ಎಚ್ಚರ! ನೀವು 10 ನಿಮಿಷಕ್ಕಿಂತ ಅಧಿಕ ಸಮಯ ಶೌಚಾಲಯದಲ್ಲಿ Smartphone ಬಳಸಿದ್ರೆ ಈ ಕಾಯಿಲೆ ಬರುತ್ತೆ!

Updated on 21-Nov-2024
HIGHLIGHTS

ಶೌಚಾಲಯದಲ್ಲಿ ಸ್ಮಾರ್ಟ್ಫೋನ್ (Smartphone) ಬಳಸುವ ಅಭ್ಯಾಸದವರಾಗಿದ್ದರೆ ಕೂಡಲೇ ನಿಲ್ಲಿಸಿಬಿಡಿ.

ಕೆಲವರಂತೂ ಗಂಟೆಗಟ್ಟಲೆ ಸೋಶಿಯಲ್ ಮೀಡಿಯಾದ ರೀಲ್ ವೀಕ್ಷಿಸುವುದು ಯಾವುದೋ ಒಂದು ರೀತಿಯ ಕೆಟ್ಟ ಹವ್ಯಾಸ.

ನೀವು 10 ನಿಮಿಷಕ್ಕಿಂತ ಅಧಿಕ ಶೌಚಾಲಯದಲ್ಲಿ ಫೋನ್ ಬಳಸಿದ್ರೆ ಗ೦ಭೀರವಾದ ಕಾಯಿಲೆಗಳಿಗೆ ತುತ್ತಾಗಬಹುದು

ನೀವು ಅಥವಾ ನಿಮಗೆ ತಿಳಿದವರಲ್ಲಿ ಶೌಚಾಲಯದಲ್ಲಿ ಸ್ಮಾರ್ಟ್ಫೋನ್ (Smartphone) ಬಳಸುವ ಅಭ್ಯಾಸದವರಾಗಿದ್ದರೆ ಕೂಡಲೇ ನಿಲ್ಲಿಸಿಬಿಡಿ. ಯಾಕೆಂದರೆ ನೀವು 10 ನಿಮಿಷಕ್ಕಿಂತ ಅಧಿಕ ಸಮಯ ಶೌಚಾಲಯದಲ್ಲಿ ಫೋನ್ ಬಳಸಿದ್ರೆ ಗ೦ಭೀರವಾದ ಕಾಯಿಲೆಗಳಿಗೆ ತುತ್ತಾಗುವುದಾಗಿ Texas South western Medical Centre ವೈದ್ಯರ ವರದಿಯೊಂದು ಮುಂದೆ ಬಂದಿದೆ.

ಅಲ್ಲದೆ ನಮ್ಮಲ್ಲಿ ಅನೇಕರಿಗೆ ಶೌಚಾಲಯದಲ್ಲಿ ಫೋನ್ ಬಳಸೋದು ಮಾತ್ರವಲ್ಲದೆ ನ್ಯೂಸ್​ ಪೇಪರ್ ಓದುವುದು, ವಿಡಿಯೋ ಅಥವಾ ಆಡಿಯೋ ಕರೆಯಲ್ಲಿ ನಿರತರಾಗುವುದು ಮತ್ತು ಕೆಲವರಂತೂ ಗಂಟೆಗಟ್ಟಲೆ ಸೋಶಿಯಲ್ ಮೀಡಿಯಾದ ರೀಲ್ ವೀಕ್ಷಿಸುವುದು ಯಾವುದೋ ಒಂದು ರೀತಿಯ ಕೆಟ್ಟ ಹವ್ಯಾಸದಿಂದ ಬಳಲುತ್ತಿರುವವರನ್ನು ನೀವು ನೋಡಿಬಹುದು ಅಥವಾ ಅವರ ಬಗ್ಗೆ ಕೇಳಿರಬಹುದು.

Also Read: 50MP ಕ್ಯಾಮೆರಾ ಮತ್ತು 5000mAh ಬ್ಯಾಟರಿಯ ಈ Samsung ಫೋನ್ ಕೇವಲ ₹6,799 ರೂಗಳಿಗೆ ಲಭ್ಯ!

ಶೌಚಾಲಯದಲ್ಲಿ Smartphone ಬಳಸಿದ್ರೆ ಈ ಕಾಯಿಲೆ ಬರುತ್ತೆ!

ಟೆಕ್ಸಾಸ್ ಸೌತ್ ವೆಸ್ಟರ್ನ್ ಮೆಡಿಕಲ್ ಸೆಂಟರ್‌ನ ವೈದ್ಯರ ಪ್ರಕಾರ ಟಾಯ್ಲೆಟ್‌ನಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಟಾಯ್ಲೆಟ್‌ನಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಈ ಅಭ್ಯಾಸವನ್ನು ಬದಲಾಯಿಸುವುದು ಬಹಳ ಮುಖ್ಯ. ಆರೋಗ್ಯಕರ ಜೀವನಶೈಲಿ ಮತ್ತು ನಿಯಮಿತ ವೈದ್ಯಕೀಯ ಪರೀಕ್ಷೆಗಳು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.

ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ ಗುದನಾಳದ ಸುತ್ತಲಿನ ರಕ್ತನಾಳಗಳ ಮೇಲೆ ಒತ್ತಡ ಬೀರುತ್ತದೆ. ಇದರಿಂದ ರಕ್ತ ಸಂಚಾರ ಸರಿಯಾಗಿ ಆಗದೆ ಮೂಲವ್ಯಾಧಿ ಉಂಟಾಗುತ್ತದೆ. ಅಲ್ಲದೆ ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ ಶ್ರೋಣಿಯ ಸ್ನಾಯುಗಳ ಮೇಲೆ ನಿರಂತರ ಒತ್ತಡ ಬೀರುವುದರೊಂದಿಗೆ ದೇಹದ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ಗುದನಾಳದ ಸುತ್ತಲಿನ ರಕ್ತನಾಳಗಳು ಉರಿಯೂತಗೊಂಡು ಊದಿಕೊಳ್ಳುವುದನ್ನು ಹೆಮೊರೊಯಿಡ್ಸ್ (Hemorrhoids) ಎನ್ನುತ್ತಾರೆ.

ಟಾಯ್ಲೆಟ್‌ನಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ ಈ ಭಾಗದಲ್ಲಿ ಒತ್ತಡ ಹೆಚ್ಚಾಗಿ ಮೂಲವ್ಯಾಧಿ ಉಂಟಾಗುವ ಸಾಧ್ಯತೆ ಹೆಚ್ಚು. ಅಲ್ಲದೆ ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ ಕರುಳಿನ ಚಲನೆಗೆ ಅಡ್ಡಿ ಉಂಟಾಗಬಹುದು ಮತ್ತು ಮಲಬದ್ಧತೆಗೆ ಕಾರಣವಾಗಬಹುದು. ಕೆಲವು ಸಂದರ್ಭಗಳಲ್ಲಿ ಇದು ಗುದದ ಸಿರೆಯ ಉರಿಯೂತ (Piles) ಇತ್ಯಾದಿ ಸಮಸ್ಯೆಗಳಿಗೂ ಕಾರಣವಾಗಬಹುದು.

ಈ ಸಮಸ್ಯೆಗೆ ಪರಿಹಾರವೇನು?

ಟಾಯ್ಲೆಟ್‌ನಲ್ಲಿ ಕಡಿಮೆ ಸಮಯ ಕಳೆಯಿರಿ: ಕೆಲಸ ಮುಗಿದ ತಕ್ಷಣ ಎದ್ದು ನಿಂತುಕೊಳ್ಳಿ.

ಆರೋಗ್ಯಕರ ಆಹಾರ: ಹೆಚ್ಚು ನಾರಿನಂಶವುಳ್ಳ ಆಹಾರ ಸೇವಿಸಿ, ಸಾಕಷ್ಟು ನೀರು ಕುಡಿಯಿರಿ.

ವ್ಯಾಯಾಮ: ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಶ್ರೋಣಿಯ ಸ್ನಾಯುಗಳು ಬಲಗೊಳ್ಳುತ್ತವೆ.

ತೂಕ ನಿಯಂತ್ರಣ: ನಿಮ್ಮ ದೇಹದ ಅಧಿಕ ತೂಕವು ಮೂಲವ್ಯಾಧಿಗೆ ಕಾರಣವಾಗಬಹುದು ಆದ್ದರಿಂದ ನಿಮ್ಮ ತೂಕ ನಿಯಂತ್ರಣದಲ್ಲಿರಲಿ.

ಗಮನಿಸಿ: ಈ ಮಾಹಿತಿ ಕೇವಲ ಸಾಮಾನ್ಯ ಜ್ಞಾನಕ್ಕಾಗಿ ಮಾತ್ರವಾಗಿದ್ದು ನಿಮಗೆ ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ ದಯವಿಟ್ಟು ನಿಮ್ಮ ವೈದ್ಯರನ್ನು ಸಂಪರ್ಕಿಸಿ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :