DoT Big Announcement: ಬರೋಬ್ಬರಿ 28,000 ಮೊಬೈಲ್‌ಗಳು ಮತ್ತು 20 ಲಕ್ಷಕ್ಕೂ ಅಧಿಕ ಮೊಬೈಲ್ ನಂಬರ್ ಸ್ಥಗಿತ!

DoT Big Announcement: ಬರೋಬ್ಬರಿ 28,000 ಮೊಬೈಲ್‌ಗಳು ಮತ್ತು 20 ಲಕ್ಷಕ್ಕೂ ಅಧಿಕ ಮೊಬೈಲ್ ನಂಬರ್ ಸ್ಥಗಿತ!
HIGHLIGHTS

ಡಿಜಿಟಲ್ ವಂಚನೆ ಮತ್ತು ಬೆದರಿಕೆಗಳಿಂದ ನಾಗರಿಕರನ್ನು ರಕ್ಷಿಸಲು DoT Big Announcement ಮಾಡಿದೆ.

ಸೈಬರ್ ಕ್ರೈಂನಲ್ಲಿ ಭಾಗಿಯಾದ 28,200 ಮೊಬೈಲ್ ಫೋನ್ ಮತ್ತು 20 ಲಕ್ಷಕ್ಕೂ ಅಧಿಕ ಮೊಬೈಲ್ ನಂಬರ್ ಸ್ಥಗಿತಕ್ಕೆ ನಿರ್ಧಾರಿಸಿದೆ.

ಸೈಬರ್ ಅಪರಾಧ ಮತ್ತು ಹಣಕಾಸು ವಂಚನೆಗಳಲ್ಲಿ ಟೆಲಿಕಾಂ ಸಂಪನ್ಮೂಲಗಳ ದುರುಪಯೋಗವನ್ನು ತಡೆಗಟ್ಟಲು ಈ ನಿರ್ಧಾರವನ್ನು ಕೈಗೊಂಡಿದೆ.

DoT Big Announcement: ಪ್ರತಿದಿನ ಹೆಚ್ಚುತ್ತಿರುವ ಡಿಜಿಟಲ್ ವಂಚನೆ ಮತ್ತು ಬೆದರಿಕೆಗಳಿಂದ ನಾಗರಿಕರನ್ನು ರಕ್ಷಿಸಲು ಒಂದಿಷ್ಟು ಮೊಬೈಲ್ ಹ್ಯಾಂಡ್‌ಸೆಟ್‌ ನಿರ್ಬಂಧಿಸಲು ಮತ್ತು ಮೊಬೈಲ್ ಸಂಪರ್ಕಗಳನ್ನು ಮರುಪರಿಶೀಲಿಸುವಂತೆ ದೂರಸಂಪರ್ಕ ಇಲಾಖೆ (DoT) ದೂರಸಂಪರ್ಕ ಸೇವಾ ಪೂರೈಕೆದಾರರಿಗೆ (TSP) ನಿರ್ದೇಶನಗಳನ್ನು ನೀಡಿದೆ. ಸೈಬರ್ ಅಪರಾಧ ಮತ್ತು ಹಣಕಾಸು ವಂಚನೆಗಳಲ್ಲಿ ಟೆಲಿಕಾಂ ಸಂಪನ್ಮೂಲಗಳ ದುರುಪಯೋಗವನ್ನು ತಡೆಗಟ್ಟಲು ಈ ನಿರ್ಧಾರವನ್ನು ಕೈಗೊಂಡಿದೆ. ಗೃಹ ಮಂತ್ರಾಲಯ (Ministry of Home Affairs) ಮತ್ತು ರಾಜ್ಯ ಪೊಲೀಸರ ವಿಶ್ಲೇಷಣೆಯ ಆಧಾರ ಮೇರೆಗೆ ಸೈಬರ್ ಕ್ರೈಂನಲ್ಲಿ ಭಾಗಿಯಾದ 28,200 ಮೊಬೈಲ್ ಫೋನ್ ಮತ್ತು 20 ಲಕ್ಷಕ್ಕೂ ಅಧಿಕ ಮೊಬೈಲ್ ನಂಬರ್ ಸ್ಥಗಿತಕ್ಕೆ ನಿರ್ಧಾರಿಸಿದೆ.

DoT Big Announcement ಮೂಲಕ ಮೊಬೈಲ್ ಫೋನ್ ಬಂದ್:

ವಂಚಕರ ಜಾಲವನ್ನು ನಾಶಪಡಿಸುವ ಉದ್ದೇಶದಿಂದ ಈ ಇಲಾಖೆಗಳನ್ನು ಒಗ್ಗೂಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸಂವಹನ ಸಚಿವಾಲಯ ತಿಳಿಸಿದೆ. ಅಲ್ಲದೆ ಡಿಜಿಟಲ್ ಬೆದರಿಕೆಗಳಿಂದ ನಾಗರಿಕರನ್ನು ರಕ್ಷಿಸುವುದು ಇದರ ಉದ್ದೇಶವಾಗಿದೆ. ಗೃಹ ಸಚಿವಾಲಯ ಮತ್ತು ರಾಜ್ಯ ಪೊಲೀಸರು ನಡೆಸಿದ ವಿಶ್ಲೇಷಣೆಯು ಸೈಬರ್ ಅಪರಾಧಗಳಲ್ಲಿ 28,200 ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ದುರುಪಯೋಗಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಕಾರಣ ಅವರನ್ನು ನಿರ್ಬಂಧಿಸುವಂತೆ ಸೂಚನೆ ನೀಡಲಾಗಿದೆ.

DoT Big Announcement: ಬರೋಬ್ಬರಿ 28,000 ಮೊಬೈಲ್‌ಗಳು ಮತ್ತು 20 ಲಕ್ಷಕ್ಕೂ ಅಧಿಕ ಮೊಬೈಲ್ ನಂಬರ್ ಸ್ಥಗಿತ!
DoT Big Announcement: ಬರೋಬ್ಬರಿ 28,000 ಮೊಬೈಲ್‌ಗಳು ಮತ್ತು 20 ಲಕ್ಷಕ್ಕೂ ಅಧಿಕ ಮೊಬೈಲ್ ನಂಬರ್ ಸ್ಥಗಿತ!

20 ಲಕ್ಷ ಮೊಬೈಲ್ ಸಂಖ್ಯೆಗಳನ್ನು ಮತ್ತೊಮ್ಮೆ ಪರಿಶೀಲಿಸಲಾಗುತ್ತದೆ

ಈ ಹ್ಯಾಂಡ್‌ಸೆಟ್‌ಗಳಲ್ಲಿ 20 ಲಕ್ಷ ಸಂಖ್ಯೆಗಳನ್ನು ಬಳಸಲಾಗಿದೆ. ದೂರಸಂಪರ್ಕ ಇಲಾಖೆ (ಡಿಒಟಿ) ಹೆಚ್ಚಿನ ತನಿಖೆ ನಡೆಸಿದಾಗ ಸೈಬರ್ ಅಪರಾಧಗಳಲ್ಲಿ ಈ ಮೊಬೈಲ್ ಹ್ಯಾಂಡ್‌ಸೆಟ್‌ಗಳೊಂದಿಗೆ 20 ಲಕ್ಷ ಸಂಖ್ಯೆಗಳನ್ನು ಬಳಸಿರುವುದು ಕಂಡುಬಂದಿದೆ. ತರುವಾಯ ಭಾರತದಾದ್ಯಂತ 28,200 ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ನಿರ್ಬಂಧಿಸಲು ಮತ್ತು ಈ ಹ್ಯಾಂಡ್‌ಸೆಟ್‌ಗಳಿಗೆ ಲಿಂಕ್ ಮಾಡಲಾದ 20 ಲಕ್ಷ ಮೊಬೈಲ್ ಸಂಪರ್ಕಗಳನ್ನು ತಕ್ಷಣವೇ ಮರು ಪರಿಶೀಲಿಸಲು ಟೆಲಿಕಾಂ ಸೇವಾ ಪೂರೈಕೆದಾರರಿಗೆ DoT ಸೂಚನೆಗಳನ್ನು ನೀಡಿತು.

DoT Big Announcement: ಬರೋಬ್ಬರಿ 28,000 ಮೊಬೈಲ್‌ಗಳು ಮತ್ತು 20 ಲಕ್ಷಕ್ಕೂ ಅಧಿಕ ಮೊಬೈಲ್ ನಂಬರ್ ಸ್ಥಗಿತ!
DoT Big Announcement: ಬರೋಬ್ಬರಿ 28,000 ಮೊಬೈಲ್‌ಗಳು ಮತ್ತು 20 ಲಕ್ಷಕ್ಕೂ ಅಧಿಕ ಮೊಬೈಲ್ ನಂಬರ್ ಸ್ಥಗಿತ!

Numbers re-verification ಸಂಪರ್ಕ ಕಡಿತಗೊಳಿಸಲಾಗುವುದು:

ಮರು ಪರಿಶೀಲನೆ ವಿಫಲವಾದಲ್ಲಿ ಸಂಪರ್ಕ ಕಡಿತಗೊಳಿಸುವಂತೆ ಟೆಲಿಕಾಂ ಕಂಪನಿಗಳಿಗೆ DoT ನಿರ್ದೇಶನ ನೀಡಿದೆ. ದೂರಸಂಪರ್ಕ ಇಲಾಖೆ (DoT) ಸೈಬರ್ ಅಪರಾಧದ ವಿಷಯದಲ್ಲಿ ಇಂತಹ ಕ್ರಮಗಳನ್ನು ಕೈಗೊಂಡಿದೆ. ಮಂಗಳವಾರ DoT ಆರ್ಥಿಕ ಹಗರಣದಲ್ಲಿ ಬಳಸಲಾದ ಫೋನ್ ಸಂಖ್ಯೆಯನ್ನು ಕಡಿತಗೊಳಿಸಿದೆ ಮತ್ತು ಆ ಸಂಖ್ಯೆಗೆ ಲಿಂಕ್ ಮಾಡಲಾದ 20 ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಸಹ ನಿರ್ಬಂಧಿಸಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

Also Read: JioFiber Offer: ಅನ್ಲಿಮಿಟೆಡ್ 5G ಡೇಟಾದೊಂದಿಗೆ 15ಕ್ಕೂ ಅಧಿಕ ಉಚಿತ OTT ನೀಡುವ ಹೊಸ ಜಿಯೋ ಪ್ಲಾನ್ ಪರಿಚಯ!

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo