DoT Update: ಇನ್ಮೇಲೆ ನಿಮ್ಮ OTP ಮತ್ತು ಮಾರ್ಕೆಟಿಂಗ್ ಸೇವೆಗಳಿಗೆ ಪ್ರತ್ಯೇಕ 160 ಸಂಖ್ಯೆಯಿಂದ ಮಾತ್ರ ಕರೆ ಸ್ವೀಕರಿಸುವಿರಿ!

DoT Update: ಇನ್ಮೇಲೆ ನಿಮ್ಮ OTP ಮತ್ತು ಮಾರ್ಕೆಟಿಂಗ್ ಸೇವೆಗಳಿಗೆ ಪ್ರತ್ಯೇಕ 160 ಸಂಖ್ಯೆಯಿಂದ ಮಾತ್ರ ಕರೆ ಸ್ವೀಕರಿಸುವಿರಿ!
HIGHLIGHTS

DoT ಇಲಾಖೆ ಈಗ 160 ಸಂಖ್ಯೆಯನ್ನು ನಿಮ್ಮ ಈ ಕರೆಗಳ ಮೊದಲ ಸಂಖ್ಯೆಯಾಗಿ ಪರಿಚಯಿಸಲಾಗಿದೆ.

ದಿನಕ್ಕೆ ಬರುವ ಹತ್ತಾರು ಕರೆಗಳ ನಡುವೆ ಮುಖ್ಯವಾದ ಕರೆಗಳನ್ನು ಸರಳವಾಗಿ ಗುರುತಿಸಲು ಈ ಮಾರ್ಗ ತುಂಬಾ ಸುಲಭವಾಗಲಿದೆ.

ಅಪರಿಚಿತ ಅಥವಾ ವಂಚಕರ ಕಳ್ಳತನ ಕರೆಗಳನ್ನು ಎತ್ತುವ ಮೊದಲೇ ಕರೆ ಮಾಡುವವರ ಮಾಹಿತಿ ನಿಮ್ಮ ಫೋನ್ ಸ್ಕ್ರೀನ್ ಮೇಲೆ ತಿಳಿಸಲಾಗುತ್ತದೆ

ಭಾರತದಲ್ಲಿ ಇನ್ಮೇಲೆ ನಿಮಗೆ ಬ್ಯಾಂಕ್ ಅಥವಾ OTP ಮತ್ತು ಇನ್ನೇತರೆ ಅಧಿಕೃತ ಸೇವೆ ಮತ್ತು ಮಾರ್ಕೆಟಿಂಗ್ ಕರೆಗಳಿಗಾಗಿ ಕೇಂದ್ರ ಸರ್ಕಾರ ಈಗ ಪ್ರತ್ಯೇಕ ದೂರವಾಣಿಯ ಆರಂಭಿಕ ಸಂಖ್ಯೆಯನ್ನು The Department of Telecommunications (DoT) ಇಲಾಖೆ ಈಗ 160 ಸಂಖ್ಯೆಯನ್ನು ನಿಮ್ಮ ಈ ಕರೆಗಳ ಮೊದಲ ಸಂಖ್ಯೆಯಾಗಿ ಪರಿಚಯಿಸಲಾಗಿದೆ. ಉದಾಹರಣೆಗೆ 160xxxxxxx ಸಂಖ್ಯೆಯಿಂದ ಒಳಬರುವ ಕರೆಗಳನ್ನು ಜನ ಸಾಮಾನ್ಯರು ಸ್ವೀಕರಿಸಬಹುದು ಎನ್ನುವುದನ್ನು ನೀವು ಗಮನಿಸಬೇಕಿದೆ. ದಿನಕ್ಕೆ ಬರುವ ಹತ್ತಾರು ಕರೆಗಳ ನಡುವೆ ಮುಖ್ಯವಾದ ಕರೆಗಳನ್ನು ಸರಳವಾಗಿ ಗುರುತಿಸಲು ಈ ಮಾರ್ಗ ತುಂಬಾ ಸುಲಭವಾಗಲಿದೆ.

ಹ್ಯಾಕರ್ಸ್ ಅಥವಾ ವಂಚಕರ ಕರೆಗಳಿಗೆ ಬ್ರೇಕ್ ಹಾಕಿದ DoT

ನಿಮಗೆ ಹೇಳದೆ ಕೇಳದೆ ಮಾರುವ ಹತ್ತಾರು ಕರೆಗಳೊಂದಿಗೆ ನೇರವಾಗಿ ನೀವು ಹ್ಯಾಕರ್ಸ್ ಅಥವಾ ವಂಚಕರ ಕರೆಗಳನ್ನು ಮೊದಲು ತಡೆಗಟ್ಟಬಹುದೆಂದು ಸರ್ಕಾರ ಹೇಳಿದೆ. ಇದರಿಂದ ಅಪರಿಚಿತ ಅಥವಾ ವಂಚಕರ ಕಳ್ಳತನ ಕರೆಗಳನ್ನು ಎತ್ತುವ ಮೊದಲೇ ಕರೆ ಮಾಡುವವರ ಮಾಹಿತಿ ನಿಮ್ಮ ಫೋನ್ ಸ್ಕ್ರೀನ್ ಮೇಲೆ ತಿಳಿಸಲಾಗುತ್ತದೆ. ಇದರಿಂದಾಗಿ ನಿಮಗೆ ಬರುವ ಯಾವುದೇ ಕರೆಗಳ ಆರಂಭದಲ್ಲಿ ಈ 160 ರಿಂದ ಪ್ರಾರಂಭವಾಗುವ ಹೊಸ ಏಕರೂಪದ ಸಂಖ್ಯೆಯನ್ನು ನಿಗದಿಪಡಿಸಲಾಗುವುದು ಎಂದು DoT ಹೇಳಿದ್ದು ಈ ಕೋಡ್ ಪ್ರಾರಂಭಿಕ ಕೋಡ್ ಕರೆ ಮಾಡುವವರು ಯಾರು ಮತ್ತು ಎಲ್ಲಿಂದ ಕರೆ ಮಾಡುತ್ತಿದ್ದಾರೆಂಬ ಮಾಹಿತಿ ಬರುತ್ತದೆ. ಈ ಕಾರಣದಿಂದಾಗಿ ಬಳಕೆದಾರರು ಕರೆಗಳನ್ನು ಸುರಕ್ಷಿತವಾಗಿ ಕರೆಯ ಬಗ್ಗೆ ಗೊತ್ತಿದ್ದರೆ ಮಾತ್ರ ಎತ್ತಲು ಅಥವಾ ಏನು ಮಾಡಬೇಕು ಎನ್ನುವ ಪ್ರಶ್ನೆಗೆ ಸರಳ ದಾರಿಯನ್ನು ನೀಡಿದೆ.

DoT has introduced 160 number to distinguish for service and marketing calls
DoT has introduced 160 number to distinguish for service and marketing calls

ಈ ಮೊದಲು 140 ಸಂಖ್ಯೆಯನ್ನು ಬಳಸಲಾಗುತ್ತಿದೆ

ಈ ಮೊದಲು ಉದ್ಯಮವನ್ನು ಈ ವ್ಯತ್ಯಾಸವನ್ನು ರಚಿಸಲು DoT ವಿನಂತಿಸಿದೆ ಎಂದು ವಿಷಯದ ಬಗ್ಗೆ ತಿಳಿದಿರುವ ವ್ಯಕ್ತಿಯೊಬ್ಬರು ಹೇಳಿದರು. DoT ಅದರ 30ನೇ ಮೇ 2024 ರಂದು ಇದರ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಈ ಮೊದಲು ಬಳಸಲಾಗುತ್ತಿದ್ದ 140 ಸರಣಿಯ ಕರೆಗಳಿಗೆ ಗ್ರಾಹಕರು ಹೆಚ್ಚಾಗಿ ಪ್ರತಿಕ್ರಿಯಿಸುವುದಿಲ್ಲ ಏಕೆಂದರೆ ಇದನ್ನು ಮಾರ್ಕೆಟಿಂಗ್‌ಗಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದರ ಪರಿಣಾಮವಾಗಿ ಅನೇಕ ಪ್ರಮುಖ ಸೇವೆ/ವಹಿವಾಟು ಕರೆಗಳು ತಪ್ಪಾಗಿ ನೇಮಿತವಾಗಿದೆ ಎಂದು ಹೇಳಿದೆ. ಇದರೊಂದಿಗೆ ಅತಿ ಹೆಚ್ಚಾಗಿ ವಂಚನೆಗಳು ಮತ್ತು ಮೋಸದ ಕರೆಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯವನ್ನು ಆರಂಭಿಸಲಾಗಿದೆ.

Also Read: ಕೇವಲ ₹7000 ರೂಗಳಿಗೆ 50MP ಕ್ಯಾಮೆರಾ ಮತ್ತು Dolby Atmos ಸೌಂಡ್‌ನೊಂದಿಗೆ Moto G04s ಬಿಡುಗಡೆ!

ಯಾರ್ಯಾರು ಈ 160 ನಂಬರ್ ಬಳಸಬಹುದು?

ಈ ಸೇವೆಯನ್ನು ಮಾಡಲು ಟೆಲಿಕಾಂ ಸೇವಾ ಪೂರೈಕೆದಾರರು (Telecom Service Providers) ಈ ಸೇವಾ ಕರೆಗಳಿಗೆ ಒಳಪಡುವ ಎಲ್ಲಾ ಯೂನಿಟ್ ಪರಿಶೀಲಿಸುತ್ತಾರೆ ಮತ್ತು ಎಲ್ಲವನ್ನೂ ತೆರವುಗೊಳಿಸಿದ ನಂತರ ಈ 10 ಅಂಕೆಗಳ ಮೊಬೈಲ್ ಸಂಖ್ಯೆಯ ಆರಂಭಿಕವಾಗಿ 160 ಎಂಬ ಸೇವಾ ಸಂಖ್ಯೆಯೊಂದಿಗೆ ಬರುತ್ತದೆ. ಸರಳ ಭಾಷೆಯಲ್ಲಿ ಹೇಳುವುದಾದರೆ ಈ 160 ಸಂಖ್ಯೆಯಿಂದ ಕರೆ ಮಾಡಲು ಪ್ರತಿ ವಲಯದವರು ನಿಗದಿತ ಮಾಹಿತಿಯೊಂದಿಗೆ ತಮನ್ನು ಪೂರ್ತಿಯಾಗಿ ರಿಜಿಸ್ಟರ್ ಮಾಡಿಕೊಂಡು ಸರ್ಕಾರದ ಪರವಾನಿಗೆಯೊಂದಿಗೆ ಮಾತ್ರ ಈ ಕರೆಗಳನ್ನು ಮಾಡಲು ಅವಕಾಶ ಪಡೆಯುತ್ತಾರೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo