದೆ. ಯಾವುದೇ ಪರಿಶೀಲನೆಗಾಗಿ ನೀವು ಆಧಾರ್ ಕಾರ್ಡ್ ಬದಲಿಗೆ ಇದನ್ನು ಬಳಸಬಹುದು. ಇದು ನಿಮ್ಮ ಹೆಸರು, ಹುಟ್ಟಿದ ದಿನಾಂಕ, ಆಧಾರ್ ಸಂಖ್ಯೆ, ಛಾಯಾಚಿತ್ರ ಮತ್ತು ಬಯೋಮೆಟ್ರಿಕ್ ಡೇಟಾದಂತಹ ಎಲ್ಲಾ ಅಗತ್ಯ ಮಾಹಿತಿಯನ್ನು ಒಳಗೊಂಡಿದೆ. ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಲು ಸುಲಭವಾದ ಮಾರ್ಗವನ್ನು ತಿಳಿಸಲಾಗಿದೆ. ಇದನ್ನೂ ಓದಿ: Amazon Great Indian Festival Sale 2021: ಪ್ರೈಮ್ ಸದಸ್ಯರಿಗೆ ಮೊದಲ ಪ್ರವೇಶದೊಂದಿಗೆ ಅಕ್ಟೋಬರ್ 3 ರಿಂದ ಆರಂಭ

ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ?

ಹಂತ 1: ಆಧಾರ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ https://uidai.gov.in/.

ಹಂತ 2: ನನ್ನ ಆಧಾರ್ ಮೆನುವಿನಲ್ಲಿ ಡೌನ್ಲೋಡ್ ಆಧಾರ್ ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 3: ನೀವು ಬಯಸಿದರೆ ನೀವು ನೇರವಾಗಿ ಈ ಲಿಂಕ್‌ಗೆ ಹೋಗಬಹುದು- https://eaadhaar.uidai.gov.in/

ಹಂತ 4: ಇಲ್ಲಿ ನೀವು ಮೂರು ಆಯ್ಕೆಗಳನ್ನು ನೋಡುತ್ತೀರಿ – ಆಧಾರ್ ದಾಖಲಾತಿ ID ಮತ್ತು ವರ್ಚುವಲ್ ID.

ಹಂತ 5: ನೀವು ಆಧಾರ್ ಕಾರ್ಡ್ ಸಂಖ್ಯೆಯನ್ನು ಹೊಂದಿದ್ದರೆ ನಂತರ ಆಧಾರ್ ಆಯ್ಕೆಯನ್ನು ಆರಿಸಿ.

ಹಂತ 6: ಈಗ ನೀವು 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು.

ಹಂತ 7: ಪರಿಶೀಲನೆಗಾಗಿ ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು ಕಳುಹಿಸುವ OTP ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 8: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. ಈ OTP ನಮೂದಿಸಿ.

ಹಂತ 9: ಈಗ ವೆರಿಫೈ ಮತ್ತು ಡೌನ್‌ಲೋಡ್ ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 10: ಈ ರೀತಿಯಾಗಿ ನಿಮ್ಮ ಸಾಧನದಲ್ಲಿ ಇ-ಆಧಾರ್ ಅನ್ನು ಡೌನ್‌ಲೋಡ್ ಮಾಡಲಾಗುತ್ತದೆ.

ನೀವು ಡೌನ್‌ಲೋಡ್ ಮಾಡಿದ ಆಧಾರ್ ಕಾರ್ಡ್ ತೆರೆಯಲು ಫೈಲ್‌ನ ಪಾಸ್‌ವರ್ಡ್ ಎಂಟು ಆಂಗ್ಲ ದೊಡ್ಡ ಅಕ್ಷರಗಳನ್ನು ಹೊಂದಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ. ನೀವು ಆಧಾರ್ ಕಾರ್ಡ್ ನಲ್ಲಿ ನೀಡಿದಂತೆ  ನಿಮ್ಮ ಹೆಸರಿನ ಮೊದಲು 4 ಅಕ್ಷರಗಳನ್ನು ಮತ್ತು ಹುಟ್ಟಿದ ವರ್ಷವನ್ನು ಬರೆಯಬೇಕು (ಉದಾಹರಣೆಗೆ ನನ್ನ ಹೆಸರು ಚಿಕ್ಕಣ್ಣ ಆಗಿದ್ದು ನನ್ನ ಹುಟ್ಟಿದ ವರ್ಷ 1992 ಆಗಿದ್ದರೆ ನನ್ನ ಪಾಸ್ವರ್ಡ್ CHIK1992 ಆಗಿರುತ್ತದೆ). ನಿಮ್ಮ ಆಧಾರ್ ಸಂಖ್ಯೆ ಅಥವಾ ದಾಖಲಾತಿ ಸಂಖ್ಯೆ ನಿಮಗೆ ನೆನಪಿಲ್ಲದಿದ್ದರೂ ಸಹ ನಿಮ್ಮ ಹೆಸರು ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸುವ ಮೂಲಕ ನೀವು ಆನ್‌ಲೈನ್‌ನಲ್ಲಿ ಇ-ಆಧಾರ್ ಡೌನ್‌ಲೋಡ್ ಮಾಡಬಹುದು. ಇದಕ್ಕಾಗಿ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ಯುಐಡಿಎಐ ವೆಬ್‌ಸೈಟ್‌ನಿಂದ ಜನರೇಟ್ ಮಾಡಬೇಕಾಗುತ್ತದೆ. ಇದರ ಮಾಹಿತಿಯನ್ನು ಮತ್ತೊಂದು ಲೇಖನದಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: 4K TVs in Amazon: 50 ಇಂಚಿನ 4K ಟಿವಿಗಳ ಮೇಲೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಭಾರಿ ಆಫರ್‌ಗಳನ್ನು ನೀಡುತ್ತಿದೆ

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo